ಆ ಹುಡುಗನಲ್ಲಿ ಈ ಗುಣಗಳಿವೆಯಾ? ಮದ್ವೆಯಾಗಲು ಓಕೆ ಹೇಳ್ಬಹುದು ನೋಡಿ!

First Published | Feb 18, 2023, 4:52 PM IST

ಜೋಡಿಗಳನ್ನು ದೇವರೆ ನಿಶ್ಚಯಿಸಿರುತ್ತಾರೆ ಎಂದು ಹೇಳಲಾಗುತ್ತೆ.ನಮ್ಮ ಭಾಗ್ಯದಲ್ಲಿ ಯಾರ ಹೆಸರು ಬರೆದಿರುತ್ತೋ, ಅವರೇ ನಮ್ಮ ಜೀವನ ಸಂಗಾತಿಯಾಗಿ ಬರುತ್ತಾರೆ ಎನ್ನಲಾಗುತ್ತೆ. ಇದನ್ನ ಸುಳ್ಳು ಅಂತಾ ಹೇಳೋಕ್ಕೆ ಆಗಲ್ಲ, ಆದರೆ ಕೆಲವು ಹುಡುಗರನ್ನು ಇಷ್ಟ ಪಟ್ಟ ಕೂಡ್ಲೆ ಮದ್ಲೆ ಆಗೋದಕ್ಕಿಂತ ಮೊದ್ಲು ಸ್ವಲ್ಪ ಯೋಚನೆ ಮಾಡಿ.

ಜೀವನ ಸಂಗಾತಿಯನ್ನು (life partner) ಆಯ್ಕೆ ಮಾಡೋದು ಅಷ್ಟೊಂದು ಸುಲಭದ ಕೆಲಸ ಅಲ್ಲ. ಎಷ್ಟೋ ಸಮಯ ಒಟ್ಟಿಗೆ ಇದ್ದ ಬಳಿಕವೂ ಹೆಚ್ಚಿನ ಜನ ನಮ್ಗೆ ಸರಿಯಾದ ಸಂಗಾತಿ ಸಿಕ್ಕಿಲ್ಲ ಎಂದು ಅಂದುಕೊಳ್ಳುತ್ತಾರೆ. ನೀವು ಮದುವೆಗೆ ಮುಂಚಿತವಾಗಿ ಲವ್ ಮಾಡ್ತಾ ಇದ್ರೆ.. ನಿಮ್ಮ ಸಂಗಾತಿಯನ್ನು ಮದುವೆಯಾಗುವ ಬಗ್ಗೆ ನೀವು ಅನೇಕ ಬಾರಿ ಯೋಚನೆ ಮಾಡಲೇಬೇಕು.. ಆದರೆ ಅಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು, ಯಾವುದು ಸರಿ? ಯಾವುದು ತಪ್ಪು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. 

ಸಂಬಂಧ ಕೊನೆಗೊಳಿಸೋದಾ? ಬೇಡ್ವ ತಿಳಿಯೋದು ಹೇಗೆ? 
ಸಂಗಾತಿ ಪದೇ ಪದೇ ನಿಮ್ಮನ್ನು ದುಃಖ ಅಥವಾ ಅಸಮಾಧಾನಗೊಳಿಸುವ ಅಭ್ಯಾಸಗಳನ್ನು ಹೊಂದಿದ್ದರೆ ಮತ್ತು ಪದೇ ಪದೇ ನಿಮ್ಮನ್ನು ಅನುಮಾನಕ್ಕೆ ಸಿಲುಕಿಸುತ್ತಿದ್ದರೆ, ನೀವು ಆ ಸಂಬಂಧವನ್ನು ಮುರಿಯಬೇಕು.ಒಂದು ವೇಳೆ ಸಂಗಾತಿ ತನ್ನ ಭವಿಷ್ಯದ ಆಲೋಚನೆಗಳಲ್ಲಿ ನಿಮ್ಮನ್ನು ಸೇರಿಸಿದ್ದರೆ, ನಿಮ್ಮ ಎಲ್ಲಾ ಹೆಜ್ಜೆಗಳಲ್ಲೂ ಬೆನ್ನೆಲುಬಾಗಿ ನಿಂತಿದ್ದರೆ, ಅವರನ್ನು ಮದುವೆಯಾಗೋದ್ರಲ್ಲಿ ತಪ್ಪೇನಿಲ್ಲ.

