ಲವ್​ ಜಿಹಾದ್​ಗೆ ಒಳಗಾಗಿದ್ದ Miss India Earth ನಾಪತ್ತೆ! ಹಿಂದೂ ಧರ್ಮಕ್ಕೆ ವಾಪಸಾದ ಬೆನ್ನಲ್ಲೇ ನಿಗೂಢ ಕಣ್ಮರೆ

Published : Apr 08, 2026, 01:35 PM IST

2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ,  ನಾಲ್ಕು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. 'ಲವ್ ಜಿಹಾದ್' ಆರೋಪ ಮಾಡಿ,  ಹಿಂದೂ ಧರ್ಮಕ್ಕೆ ಮರಳಿದ್ದ ಅವರು, ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾಗಿ ಹೇಳಿಕೊಂಡಿದ್ದರು.  ಪತಿಯ ಕುಟುಂಬವೇ  ಅಪಹರಿಸಿದೆ ಎಂದು ಪೋಷಕರು ದೂರು ನೀಡಿದ್ದಾರೆ.

PREV
16
ಮಿಸ್ ಇಂಡಿಯಾ ಅರ್ಥ್ ನಾಪತ್ತೆ

2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಿಂದ ನಾಪತ್ತೆಯಾಗಿದ್ದಾರೆ. ಕುಟುಂಬದ ತೀವ್ರ ವಿರೋಧದ ಹೊರತಾಗಿಯೂ, ನನ್ನ ಅತಿಫ್​ ಎಲ್ಲರಂತಲ್ಲ ಎಂದು ಅಪ್ಪ-ಅಮ್ಮನನ್ನೇ ಧಿಕ್ಕರಿಸಿ ಭಯಂದರ್ ಮೂಲದ ಮುಸ್ಲಿಂ ಉದ್ಯಮಿ ಅತಿಫ್ ಟೇಸ್ ಅವರನ್ನು ಪ್ರೇಮ ವಿವಾಹ ಮಾಡಿಕೊಂಡಿದ್ದರು ಸೈಲಿ. ಆ ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು, ಅತೇಜಾ ಟೇಸ್ ಎಂಬ ಹೆಸರನ್ನು ಪಡೆದಿದ್ದರು. ಆದರೆ ಮದುವೆಯಾದ ಮೇಲೆ ಅಪ್ಪ-ಅಮ್ಮ ಹೇಳಿದ್ದೇ ಸರಿ ಎಂದು ತಿಳಿದು, ಸಾರ್ವಜನಿಕವಾಗಿ ಹಿಂದೂ ಧರ್ಮಕ್ಕೆ ಮರಳಿದ್ದರು. ತಮ್ಮ ಪತಿಯ ಮೇಲೆ ದೌರ್ಜನ್ಯ ಮತ್ತು 'ಲವ್ ಜಿಹಾದ್' ಆರೋಪ ಹೊರಿಸಿದ್ದರು.

26
ಲವ್​ ಜಿಹಾದ್​ಗೆ ಒಳಗಾಗಿದ್ದ ಬ್ಯೂಟಿಕ್ವೀನ್​

ವಾರಗಳ ಹಿಂದೆ, ಅವರು ತಮ್ಮನ್ನು ತಾವು ಆದ್ಯ ಸುರ್ವೆ ಎಂದು ಮರುನಾಮಕರಣ ಮಾಡಿಕೊಂಡಿದ್ದರು. ಹಿಂದೂ ಧರ್ಮಕ್ಕೆ ಸಾರ್ವಜನಿಕ ಮರಳಿ ಸದ್ದು ಮಾಡುತ್ತಿದ್ದರು. ತಮ್ಮ ಪತಿ ವರ್ಷಗಳ ಕಾಲ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದರು. ಮತ್ತು ಈಗ ಅವರು ತಮ್ಮ ನಾಲ್ಕು ಮಕ್ಕಳೊಂದಿಗೆ ಕಣ್ಮರೆಯಾಗಿದ್ದಾರೆ. ತಮ್ಮ ಪುತ್ರಿ ಮತ್ತು ನಾಲ್ವರು ಮಕ್ಕಳನ್ನು ಗಂಡನ ಮನೆಯವರು ಎಲ್ಲರನ್ನೂ ಅಪಹರಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ.

36
ಏನಿದು ಕೇಸ್​

ಕುಟುಂಬದ ತೀವ್ರ ವಿರೋಧದ ಹೊರತಾಗಿಯೂ, ಸೈಲಿ, ಅತಿಫ್ ಟೇಸ್ ನನ್ನು ಮದುವೆಯಾಗಿದ್ದರು. ನಾಲ್ಕು ಮಕ್ಕಳನ್ನು ಪಡೆದರು. ಮದುವೆಯಾದ ಮರುಕ್ಷಣದಿಂದಲೇ ತಾನು ಮಾಡಿದ್ದು ಜೀವನದ ಅತಿ ದೊಡ್ಡ ತಪ್ಪು ಎಂದು ತಿಳಿಯಿತು. ಆದರೆ, ಬೇರೆ ದಾರಿ ಇಲ್ಲದೇ ಇಷ್ಟು ವರ್ಷ ದೌರ್ಜನ್ಯ ಸಹಿಸಿಕೊಂಡಿದ್ದೆ. ನಾಲ್ಕು ಮಕ್ಕಳಾದವು. ಇನ್ನು ಇಲ್ಲಿ ಬದುಕುವುದು ಸಾಧ್ಯವಿಲ್ಲ ಎಂದು ಎನ್ನಿಸಿತು ಎಂದು ಸೈಲಿ ವಾಪಸದಾಗ ಬಳಿಕ ಹೇಳಿಕೊಂಡಿದ್ದರು.

