ನೆಚ್ಚಿನ ಗುರುವಿಗೆ ಅಚ್ಚುಮೆಚ್ಚಾಗೋವಂಥ ಉಡುಗೊರೆ ನೀಡಿ

First Published Sep 3, 2020, 6:39 PM IST

ಇನ್ನೆರಡೇ ದಿನ, ಶಿಕ್ಷಕರ ದಿನ ಬಂದೇಬಿಟ್ಟಿದೆ. ಉತ್ತಮ ವ್ಯಕ್ತಿಯಾಗಿ, ಸಮಾಜಕ್ಕೆ ಉಪಯೋಗವಾಗುವಂತೆ ಬಾಳುವುದೇ ಕಲಿಸಿದ ಗುರುವಿಗೆ ನಾವು ನೀಡಬಹುದಾದ ದೊಡ್ಡ ಉಡುಗೊರೆ. ಆದರೆ, ನಮ್ಮ ನೆಚ್ಚಿನ ಗುರುವಿಗೆ ನಮ್ಮದೇ ಆದ ರೀತಿಯಲ್ಲಿ ಕೃತಜ್ಞತೆ ವ್ಯಕ್ತಪಡಿಸುವುದೂ ಅಷ್ಟೇ ಮುಖ್ಯ. ಇದರಿಂದ ಅವರಲ್ಲಿ ಸಾರ್ಥಕ್ಯ ಭಾವನೆ ಉಂಟಾಗುತ್ತದೆ. ವೈಯಕ್ತಿಕ ಮಟ್ಟದಲ್ಲಿ ನಾವು ನಮ್ಮ ನೆಚ್ಚಿನ ಶಿಕ್ಷಕರು ನೆನಪಿಡುವಂಥ ಉಡುಗೊರೆ ನೀಡಿ ಅವರಿಗೆ ಅಭಿನಂದನೆ ಹೇಳಬಹುದು. ಐಡಿಯಾ ಏನೋ ಚೆನಾಗಿದೆ, ಆದರೆ ಏನು ಉಡುಗೊರೆ ಕೊಟ್ಟರೆ ಚೆನ್ನಾಗಿರುತ್ತದೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿವೆ ನೋಡಿ ಕೆಲ ಸಲಹೆಗಳು. 

