ಭಾರತದಲ್ಲಿ ಮದುವೆಗಳು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತೆ. ಐಷಾರಾಮಿ ಅಲಂಕಾರಗಳಿಂದ ಹಿಡಿದು, ದುಬಾರಿ ಉಡುಗೊರೆಗಳವರೆಗೆ, ಜನರು ಈ ಕಾರ್ಯಕ್ರಮವನ್ನು ಒಂದು ಭವ್ಯ ಸಮಾರಂಭವಾಗಿ ಮಾಡಲು ಸಾಕಷ್ಟು ಖರ್ಚು ಮಾಡುತ್ತಾರೆ, ಇದರಿಂದ ಅದು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುತ್ತದೆ. ಆರ್ಥಿಕ ಹಿಂಜರಿತದ ಸಮಯದಲ್ಲೂ, ಕುಟುಂಬಗಳು ಮದುವೆಗಳ ವಿಷಯಕ್ಕೆ ಬಂದಾಗ ಸಾಲ ಮಾಡಿಯಾದರೂ ಸರಿ, ಅದ್ಧೂರಿಯಾಗಿ ಮದುವೆ ಮಾಡುತ್ತಾರೆ. ಇನ್ನೂ ಜನಪ್ರಿಯ ವ್ಯಕ್ತಿಗಳಂತೂ ಹಣವನ್ನು ನೀರಿನಂತೆ ಖರ್ಚು ಮಾಡಿ (most expensive Indian Wedding) ವಿಶೇಷ ರೀತಿಯಲ್ಲಿ ಮದುವೆಯಾಗುತ್ತಾರೆ.
2016ರಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy )ಪುತ್ರಿ ಮದುವೆಗೆ 500 ಕೋಟಿ ರೂ. ಖರ್ಚು ಮಾಡಲಾಗಿತ್ತು. ವಿಜಯನಗರ ಸಾಮ್ರಾಜ್ಯವನ್ನೆ ಮತ್ತೆ ಸೃಷ್ಟಿಸಿದಂತೆ ಆ ಜಾಗವನ್ನು ಸೃಷ್ಟಿ ಮಾಡಲಾಗಿತ್ತು. ಏಸಿ ಟೆಂಟ್ ನ ಪ್ರವೇಶ ಧ್ವಾರದಲ್ಲಿ ಎರಡು ದೊಡ್ಡ ಕಲ್ಲಿನ ಆನೆಗಳು ತಮ್ಮ ಸೊಂಡಿಲುಗಳನ್ನು ಎತ್ತಿ ನಿಂತಿದ್ದವು. ಈ ಸ್ಥಳವು 30ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಅನೇಕ ಬಾಲಿವುಡ್ ಮಾದರಿಯ ಸೆಟ್ ಗಳನ್ನು ಒಳಗೊಂಡಿದೆ. 50,000 ಅತಿಥಿಗಳು, 3,000 ಭದ್ರತಾ ಸಿಬ್ಬಂದಿ ಮತ್ತು ಬೌನ್ಸರ್ ಗಳು ಇದ್ದರು.
2018 ರಲ್ಲಿ ಮುಕೇಶ್ ಅಂಬಾನಿ (Mukesh Ambani) ಅವರ ಮಗಳು ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಅವರ ವಿವಾಹಕ್ಕೆ ಮುಂಚಿತವಾಗಿ ಉದಯಪುರದಲ್ಲಿ ಗಾಯಕ ಬೆಯಾನ್ಸ್ ಅವರ ಖಾಸಗಿ ಸಂಗೀತ ಕಚೇರಿ ನಡೆಯಿತು. 100 ಕ್ಕೂ ಹೆಚ್ಚು ಚಾರ್ಟರ್ಡ್ ವಿಮಾನಗಳು ಅತಿಥಿಗಳನ್ನು ಕರೆದೊಯ್ಯುತ್ತಾ ಉದಯಪುರ ವಿಮಾನ ನಿಲ್ದಾಣದಲ್ಲಿ ಇಳಿದವು. ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಲ್ಲಿ ಒಬ್ಬರು. ಬಿಜೆಪಿ ಅಭ್ಯರ್ಥಿ ದೇವೇಂದ್ರ ಫಡ್ನವೀಸ್, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
2011 ರಲ್ಲಿ ಕಾಂಗ್ರೆಸ್ ಮುಖಂಡ ಕನ್ವರ್ ಸಿಂಗ್ ತನ್ವಾರ್ (Kanwar Lal Singh Tanwar) ಅವರ ಪುತ್ರ ಲಲಿತ್ ಅವರು ಸೊಹ್ನಾದ ಮಾಜಿ ಶಾಸಕ ಸುಖ್ಬೀರ್ ಸಿಂಗ್ ಜೌನಪುರಿಯಾ ಅವರ ಪುತ್ರಿ ಯೋಗಿತಾ ಅವರನ್ನು ಹರಿಯಾಣದ ಜೌನಾಪುರ ಗ್ರಾಮದಲ್ಲಿ ವಿವಾಹವಾದರು. ಸಮಾರಂಭದಲ್ಲಿ ಸುಮಾರು 15,000 ಜನರು ಭಾಗವಹಿಸಿದ್ದರು. ಉಡುಗೊರೆಗಳಲ್ಲಿ ಹೆಲಿಕಾಪ್ಟರ್ ಮತ್ತು ₹ 21 ಕೋಟಿ ಕೂಡ ಸೇರಿದೆ. ಒಂದು ವಾರದ ಸಂಭ್ರಮಾಚರಣೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕಲಾವಿದರೊಂದಿಗೆ ಪ್ರಸಿದ್ಧ ಜಾನಪದ ಪ್ರದರ್ಶನಗಳೊಂದಿಗೆ ಸಂಗೀತ ರಾತ್ರಿಯನ್ನು ಒಳಗೊಂಡಿತ್ತು. ಸಮಾರಂಭದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ 30 ಗ್ರಾಂ ಬೆಳ್ಳಿ ಬಿಸ್ಕತ್ತು, ಸಫಾರಿ ಸೂಟ್ ಸೆಟ್, ಶಾಲು ಮತ್ತು 2,100 ರೂ.ಗಳ ನಗದು ಒಳಗೊಂಡ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಲಾಯಿತು.
