ಕೆಲಸಕ್ಕೆ ಹೋಗೋ ಅಮ್ಮಂದಿರ ಮಕ್ಕಳ ವ್ಯಕ್ತಿತ್ವ ಹೇಗಿರುತ್ತೆ? ಅಮ್ಮನಂತೆ ಸ್ಟ್ರಾಂಗು ಗುರು

First Published | Mar 28, 2023, 7:19 PM IST

ವರ್ಕಿಂಗ್ ಮದರ್ಸ್ ಮಕ್ಕಳಿಗೆ ಅತ್ಯಂತ ಶಕ್ತಿಯುತ ರೋಲ್ ಮಾಡೆಲ್ಸ್. ತಮ್ಮ ಮಕ್ಕಳೊಂದಿಗೆ ತಮ್ಮ ಕೆರಿಯರ್ ಕೂಡ ನೋಡಿಕೊಂಡು ಇಂಡಿಪೆಂಡೆಂಟ್ ಆಗಿ ಬದುಕುತ್ತಿರುವ ಅದೆಷ್ಟೋ ಮಹಿಳೆಯರಿಗೆ ನಮ್ಮದೊಂದು ಸಲಾಂ. ಅಂತಹ ವರ್ಕಿಂಗ್ ಮದರ್ಸ್ ಇಂದ ಮಕ್ಕಳಿಗಾಗೋ ಬೆನಿಫಿಟ್ಸ್ ಬಗ್ಗೆ ಇಲ್ಲಿ ತಿಳಿಯೋಣ.   

ವರ್ಕಿಂಗ್ ಮದರ್ಸ್ (Working mothers) ಕಚೇರಿ, ಬಿಸಿನೆಸ್, ಮನೆ ಇವುಗಳ ನಡುವೆ ಮಾಡೋ ಬ್ಯಾಲೆನ್ಸ್, ಬೇರೆ ಯಾರೂ ಮಾಡಲಾಗದ ಉದಾಹರಣೆಯನ್ನು ನೀಡುತ್ತಾರೆ. ತಾಯಿ ಕೆಲಸ ಮಾಡೋ ಪರಿಯನ್ನು ನೋಡಿ ಮಕ್ಕಳು ಕಲಿಯಬೇಕಾದ ಅದೆಷ್ಟೋ ವಿಷಯಗಳಿವು. ಕೆಲವೊಂದನ್ನು ಇಲ್ಲಿ ಹೇಳಲಾಗಿದೆ.   

ವರ್ಕ್ ಎಥಿಕ್ಸ್ (Work ethics)
ಮಕ್ಕಳು ತಾಯಿಂದ ಕಲಿಯೋದು  ತುಂಬಾ ಇದೆ, ಅದರಲ್ಲೂ ಮನೆಯ ಕೆಲಸ ಮತ್ತು ಕಚೇರಿ ಕೆಲಸವನ್ನು ತಾಯಿ ಸುಗಮವಾಗಿ ನಿರ್ವಹಿಸೋದನ್ನು ನೋಡುವುದು ಮಕ್ಕಳಿಗೆ ಸ್ಟ್ರಾಂಗ್ ವರ್ಕ್ ಎಥಿಕ್ಸ್ ಕಲಿಸುತ್ತೆ. 

Tap to resize

ಮಲ್ಟಿ-ಟಾಸ್ಕಿಂಗ್(Multi tasking)
ತಾಯಂದಿರು ಮಲ್ಟಿ-ಟಾಸ್ಕಿಂಗ್ ಸ್ವಾಭಾವಿಕವಾಗಿ ನುರಿತರಾಗಿದ್ದರೂ, ಕೆಲಸ ಮಾಡುವ ತಾಯಂದಿರ ವಿಷಯದಲ್ಲಿ ಈ ಕೌಶಲ್ಯ ಹೆಚ್ಚಾಗಿರುತ್ತೆ. ಹಾಗಾಗಿ ತಮ್ಮ ತಾಯಿಯನ್ನು ನೋಡಿ ಮಕ್ಕಳು ಮಲ್ಟಿ-ಟಾಸ್ಕಿಂಗ್ ಕಲಿಯಬೇಕು

ಇಂಡಿಪೆಂಡೆಂಟ್ (Independent)
ಕೆಲಸ ಮಾಡುವ ತಾಯಂದಿರ ಮಕ್ಕಳು ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಸ್ವಯಂ ತಮ್ಮ ತಾಯಿಯನ್ನು ನೋಡಿ ಕಲಿಯೋದರಿಂದ ತಾವು ಸ್ವತಂತ್ರರಾಗಿರಲು ಕಲಿಯುತ್ತಾರೆ.

