'ಅಮೃತಧಾರೆ' ಧಾರಾವಾಹಿ ಖ್ಯಾತಿಯ ದಿಯಾ ಅಲಿಯಾಸ್ ಶ್ವೇತಾ ಗೌಡ ಅವರು ನಿಜ ಜೀವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೇ 14 ರಂದು ಹಳೇಬೀಡಿನಲ್ಲಿ ಉದ್ಯಮಿ ಸುನೀಲ್ ಅವರೊಂದಿಗೆ ಅವರ ವಿವಾಹ ನಡೆಯಲಿದ್ದು, ಮದುವೆಯ ನಂತರವೂ ತಮ್ಮ ಓದನ್ನು ಮುಂದುವರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಅಮೃತಧಾರೆಯಲ್ಲಿ (Amruthadhaare Serial)ನಲ್ಲಿ ಸದ್ಯ ಜೈದೇವನಿಗೆ ಕೈಕೊಟ್ಟು ಅವನ ಹಣ ಪಡೆದು ಪರಾರಿಯಾಗಿರೋ ದಿಯಾಳ ಮನೆಗೆ ಜೈದೇವ ಒಕ್ಕರಿಸಿಕೊಂಡು ಆಗಿದೆ. ಅವಳಿಗೆ ತಕ್ಕಶಾಸ್ತಿ ಮಾಡಲು ರೆಡಿ ಆಗಿದ್ದಾನೆ ಜೈದೇವ.
26
ನಾಳೆನೇ ಮದ್ವೆ
ಆದರೆ, ಅದೇ ಇನ್ನೊಂದೆಡೆ ದಿಯಾ ಉರ್ಫ್ ಶ್ವೇತಾ ಗೌಡ ಅವರ ರಿಯಲ್ ಮದುವೆ ನಾಳೆನೇ ಅರ್ಥಾತ್ ಮೇ 14ರಂದು ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ.
36
ಆಮಂತ್ರಣ ಪತ್ರಿಕೆ ವೈರಲ್
ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನಟಿ ಆಮಂತ್ರಣ ಪತ್ರಿಕೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಹಳೇಬೀಡಿನ ಬೇಲುರು ರಸ್ತೆಯಲ್ಲಿ ಇರುವ ಶ್ರೀ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಲಿದೆ. ನಾಳೆ ಬೆಳಿಗ್ಗೆ 9.15ರಿಂದ 10.15ರ ಮುಹೂರ್ತದಲ್ಲಿ ಈ ಮದುವೆ ನಡೆಯಲಿರುವ ಬಗ್ಗೆ ಆಮಂತ್ರಣ ಪತ್ರಿಕೆಯಲ್ಲಿ ತಿಳಿಸಲಾಗಿದೆ.
ನಾಡಿದ್ದು ಅಂದರೆ 15ನೇ ತಾರೀಖು ಮಧ್ಯಾಹ್ನ ಹಾಸನ ಜಿಲ್ಲೆಯ ಶ್ರೀ ಪುರದಮ್ಮ ದೇವಸ್ಥಾನದಲ್ಲಿ ಬೀಗರ ಔತಣ ನಡೆಯಲಿದೆ. ಅಂದಹಾಗೆ ಶ್ವೇತಾ ಅವರ ಭಾವಿ ಪತಿಯ ಹೆಸರು ಸುನೀಲ್. ಸುನೀಲ್ ಅವರು ಬೆಂಗಳೂರಿನಲ್ಲಿ ಬೇಕರಿ ನಡೆಸುತ್ತಿದ್ದಾರೆ, ಇವರು ರೈತರ ಕುಟುಂಬದಿಂದ ಬಂದವರು.
56
ಪತಿಯ ಡಿಟೇಲ್ಸ್
ಶ್ವೇತಾ ಅವರದ್ದು ಅರೇಂಜ್ಡ್ ಮ್ಯಾರೇಜ್. ಪತಿಯ ಹೆಸರು ಸುನೀಲ್. ಇಬ್ಬರೂ ಒಂದೇ ಊರಿನವರು. ತಂದೆಗೆ ಅನಾರೋಗ್ಯ ಆಗಿ ಹಾಸನಕ್ಕೆ ಹೋಗಿ ಬೆಡ್ ರೆಸ್ಟ್ ಮಾಡುವ ಯೋಚನೆಯಲ್ಲಿದ್ದರು. ಆ ವೇಳೆ ಸುನೀಲ್ ಕುಟುಂಬದ ಪರಿಚಯವಾಗಿ, ಮದುವೆ ಫಿಕ್ಸ್ ಆಗಿದೆ ಎಂದು ಶ್ವೇತಾ ಹೇಳಿದ್ದಾರೆ.
66
ಮದ್ವೆ ಆದಮೇಲೆ ಓದು ಮುಂದುವರಿಕೆ
ಶ್ವೇತಾ ಗೌಡ ಅವರಿಗೆ ಈಗ ಮದುವೆ ಆಗೋ ಆಸೆ ಇರಲಿಲ್ಲ. ಇನ್ನೂ ಓದಬೇಕು ಎನ್ನುವ ಆಸೆ ಇತ್ತು. ಆದರೆ ಸುನೀಲ್ ಅವರನ್ನು ನೋಡಿದ ಮೇಲೆ ರಿಜೆಕ್ಟ್ ಮಾಡಲು ಯಾವುದೇ ನೆಪಗಳೇ ಇರಲಿಲ್ಲವಂತೆ. ಈಗ ಶ್ವೇತಾ ಗೌಡ ಅವರು ಮದುವೆ ಆದ್ಮೇಲೆ ಕೂಡ ಓದುವ ಯೋಚನೆಯಲ್ಲಿದ್ದಾರೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.