ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯ ಮುನ್ನ ನಡೆದ ಎರಡನೇ ಪಾರ್ಟಿಯು ಮೇ 29ರಿಂದ ಜೂನ್ 1ರ ತನಕ ಒಟ್ಟು ನಾಲ್ಕು ದಿನಗಳ ಕಾಲ ನಡೆದಿದೆ. ಅದ್ದೂರಿ ಪಾರ್ಟಿಗಳು, ಸಂಭ್ರಮಾಚರಣೆಗಳೂ ಮುಗಿದಿದೆ. ಐಶಾರಾಮಿ ಹಡಗಿನ ಫೋಟೋ ವೈರಲ್ ಆಗಿದ್ದು, ಹಲವಾರು ಬಾಲಿವುಡ್ ತಾರೆಯರು, ಉದ್ಯಮಿಗಳು, ಪ್ರಸಿದ್ಧ ಅಂತರರಾಷ್ಟ್ರೀಯ ಬ್ಯಾಂಡ್‌ಗಳು ಮತ್ತು ಗಾಯಕರು ಪ್ರದರ್ಶನ ನೀಡಿದರು. ಹೀಗಿರುವಾಗ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ವಿವಾಹ ಕಾರ್ಯಕ್ರಮ ಇನ್ನೆಷ್ಟು ಅದ್ದೂರಿಯಾಗಿ ನಡೆಯಲಿದೆ ಎಂಬುದನ್ನು ಊಹಿಸುವುದು ಕೂಡ ಅಸಾಧ್ಯ.