ದಿನದ ಆಯಾಸಕ್ಕೆ ಹೇಳಿ ಗುಡ್ ಬೈ, ಲೈಂಗಿಕ ಜೀವನ ಚೆನ್ನಾಗಿರಲಿ!

First Published | Feb 13, 2024, 1:21 PM IST

ಕಚೇರಿ ಅಥವಾ ಮನೆಯಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ನಿಮಗೆ ತುಂಬಾನೆ ಆಯಾಸವಾಗಬಹುದು ಅಲ್ವಾ?. ಈ ದಿನದ ಆಯಾಸ ನಿಮ್ಮ ಲೈಂಗಿಕ ಜೀವನವನ್ನು ಹಾಳುಮಾಡುತ್ತಿದ್ದರೆ, ನಿಮಗೆ ವಿಶ್ರಾಂತಿ ನೀಡುವ ಕೆಲವು ವಿಷ್ಯಗಳನ್ನು ನೀವು ಪ್ರಯತ್ನಿಸಬೇಕು. 
 

ನೀವು ತುಂಬಾ ದಣಿವಿನಿಂದಾಗಿ ಸೆಕ್ಸ್ ಮಾಡೋದಕ್ಕೂ ಸಾಧ್ಯವಾಗದೇ ಇರುವ ಅನೇಕ ದಿನಗಳೂ ಬಂದಿರಬಹುದು ಅಲ್ವಾ?. ಇದು ನಿದ್ರೆಯ ಕೊರತೆ (sleepless) ಅಥವಾ ಕಚೇರಿ ಅಥವಾ ಮನೆಯಲ್ಲಿ ಹೆಚ್ಚು ಕೆಲಸದ ಕಾರಣದಿಂದ ಆಗಿರಬಹುದು. ಕಚೇರಿ ಕೆಲಸದ ಜೊತೆಗೆ, ಮಕ್ಕಳು, ಸಂಗಾತಿ ಅಥವಾ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದು ಇವೆಲ್ಲವೂ ನಿಮಗೆ ಆಯಾಸವನ್ನುಂಟು ಮಾಡುತ್ತದೆ. 
 

ಕೆಲವೊಮ್ಮೆ ನೀವು ಲೈಂಗಿಕತೆಯ (Sex life) ಬಗ್ಗೆ ಯೋಚಿಸುವುದರಿಂದಲೇ ಹೆಚ್ಚು ಒತ್ತಡಕ್ಕೆ (Stress) ಒಳಗಾಗುತ್ತೀರಿ. ಆದರೆ ಉತ್ತಮ ಲೈಂಗಿಕತೆಯು ನಿಮ್ಮ ಮನಸ್ಥಿತಿ ಮತ್ತು ಶಕ್ತಿಯನ್ನು ಬದಲಾಯಿಸಬಹುದು. ನೀವು ದಣಿದಿದ್ದಾಗಲೂ ನೀವು ಅದನ್ನು ಆನಂದಿಸಬಹುದು. ದಣಿದ ದಿನದ ನಂತರ ಲೈಂಗಿಕತೆಯನ್ನು ಹೇಗೆ ಆನಂದಿಸಬೇಕು ಎಂಬುದಕ್ಕೆ 6 ಸಲಹೆಗಳನ್ನು ತಿಳಿಯಿರಿ.
 

Tap to resize

ಉತ್ತಮ ಸೆಕ್ಸ್ ಲೈಫ್ ಹೊಂದಿರುವುದು ಏಕೆ ಮುಖ್ಯ?
ತಜ್ಞರ ಪ್ರಕಾರ ಆರೋಗ್ಯಕರ ಸಂಬಂಧಕ್ಕೆ (Health Relationship) ತೃಪ್ತಿಕರ ಲೈಂಗಿಕ ಜೀವನ (Sexual life) ತುಂಬಾನೆ ಮುಖ್ಯ. ಸಾಮಾನ್ಯವಾಗಿ, ಉತ್ತಮ ಲೈಂಗಿಕತೆಯು ಉತ್ತಮ ಅನ್ಯೋನ್ಯತೆ (Bonding), ನಂಬಿಕೆ (Trust) ಮತ್ತು ಸಂಬಂಧಗಳಲ್ಲಿ ನಡೆಯುತ್ತಿರುವ ಉದ್ವಿಗ್ನತೆಗೆ ಪರಿಹಾರವಾಗಿದೆ. ಉತ್ತಮ ಲೈಂಗಿಕ ಜೀವನವು ಒಬ್ಬ ವ್ಯಕ್ತಿಗೆ ತನ್ನ ಸಂಗಾತಿಯ ಬಗ್ಗೆ ಪ್ರೀತಿ (Love), ಬದ್ಧತೆ (Commitment) ಮತ್ತು ಹೊಂದಾಣಿಕೆಯನ್ನು (Compatibility) ವ್ಯಕ್ತಪಡಿಸುವ ಮಾಧ್ಯಮವೂ ಆಗಬಹುದು.
 

