ಕಷ್ಟಗಳು ಬಂದಾಗ ಸುಧಾಮೂರ್ತಿ ಹೇಗೆ ಎದುರಿಸ್ತಾರೆ? ಅವರ ಬಳಿಯಿದೆ ಸರಳ ಸೂತ್ರ

First Published | Jan 16, 2024, 11:53 AM IST

ಜೀವನದಲ್ಲಿ ಕಷ್ಟ ಸುಖಗಳು ಪ್ರತಿಯೊಬ್ಬ ಮನುಷ್ಯನಿಗೂ ನಿರಂತರ. ಅವು ಶ್ರೀಮಂತರಿಗೂ ಬರುತ್ತವೆ, ಬಡವರಿಗೂ ಬರುತ್ತವೆ. ಸುಧಾಮೂರ್ತಿಗೆ ಇಂಥ ಕಷ್ಟಗಳು ಬಂದಾಗ ಅವ್ರು ಅದನ್ನು ಸುಲಭವಾಗಿ ಎದುರಿಸೋಕ ಸುಲಭ ಸೂತ್ರವೊಂದನ್ನು ನೆಚ್ಚಿಕೊಂಡಿದ್ದಾರೆ. 

Sudhamyrthy

ಸುಧಾಮೂರ್ತಿ ತುಂಬಾ ಜನರ ಆದರ್ಶ. ಅವರ ಸರಳತೆ, ಪಟಾ ಪಟಾ ಅರಳು ಹುರಿದಂತೆ ಆಡುವ ಮುತ್ತಿನಂಥಾ ಮಾತುಗಳು, ಅವರ ಸೇವಾ ಮನೋಭಾವ, ಅವರಿರುವ ರೀತಿ ಬಹಳಷ್ಟು ಜನರಿಗೆ ಮಾದರಿಯಾಗಿವೆ. ಕೋಟಿ ಕೋಟಿ ಇದ್ದರೂ ಅನವಶ್ಯಕ ಖರ್ಚು ಮಾಡುವವರಲ್ಲ. ಐಶಾರಾಮಿತನ ಪ್ರದರ್ಶಿಸುವವರಲ್ಲ. ಹಣವಿದೆಯೆಂದು ಮೌಲ್ಯಗಳನ್ನು ಗಾಳಿಗೆ ತೂರುವುದಿಲ್ಲ.

ಮತ್ತೆ ಕೆಲವೊಬ್ಬರಿಗೆ ಸುಧಾಮೂರ್ತಿಯವರ ಬಳಿ ಬೇಕಾದಷ್ಟು ದುಡ್ಡಿದೆ. ಅವ್ರಿಗೆ ಜೀವನದಲ್ಲಿ ಏನ್ ಕಷ್ಟ ಇರೋಕ್ ಸಾಧ್ಯ? ಹಾಗಾಗೇ ಆದರ್ಶ ಮಾತಾಡ್ತಾರೆ ಅನ್ನಿಸ್ಬೋದು. ಆದ್ರೆ ಸುಧಾಮೂರ್ತಿ ಹೇಳ್ತಾರೆ ಕೇಳಿ-

Tap to resize

ಜೀವನದಲ್ಲಿ ಕಷ್ಟ ಸುಖಗಳು ಪ್ರತಿಯೊಬ್ಬ ಮನುಷ್ಯನಿಗೂ ನಿರಂತರ. ಅವು ಶ್ರೀಮಂತರಿಗೂ ಬರುತ್ತವೆ, ಬಡವರಿಗೂ ಬರುತ್ತವೆ. ತಾನು ಹಣದ ಕಷ್ಟದಿಂದ ಹಿಡಿದು ಎಲ್ಲ ರೀತಿಯ ಕಷ್ಟಗಳನ್ನೂ ನೋಡಿಕೊಂಡೇ ಬಂದಿದ್ದೇನೆ ಎನ್ನುವ ಅವರು ಕಷ್ಟಗಳನ್ನು ಹೇಗೆ ಎದುರಿಸುತ್ತಾರೆ ಎಂಬ ವಿಷಯವನ್ನೂ ಹೇಳಿದ್ದಾರೆ. 

 ಕಷ್ಟಗಳನ್ನು ಎದುರಿಸಲು ಸುಧಾ ಮೂರ್ತಿ ಬಳಸೋ ಟ್ರಿಕ್ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಅಂದ ಹಾಗೆ, ಸುಧಮ್ಮ ಕಷ್ಟ ಬಂದಾಗ ಯಾವ ಮನಸ್ಥಿತಿ ತಂದುಕೊಳ್ತಾರೆ ಗೊತ್ತಾ?
 

ಜೀವನದಲ್ಲಿ ಎಷ್ಟೇ ದೊಡ್ಡ ಕಷ್ಟ ಬರಲಿ, ಆಗ ನಾನು 'ದಿಸ್ ಟೂ ಶಲ್ ಪಾಸ್'(ಈ ಸಮಯ ದಾಟಿ ಹೋಗುತ್ತದೆ) ಎಂಬ ಮಂತ್ರ ಜಪಿಸುತ್ತೇನೆ. ಸುಖ ಬಂದಾಗಲೂ ಇದು ನಿರಂತರವಲ್ಲ, ಪ್ರತಿ ದಿನ ಯಾರೂ ಪದ್ಮಶ್ರೀ ಕೊಡುವುದಿಲ್ಲ ಎಂಬುದನ್ನು ಹೇಳಿಕೊಳ್ಳುತ್ತೇನೆ.

sudha murthy

ಜೀವನದಲ್ಲಿ ಕಷ್ಟ ಸುಖ ಎರಡೂ ಬರುತ್ತಿರುತ್ತವೆ, ಹೋಗುತ್ತಿರುತ್ತವೆ. ಸದಾ ಇರುವುದಿಲ್ಲ. ಅದನ್ನು ಅರಿತಿದ್ದಾಗ ಕಷ್ಟಕ್ಕೆ ಕುಗ್ಗುವ, ಸುಖಕ್ಕೆ ಹಿಗ್ಗುವ ಪ್ರಮೇಯವೇ ಬರುವುದಿಲ್ಲ ಎನ್ನುತ್ತಾರೆ ಸುಧಾಮೂರ್ತಿ. 

ಇತ್ತೀಚೆಗೆ ಪತಿ ನಾರಾಯಣಮೂರ್ತಿಯವರು ಭಾರತೀಯರು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದಿದ್ದು ಚರ್ಚೆಗೆ ವಿಷಯವಾಗಿತ್ತು. ಈ ವಿಷಯದಲ್ಲಿ ಪತಿಯ ಬೆನ್ನಿಗೆ ನಿಂತ ಸುಧಾಮೂರ್ತಿ, 'ನೀವು ಕೆಲಸವನ್ನು ಎಂಜಾಯ್ ಮಾಡಿಕೊಂಡು ಮಾಡಿದಾಗ ಮಾಡುವ ಕೆಲಸವೇ ಹಾಲಿಡೇಯಾಗುತ್ತದೆ' ಎಂದಿದ್ದರು. 

Latest Videos

click me!