ಇಂಥ ವಿಷ್ಯಗಳನ್ನು ಗಂಡಂದಿರೇಕೆ ಹೆಂಡ್ತಿಯಿಂದ ಮುಚ್ಚಿಡುತ್ತಾರೆ?

First Published | Feb 20, 2023, 5:02 PM IST

ನಿಮ್ಮ ಪತಿ ನಿಮ್ಮಿಂದ ಕೆಲವೊಂದು ವಿಷಯಗಳನ್ನು ಮರೆಮಾಚುತ್ತಿದ್ದಾರೆ ಅನ್ನೋದು ನಿಮಗೆ ತಿಳಿದಿದೆಯೇ? ಅನೇಕ ತಜ್ಞರು ಪುರುಷರು ಹೆಚ್ಚಾಗಿ ತಮ್ಮ ಹೆಂಡತಿಯರಿಂದ ಕೆಲವು ವಿಷಯಗಳನ್ನು ಮರೆಮಾಡಲು ಪ್ರಯತ್ನಿಸುತ್ತಾರೆ ಎಂದು ನಂಬುತ್ತಾರೆ. ಅವುಗಳ ಬಗ್ಗೆ ತಿಳಿಯೋಣ. 

ವೈವಾಹಿಕ ಜೀವನದಲ್ಲಿ (married life) ಗಂಡ ಮತ್ತು ಹೆಂಡತಿ ನಡುವೆ ನಂಬಿಕೆ ಇದ್ದರೆ, ಇಡೀ ಜೀವನವನ್ನು ಸಂತೋಷದಿಂದ ಕಳೆಯಲು ಸಾಧ್ಯವಾಗುತ್ತೆ. ವಿಶ್ವಾಸ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ನಾವು ಅಂತಹ ಅನೇಕ ವಿಷಯಗಳ ಹೆಚ್ಚಿನ ಗಮನ ಕೊಡಬೇಕು. ಆದರೆ ಅದು ನಿಜವಾಗಿಯೂ ಸಂಭವಿಸುತ್ತದೆಯೇ? ಪುರುಷರು ಸಾಮಾನ್ಯವಾಗಿ ನಾವು ಹೆಂಡ್ತಿಯಿಂದ ಏನೂ ಮರೆಮಾಚೋದಿಲ್ಲ, ಅಥವಾ ಮುಚ್ಚಿಡೋದಿಲ್ಲ ಅಂತಾರೆ. ಆದ್ರೆ ಕೆಲವೊಂದು ವಿಷಯಗಳನ್ನು ಅವರು ಮುಚ್ಚಿಡುತ್ತಾರೆ. ಅವುಗಳ ಬಗ್ಗೆ ತಿಳಿಯೋಣ. 
 

ದಿ ಇಂಡಿಪೆಂಡೆಂಟ್ (The independent) ನಡೆಸಿದ ಸಮೀಕ್ಷೆಯು ಅನೇಕ ಪುರುಷರು ತಮ್ಮ ಸಂಗಾತಿಯಿಂದ ಯಾವ ರೀತಿಯ ವಿಷಯಗಳನ್ನು ಮುಚ್ಚಿಡುತ್ತಾರೆ ಎಂಬುದನ್ನು ಬಹಿರಂಗಪಡಿಸಿದೆ. ಗಂಡಂದಿರು ತಮ್ಮ ಹೆಂಡತಿಯಿಂದ ಯಾವ ರೀತಿಯ ವಿಷಯಗಳನ್ನು ಮರೆಮಾಡಲು ಬಯಸುತ್ತಾರೆ ಎಂಬುದರ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ. 