ಹಣಕಾಸು(Money) ಕೌಶಲ್ಯ
ಈ ಕೌಶಲ್ಯವು ಸ್ವಾತಂತ್ರ್ಯವಾಗಿ ಇರೋದರಿಂದ ಹುಟ್ಟಿಕೊಳ್ಳುತ್ತೆ. ತಾಯಿ ಅಥವಾ ಪೋಷಕರು ಇಲ್ಲದಿದ್ದಾಗ ಸ್ವಯಂ ನಿರ್ವಹಣೆ ಯಾವಾಗಲೂ ಹಣಕಾಸಿನ ಬಗ್ಗೆ ಒಂದು ಅಥವಾ ಎರಡು ವಿಷಯಗಳನ್ನು ಕಲಿಸುತ್ತೆ.
 

ಭಾವನಾತ್ಮಕ ಆರೋಗ್ಯ(Emotional health)
ದುಡಿಯುವ ತಾಯಂದಿರ ಮಕ್ಕಳು ಭಾವನಾತ್ಮಕವಾಗಿ ಅಪ್ರಬುದ್ಧರು ಎಂಬುದು ತಪ್ಪು ನಂಬಿಕೆ. ವಾಸ್ತವವೆಂದರೆ ಈ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಪಡೆಯುವ ಸ್ವಾತಂತ್ರ್ಯವು ಇತರರಿಗಿಂತ ಬೇಗನೆ ಭಾವನಾತ್ಮಕವಾಗಿ ಪ್ರಬುದ್ಧರಾಗಲು ಸಹಾಯ ಮಾಡುತ್ತೆ.

ತಿಳುವಳಿಕೆ
ತಮ್ಮ ತಾಯಂದಿರು ಕಷ್ಟಪಟ್ಟು ಕೆಲಸ ಮಾಡೋದನ್ನು ನೋಡುವ ಮಕ್ಕಳು ತಾವಾಗಿಯೇ ಕಠಿಣ ಪರಿಶ್ರಮದ ಮಾರ್ಗವನ್ನು ತ್ವರಿತವಾಗಿ ಆಯ್ಕೆ ಮಾಡುತ್ತಾರೆ. ಯಾಕಂದ್ರೆ ತಾಯಿಯೇ ಆ ಮಕ್ಕಳಿಗೆ ಪರಿಪೂರ್ಣ ರೋಲ್ ಮಾಡೆಲ್!(Role model)

ತಾಯಿಯಾಗೋದು(Mother) ಸುಲಭವಲ್ಲ
ಒಬ್ಬ ತಾಯಿ ತನ್ನದೇ ಆದ ಪ್ರೊಫೆಷನಲ್ ಕರಿಯರ್ ಹೊಂದುವ ಹೆಚ್ಚುವರಿ ಹೊರೆಯನ್ನು ತೆಗೆದುಕೊಳ್ಳಲು ಬಯಸಿದಾಗ, ಸಮಾಜವು ತನ್ನ 'ಪ್ರಮುಖ' ಕರ್ತವ್ಯವಾದ ಮಕ್ಕಳ  ಜವಾಬ್ದಾರಿಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಅವಳನ್ನೇ ಟೀಕಿಸುತ್ತಾರೆ. ಹಾಗಾಗಿ ತಾಯಿಯಾಗೋದು ಸುಲಭವಲ್ಲ. ಮಕ್ಕಳ ಬಗ್ಗೆ ತಾಯಿಯ ಕರ್ತವ್ಯವನ್ನು ನಿರ್ಲಕ್ಷಿಸಿದ್ದಕ್ಕಾಗಿ ಸಮಾಜವು ಅವರನ್ನು ಜಡ್ಜ್ ಮಾಡುತ್ತೆ . ಆದರೂ, ಅನೇಕ ಮಹಿಳೆಯರು ಇಂತಹ ಅಡೆತಡೆಗಳನ್ನು ಮುರಿದಿದ್ದಾರೆ ಮತ್ತು ಅದನ್ನು ತಪ್ಪೆಂದು ಸಾಬೀತುಪಡಿಸಿ ಸಕ್ಸಸ್ ತಮ್ಮದಾಗಿಸಿಕೊಂಡಿದ್ದಾರೆ.

Latest Videos

click me!