ಹೊಸ ಫ್ರೆಂಡ್ಸ್ ಮಾಡಿಕೊಳ್ಳಲು ಕಷ್ಟವಾದರೆ,ಚುಯಿಂಗ್ ಗಮ್ ಹೆಲ್ಪ್‌ಗೆ ಬರುತ್ತೆ, ಹೇಗೆ?

First Published | Nov 19, 2022, 12:54 PM IST

ನೀವು ಯಾವುದೇ ರೀತಿಯ ಪರಿಸ್ಥಿತಿಯಲ್ಲಿಯೂ ಅಪರಿಚಿತರೊಂದಿಗೆ ಆರಾಮದಾಯಕವಾಗಿರುತ್ತೀರಿ ಮತ್ತು ನಿಮ್ಮದೇ ಆದ ಸಾಮಾಜಿಕ ವಲಯವನ್ನು (social zone) ಸೃಷ್ಟಿಸುತ್ತೀರಿ ಎಂದಾದಲ್ಲಿ, ಕಂಗ್ರಾಟ್ಸ್. ಆದರೆ ನಮ್ಮಲ್ಲಿ ಉಳಿದವರಿಗೆ, ಇದು ಬಹುಶಃ ಅಷ್ಟು ಸುಲಭವಲ್ಲ. ನಮಗೆ ಗೊತ್ತಿಲ್ಲದ ಜನರನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಮಾತನಾಡುವುದು ಅಥವಾ ಅವರನ್ನು ಪ್ರೀತಿಸುವುದು ನಮಗೆ ತುಂಬಾ ಕಷ್ಟವಾಗಬಹುದು. ನಿಮಗಾಗಿಯೇ ಈ ಸೈಕಲಾಜಿಕಲ್ ಟ್ರಿಕ್ಸ್.
 

ಕೆಲವರಿಗೆ ಫ್ರೆಂಡ್ಸ್ ಮಾಡಿಕೊಳ್ಳೋದು ತುಂಬಾ ಸುಲಭ. ಅಪರಿಚಿತರನ್ನೂ ಸುಲಭವಾಗಿ ಫ್ರೆಂಡ್ ಮಾಡಿಕೊಳ್ಳುತ್ತಾರೆ. ಆದರೆ ಇನ್ನೂ ಕೆಲವರಿಗೆ ಅಪರಿಚಿತರ ಬಳಿ ಮಾತನಾಡುವುದು, ಸ್ನೇಹ ಬೆಳೆಸಿಕೊಳ್ಳೋದು ಎಂದರೆ ಬೆಂಕಿ ಮೇಲೆ ಕೂತಂತೆ. ನಿಮಗೂ ಈ ಸಮಸ್ಯೆ ಇದ್ದರೆ, ನೀವು ನಿರಾಶರಾಗಬೇಕಾಗಿಲ್ಲ. ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ಅವರ ಕೆಲವು ಸೈಕಲಾಜಿಕಲ್ ಟೆಕ್ನಿಕ್ (Psychology Tricks) ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ, ಅದನ್ನು ಬಳಸಿಕೊಂಡು ನೀವು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಮಾತ್ರವಲ್ಲದೆ, ನಿಮ್ಮ ಸಾಮಾಜಿಕ ಜೀವನವನ್ನು (Social Life) ಸುಧಾರಿಸಬಹುದು.

ಜನರ ಹೆಸರುಗಳನ್ನು ನೆನಪಿಡಿ

ಜನರ ಹೆಸರುಗಳನ್ನು ನೆನಪಿಟ್ಟುಕೊಳ್ಳುವುದು (remember the name), ಸಂಭಾಷಣೆಗಳಲ್ಲಿ ಅವುಗಳನ್ನು ಬಳಸುವುದು ಮತ್ತು ಅವರ ಬಗ್ಗೆ ಸುಳಿವು ನೀಡದೆ ಅಥವಾ ಮುಂದಿನ ಬಾರಿ ನೀವು ಅವರನ್ನು ಭೇಟಿಯಾದಾಗ ಅವರ ಹೆಸರಿನಿಂದ ಅವರನ್ನು ಸಂಬೋಧಿಸುವುದು ತುಂಬಾ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ಅವರನ್ನು ನಿಮ್ಮೊಂದಿಗೆ ಹೆಚ್ಚು ಕನೆಕ್ಟ್ ಆಗುವಂತೆ ಮಾಡುತ್ತೆ.

