Conscious celibacy relationship couple story: ಆ ಎಲ್ಲಾ ಕಟು ಟೀಕೆಗಳನ್ನು ಮೆಟ್ಟಿ ನಿಂತಿರುವ ಈ ಅಪರೂಪದ ದಂಪತಿ, ಪರಸ್ಪರ ಗೌರವ ಹಾಗೂ ನಂಬಿಕೆಯ ಮೇಲೆ ಯಶಸ್ವಿ ದಾಂಪತ್ಯವನ್ನು ಮುನ್ನಡೆಸುತ್ತಿದ್ದಾರೆ.
ಎಲ್ಲಾ ಕಟು ಟೀಕೆಗಳನ್ನು ಮೆಟ್ಟಿ ನಿಂತಿರುವ ಅಪರೂಪದ ದಂಪತಿ ಮದುವೆ ಅಥವಾ ಪ್ರೀತಿಯಲ್ಲಿ ದೈಹಿಕ ಸಂಬಂಧವೇ ಅತಿ ಮುಖ್ಯ ಎಂಬ ಸಮಾಜದ ಸಾಂಪ್ರದಾಯಿಕ ಕಲ್ಪನೆಗೆ ಈ ಜೋಡಿ ಸಂಪೂರ್ಣವಾಗಿ ಸವಾಲೊಡ್ಡಿದ್ದಾರೆ. 'Soulgrow Zen Academy'ಯನ್ನು ಮುನ್ನಡೆಸುತ್ತಿರುವ ಸಂಚಾರಿ ಮತ್ತು ನಿರಂಜನ್ ಸಜಿತ್, ಕಳೆದ ಐದು ವರ್ಷಗಳ ತಮ್ಮ ದಾಂಪತ್ಯ ಜೀವನದುದ್ದಕ್ಕೂ "ಪ್ರಜ್ಞಾಪೂರ್ವಕ ಬ್ರಹ್ಮಚರ್ಯ"ವನ್ನು (Conscious Celibacy) ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಆರಂಭದಲ್ಲಿ, ದೈಹಿಕ ಸಾಮೀಪ್ಯವಿಲ್ಲದ ಇವರ ಈ ವಿಚಿತ್ರ ಜೀವನಶೈಲಿಯನ್ನು ಕಂಡು ಮದುವೆ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ, ಆ ಎಲ್ಲಾ ಕಟು ಟೀಕೆಗಳನ್ನು ಮೆಟ್ಟಿ ನಿಂತಿರುವ ಈ ಅಪರೂಪದ ದಂಪತಿ, ಪರಸ್ಪರ ಗೌರವ ಹಾಗೂ ನಂಬಿಕೆಯ ಮೇಲೆ ಯಶಸ್ವಿ ದಾಂಪತ್ಯವನ್ನು ಮುನ್ನಡೆಸುತ್ತಿದ್ದಾರೆ.
25
ದೈಹಿಕ ಸಂಪರ್ಕ ಬೇಡ ಎಂದು ನಿರ್ಧರಿಸಿದ್ದೇಕೆ?
ದೈಹಿಕ ಸಂಪರ್ಕ ಬೇಡ ಎಂದು ನಿರ್ಧರಿಸಿದ್ದೇಕೆ? ಈ ವಿಭಿನ್ನ ನಿರ್ಧಾರದ ಹಿಂದೆ ಇಬ್ಬರ ವೈಯಕ್ತಿಕ ಕಾರಣಗಳಿವೆ. ಸಂಚಾರಿ ಅವರು ಈ ಹಿಂದೆ ಅನುಭವಿಸಿದ್ದ ಕೌಟುಂಬಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳದ ಆಘಾತದಿಂದ ಹೊರಬರಲು ಪ್ರಯತ್ನಿಸುತ್ತಿದ್ದರು. ಆ ಸಮಯದಲ್ಲಿ ಅವರಿಗೆ ದೈಹಿಕ ಸಾಮೀಪ್ಯ ಸುರಕ್ಷಿತ ಎನಿಸುತ್ತಿರಲಿಲ್ಲ. ಮತ್ತೊಂದೆಡೆ, ನಿರಂಜನ್ ಅವರು ಬ್ರಹ್ಮಚರ್ಯವನ್ನು ಆತ್ಮಸಂಯಮ (ಆಸೆ ಮತ್ತು ಭಾವನೆಗಳ ನಿಯಂತ್ರಣ) ಸಾಧಿಸುವ ಆಧ್ಯಾತ್ಮಿಕ ಅಭ್ಯಾಸವಾಗಿ ಸ್ವೀಕರಿಸಿದ್ದರು. ಇಬ್ಬರೂ ಭೇಟಿಯಾದಾಗ ಪರಸ್ಪರರ ಗಡಿಗಳನ್ನು ಗೌರವಿಸಿ, ಆಳವಾದ ಸ್ನೇಹ ಮತ್ತು ಅಚಲವಾದ ನಂಬಿಕೆಯ ಪ್ರೇಮವನ್ನು ಕಂಡುಕೊಂಡರು.
