ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಖಾಸಗಿ ವಿಮಾನದಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಲಘು ಆಟದಲ್ಲಿ ಸೊಸೆ ಬೌಲಿಂಗ್ ಮಾಡಿದರೆ, ಮಗಳು ಸಾರಾ ಫೀಲ್ಡಿಂಗ್ ಮಾಡಿ, ಕೊನೆಗೆ ಸಚಿನ್ ಅವರ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ.
ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಹಲವು ವರ್ಷಗಳೇ ಕಳೆದಿದ್ದರೂ, ಕ್ರಿಕೆಟ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನದ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ. ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್, ತಮ್ಮ ಕುಟುಂಬದೊಂದಿಗೆ ಪ್ರೈವೇಟ್ ಜೆಟ್ (ಖಾಸಗಿ ವಿಮಾನ) ಪ್ರಯಾಣದ ವೇಳೆ ಆಡಿದ ಲಘು ದಾಟಿಯ ಕ್ರಿಕೆಟ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.
25
ಸಚಿನ್ ಮನಸೆಳೆದ ಕ್ಯಾಪ್ಶನ್
ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿರುವ ಈ ವಿಡಿಯೋ, ತೆಂಡೂಲ್ಕರ್ ಅವರ ಕೌಟುಂಬಿಕ ಜೀವನ ಮತ್ತು ಕ್ರಿಕೆಟ್ ಮೇಲಿನ ಅವರ ಎಂದೂ ಮುಗಿಯದ ಪ್ರೀತಿಯ ಅಪರೂಪದ ನೋಟವನ್ನು ಅಭಿಮಾನಿಗಳಿಗೆ ನೀಡಿದೆ. "ನಾವು ಎಷ್ಟೇ ಎತ್ತರದಲ್ಲಿದ್ದರೂ (Altitude), ನಮ್ಮ ಧೋರಣೆ (Attitude) ಬದಲಾಗಬಾರದು," ಎಂದು ಸಚಿನ್ ಈ ವಿಡಿಯೋಗೆ ತಮಾಷೆಯಾಗಿ ಕ್ಯಾಪ್ಶನ್ ಬರೆದಿದ್ದಾರೆ. ತಾವು ನೆಲದ ಮೇಲಿರಲಿ ಅಥವಾ ಆಕಾಶದಲ್ಲಿ ಸಾವಿರಾರು ಅಡಿ ಎತ್ತರದಲ್ಲಿರಲಿ, ಕ್ರಿಕೆಟ್ ಮೇಲಿನ ತಮ್ಮ ಪ್ಯಾಶನ್ ಮಾತ್ರ ಒಂದೇ ಆಗಿರುತ್ತದೆ ಎಂಬುದನ್ನು ಅವರು ಈ ಪನ್ ಮೂಲಕ ಹೇಳಿದ್ದಾರೆ.
35
ಸೊಸೆಯ ಬೌಲಿಂಗ್, ಮಗಳ ಫೀಲ್ಡಿಂಗ್ ಜುಗಲ್‌ಬಂದಿ
ವಿಮಾನದ ಕ್ಯಾಬಿನ್ ಒಳಗಡೆ ಸಚಿನ್ ತೆಂಡೂಲ್ಕರ್ ಅವರು ಕೆಂಪು ಬಣ್ಣದ ಚೆಂಡಿನಲ್ಲಿ ಬ್ಯಾಟಿಂಗ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸಚಿನ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರ ಪತ್ನಿ, ಅಂದರೆ ಸಚಿನ್ ಸೊಸೆ 'ಸಾನಿಯಾ ಚಾಂದೋಕ್' ಬೌಲಿಂಗ್ ಮಾಡುತ್ತಿದ್ದರೆ, ಮಗಳು 'ಸಾರಾ ತೆಂಡುಲ್ಕರ್' ಅಲ್ಲಿನ ಸೋಫಾ ಮೇಲೆ ಕುಳಿತು ಫೀಲ್ಡಿಂಗ್ ಮಾಡುವ ಮೂಲಕ ಕ್ರಿಕೆಟ್‌ನಲ್ಲಿ ಭಾಗಿಯಾಗಿದ್ದಾರೆ.
