ಮದುವೆ ರಿಂಗ್ ಬೆರಳಲ್ಲಿದ್ದರೆ ಕ್ಯಾನ್ಸರ್ ಅಪಾಯ ಕಡಿಮೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಧ್ಯಯನ

Published : Apr 09, 2026, 03:11 PM IST

ಮದುವೆ ರಿಂಗ್ ಬೆರಳಲ್ಲಿದ್ದರೆ ಕ್ಯಾನ್ಸರ್ ಅಪಾಯ ಕಡಿಮೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಧ್ಯಯನ, ಯೂನಿವರ್ಸಿ ಅಧ್ಯಯನದಲ್ಲಿ ಮದುವೆ ಹಾಗೂ ದಾಂಪತ್ಯ ಜೀವನದಿಂದಲೂ ಕ್ಯಾನ್ಸರ್ ಅಪಾಯ ತಗ್ಗಿಸಲು ಸಾಧ್ಯ ಎಂದಿದೆ. 

PREV
16
ಮದುವೆ ರಿಂಗ್ ಹಾಗೂ ದಾಂಪತ್ಯದ ಆರೋಗ್ಯ ಗುಟ್ಟು

ಸೆಲ್ವೆಸ್ಟರ್ ಹಾಗೂ ಮಿಯಾಮಿ ವಿಶ್ವವಿದ್ಯಾಲಯ ನಡೆಸದ ಅಧ್ಯಯನ ಹಲವು ರೋಚಕ ಮಾಹಿತಿ ನೀಡಿದೆ. ಪ್ರಮುಖವಾಗಿ ದಾಂಪತ್ಯ ಜೀವನದಲ್ಲಿರುವವರಿಗೆ ಕ್ಯಾನ್ಸರ್ ಮಹಾಮಾರಿ ಅಪಾಯ ಕಡಿಮೆ, ಇಷ್ಟೇ ಅಲ್ಲ ಮದುವೆ ರಿಂಗ್ ಬೆರಳಲ್ಲಿದ್ದರೆ ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆ ಅನ್ನೋ ಸ್ಫೋಟಕ ಮಾಹಿತಿ ಈ ಅಧ್ಯಯನ ವರದಿ ನೀಡಿದೆ.

26
ಮದುವೆ ಉಂಗುರದ ಪ್ರಯೋಜನವೇನು?

ಯೂನಿವರ್ಸಿಟಿ ಅಧ್ಯಯನದಲ್ಲಿ 40 ಲಕ್ಷ ಕ್ಯಾನ್ಸರ್ ಪ್ರಕರಣಗಳನ್ನು ಅಧ್ಯಯನ ನಡೆಸಿ ಈ ವರದಿ ನೀಡಲಾಗಿದೆ. ವಿಶೇಷ ಅಂದರೆ ಮದುವೆ ರಿಂಗ್ ಧರಿಸಿದ ಹಿಳೆಯರಲ್ಲಿ ಕ್ಯಾನ್ಸರ್ ಮೊದಲ ಹಂತದಲ್ಲೇ ಪತ್ತೆಯಾಗುತ್ತದೆ. ಇದರಿಂದ ಆರಂಭದಲ್ಲೇ ಕ್ಯಾನ್ಸರ್ ಗುಣಪಡಿಸಲು ಸಾಧ್ಯವಿದೆ ಎಂದು ಅಧ್ಯಯನ ವರದಿ ಹೇಳುತ್ತದೆ. ಇದೇ ವೇಳೆ ಸ್ಮಾರ್ಟ್ ರಿಂಗ್ ಕೂಡ ಲಭ್ಯವಿದೆ. ಈ ಸ್ಮಾರ್ಟ್ ರಿಂಗ್ ದೇಹದಲ್ಲಿನ ಬದಲಾವಣೆ, ರಕ್ತದ ಏರಿಳಿತ, ಹಾರ್ಮೋನ್ ಬದಲಾವಣೆಗಳನ್ನು ಪತ್ತೆ ಹಚ್ಚುತ್ತದೆ. ಯಾವುದೇ ರೀತಿಯ ಕ್ಯಾನ್ಸರ್ ರೋಗ ಆರಂಭದಲ್ಲೇ ಪತ್ತೆ ಹಚ್ಚಿ ಸೂಚನೆ ನೀಡುತ್ತಿದೆ.

36
ಸಂಗಾತಿ ಕಣ್ಗಾವಲಿನಿಂದ ಕ್ಯಾನ್ಸರ್ ಪತ್ತೆ

ಮದುವೆಯಾದ ದಂಪತಿಗಳು ಕ್ಯಾನ್ಸರ್ ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಆರಂಭಿಕ ಹಂತದಲ್ಲೇ ನೀಡುವ ಸಣ್ಣ ಸಣ್ಣ ಬದಲಾವಣೆಯನ್ನು ವಿವಾಹಿತ ಸಂಗಾತಿಗಳು ಪತ್ತೆ ಹಚ್ಚುತ್ತಾರೆ. ದೇಹದಲ್ಲಿ ಯಾವುದೇ ಭಾಗದಲ್ಲಿ ಆಗುವ ಸಣ್ಣ ಗಂಟು ಹಾಗೂ ಬದಲಾವಣೆಯನ್ನು ಸಂಗಾತಿಗಳು ಪತ್ತೆ ಹಚ್ಚಿ ಆರಂಭಿಕ ಹಂತದಲ್ಲೇ ವೈದ್ಯರ ಸಂಪರ್ಕಿಸಲು ನೆರವಾಗುತ್ತಾರೆ.