Tap to resize

ನೀವು ಭೇಟಿಯಾಗುವ ಮೊದಲು ನಿಮ್ಮ ಮೂಡ್ ಚೆಕ್ ಮಾಡಿ

ನೆನಪಿಡಿ, ಜೀವನದಲ್ಲಿ ಕೋವಿಡ್ ಗಿಂತ ಹೆಚ್ಚು ಸಾಂಕ್ರಾಮಿಕವಾದ ಒಂದೇ ಒಂದು ವಿಷಯ ಎಂದರೆ ಅದು ಕೆಟ್ಟ ಮನಸ್ಥಿತಿ. ಅನೇಕ ಬಾರಿ ಕೆಟ್ಟ ಮನಸ್ಥಿತಿಯು (bad mood) ನಿಮ್ಮ ಸಂಬಂಧವನ್ನು ಕೊನೆಗೊಳಿಸಲು ಅಥವಾ ಹೊಸ ಸ್ನೇಹಿತರನ್ನು ಮಾಡೋದನ್ನು ತಡೆಯಬಹುದು. ಆದುದರಿಂದ ಯಾರನ್ನಾದರೂ ಭೇಟಿಯಾಗೋ ಮೊದಲು ನಿಮ್ಮ ಮೂಡ್ ಹೇಗಿದೆ ಅನ್ನೋದನ್ನು ಚೆಕ್ ಮಾಡಿ. ಕೆಟ್ಟ ಮೂಡ್ ಇದ್ದರೆ ಯಾರನ್ನೂ ಭೇಟಿಯಾಗಬೇಡಿ.

ಆಲಿಸುವ ಅಭ್ಯಾಸ ಸಹ ರೂಢಿಸಿಕೊಳ್ಳಿ

ಯಾರೊಂದಿಗಾದರೂ ಮಾತನಾಡೋದು ಎಷ್ಟು ಮುಖ್ಯವೋ, ಅವರು ಮಾತನಾಡೋದನ್ನು ಕೇಳುವುದೂ (listen) ಅಥವಾ ಯಾರನ್ನಾದರೂ ಕೇಳುವಂತೆ ಮಾಡೋದು ಸಹ ಅಷ್ಟೇ ಮುಖ್ಯ. ಜನರು ನಿಜವಾಗಿಯೂ ನಿಮ್ಮೊಂದಿಗೆ ಕನೆಕ್ಟ್ ಆಗಲು ನೀವು ಬಯಸಿದ್ದರೆ, ಮೊದಲು ಅವರು ಏನು ಹೇಳುತ್ತಾರೆ ಅನ್ನೋದನ್ನು ಕೇಳಿ.

ನೀವು ಅವರಿಗೆ ಹೆಚ್ಚು ಮಾತನಾಡಲು ಅಥವಾ ಅವರು ಏನು ಹೇಳಿದ್ದಾರೆ ಎಂಬುದನ್ನು ವಿವರಿಸಲು ಸಮಯ ನೀಡಿದ ಹಾಗಾಗುತ್ತೆ. ಆ ವಿರಾಮದ ಸಮಯ ಮುಖ್ಯ. ಏಕೆಂದರೆ ಈ ರೀತಿಯ ನಿಮ್ಮ ಮೌನ ಅವರನ್ನು ನಿಮ್ಮೊಂದಿಗೆ ಹೆಚ್ಚು ಕನೆಕ್ಟ್ ಮಾಡುತ್ತೆ..