ಉತ್ತಮ ಲೈಂಗಿಕ ಜೀವನವು (sex life) ಒತ್ತಡವನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲ ಸಂತೋಷ, ಹಾರ್ಮೋನುಗಳ ನಿಯಂತ್ರಣ ಮತ್ತು ಉತ್ತಮ ನಿದ್ರೆಯಂತಹ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಸೆಕ್ಸುವಲ್ ಮೆಡಿಸಿಸ್‌ನಲ್ಲಿ ಪ್ರಕಟವಾದ 2019 ರ ಸಂಶೋಧನೆಯ ಪ್ರಕಾರ, ತಿಂಗಳಿಗೆ ಕನಿಷ್ಠ ಎರಡು ಬಾರಿ ಸ್ಥಿರವಾದ ಲೈಂಗಿಕತೆಯು ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಪ್ರಯೋಜನಕಾರಿ.

ನೀವು ಪ್ರತಿದಿನ ದಣಿದಿದ್ದರೆ, ಈ ರೀತಿ ಲೈಂಗಿಕತೆಯನ್ನು ಆನಂದಿಸಿ
ಮೊದಲು ಒತ್ತಡವನ್ನು ನಿವಾರಿಸಿ

ಡೈರೆಕ್ಟ್ ಆಗಿ ಸೆಕ್ಸ್ ಮಾಡೋದು ಬೇಡ, ಅದರ ಬದಲು, ವಿಶ್ರಾಂತಿ ಪಡೆಯಲು ಸಮಯ ತೆಗೆದುಕೊಳ್ಳಿ ಮತ್ತು ನಿಮಗೆ ವಿಶ್ರಾಂತಿ ಮತ್ತು ಮನಸ್ಸಿಗೆ ಶಾಂತಿ ನೀಡುವ ಎಲ್ಲವನ್ನೂ ಮಾಡಿ. ಬೆಚ್ಚಗಿನ ನೀರಿನಿಂದ ಸ್ನಾನ, ಯೋಗ (Yoga) ಮಾಡುವುದು, ನಿಮಗಿಷ್ಟದ ತಿಂಡಿ ತಿನ್ನುವುದು ಯಾವುದೂ ಕೂಡ ಆಗಬಹುದು.  ಮನಸ್ಸು ಶಾಂತವಾಗಿದ್ದರೆ, ಆಯಾಸ ದೂರವಾಗಿದ್ದರೆ ಖಂಡಿತವಾಗಿಯೂ ಒತ್ತಡ (stress free) ಮುಕ್ತರಾಗಿ ಸೆಕ್ಸ್ ಮಾಡಬಹುದು. 

ಸಂಗಾತಿಯೊಂದಿಗೆ ಮಾತನಾಡಿ
ಆರೋಗ್ಯಕರ ಸಂಬಂಧದಲ್ಲಿ (healthy relationship) ಸಂವಹನ (Communication) ಬಹಳ ಮುಖ್ಯ. ನಿಮ್ಮ ಸಂಗಾತಿಯೊಂದಿಗೆ ಮನಸ್ಸು ಬಿಚ್ಚಿ ಮಾತನಾಡುವುದು ಆಳವಾದ ಸಂಬಂಧವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದು ಉತ್ತಮ ಲೈಂಗಿಕತೆಯನ್ನು ಹೊಂದಲು ಸಹಾಯ ಮಾಡುತ್ತದೆ

ಪೌಷ್ಠಿಕಾಂಶಯುಕ್ತ ಆಹಾರ (Healthy Food)
ಮನಸ್ಸನ್ನು ಶಾಂತಗೊಳಿಸಿದ ನಂತರ, ನಿಮ್ಮ ಹಸಿವನ್ನು ಶಾಂತಗೊಳಿಸಲು ಮತ್ತು ನಿಮ್ಮನ್ನು ಹೈಡ್ರೇಟ್ (hydrate) ಮಾಡಲು ಚೆನ್ನಾಗಿ ತಿನ್ನುವುದು ಸಹ ಮುಖ್ಯ. ಇದು ಸೆಕ್ಸ್ ನಂತಹ ಚಟುವಟಿಕೆಗಳನ್ನು ಮಾಡಲು ನಿಮಗೆ ಶಕ್ತಿಯನ್ನು ನೀಡುತ್ತದೆ.