ಅಧ್ಯಯನ ವರದಿ ನೀಡಿದ ಅಂಕಿ ಅಂಶ

  • ಅವಿವಾಹಿತ ಪುರುಷರಲ್ಲಿ ಆ್ಯನಲ್ ಕ್ಯಾನ್ಸರ್ ಅಪಾಯ ವಿವಾಹಿತರಿಗಿಂತ 5 ಪಟ್ಟು ಹೆಚ್ಚು
  • ಅವಿವಾಹಿತಿ ಮಹಿಳೆಯರಲ್ಲಿ ಸರ್ವಿಕಲ್ ಕ್ಯಾನ್ಸರ್ ಅಪಾಯ ವಿವಾಹಿತ ಮಹಿಳೆಯರಿಗಿಂತ 3 ಪಟ್ಟು ಹೆಚ್ಚು
  • ಸುರಕ್ಷಿತ ಸಂಬಂಧ ಹಾಗೂ ಲೈಂಗಿಕ ಶಿಸ್ತು ಇದಕ್ಕೆ ಕಾರಣ ಎಂದು ಅಧ್ಯಯನ ವರದಿ ಹೇಳುತ್ತಿದೆ.
46
ಪುರುಷರ ಆರೋಗ್ಯದಲ್ಲಿ ಮದುವೆ ಪ್ರಭಾವ

ಬ್ಯಾಚುಲರ್ಸ್ ಆರೋಗ್ಯದ ಮೇಲೆ ಉದಾಸೀನಾ ಮಾಡುತ್ತಾರೆ. ಶೇಕಡಾವಾರು ನೋಡಿದರೆ ಬಹುತೇಕ ಬ್ಯಾಚುಲರ್ಸ್ ಯುವಕರ ಲೈಫ್ ಸ್ಟೈಲ್ ಆರೋಗ್ಯಕರವಾಗಿರುವುದಿಲ್ಲ. ಮದುವೆಯಾಗಿ ಸಂಸಾರ ನಡೆಸುವ ಪುರುಷರಲ್ಲಿ ಕ್ಯಾನ್ಸರ್ ಹಾಗೂ ಕ್ಯಾನ್ಸರ್‌ನಿಂದ ಸಾವನ್ನಪ್ಪು ಪ್ರಮಾಣ ಶೇಕಡಾ 70ರಷ್ಟು ಕಡಿಮೆ ಎಂದು ವರದಿ ಹೇಳುತ್ತಿದೆ.ಪತ್ನಿಯ ಒತ್ತಾಯ, ಕಾಳಜಿ, ಆರೋಗ್ಯ ಶಿಸ್ತು ಇದಕ್ಕೆ ಮುಖ್ಯ ಕಾರಣ ಎಂದು ಅಧ್ಯಯನ ಹೇಳುತ್ತಿದೆ.

56
ಗರ್ಭಕಂಠ ಕ್ಯಾನ್ಸರ್ ಅಪಾಯ

ವಿವಾಹವಾಗಿರುವ ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್ ಅಪಾಯ ಕಡಿಮೆ. ಗರ್ಭಧಾರಣೆ ಹಾಗೂ ಹಾರ್ಮೋನ್ ಚಕ್ರಗಳು ಸ್ವಾಭಾವಿಕವಾಗಿ ವಿವಾಹಿತ ಮಹಿಳೆಯರಿಗೆ ರಕ್ಷಣೆ ನೀಡುತ್ತದೆ. ಸಂಗಾತಿ ಇಲ್ಲದ ಹಾಗೂ ಸಂಸಾರದಲ್ಲಿನ ಲೈಂಗಿಕತೆ ತೃಪ್ತಿ ಹಾಗೂ ಶಿಸ್ತಿನ ಜೀವನ ಅನುಭವಿಸಿದ ಮಹಿಳೆಯರಲ್ಲಿ ಕ್ರಾನಿಕ್ ಸ್ಟ್ರೆಸ್ ಸೃಷ್ಟಿಸುತ್ತದೆ. ಇದರಿಂದ ದೇಹದಲ್ಲಿ ಉರಿಯೂತ ಸೇರಿದಂತೆ ಇತರ ಅಪಾಯಕಾರಿ ಹಾರ್ಮೋನ್‌ಗಳ ಏರಿಳಿತಗಳಿಗೆ ಕಾರಣವಾಗುತ್ತದೆ. ಇದು ಕ್ಯಾನ್ಸರ್ ಜೀವಕೋಶಗಳು ವೇಗವಾಗಿ ಬೆಳೆಯಲು ಪೂರಕ ವಾತಾವರಣ ಕಲ್ಪಿಸಿಕೊಡುತ್ತದೆ.

66
ಚಿಕಿತ್ಸೆ ವೇಳೆ ಸಂಗಾತಿ ಬಲ

ಕ್ಯಾನ್ಸರ್ ಚಿಕಿತ್ಸೆ ಅತೀ ನೋವಿನ ಹಾಗೂ ಮನೋಬಲ ಕುಗ್ಗಿಸುವ ಚಿಕಿತ್ಸೆಗಳಾಗಿದೆ. ಸಂಗಾತಿ ಜೊತೆಗಿದ್ದರೆ ಅವರು ನೀಡುವ ಆತ್ಮವಿಶ್ವಾಸ, ಬೆಂಬಲ ರೋಗಿಯನ್ನು ವೇಗವಾಗಿ ಚೇತರಿಸಿಕೊಳ್ಳುವಂತೆ ಮಾಡಲಿದೆ. ಮದುವೆ ಕೇವಲ ಒಂದು ಸಂಬಂಧವಲ್ಲ. ಅದು ಆರೋಗ್ಯಕರ ದೃಷ್ಟಿಯಿಂದಲೂ ರಕ್ಷಾ ಕವಚ ಎಂದು ಈ ಅಧ್ಯಯನ ವರದಿ ಹೇಳುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories