ವಧುವೊಬ್ಬಳು ವರನಿಗೆ ರಸಗುಲ್ಲಾ ತಿನ್ನಿಸಲು ಮುಂದಾದಾಗ ಆತ ನಿರಾಕರಿಸುತ್ತಾನೆ. ನಂತರ ವರನು ತಿನ್ನಿಸಲು ಬಂದಾಗ ವಧು ಮುಖ ತಿರುಗಿಸುತ್ತಾಳೆ. ಇದರಿಂದ ಕೋಪಗೊಂಡ ವರನು ರಸಗುಲ್ಲಾಗಳನ್ನು ಎಸೆದು ಹೋಗುವ ಫನ್ನಿ ವಿಡಿಯೋವೊಂದು ವೈರಲ್ ಆಗಿದೆ.
ಮದುವೆ ಮನೆಯಲ್ಲಿನ ಚಿತ್ರ-ವಿಚಿತ್ರ ಘಟನೆಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲವೊಂದು ವಿಡಿಯೋಗಳು ನೋಡಿ ಶಾಕ್ ಆದರೆ, ಮತ್ತೆ ಕೆಲವು ವಿಡಿಯೋಗಳು ನಗುತರಿಸುವಂತೆ ಇರುತ್ತವೆ. ಇಷ್ಟವಿಲ್ಲದ ಮದುವೆಯ ವಿಡಿಯೋಗಳಂತೂ ನೋಡಿದಾಗ ಅಬ್ಬಬ್ಬಾ ಮದುವೆ ದಿನವೇ ಹೀಗೆ, ಮುಂದೇನು ಕಥೆ ಎನ್ನಿಸುವುದು ಇದೆ.
25
ಲೈಕ್ಸ್, ವ್ಯೂವ್ಸ್ಗಳಿಗಾಗಿ
ಇದರ ನಡುವೆಯೇ ಇತ್ತೀಚಿನ ದಿನಗಳಲ್ಲಿ ಲೈಕ್ಸ್, ವ್ಯೂವ್ಸ್ಗಳಿಗಾಗಿ ಏನೇನೋ ರೀಲ್ಸ್ ಮಾಡುವುದು ಒಂದೆಡೆಯಾದರೆ, ಎಐ ಜಮಾನಾವಾಗಿರುವ ಇಂದು ಎಐ ಮೂಲಕ ರಿಯಲ್ ಎನ್ನಿಸುವಂಥ ವಿಡಿಯೋ ಮಾಡಲಾಗುತ್ತದೆ. ಇವೆಲ್ಲವುಗಳ ನಡುವೆಯೇ, ರಿಯಲ್ ಯಾವುದು, ರೀಲ್ ಯಾವುದು ಎಂದು ತಿಳಿಯುವುದು ಕಷ್ಟವೇ.
35
ಫನ್ನಿ ವಿಡಿಯೋ
ಆದರೆ ಇಲ್ಲೊಂದು ವಿಡಿಯೋ ಮಾತ್ರ ಸಕತ್ ಫನ್ನಿಯಾಗಿದೆ. ಇದರಲ್ಲಿ ವಧು ಮೊದಲಿಗೆ ವರನಿಗೆ ರಸಗುಲ್ಲಾ ತಿನ್ನಿಸಲು ಮುಂದಾಗಿದ್ದಾಳೆ. ಆದರೆ ವರ ಅದನ್ನು ಸ್ವೀಕರಿಸಲಿಲ್ಲ. ಆದರೆ ಬಾಯಿಯೊಳಗೆ ಇನ್ನೊಂದು ರಸಗುಲ್ಲಾ ಇಟ್ಟುಕೊಂಡಿದ್ದ. ಅದೇ ವೇಳೆ ಆತ ಮದುಮಗಳಿಗೆ ತಿನ್ನಿಸಲು ಮುಂದಾದಾಗ, ಅವಳು ಅತ್ತ ಕಡೆ ಮುಖ ಹಾಕಿದ್ದಾಳೆ. ನೀನೂ ಬೇಡ, ನಿನ್ನ ರಸಗುಲ್ಲನೂ ಬೇಡ ಎನ್ನುವ ರೀತಿಯಲ್ಲಿ ಮದುಮಗಳು ವರ್ತಿಸಿದ್ದಾಳೆ.
ಇಷ್ಟಾಗುತ್ತಿದ್ದಂತೆಯೇ ರೊಚ್ಚಿಗೆದ್ದ ವರ, ಬಾಯಲ್ಲಿ ಇದ್ದ ರಸಗುಲ್ಲವನ್ನೂ ಎಸೆದು, ಕೈಯಲ್ಲಿ ಇದ್ದ ರಸಗುಲ್ಲವನ್ನೂ ಎಸೆದು ಅಲ್ಲಿ ಹೋಗಿದ್ದಾನೆ. ಅಲ್ಲಿಗೆ ರಸಗುಲ್ಲಾ ಸಂಪ್ರದಾಯ ಮುಗಿದಿದೆ. ಇದರ ವಿಡಿಯೋ ವೈರಲ್ ಆಗುತ್ತಿದ್ದು ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.
55
ಅಸಲಿಯತ್ತೇನು?
ಅಷ್ಟಕ್ಕೂ ಇದು ರಿಯಲ್ಲೋ, ಫೇಕೋ ಎನ್ನುವುದು ತಿಳಿದಿಲ್ಲ. ಆದರೆ ಎಐ ವಿಡಿಯೋ ಅಂತೂ ಅಲ್ಲ. ಆದರೆ ರೀಲ್ಸ್ಗಾಗಿಮಾಡಿರುವುದೋ ಗೊತ್ತಿಲ್ಲ. ನಿಜವಾಗಿಯೂ ಹೀಗೆಯೇ ಆಗಿದ್ದರೂ ಅಚ್ಚರಿಯೇನಿಲ್ಲ. ಒಟ್ಟಿನಲ್ಲಿ ರಸಗುಲ್ಲಾ ಶಾಸ್ತ್ರ ಪ್ರಳಯಾಂತಿಕವಾಗಿದೆ ಎಂದು ಕಮೆಂಟಿಗರು ಕಮೆಂಟ್ನಲ್ಲಿ ಹಾಕುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.