35
ಇವರ ಜೀವನಶೈಲಿ ಹೇಗಿದೆ?
ಇವರ ಜೀವನಶೈಲಿ ಹೇಗಿದೆ? ಲೈಂಗಿಕ ಸಾಮೀಪ್ಯದ ಕಡೆಗೆ ಗಮನ ಕೊಡುವ ಬದಲು, ಅವರು ಗಂಟೆಗಟ್ಟಲೆ ಮನಸ್ಸು ಬಿಚ್ಚಿ ಮಾತನಾಡುವುದು, ಜೊತೆಯಾಗಿ ಪ್ರವಾಸ ಮಾಡುವುದು, ಒಟ್ಟಾಗಿ ಪ್ರಾಜೆಕ್ಟ್‌ಗಳನ್ನು ನಿರ್ವಹಿಸುವುದು ಮತ್ತು ಆಧ್ಯಾತ್ಮಿಕ ಶಿಸ್ತಿನ ಸುತ್ತ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಸಾಂಪ್ರದಾಯಿಕವಾಗಿ ಸಂಸಾರ ಬೆಳೆಸಲು ವ್ಯಯಿಸುವ ಶಕ್ತಿಯನ್ನು, ಇವರು ಉದ್ಯಮಗಳನ್ನು ಪ್ರಾರಂಭಿಸಲು ಮತ್ತು ಕಲಾತ್ಮಕ ಸೃಜನಶೀಲತೆಗೆ ಬಳಸಿಕೊಂಡಿದ್ದಾರೆ.
ತಮಗೂ ಸಾಮಾನ್ಯರಂತೆ ದೈಹಿಕ ಆಸೆಗಳಿವೆ "ನಮ್ಮಲ್ಲಿ ಸಾಮೀಪ್ಯದ ಕೊರತೆಯೇನೂ ಇಲ್ಲ, ಅದನ್ನು ನಾವು ಅಭಿವ್ಯಕ್ತಪಡಿಸುವ ವಿಧಾನ ಬೇರೆಯಾಗಿದೆ ಅಷ್ಟೇ. ನನಗೇನೂ ವಂಚಿತಳಾಗಿದ್ದೇನೆ ಎನಿಸುತ್ತಿಲ್ಲ, ಬದಲಿಗೆ ತೃಪ್ತಿ ಸಿಗುತ್ತಿದೆ" ಎನ್ನುತ್ತಾರೆ ಸಂಚಾರಿ. ತಮಗೂ ಸಾಮಾನ್ಯರಂತೆ ದೈಹಿಕ ಆಸೆಗಳು ಉಂಟಾಗುತ್ತವೆ, ಆದರೆ ಆ ಶಕ್ತಿಯನ್ನು ವ್ಯಾಯಾಮ, ಪ್ರಾರ್ಥನೆ ಮತ್ತು ಭಾವನಾತ್ಮಕ ಬಾಂಧವ್ಯದ ಕಡೆಗೆ ತಿರುಗಿಸುತ್ತೇವೆ ಎಂದು ದಂಪತಿ ಒಪ್ಪಿಕೊಳ್ಳುತ್ತಾರೆ.
55
5 ವರ್ಷಗಳ ನಂತರವೂ ಅತ್ಯುತ್ತಮ ಸ್ನೇಹಿತರು
5 ವರ್ಷಗಳ ನಂತರವೂ ಅತ್ಯುತ್ತಮ ಸ್ನೇಹಿತರು ಸಮಾಜದ ಕಟ್ಟುಪಾಡುಗಳಿಗೆ ತಲೆಬಾಗುವ ಬದಲು, ಸ್ವಇಚ್ಛೆಯ ಪ್ರಜ್ಞಾಪೂರ್ವಕ ಆಯ್ಕೆ ಮುಖ್ಯ ಎಂಬುದಕ್ಕೆ ಇವರ ಜೀವನವೇ ಸಾಕ್ಷಿ. "ಈ ಮಾರ್ಗ ಎಲ್ಲರಿಗೂ ಸೂಕ್ತವಾಗದೇ ಇರಬಹುದು, ಆದರೆ ಇದು ನಮಗೆ ಸತ್ಯವಾಗಿದೆ. 5 ವರ್ಷಗಳ ನಂತರವೂ ನಾವಿಬ್ಬರು ಅತ್ಯುತ್ತಮ ಸ್ನೇಹಿತರಾಗಿದ್ದೇವೆ" ಎಂದು ದಂಪತಿ ಹೇಳುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.