ಫೋರ್ ಪ್ಲೇ (Fore Play) ಮಾಡಲು ಮರೆಯಬೇಡಿ
ಮೇಣದಬತ್ತಿಗಳು, ಲೈಟ್ ಮ್ಯೂಸಿಕ್ (Lite Music) ಅಥವಾ ರೋಮ್ಯಾಂಟಿಕ್ ಮ್ಯೂಸಿಕ್ (Romantic Music), ಮತ್ತು ಮೂವಿ ನೋಡುತ್ತಾ, ನಿಮ್ಮಿಬ್ಬರ ರಾತ್ರಿಯನ್ನು ರೋಮ್ಯಾಂಟಿಕ್ (Romantic) ಆಗಿಸಿ. ಇವು ನಿಮ್ಮ ಫೋರ್ ಪ್ಲೇ ಭಾಗವಾಗಬಹುದು, ಇದು ಆರಾಮದಾಯಕ ಲೈಂಗಿಕತೆಗೆ ನಿಮ್ಮನ್ನು ಪ್ರಚೋದಿಸುತ್ತದೆ. ಇದಲ್ಲದೆ, ಸುಗಂಧ ತೈಲಗಳು (Purfumes) ಮತ್ತು ಸಂಗೀತವು ನಿಮ್ಮ ಇಂದ್ರಿಯಗಳನ್ನು ಜಾಗೃತಗೊಳಿಸುತ್ತದೆ ಮತ್ತು ಹೆಚ್ಚು ಆಕ್ಟೀವ್ ಆಗಿರಲು ಸಹಾಯ ಮಾಡುತ್ತದೆ.

ಸೆಲ್ಫ್ ಪ್ಲೆಶರ್ ಟ್ರೈ ಮಾಡಿ
ನೀವು ಸಂಗಾತಿಯನ್ನು ಹೊಂದಿರಲಿ ಅಥವಾ ಇಲ್ಲದಿರಲಿ, ಹಸ್ತಮೈಥುನ (mustarbation) ಮಾಡೋದು ಸಹ ನಿಮಗೆ ಕೆಲವು ದಿನಗಳವರೆಗೆ ವಿಶ್ರಾಂತಿ ನೀಡುತ್ತದೆ ಅನ್ನೋದು ಸುಳ್ಳಲ್ಲ.  ನೀವು ಒಬ್ಬರೇ ಇದ್ದಾಗ, ನಿಮ್ಮ ಸುತ್ತಲಿನ ವಾತಾವರಣವನ್ನು ರೋಮ್ಯಾಂಟಿಕ್ ಆಗಿಸಿ, ಬಳಿಕ ನಿಮ್ಮ ಜೊತೆ ನೀವು ಎಂಜಾಯ್ ಮಾಡಿ. 
 

ಇಬ್ಬರಿಗೆ ಒಪ್ಪಿಗೆ ಇದ್ದಾಗ ಮಾತ್ರ ಸೆಕ್ಸ್ ಮಾಡಿ
ಕೆಲವೊಮ್ಮೆ ತುಂಬಾ ಟಯರ್ಡ್ ಆಗಿದ್ದಾಗ, ಸೆಕ್ಸ್ ಮಾಡದೇ ಇರೋದೆ ಬೆಸ್ಟ್. ನೀವು ಮತ್ತು ನಿಮ್ಮ ಸಂಗಾತಿ ಯಾವಾಗಲೂ ಒಂದೇ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಬಯಸುವುದಿಲ್ಲ, ಯಾಕಂದ್ರೆ ಇಬ್ಬರ ಆಸಕ್ತಿಯೂ ಬೇರೆ ಬೇರೆಯಾಗಿರುತ್ತೆ. ಇದನ್ನು ಇಬ್ಬರೂ ಅರ್ಥ ಮಾಡಿಕೊಂಡು, ಇಬ್ಬರಿಗೂ ಆಸಕ್ತಿ ಇದ್ದಾಗ ಮಾತ್ರ ಸೆಕ್ಸ್ ಮಾಡಿ ಆನಂದಿಸಿ. 

Latest Videos

click me!