ಕಿಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ IAS ಅಧಿಕಾರಿ ಅಥರ್ ಅಮೀರ್, ಪತ್ನಿ ಮೆಹರೀನ್!

Published : Feb 16, 2023, 07:04 PM ISTUpdated : Feb 16, 2023, 07:09 PM IST

ಶ್ರೀನಗರದ ಕಮಿಷನರ್, ಐಎಎಸ್ ಅಧಿಕಾರಿ ಅಥರ್ ಅಮೀರ್ ಮದುವೆ ಮೂಲಕ ಭಾರಿ ಸದ್ದು ಮಾಡಿದ್ದರು. ಇದೀಗ ಪತ್ನಿ ಮೆಹರೀನ್ ಜೊತೆಗೆ ಮೊದಲ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ. ಈ ಬಾರಿ ಕಿಸ್ ಫೋಟೋ ಹಂಚಿಕೊಂಡು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

PREV
17
ಕಿಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ IAS ಅಧಿಕಾರಿ ಅಥರ್ ಅಮೀರ್, ಪತ್ನಿ ಮೆಹರೀನ್!

ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಹಾಗೂ ಪತ್ನಿ ಡಾ. ಮೆಹರೀನ್ ಖಾಜಿ ಜೊತೆಯಾಗಿ ಮೊದಲ ಪ್ರೇಮಿಗಳ ದಿನಾಚರಣೆ ಆಚರಿಸಿದ್ದಾರೆ.ಪತಿಗೆ ಕಿಸ್ ನೀಡುವ ಮೂಲಕ ಈ ಬಾರಿಯ ವ್ಯಾಲೈಟೈನ್ಸ್ ಡೇಗೆ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ. 
 

27

ಶ್ರೀನರದ ಕಮಿಷನರ್ ಆಗಿರುವ ಅಥರ್ ಅಮೀರ್ ಖಾನ್ ಮದುವೆ ವಿಚಾರದಲ್ಲಿ ಭಾರಿ ಸದ್ದು ಮಾಡಿದ್ದರು. ಇದೀಗ ಮೆಹರೀನ್ ಜೊತೆಗೆ ಪ್ರೇಮಿಗಳ ದಿನಾಚರಣೆ ಆಚರಿಸುವ ಮೂಲಕ ಮತ್ತೆ ಎಲ್ಲರ ಗಮನಸೆಳೆದಿದ್ದಾರೆ.
 

37

ಅಥರ್ ಅಮೀರ್ ಖಾನ್ ಮೆಹರೀನ್ ಕೈಹಿಡಿಯುವ ಮೊದಲು ಐಎಸ್ಎಸ್ ಮಹಿಳಾ ಅಧಿಕಾರಿ ಟೀನಾ ದಾಬಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈ ಸಂಬಂಧ ಹೆಚ್ಚು ದಿನ ಇರಲಿಲ್ಲ. ಅಷ್ಟೇ ವೇಗದಲ್ಲಿ ವಿಚ್ಚೇದನ ಪಡೆದ ಅಥರ್ ಅಮೀರ್ ಹಾಗೂ ಟೀನಾ ದಾಬಿ ಎರಡನೇ ವಿವಾಹವಾಗಿದ್ದಾರೆ.

47

ಈ ವಿವಾಹ ಹಾಗೂ ಡಿವೋರ್ಸ್ ಮೂಲಕ ಐಎಎಶ್ ಅಧಿಕಾರಿ ಅಥರ್ ಅಮೀರ್ ಭಾರಿ ಸದ್ದು ಮಾಡಿದ್ದರು. ಟೀನಾ ದಾಬಿ ವಿಚ್ಚೆದನ ಪಡೆದು ಮರು ಮದುವೆಯಾದ ಮೂರೇ ತಿಂಗಳಿಗೆ ಅಥರ್ ಅಮೀರ್, ಡಾ. ಮೆಹರೀನ್ ಜೊತೆ ನಿಶ್ಚಿತಾರ್ಥ್ ಮಾಡಿಕೊಂಡಿದ್ದರು.
 

57

ಕಳೆದ ವರ್ಷ ಡಾ. ಮೆಹರೀನ್ ಖಾಜಿ ವರಿಸಿದ ಅಥರ್ ಅಮೀರ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಭಾರಿ ಸದ್ದು ಮಾಡಿದ್ದರು. ಇದೀಗ ಪ್ರೇಮಿಗಳ ದಿನಾಚರಣೆಯ ಕಿಸ್ ಫೋಟೋವನ್ನು ಹಂಚಿಕೊಂಡಿದ್ದಾರೆ.
 

67

ನನ್ನ ಪ್ರೀತಿಯ ಹಾಗೂ ವಿಶೇಷ ವ್ಯಕ್ತಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು. ಪ್ರೇಮಿಗಳ ದಿನಾಚರಣೆ ಒಂದು ದಿನ ಇರಬಹುದು. ಆದರೆ ನಾನು ಪ್ರತಿ ದಿನ ಪ್ರತಿ ಕ್ಷಣ ನಿನ್ನನ್ನು ಪ್ರೀತಿಸುತ್ತೇನೆ ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಥರ್ ಅಮೀರ್ ಖಾನ್ ಬರೆದುಕೊಂಡಿದ್ದಾರೆ.

77

ಸಮುದ್ರ ಕಿನಾರೆ, ರೆಸ್ಟೋರೆಂಟ್ ಹಾಗೂ ವಿದೇಶಿ ನೆಲದಲ್ಲಿನ ಫೋಟೋ ಹಂಚಿಕೊಂಡಿದ್ದಾರೆ. ಈ ಬಾರಿಯ ಪ್ರೇಮಿಗಳ ದಿನಾಚರಣೆಗೆ ಅಥರ್ ಅಮೀರ್ ಹಾಗೂ ಮೆಹರೀನ್ ಖಾಜಿ ವಿದೇಶಕ್ಕೆ ಹಾರಿದ್ದಾರೆ.

Read more Photos on
click me!

Recommended Stories