Tap to resize

ಅವರು ಇನ್ನೊಬ್ಬ ಮಹಿಳೆಯ ಬಗ್ಗೆ ಯೋಚಿಸ್ತಾರೆ  (thinking about other women)
ತಿಳಿದೋ ತಿಳಿಯದೆಯೋ, ಒಬ್ಬ ಪುರುಷನು ತನ್ನ ಹೆಂಡತಿಯನ್ನು ಹೊರತುಪಡಿಸಿ ಬೇರೆ ಮಹಿಳೆಯ ಬಗ್ಗೆ ಯೋಚಿಸಿದರೆ ಅಥವಾ ಅವಳೊಂದಿಗೆ ರಹಸ್ಯವಾಗಿ ಮಾತನಾಡಿದರೆ,ಆ ಬಗ್ಗೆ ತನ್ನ ಪತ್ನಿ ಜೊತೆ ಹೇಳಲು ಹಿಂಜರಿಯುತ್ತಾನೆ.. ಇದು ಬೇರೆ ಬೇರೆ ಕಾರಣದಿಂದ ನಡೆಯುತ್ತೆ, ಆದರೆ ಎಲ್ಲಾ ಸಮಯದಲ್ಲೂ ಇದು ಅವರ್ದೇ ತಪ್ಪು ಎನ್ನುವಂತಿಲ್ಲ. 

ಪುರುಷರ ನಿರೀಕ್ಷೆಗಳು ತುಂಬಾ ಹೆಚ್ಚಾಗಿರುತ್ತೆ ಕೆಲವು ಸಂದರ್ಭದಲ್ಲಿ ಅವರ ಮನಸ್ಸು ಬೇರೆ ಹೆಣ್ಣಿನತ್ತ ಹೊರಳುತ್ತದೆ, ಬೇರೆ ಮಹಿಳೆಯರ ಜೊತೆ ಸಣ್ಣದಾಗಿ ಫ್ಲರ್ಟ್ (flirting) ಮಾಡಿದ್ರೆ ಪರವಾಗಿಲ್ಲ. ಆದರೆ ಹೆಂಡತಿಯ ದೃಷ್ಟಿಕೋನದಿಂದ, ಇದು ಮೂರನೇ ಮಹಾಯುದ್ಧಕ್ಕೆ ಕಾರಣವಾಗಬಹುದು. ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಿ.

ನೀವು ಇಲ್ಲದೆ ಇದ್ದರೂ ಸಂತೋಷವಾಗಿರ್ತಾರೆ
ಸಂಬಂಧದಲ್ಲಿ ಇರುವುದು ಎಂದರೆ ಎಲ್ಲಾ ಸಮಯದಲ್ಲೂ ಒಟ್ಟಿಗೆ ಇರುವುದು ಎಂದರ್ಥವಲ್ಲ. ಸಂಬಂಧದಲ್ಲಿ ಇರುವುದು ಎಂದರೆ ಒಬ್ಬ ವ್ಯಕ್ತಿಯು ತನ್ನ ಒಂಟಿತನವನ್ನು ಸಹ ಇಷ್ಟಪಡಬಹುದು ಆದರೆ ಪುರುಷರು ಕೆಲವು ಸಮಯ ಹೆಂಡ್ತಿಯಿಂದ ದೂರ ಇರಲು ಬಯಸುತ್ತಾರಂತೆ. ಬಹಳ ಸಮಯದವರೆಗೆ ಪ್ರತ್ಯೇಕವಾಗಿ ಉಳಿಯುವುದು ಸರಿಯಲ್ಲ, ಆದರೆ ಕೆಲವೊಮ್ಮೆ ಅವರು ಹೆಂಡ್ತಿಯಿಂದ ದೂರ ಇರಬೇಕು ಎಂದು ಬಯಸುತ್ತಾರೆ. ಆದರೆ ಇದನ್ನು ಹೆಂಡ್ತಿ ಜೊತೆ ಹೇಳೋದೆ ಇಲ್ಲ.

ಹಣಕಾಸಿನ ಬಗ್ಗೆ  (financial issues)
ಅವರು ಎಲ್ಲಿ ಖರ್ಚು ಮಾಡುತ್ತಿದ್ದಾರೆ, ಹೇಗೆ ಖರ್ಚು ಮಾಡುತ್ತಿದ್ದಾರೆ ಮತ್ತು ಹಣವನ್ನು ಹೇಗೆ ಉಳಿಸುತ್ತಿದ್ದಾರೆ ಎಂಬುದರ  ಅವರು ಲೆಕ್ಕವನ್ನು ನಿಮಗೆ ನೀಡುವ ಅಗತ್ಯವಿಲ್ಲ. ಸೇವಿಂಗ್ಸ್ ಮಾಡುವ ಬಗ್ಗೆ ಇಬ್ಬರ ನಡುವೆ ಜಗಳ ಕೂಡ ನಡೆಯಬಹುದು. ಹಣಕಾಸಿನ ಯೋಜನೆಯ ಬಗ್ಗೆ ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಅನೇಕ ವಿಷಯಗಳಿವೆ, ಆದರೆ ಈ ಬಗ್ಗೆ ಅವರು ನಿಮ್ಮಿಂದ ಕೆಲವೊಂದು ವಿಷ್ಯಗಳನ್ನು ಮುಚ್ಚಿಡಬಹುದು.
 

