ಸಂಗಾತಿಗೆ ಈ ರೀತಿ ಸುಳ್ಳು ಹೇಳಿದ್ರೆ ಸಂಬಂಧ ಹಾಳಾಗುತ್ತೆ !

First Published Nov 20, 2022, 5:25 PM IST

ಸ್ಟ್ರಾಂಗ್ ಮತ್ತು ಸಂತೋಷದ ಸಂಬಂಧಕ್ಕಾಗಿ, ಇಬ್ಬರು ವ್ಯಕ್ತಿಗಳು ಪರಸ್ಪರರಲ್ಲಿ ನಂಬಿಕೆ ಮತ್ತು ಪ್ರೀತಿಯನ್ನು ಹೊಂದುವುದು ಬಹಳ ಮುಖ್ಯ. ಇದು ಅಂತಹ ಸೂಕ್ಷ್ಮ ಬಂಧವಾಗಿದ್ದು, ಸಣ್ಣ ಮೋಸದ ಸುಳಿವು ಸಿಕ್ಕರೆ, ಈ ಸಂಬಂಧ ಮುರಿದು ಬೀಳುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗೆ ನೀವು ಬಲವಾದ ಮತ್ತು ಸಂತೋಷದ ಸಂಬಂಧ ಕಾಪಾಡಿಕೊಳ್ಳಲು ಬಯಸಿದರೆ, ಇಲ್ಲಿ ಹೇಳಿರುವ ಸುಳ್ಳುಗಳನ್ನು ಅವರಿಗೆ ಮರೆತು ಕೂಡ ಹೇಳಬೇಡಿ.  

ಸಂಬಂಧ(Relationship) ಬೆಳೆಸೋದು ಸುಲಭ, ಆದರೆ ಅದನ್ನು ಕಾಪಾಡಿಕೊಳ್ಳೋದು ಅಷ್ಟೇ ಕಷ್ಟ. ಜನರು ತಮ್ಮ ಪ್ರಯತ್ನಗಳಿಂದ ಅದನ್ನು ಬಲಪಡಿಸಬಹುದು. ಈ ಕಾರಣಕ್ಕಾಗಿಯೇ ಯಾವುದೇ ಸಂಬಂಧದಲ್ಲಿ ನಂಬಿಕೆ ಮತ್ತು ಪ್ರೀತಿ ಕಾಪಾಡಿಕೊಳ್ಳಲು ಸ್ವಲ್ಪ ತಿಳುವಳಿಕೆ ಮತ್ತು ಪರಸ್ಪರ ಸಂಬಂಧ ಕಾಪಾಡಿಕೊಳ್ಳಲು ಇಬ್ಬರು ವ್ಯಕ್ತಿಗಳಿಗೆ ಟಿಪ್ಸ್ ನೀಡಲಾಗುತ್ತೆ. ಸಂಬಂಧದಲ್ಲಿ ಬಲವನ್ನು ಕಾಪಾಡಿಕೊಳ್ಳಲು, ನಿಮ್ಮ ಸಂಗಾತಿಗೆ ಯಾವುದೇ ರೀತಿಯ ಸುಳ್ಳು ಹೇಳ್ಬೇಡಿ ಅದರಲ್ಲೂ ಇಲ್ಲಿ ಹೇಳಿರುವಂತಹ  ಸುಳ್ಳುಗಳನ್ನು ಯಾವತ್ತಿಗೂ ಹೇಳಬೇಡಿ, ಇದು ನಿಮ್ಮ ನಡುವೆ ಬಿರುಕನ್ನು ಉಂಟುಮಾಡಬಹುದು.

ಎಕ್ಸ್ ಜೊತೆಗಿನ ಸಂಬಂಧದ ಬಗ್ಗೆ ಸುಳ್ಳು
ನಿಮ್ಮ ಮಾಜಿ  ಸಂಗಾತಿಯೊಂದಿಗೆ ಸಂಪರ್ಕದಲ್ಲಿರಬೇಕಾ ಅಥವಾ ಬೇಡವೇ ಎಂಬುದು ನಿಮ್ಮ ವೈಯಕ್ತಿಕ ನಿರ್ಧಾರವಾಗಿರಬಹುದು, ಆದರೆ ಈ ಸತ್ಯವನ್ನು ನಿಮ್ಮ ಸಂಗಾತಿಯಿಂದ ಮುಚ್ಚಿಡೋದು ನಿಮ್ಮ ಲವ್ ಲೈಫ್ ನಲ್ಲಿ(Love life) ಸಮಸ್ಯೆ ಸೃಷ್ಟಿಸಬಹುದು. ಒಂದು ದಿನ ನಿಮ್ಮ ಸಂಗಾತಿಗೆ ಸತ್ಯ ತಿಳಿದರೆ, ಅದು ನಿಮ್ಮಿಬ್ಬರ ನಡುವಿನ ಸಂಬಂಧ ಹದಗೆಡಿಸಬಹುದು. ಹಾಗಾಗಿ ಯಾವತ್ತಿಗೂ ಈ ಸುಳ್ಳು ಹೇಳಲೇಬೇಡಿ. 