ಪರ್ಸ್‌ನಲೈಸ್ಡ್ ಲ್ಯಾಂಪ್ಆಕರ್ಷಕವಾದ ಲ್ಯಾಂಪ್ ಎಂಥ ಕೋಣೆಗೂ ಅಂದವನ್ನು ಎಳೆದು ತರುತ್ತದೆ. ಇದು ಮನಸ್ಸನ್ನು ಶಾಂತವಾಗಿಸಿ, ಉತ್ತಮ ನಿದ್ರೆಗೂ ಕಾರಣವಾಗುತ್ತದೆ. ಇಂಥ ಲ್ಯಾಂಪ್‌ನಲ್ಲಿ ನಿಮ್ಮ ಟೀಚರ್‌ನ ಹಳೆಯ ಫೋಟೋಗಳನ್ನು ಹಾಕಿಸಿ ಕಸ್ಟಮೈಸ್ ಮಾಡಿ ಅವರಿಗೆ ನೀಡಿದರೆ ಖುಷಿಯಾಗದೆ ಇರಲು ಸಾಧ್ಯವೇ ಇಲ್ಲ. ಇದಕ್ಕಾಗಿ ಬಾಟಲ್ ಲ್ಯಾಂಪ್ ಕೂಡಾ ಬಳಸಬಹುದು.
undefined
ಗಿಡನಿಮ್ಮ ಬೆಳವಣಿಗೆಯ ದಿನಗಳಲ್ಲಿ ಸಹಾಯ ಮಾಡಿದ ಶಿಕ್ಷಕರಿಗೆ ಬೆಳವಣಿಗೆಯ ರೂಪಕವಾದ ಗಿಡಕ್ಕಿಂತ ಉತ್ತಮ ಗಿಫ್ಟ್ ಇನ್ನೇನಿರಲು ಸಾಧ್ಯ? ಚೆಂದದ ಪಾಟ್ ಹೊಂದಿದ ಉತ್ತಮ ಗಿಡಗಳನ್ನು ಕೊಟ್ಟರೆ ಅವರು ಖಂಡಿತವಾಗಿಯೂ ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇಂಡೋರ್ ಪ್ಲ್ಯಾಂಟ್‌ಗಳಾದರೆ ಕ್ಲಾಸ್‌ರೂಂನಲ್ಲಿಟ್ಟುಕೊಂಡು ನನ್ನ ಹಳೆ ವಿದ್ಯಾರ್ಥಿ ಕೊಟ್ಟಿದ್ದು ಎಂದು ಹೆಮ್ಮೆಯಿಂದ ಹೇಳಬಲ್ಲರು.
undefined
ಪರ್ಸ್‌ನಲೈಸ್ಡ್ ಫೋಟೋ ಸ್ಟ್ಯಾಂಡ್ನಿಮ್ಮ ಟೀಚರ್ ಸ್ಲೇಟ್ ಅಥವಾ ಪುಸ್ತಕ ಹಿಡಿದು ನಿಂತಂತ ಮಿನಿಯೇಚರ್ ಫೋಟೋ ಸ್ಟ್ಯಾಂಡ್ ಬಹಳ ವಿಶೇಷವಾಗಿಯೂ, ತಮಾಷೆಯಾಗಿಯೂ ಇರುತ್ತದೆ.
undefined
ಪರ್ಸನಲೈಸ್ಡ್ ಡೈರಿಪಾಠದ ನೋಟ್ಸ್ ಮಾಡಿಕೊಳ್ಳಲು, ಮೀಟಿಂಗ್ ಪಾಯಿಂಟ್ಸ್ ಬರೆದುಕೊಳ್ಳಲು ಇತ್ಯಾದಿ ಕಾರಣಗಳಿಗಾಗಿ ಶಿಕ್ಷಕರಿಗೆ ನೋಟ್‌ಬುಕ್ ಅತ್ಯಗತ್ಯದ ವಸ್ತುವಾಗಿದೆ. ಹಾಗಾಗಿ, ಅದನ್ನೇ ಅವರಿಗೆ ಕೊಟ್ಟರೆ ಹೇಗೆ? ಈಗಂತೂ ಮಾರ್ಕೆಟ್‌ನಲ್ಲಿ ಬಹಳ ಅಂದಚೆಂದದ ಡೈರಿಗಳು ಲಭ್ಯವಿವೆ. ಇಂಥ ಡೈರಿಯಲ್ಲಿ ನಿಮ್ಮ ಶಿಕ್ಷಕರ ಹೆಸರನ್ನು ಹಾಕಿಸಿ, ಮತ್ತೊಂದು ಒಳ್ಳೆಯ ಪೆನ್ ಮೇಲೆ ಅವರ ಹೆಸರು ಹಾಕಿಸಿ ಗಿಫ್ಟ್ ಮಾಡಿ.
undefined
ಪೇಂಟಿಂಗ್ನೀವು ಚೆನ್ನಾಗಿ ಚಿತ್ರ ಬಿಡಿಸಬಲ್ಲಿರಾದರೆ ಸ್ವತಃ ಬಿಡಿಸಿ ಕಟ್ ಹಾಕಿಸಿದ ಪೇಂಟಿಂಗ್ ನೀಡಿ. ಚಿತ್ರ ಚೆನ್ನಾಗಿ ಬಿಡಿಸಲು ಬರುವುದಿಲ್ಲವೆಂದರೆ ಕೆಲ ಪಾಸಿಟಿವ್ ಕೋಟ್‌ಗಳನ್ನು ಫ್ರೇಮ್‌ನೊಳಗಿರಿಸಿ ಕೊಡಬಹುದು.
undefined
ಲೆಟರ್ನಿಮ್ಮ ಬಾಳಿನಲ್ಲಿ ಆ ಟೀಚರ್ ಎಂಥ ಪ್ರಾಮುಖ್ಯತೆ ಪಡೆದಿದ್ದಾರೆ, ನಿಮಗೆ ಅವರೆಂದರೆ ಯಾಕೆ ಇಷ್ಟ ಎಂದೆಲ್ಲ ವಿವರಿಸಿ ಧನ್ಯವಾದ ಹೇಳಿ ಒಂದು ಲೆಟರ್ ಬರೆದು ನೀಡಿದರೆ ಅವರಲ್ಲಿ ಖಂಡಿತಾ ಸಾರ್ಥಕ ಭಾವನೆ ಉಂಟಾಗುತ್ತದೆ.
undefined
ರೊಟೇಟಿಂಗ್ ಪೆನ್ ಸ್ಟ್ಯಾಂಡ್ಪೆನ್‌ಗಳನ್ನು ಎಲ್ಲ ಟೀಚರ್‌ಗಳೂ ಬಳಸುತ್ತಾರೆ. ಹಾಗಾಗಿ ಅವರಿಗೆ ಇದು ಬಹುಪಯೋಗಕ್ಕೆ ಬರುತ್ತದೆ. ರೊಟೇಟಿಂಗ್ ಪೆನ್ ಸ್ಟ್ಯಾಂಡ್‌ನ್ನು ಕಸ್ಟಮೈಸ್ ಮಾಡಿಸಿ ನಿಮ್ಮ ಟೀಚರ್ ಫೋಟೋಗಳನ್ನು ಹಾಕಿಸಿ ಕೊಡಬಹುದು.
undefined
ಗಿಫ್ಟ್ ಕಾರ್ಡ್ಯಾವ ಗಿಫ್ಟ್ ನೀಡುವುದೆಂದು ತಿಳಿದಿಲ್ಲ, ಆದರೆ ಅವರ ಅಗತ್ಯದ್ದೇನಾದರೂ ಕೊಡಬೇಕೆನಿಸಿದರೆ ಯಾವುದಾದರೂ ಶಾಪಿಂಗ್ ವೆಬ್‌ಸೈಟ್‌ನ ಗಿಫ್ಟ್ ಕಾರ್ಡ್ ನೀಡಬಹುದು. ಇದರಿಂದ ಅವರಿಗೆ ಬೇಕಾದ್ದನ್ನು ಅವರೇ ಕೊಂಡುಕೊಳ್ಳುತ್ತಾರೆ.
undefined
click me!