ಒಳ್ಳೆಯ ವಿಷಯಗಳನ್ನು ಹೇಳುವುದು ಮತ್ತು ಮಾಡುವುದು

ಇದು ಚೆನ್ನಾಗಿ ವರ್ಕ್ ಔಟ್ ಆಗುತ್ತೆ. 'ಒಳ್ಳೆಯ ಕೆಲಸಗಳನ್ನು ಮಾಡುವುದು' ಅಥವಾ ಒಳ್ಳೆಯ ವಿಷಯಗಳನ್ನು ಹೇಳುವುದು ನಿಮಗೆ ಹೊಸ ಸ್ನೇಹಿತರನ್ನು ಪಡೆಯಲು ಸಹಾಯ ಮಾಡುತ್ತೆ. ಈ ವಿಧಾನವು ತುಂಬಾ ಸರಳ. ಯಾರಿಗಾದರೂ ಏನನ್ನಾದರೂ ಮಾಡುವುದು (ಅವರ ಜಾಕೆಟ್ ಹಿಡಿಯೋದು), ಅಥವಾ ಯಾರಿಗಾದರೂ ಒಳ್ಳೆಯದನ್ನು ಹೇಳುವುದು (ಅವರಲ್ಲಿ ನೀವು ಇಷ್ಟಪಡುವ ವಿಷಯದ ಬಗ್ಗೆ ಹೇಳೋದು). ಇದರಿಂದ ಇತರರಿಗೆ ನಿಮ್ಮ ಜೊತೆ ಮಾತನಾಡಲು ಖಂಡಿತಾ ಇಷ್ಟವಾಗುತ್ತೆ.

ಚ್ಯೂಯಿಂಗ್ ಗಮ್

ಇದು ನಿಮಗೆ ವಿಚಿತ್ರವಾಗಿ ತೋರಬಹುದು. ಆದರೆ ಚ್ಯೂಯಿಂಗ್ ಗಮ್ (chewing gum) ಮೂಲತಃ 'ಹದಿಹರೆಯದ' ಮನೋಭಾವಕ್ಕೆ ಸಂಬಂಧಿಸಿದೆ, ಆದರೆ ಇದು ನಿಮ್ಮ ಸೋಷಿಯಲ್ ಝೋನ್ ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತದೆ ಎಂದು ನೀವು ಯೋಚಿಸುತ್ತಿರಬಹುದು ಅಲ್ವಾ? ಈ ಇಂಟ್ರೆಸ್ಟಿಂಗ್ ಮಾಹಿತಿ ತಿಳಿಯಲು ಮುಂದೆ ಓದಿ.

ಸೈಕಾಲಜಿ ಟುಡೇ ಪ್ರಕಾರ, ನೀವು ಚ್ಯೂಯಿಂಗ್ ಗಮ್ ಅಗೆಯುತ್ತಿರುವಾಗ, ಅದು ನಿಮ್ಮ ಮೆದುಳಿಗೆ ನೀವು ವಿಶ್ರಾಂತಿಯಲ್ಲಿದ್ದೀರಿ ಎಂಬ ಸಂಕೇತ ಕಳುಹಿಸುತ್ತೆ. ನೀವು ಆರಾಮದಾಯಕವಾಗಿ ಮತ್ತು ಆರಾಮವಾಗಿ ಕಂಡಾಗ, ಜನರು ನಿಮ್ಮತ್ತ ಆಕರ್ಷಿತರಾಗುತ್ತಾರೆ ಮತ್ತು ಇದು ನಿಮಗೆ ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಸಹಾಯ ಮಾಡುತ್ತೆ.

ಮಾತನಾಡಲು ವಿಷಯಗಳನ್ನು ಬಳಸಿ

ನಿಮ್ಮ ಸೋಷಿಯಲ್ ಝೋನ್ (Social Zone) ಉತ್ತಮವಾಗಿಲ್ಲದಿದ್ರೆ ಮತ್ತು ನೀವು ಹೊಸ ಜನರೊಂದಿಗೆ ಬೇಗ ಬೆರೆಯಲು ಸಾಧ್ಯ ಆಗೋದಿಲ್ಲ ಅಂದ್ರೆ ನೀವು ಕೆಲವೊಂದು ಸಿಂಪಲ್ ವಿಷ್ಯಗಳನ್ನು ಬಳಸಿ ಮಾತನಾಡಲು ಆರಂಭಿಸಬಹುದು. ನಿಮ್ಮೊಂದಿಗೆ ಮೂವಿ ವೀಕ್ಷಿಸಲು ಅವರನ್ನು ಕೇಳಬಹುದು ಅಥವಾ ವೆಬ್ ಸೀರೀಸ್ (web series) ಒಟ್ಟಿಗೆ ನೋಡುವ ಆಯ್ಕೆಯೂ ಇದೆ.ಹೀಗೆ ಮಾಡೋದರಿಂದ ನಿಮಗೆ ಅವರೊಂದಿಗೆ ಇನ್ನೂ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಸಹ ಸಾಧ್ಯವಾಗುತ್ತೆ.

Latest Videos

click me!