ನಾನು ಚೆನ್ನಾಗಿದೆನೆ ಎಂದು ಸುಳ್ಳು(Lie) ಹೇಳೋದು
ಸಂಗಾತಿಯೊಂದಿಗಿನ ಜಗಳದ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಕಂಟ್ರೋಲ್ ಮಾಡಿ, ಅವರು ಏನನ್ನಾದರೂ ಕೇಳಿದಾಗ, ನಾನು ಚೆನ್ನಾಗಿದ್ದೇನೆ ಎಂದು ಹೇಳುವ ಮೂಲಕ ಸುಳ್ಳು ಹೇಳುತ್ತೀರಾ? ಆದರೆ ಇದು ಯಾವುದೇ ಸಂಬಂಧಕ್ಕೆ ಒಳ್ಳೆಯದಲ್ಲ. ನೀವು ಅದನ್ನು ಒಂದು ಸಣ್ಣ ಸುಳ್ಳು ಎಂದು ಹೇಳಬಹುದು, ಆದರೆ ಅದು ನಿಮ್ಮ ಸಂಬಂಧವನ್ನು ದುರ್ಬಲಗೊಳಿಸುತ್ತೆ. 

ಸಂಬಳದ(Salary) ಬಗ್ಗೆ ಸುಳ್ಳು ಹೇಳೋದು
ನಿಜ ಜೀವನದಲ್ಲಿ ಸಂಗಾತಿಯ ಬಳಿ ಸುಳ್ಳು ಹೇಳಿ ನೀವು ನಟಿಸುತ್ತಿದ್ದರೆ, ಅದು ಸಂಬಂಧವನ್ನು ಹಾಳುಮಾಡಬಹುದು. ಆದ್ದರಿಂದ  ಸಂಬಳದ ಬಗ್ಗೆ ನಿಮ್ಮ ಸಂಗಾತಿಗೆ ಎಂದಿಗೂ ಸುಳ್ಳು ಹೇಳಬೇಡಿ. ನೀವು ಸ್ಯಾಲರಿ ಬಗ್ಗೆ ಎಷ್ಟೇ ಮುಚ್ಚಿಟ್ಟರೂ ಸಹ ಸತ್ಯ ಒಂದು ಹಂತದಲ್ಲಿ ಅವರಿಗೆ ತಿಳಿಯುತ್ತೆ.. ಹಾಗಾಗಿ ಸುಳ್ಳು ಹೇಳಿ ಸಂಬಂಧ ಹಾಳು ಮಾಡಿಕೊಳ್ಳಬೇಡಿ. 

ಸಂಗಾತಿ ಹೇಳೋದನ್ನು ಕೇಳುತ್ತಿರೋದಾಗಿ ನಟಿಸಬೇಡಿ
ಯಾವುದೇ ಸಂಬಂಧವನ್ನು ಸಂತೋಷಪಡಿಸಲು ಸುಲಭ ಮಾರ್ಗವೆಂದರೆ ಪರಸ್ಪರರ ಮಾತುಗಳನ್ನು ಆಲಿಸೋದು. ಪರಸ್ಪರರ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ ಮತ್ತು ಅದಕ್ಕೆ ಪ್ರಾಮುಖ್ಯತೆ ನೀಡಿ. ಅದರ ಜೊತೆ ಅವರು ಮಾತನಾಡುವಾಗ, ಅವರ ಮಾತನ್ನು ಜಾಗರೂಕತೆಯಿಂದ ಆಲಿಸಿ. ಯಾವುದು ಅರ್ಥವಾಗೊದಿಲ್ಲವೋ, ಅದನ್ನು ಕೇಳಿ ತಿಳಿದುಕೊಳ್ಳಿ. ಇದರಿಂದ ಸಂಬಂಧ ಮತ್ತಷ್ಟು ಸ್ಟ್ರಾಂಗ್(Strong) ಆಗುತ್ತೆ.  

ಸಂಬಂಧಗಳಲ್ಲಿ ಅಸೂಯೆಗೆ ಸ್ಥಾನವಿರಬಾರದು 
ಸಂಗಾತಿಯ(Partner) ಬಗ್ಗೆ ಏನಾದರೂ ನಿಮ್ಮನ್ನು ಅಸೂಯೆ ಪಡುವಂತೆ ಮಾಡಿದರೆ, ನಿಮ್ಮ ನಡುವಿನ ಸಂಬಂಧ ಬಲವಾಗಿಲ್ಲ ಅಥವಾ ಅದು ಭವಿಷ್ಯದಲ್ಲಿ ದುರ್ಬಲವಾಗಬಹುದು ಎಂದರ್ಥ. ಇದನ್ನು ತಪ್ಪಿಸಲು ಕೇವಲ ಎರಡು ಮಾರ್ಗಗಳಿವೆ. ಮೊದಲನೆಯದಾಗಿ, ನಿಮ್ಮ ಆಲೋಚನೆ ಬದಲಾಯಿಸಿಕೊಳ್ಳಿ ಮತ್ತು ಎರಡನೆಯದಾಗಿ, ಮನಸ್ಸು ಬಿಚ್ಚಿ ಸಂಗಾತಿಯ ಮುಂದೆ ಮಾತನಾಡಿ. ನಿಮ್ಮಿಬ್ಬರ ಲೈಫ್ ಸೂಪರ್ ಆಗಿರುತ್ತೆ.   

click me!