ಕೆಲವು ತಿಂಗಳುಗಳ ಹಿಂದೆ, ನ್ಯೂಜಿಲೆಂಡ್ ಮೂಲದ ಉದ್ಯಮಿ ಎಸ್ ರವೀಂದ್ರ ಅವರು ತಮ್ಮ ಪುತ್ರರಾದ ಎಸ್ ರೋಹಿತ್ ಮತ್ತು ಎಸ್ ರಂಜಿತ್ ಅವರ ಮದುವೆಯನ್ನು ಹೈದರಾಬಾದ್‌ನಲ್ಲಿ ಮಾಡಿದರು. ಇದು "ದಕ್ಷಿಣ ಭಾರತದ ಅತ್ಯಂತ ದುಬಾರಿ ಮದುವೆ" (South Indias most ecxpensive wedding) ಎಂದು ಹೇಳಲಾಗುತ್ತಿದೆ. ಸಹೋದರರು ಸೋದರಸಂಬಂಧಿಗಳಾದ ಶ್ರುತಿ ಮತ್ತು ದಿವ್ಯಾ ಅವರನ್ನು ವರಿಸಿದರು. ಮಂಗಳಸೂತ್ರಗಳಿಗಾಗಿ ಪ್ಲಾಟಿನಂ ಮತ್ತು ಚಿನ್ನದ ಸರಗಳನ್ನು ನೀಡಿದರು. ವಧುಗಳು ಮನೀಶ್ ಮಲ್ಹೋತ್ರಾ ರಚಿಸಿದ ಉಡುಪುಗಳನ್ನು ಧರಿಸಿದ್ದರು. ಹೈದರಾಬಾದ್ದ್ನನ ಜಿಎಂಆರ್ ಗಾರ್ಡನ್ಸ್ನಲ್ಲಿ 15,000 ಅತಿಥಿಗಳು ಭಾಗವಹಿಸಿದ್ದರು ಮತ್ತು ಸಮಾರಂಭದಲ್ಲಿ ಬಂಗಾಳಿ, ರಾಜಸ್ಥಾನಿ, ಪಂಜಾಬಿ ಮತ್ತು ಜೋಧಾ ಅಕ್ಬರ್, ಅಂಡರ್ ವಾಟರ್ ಮತ್ತು ಅರೇಬಿಯನ್ ನೈಟ್ಸ್‌ನಂಥ ವಿವಿಧ ಆಚರಣೆಗಳನ್ನು ಪ್ರದರ್ಶಿಸಲಾಯಿತು. ವಧುಗಳನ್ನು ಗುಲಾಬಿ ಬಣ್ಣದ ಮರ್ಸಿಡಿಸ್ ಕಾರಿನಲ್ಲಿ ಪಟ್ಟಣದ ಸುತ್ತಲೂ ಮೆರವಣಿಗೆ ಮಾಡಲಾಯಿತು..
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಸ್ 2018 ರಲ್ಲಿ ವಿವಾಹವಾದರು. 105 ಕೋಟಿ ವೆಚ್ಚದಲ್ಲಿ ಉದಯಪುರದ ಉಮ್ಮೇದ್ ಅರಮನೆಯಲ್ಲಿ ಸಮಾರಂಭಗಳನ್ನು ಆಯೋಜಿಸಲಾಗಿತ್ತು. ಅದೇ ರೀತಿ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಮದುವೆಗೆ 90 ಕೋಟಿ ರೂ.