Tap to resize

ಸಂಬಂಧದ ಬಗ್ಗೆ ವಿಶ್ವಾಸ ಇಲ್ಲದೋರು
ವೈಯಕ್ತಿಕ ಅಥವಾ ವೃತ್ತಿಪರ ಜೀವನದಲ್ಲಿ (personal and career life) ಯಶಸ್ವಿಯಾಗಲು, ಒಬ್ಬ ವ್ಯಕ್ತಿಯು ಆತ್ಮವಿಶ್ವಾಸ ಹೊಂದಿರುವುದು ಬಹಳ ಮುಖ್ಯ. ನಿಮ್ಮ ಗೆಳೆಯನಿಗೆ ನಿಮ್ಮ ಬಗ್ಗೆ ಅಥವಾ ಈ ಸಂಬಂಧದ ಬಗ್ಗೆ ವಿಶ್ವಾಸವಿಲ್ಲದಿದ್ದರೆ, ಅವನು ನಿಮ್ಮೊಂದಿಗೆ ಭವಿಷ್ಯವನ್ನು ನೋಡುವುದಿಲ್ಲ ಎಂದರ್ಥ.
 

ನಿಮ್ಮ ನಿರ್ಧಾರಗಳನ್ನು ಬೆಂಬಲಿಸೋರು
ನಿಮ್ಮ ದೃಷ್ಟಿಯನ್ನು ಬೆಂಬಲಿಸುವ ಜೀವನ ಸಂಗಾತಿ ಸಿಕ್ರೆ ನೀವು ತುಂಬಾ ಅದೃಷ್ಟಶಾಲಿ. ಆದ್ದರಿಂದ, ಗೆಳೆಯನೊಂದಿಗೆ ಭವಿಷ್ಯದ ಕನಸು (dream of future) ಕಾಣುವ ಮೊದಲು ಭವಿಷ್ಯದಲ್ಲಿ ಅವರು ನಿಮ್ಮ ಗುರಿ ತಲುಪಲು ನೆರವಾಗುವರೇ ಅನ್ನೋದನ್ನು ತಿಳಿಯಿರಿ. ನಿಮ್ಮ ಪ್ರೇಮಿ ನಿಮ್ಮ ನಿರ್ಧಾರಗಳಿಗೆ ಗಮನ ನೀಡದಿದ್ದರೆ, ಅಥವಾ ನಿಮ್ಮ ಆಸೆಗಳನ್ನು ಅಸಂಬದ್ಧ ಎಂದು ಕರೆದರೆ, ಅವರು ನಿಮ್ಮ ಜೀವನ ಸಂಗಾತಿಯಾಗಲು ಅರ್ಹರಲ್ಲ.

ಎಲ್ಲಾ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದರೆ.
ಮುಕ್ತವಾಗಿ ಮಾತನಾಡೋದು ಸಂತೋಷದ ಸಂಬಂಧಗಳ ಕೀಲಿ ಎಂದು ಪರಿಗಣಿಸಲಾಗುತ್ತದೆ. ಇಬ್ಬರು ಪರಸ್ಪರ ಕೇಳಲು ಸಿದ್ಧರಿರುವಾಗ, ಬಿರುಕು ಉಂಟಾಗುವ ಸಾಧ್ಯತೆ ಕಡಿಮೆ.ನೀವು ಮತ್ತು ನಿಮ್ಮ ಗೆಳೆಯ ಪ್ರೀತಿ, ವಿನೋದದಂತಹ ಗಂಭೀರ ಮತ್ತು ವಿಚಿತ್ರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರೆ, ಇದು ನಿಮ್ಮ ಸಂಬಂಧವನ್ನು ಮದುವೆ ಬಂಧಕ್ಕೆ ತೆಗೆದುಕೊಂಡು ಹೋಗಬಹುದು ಅನ್ನೋದನ್ನು ಸೂಚಿಸುತ್ತೆ.