ಈ ಆಟದ ಮಧ್ಯೆ ಬೌಲಿಂಗ್ ವೇಳೆ ಸಾರಾ ತೆಂಡೂಲ್ಕರ್ ಅವರು ತಮಾಷೆಯಾಗಿ ವಿಕೆಟ್‌ಗಾಗಿ ಅಪೀಲ್ ಮಾಡಿದಾಗ ಆಕರ್ಷಕ ಕ್ಷಣವೊಂದು ಸೃಷ್ಟಿಯಾಯಿತು. ಇದಕ್ಕೆ ತಕ್ಷಣವೇ ನಗುತ್ತಾ ಪ್ರತಿಕ್ರಿಯಿಸಿದ ಸಚಿನ್, "ನೀವು ಎಂದಿಗೂ ನನ್ನನ್ನು ಔಟ್ ಮಾಡಲು ಸಾಧ್ಯವಿಲ್ಲ, ನಿನ್ನಿಂದ ಅದು ಸಾಧ್ಯವೇ ಇಲ್ಲ," ಎಂದು ಸವಾಲು ಹಾಕಿದರು. ಇದರಿಂದ ಇಡೀ ಕ್ಯಾಬಿನ್‌ನಲ್ಲಿ ನಗುವಿನ ಅಲೆ ಎದ್ದಿತು. ಅಷ್ಟಕ್ಕೇ ನಿಲ್ಲದ ಸಚಿನ್, ತಮ್ಮ ಬ್ಯಾಟನ್ನು ಉಲ್ಟಾ ಹಿಡಿದು (ತಿರುಗಿಸಿ) ಬ್ಯಾಟಿಂಗ್ ಮಾಡಲು ಶುರುಮಾಡಿ, "ನಾನು ಈ ರೀತಿ ಬ್ಯಾಟಿಂಗ್ ಮಾಡಿದರೆ ಮಾತ್ರ ನನ್ನನ್ನು ಔಟ್ ಮಾಡಲು ಸ್ವಲ್ಪಮಟ್ಟಿನ ಸಾಧ್ಯತೆಯಿದೆ," ಎಂದು ಜೋಕ್ ಮಾಡಿದರು.
55
ಸಾರಾ ಪಡೆದ ಕ್ಯಾಚ್ ಮತ್ತು ವೈರಲ್ ಆದ ವಿಡಿಯೋ
ಇದಾದ ಕೆಲವೇ ಕ್ಷಣಗಳಲ್ಲಿ ಸಾರಾಗೆ ಸಚಿನ್ ಅವರ ಕ್ಯಾಚ್ ಹಿಡಿಯುವ ಅವಕಾಶ ಸಿಕ್ಕಿತಾದರೂ, ಅವರು ಅದನ್ನು ಕೈಚೆಲ್ಲಿದರು. ಆದರೆ, ಅದರ ಮುಂದಿನ ಎಸೆತದಲ್ಲೇ ಅತ್ಯಂತ ಚುರುಕಾಗಿ ಕ್ಯಾಚ್ ಪಡೆದ ಸಾರಾ, ಜೋರಾಗಿ "ಯೇಯ್!" ಎಂದು ಕಿರುಚುತ್ತಾ ಸಂಭ್ರಮಿಸಿದ್ದಾರೆ. ಕೊನೆಗೂ ಸಚಿನ್ ತಮ್ಮ ಸೋಲನ್ನು ಒಪ್ಪಿಕೊಂಡರು. ಇಡೀ ಕುಟುಂಬದ ಈ ಸುಂದರ ಒಡನಾಟದ ವಿಡಿಯೋ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿದ್ದು, ಸಚಿನ್ ಅವರ ಡೌನ್-ಟು-ಅರ್ಥ್ ಸ್ವಭಾವ ಮತ್ತು ಕ್ರಿಕೆಟ್ ಜೊತೆಗಿನ ಅವರ ಆಜೀವ ಬಾಂಧವ್ಯವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.