ಒತ್ತಡದ ಬಗ್ಗೆ  (stress)
ಇದು ಸ್ವಲ್ಪ ಗಂಭೀರವಾದ ವಿಷಯವಾಗಿದ್ದು, ಕಾಳಜಿ ವಹಿಸಬೇಕಾಗಿದೆ. ಪುರುಷರಿಗೆ ನೋವು ಆಗೋದೆ ಇಲ್ಲ ಎಂದು ಎಲ್ಲರೂ ಹೇಳುತ್ತಾರೆ. ಇದು ಒತ್ತಡದ ವಿಷಯದಲ್ಲೂ ಇದನ್ನೇ ಜನ ನಂಬುತ್ತಾರೆ. ಪುರುಷರಿಗೂ ಮಾನಸಿಕ ಒತ್ತಡ ಉಂಟಾಗುತ್ತೆ, ಆದರೆ ಅವರು ಇದನ್ನು ಮನೆಯಲ್ಲಿ ಹೇಳೋದೆ ಇಲ್ಲ. ಇದರಿಂದಾಗಿ ಕೆಲವೊಮ್ಮೆ ದಂಪತಿ ಮಧ್ಯೆ ಜಗಳ ಉಂಟಾಗುವ ಸಾಧ್ಯತೆ ಹೆಚ್ಚಿದೆ. 

ಲೈಂಗಿಕ ಸಮಸ್ಯೆಗಳು (sex problem)
ಸೆಕ್ಸ್ ನಿಂದ ಪುರುಷರು ಸಂಪೂರ್ಣ ತೃಪ್ತಿಯನ್ನು ಪಡೆಯದಿದ್ದರೆ ಅಥವಾ ಅವರು ಹೊಸದನ್ನು ಪ್ರಯತ್ನಿಸಲು ಬಯಸಿದರೆ ಅಥವಾ ಯಾವುದೇ ರೀತಿಯ ಲೈಂಗಿಕ ಸಮಸ್ಯೆಯನ್ನು ಹೊಂದಿದ್ದರೆ, ಅವರು ನಿಮ್ಮೊಂದಿಗೆ ಹಂಚಿಕೊಳ್ಳೋದೇ ಇಲ್ಲ. ಅವರು ಅಂತಹ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಲು ಇಷ್ಟಪಡೋದಿಲ್ಲ..  

ಗಂಡಂದಿರು ತಮ್ಮ ಹೆಂಡತಿಯರಿಂದ ಅನೇಕ ವಿಷಯಗಳನ್ನು ಮರೆಮಾಡುತ್ತಾರೆ, ಆದ್ದರಿಂದ ಹೆಂಡತಿಯರು ತಮ್ಮ ಗಂಡಂದಿರಿಂದ ಕೆಲವು ವಿಷಯಗಳನ್ನು ಮುಚ್ಚಿಡೋದ್ರಲ್ಲಿ ತಪ್ಪಿಲ್ಲ ಬಿಡಿ. ನಿಜವಾಗಿ ಹೇಳೋದಾದ್ರೆ ಸಂಬಂಧವು ನಂಬಿಕೆಯ ಅಡಿಪಾಯದ ಮೇಲೆ ನಡೆಯುತ್ತದೆ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುವುದು ಒಳ್ಳೆಯದು ಎಂದು ನೀವು ಅರ್ಥಮಾಡಿಕೊಳ್ಳಬೇಕು. ನಿಮ್ಮ ಸಮಸ್ಯೆಗಳು ಹೆಚ್ಚುತ್ತಿದ್ದರೆ, ನೀವು ಅದರ ಬಗ್ಗೆ ತಜ್ಞರೊಂದಿಗೆ ಒಮ್ಮೆ ಮಾತನಾಡಬೇಕು.  
 

Latest Videos

click me!