ಮೊದಲ ರಾತ್ರಿಯಂದು ವಧು 'ನನ್ನನ್ನು ಮುಟ್ಟಬೇಡ' ಎಂದು ಹೇಳಿದ್ದಾಳೆ. ಈ ವಿಚಾರವಾಗಿ ನಡೆದ ಜಗಳದಲ್ಲಿ ವರನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ವಧುವಿಗೆ ಬೇರೊಬ್ಬನ ಜೊತೆ ಪ್ರೀತಿ ಇರಬಹುದೆಂದು ವರನ ಕುಟುಂಬಸ್ಥರು ಆರೋಪಿಸಿದ್ದಾರೆ.
ಎರಡು ಕುಟುಂಬಗಳು ಒಪ್ಪಿ ಮದುವೆ ನಿಶ್ಚಯ ಮಾಡಿದ್ದರು. ನಿಶ್ಚಯದಂತೆಯೇ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದ್ರೆ ಮೊದಲ ರಾತ್ರಿ ಇಡೀ ಮದುವೆ ಮನೆಯಲ್ಲಿದ್ದ ಸಂಭ್ರಮದ ವಾತಾವರಣ ಮಾಯವಾಗಿತ್ತು. ವಧು ಡೋಂಟ್ ಟಚ್ ಮಿ ಅಂದ್ರೆ ವರ ಆಸ್ಪತ್ರೆಗೆ ದಾಖಲಾಗಿದ್ದಾನೆ.
25
ಮೊದಲರಾತ್ರಿಯೇ ಪಂಚಾಯ್ತಿ
ಉತ್ತರ ಪ್ರದೇಶದ ರಾಂಪುರ ಎಂಬಲ್ಲಿ ಈ ಘಟನೆ ನಡೆದಿದ್ದು, ವಧುವಿನ ವರ್ತನೆಯಿಂದ ಎರಡು ಕುಟುಂಬಗಳು ಆಘಾತಕ್ಕೊಳಗಾಗಿವೆ. ಮೊದಲ ರಾತ್ರಿಯಂದು ಜೋಡಿ ನಡುವೆ ಸಂಘರ್ಷ ಇತ್ಯರ್ಥಪಡಿಸಲು ಕುಟುಂಬದ ಹಿರಿಯರು ಪಂಚಾಯ್ತಿ ನಡೆಸುವಂತಾಗಿತ್ತು. ರಾತ್ರಿ ನಡೆದ ಜಗಳದಲ್ಲಿ ವರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.
35
ವರನಿಗೆ ಬಿಗ್ ಶಾಕ್ ನೀಡಿದ ವಧು
ರಾಣಿ-ಸೂರಜ್ (ಹೆಸರು ಬದಲಾಯಿಸಲಾಗಿದೆ) ಮದುವೆ ಎಲ್ಲಾ ಸಂಪ್ರದಾಯಗಳ ಪ್ರಕಾರ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದಿತ್ತು. ಮದುವೆ ನಂತ್ರ ರಾತ್ರಿ 2 ಗಂಟೆವರೆಗೂ ಸೂರಜ್ ಮತ್ತು ರಾಣಿಯ ಆರತಕ್ಷತೆ ನಡೆದಿದೆ. ಆರತಕ್ಷತೆ ಬಳಿಕ ಇಬ್ಬರನ್ನು ಹೂಗಳಿಂದ ಅಲಂಕೃತಗೊಂಡ ಕೋಣೆಗೆ ಕಳುಹಿಸಿದ್ದಾರೆ. ರೂಮ್‌ನೊಳಗೆ ಹೋಗ್ತಿದ್ದಂತೆಯೇ ವರನಿಗೆ ಬಿಗ್ ಶಾಕ್ ಎದುರಾಗಿತ್ತು.
ಮೊದಲ ರಾತ್ರಿಯಲ್ಲಿ ವರ ಸಮೀಪಕ್ಕೆ ಬರುತ್ತಿದ್ದಂತೆ ತನ್ನನ್ನು ಮುಟ್ಟದಂತೆ ವಧು ಎಚ್ಚರಿಕೆ ನೀಡಿದ್ದಾಳೆ. ತನಗೆ ಮದುವೆ ಇಷ್ಟವಿಲ್ಲ ಮತ್ತು ಈ ಯಾವ ಶಾಸ್ತ್ರಗಳು ಬೇಡ ಎಂದು ಹೇಳಿಕೊಂಡಿದ್ದಾಳೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೂರಜ್ ಮತ್ತು ರಾಣಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಮುಂದಾಗಿದೆ. ಈ ವೇಳೆ ಸೂರಜ್ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಾಯವಾಗಿದೆ ಎಂದು ವರದಿಯಾಗಿದೆ.
ರಾಣಿಗೆ ಮದುವೆಗೆ ಮೊದಲೇ ಬೇರೆ ವ್ಯಕ್ತಿಯನ್ನು ಪ್ರೀತಿ ಮಾಡಿರಬಹುದು. ಹಾಗಾಗಿ ಈ ರೀತಿ ನಡೆದುಕೊಳ್ಳುತ್ತಿದ್ದಾಳೆ. ಒಪ್ಪಿಗೆ ಇಲ್ಲದಿದ್ರೆ ಮೊದಲೇ ಹೇಳಬೇಕಿತ್ತು. ಇಷ್ಟೊಂದು ಅದ್ಧೂರಿಯಾಗಿ ಮದುವೆ ಮಾಡಿಕೊಂಡು ಈಗ ನಮಗೆ ಮೋಸ ಮಾಡ್ತಿದ್ದಾರೆ ಎಂದು ಸೂರಜ್ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇನ್ನು ಎರಡು ಕುಟುಂಬಗಳ ನಡುವೆ ಮಾತಕತೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.