ಬೇಗನೆ ಪ್ರಭಾವಿತರಾಗೋ ವ್ಯಕ್ತಿ
ತ್ವರಿತವಾಗಿ ಯಾರಿಂದಾದರೂ ಪ್ರಭಾವಿತರಾಗುವ ಜನರನ್ನು ನಂಬುವುದು ಕಷ್ಟ. ಆದ್ದರಿಂದ ಯಾವಾಗಲೂ ನಿಮ್ಮ ಗೆಳೆಯನಲ್ಲಿ ಭಾವಿ ಪತಿಯನ್ನು (future husband) ನೋಡುವ ಮೊದಲು ಅವನ ವ್ಯಕ್ತಿತ್ವವನ್ನು ಚೆನ್ನಾಗಿ ಪರೀಕ್ಷಿಸಿ. ಅವರು ಇತರರನ್ನು ಬೇಗನೆ ನಂಬುವವರಾಗಿದ್ದರೆ, ಮುಂದೆ ಸಮಸ್ಯೆ ಗ್ಯಾರಂಟಿ.

ತಪ್ಪುಗಳನ್ನು ಒಪ್ಪಿಕೊಳ್ಳದವರು
ನೀವು ತಪ್ಪು ಮಾಡಿದ್ರೆ, ಅದನ್ನು ಒಪ್ಪಿಕೊಳ್ಳಲು ತುಂಬಾನೆ ಧೈರ್ಯ ಬೇಕು.  ಯಾರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲವೋ ಅವರು ಎಲ್ಲಾ ತಪ್ಪುಗಳಿಗೆ ಇತರರನ್ನು ಜವಾಬ್ದಾರರನ್ನಾಗಿ ಮಾಡುತ್ತಾರೆ. ಅಂತಹ ವ್ಯಕ್ತಿಯೊಂದಿಗೆ ನಿಮ್ಮ ಜೀವನದುದ್ದಕ್ಕೂ ನೀವು ಸಂತೋಷವಾಗಿರುತ್ತೀರಾ? ಯೋಚನೆ ಮಾಡಿ.

ನಿಮಗಾಗಿ ಸಮಯ ನೀಡುವವರು
ನಿಮ್ಮ ಸಂಗಾತಿಯು ತನ್ನ ಬ್ಯುಸಿ ಶೆಡ್ಯೂಲ್ ಮಧ್ಯದಲ್ಲೂ ನಿಮಗಾಗಿ ಸಮಯ ತೆಗೆದುಕೊಂಡರೆ, ನೀವು ಅವನಿಗೆ ಮುಖ್ಯ ಎಂದು ಅರ್ಥ. ಇದು ಉತ್ತಮ ಸಂಗಾತಿಯ ಸಂಕೇತವೂ ಹೌದು. ಒಂದು ವೇಳೆ ಒಬ್ಬ ವ್ಯಕ್ತಿ ನಿಮಗಾಗಿ ಸಮಯ ನೀಡದೇ, ಯಾವಾಗಲೂ ಬ್ಯುಸಿ ಬ್ಯುಸಿ ಎಂದು ಹೇಳುತ್ತಿದ್ದರೆ, ಅಂತಹ ವ್ಯಕ್ತಿ ಮದುವೆಯಾಗಲು ಯೋಗ್ಯರಲ್ಲ. 

Latest Videos

click me!