46
ದೌರ್ಜನ್ಯದ ಬಗ್ಗೆ ಅವರು ಏನು ಹೇಳಿದರು?

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸೈಲಿ, ಮದುವೆಯಾಗುವಾಗ ಬಣ್ಣಬಣ್ಣದ ಮಾತುಗಳನ್ನಾಗಿ ಮರುಳು ಮಾಡಿದ್ದ ಆತ. ಆದರೆ ಕೊನೆಗೆ ಗೊತ್ತಾಗಿದ್ದು ಉದ್ದೇಶವೇ ಬೇರೆ ಎಂದು. 24 ಗಂಟೆ ನನಗೆ ಕಷ್ಟವೇ ಕಷ್ಟವಾಗಿತ್ತು. ಮಕ್ಕಳನ್ನು ಹೇರುವುದು ಕೆಲಸವಾಯ್ತು. ದಿನನಿತ್ಯವೂ ಶೋಷಣೆ, ದೌರ್ಜನ್ಯ ಸಹಿಸಿಕೊಳ್ಳಬೇಕಿತ್ತು. ನನ್ನ ತಪ್ಪು ಇಲ್ಲದಿದ್ದರೂ ಹೊಡೆತ ತಿನ್ನಬೇಕಿತ್ತು. ಇನ್ನು ಬದುಕಲು ಸಾಧ್ಯವಿಲ್ಲ ಎಂದು ಗೊತ್ತಾದಾಗ ಮನೆಯಿಂದ ಬಂದಿರುವುದಾಗಿ ಹೇಳಿದ್ದರು ಸೈಲಿ.

56
ಯಾರ ಮಾತೂ ಕೇಳಿರಲಿಲ್ಲ

ಮುಸ್ಲಿಂ ಧರ್ಮಕ್ಕೆ ಮತಾಂತರದ ಬಗ್ಗೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು. ಆಗಲೇ ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದೆ. ಆದರೆ ಏನೂ ಪ್ರಯೋಜನ ಆಗಲಿಲ್ಲ. ನಾನು ಆತನನ್ನು ಮದುವೆಯಾಗುವಾಗಲೇ ಅಪ್ಪ-ಅಮ್ಮ ಸೇರಿದಂತೆ ಹಲವರು ಬುದ್ಧಿ ಹೇಳಿದ್ದರು. ಆದರೆ ನಾನು ಪ್ರೇಮದಲ್ಲಿ ಸಿಲುಕಿ ಬಿಟ್ಟಿದ್ದೆ. ಅವರ ಮಾತುಗಳು ನನಗೆ ಕಹಿ ಎನ್ನಿಸಿದವು. ಆದರೆ ಸತ್ಯ ಮದುವೆಯಾದ ಮೇಲೆ ತಿಳಿಯಿತು ಎಂದು ಮಾಧ್ಯಮದವರ ಎದುರು ಹೇಳಿದ್ದರು ಸೈಲಿ.

66
‘ಘರ್ ವಾಪ್ಸಿ’ ಸಮಾರಂಭದಲ್ಲಿ ಹೇಗಾಗಿತ್ತು?

ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಅಲ್ಲಿ ಶುದ್ಧೀಕರಣ ಸಮಾರಂಭದ ಭಾಗವಾಗಿ ಆಚರಣೆಗಳನ್ನು ನಡೆಸಲಾಯಿತು. ಈ ಆಚರಣೆಯ ನಂತರ, ಅತಿಜಾ ಅವರ ಹೆಸರನ್ನು ಆದ್ಯಾ ಸುರ್ವೆ ಎಂದು ಬದಲಾಯಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಂಸದೆ ಮೇಧಾ ಕುಲಕರ್ಣಿ, ಶಾಸಕಿ ಉಮಾ ಖಪ್ರೆ ಮತ್ತು ಬಜರಂಗ ದಳದ ಸದಸ್ಯರು ಭಾಗವಹಿಸಿದ್ದರು. ಅವರ ನಾಲ್ವರು ಮಕ್ಕಳಿಗೆ ಅವರ ಜೊತೆಗೆ ದೀಕ್ಷೆ ನೀಡಲಾಯಿತು ಮತ್ತು ಹೊಸ ಹೆಸರುಗಳನ್ನು ಸಹಿಸಲಾಯಿತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories