ಅನಂತ್ ಮತ್ತು ರಾಧಿಕಾ ಅವರ ಎರಡನೇ ವಿವಾಹ ಪೂರ್ವ ಕಾರ್ಯಕ್ರಮ ಇಟಲಿಯ ಕ್ರೂಸ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ವರದಿಗಳ ಪ್ರಕಾರ, ಅತ್ಯಂತ ಜನಪ್ರಿಯ ಪಾಪ್ ಸಂಸ್ಕೃತಿಯ ಐಕಾನ್‌ಗಳಲ್ಲಿ ಒಬ್ಬರಾದ ಪ್ರಸಿದ್ಧ ಅಮೇರಿಕನ್ ಗಾಯಕಿ ಕೇಟಿ ಪೆರ್ರಿ ಇದರಲ್ಲಿ ಪ್ರದರ್ಶನ ನೀಡ್ತಿದ್ದಾರೆ. ಅಂತಾರಾಷ್ಟ್ರೀಯ ಗಾಯಕಿ ಪಡೀತಿರೋ ಸಂಭಾವನೆ ಎಷ್ಟು ಗೊತ್ತಾ?
ಅನಂತ್ ಮತ್ತು ರಾಧಿಕಾ ಅವರ ಎರಡನೇ ವಿವಾಹ ಪೂರ್ವ ಕಾರ್ಯಕ್ರಮ ಇಟಲಿಯ ಕ್ರೂಸ್‌ನಲ್ಲಿ ಅದ್ಧೂರಿಯಾಗಿ ನಡೆಯುತ್ತಿದೆ. ಮೇ 29ರಂದು ಎರಡನೇ ಪ್ರಿ ವೆಡ್ಡಿಂಗ್ ಇವೆಂಟ್ ಅದ್ಧೂರಿಯಾಗಿ ಆರಂಭವಾಗಿದೆ.
28
ಅಂಬಾನಿ ಕುಟುಂಬವು ಕ್ರೂಸ್‌ನಲ್ಲಿ ಐಷಾರಾಮಿ ವಿಹಾರವನ್ನು ಆಯೋಜಿಸಿದ್ದು, ಸಮಾರಂಭದಲ್ಲಿ ಭಾಗಿಯಾಗುತ್ತಿರುವ ಅತಿಥಿಗಳಿಗಾಗಿ ಅನೇಕ ಚಟುವಟಿಕೆಗಳನ್ನು ಯೋಜಿಸಲಾಗಿದೆ,
38
ವರದಿಗಳ ಪ್ರಕಾರ, ಅತ್ಯಂತ ಜನಪ್ರಿಯ ಪಾಪ್ ಸಂಸ್ಕೃತಿಯ ಐಕಾನ್‌ಗಳಲ್ಲಿ ಒಬ್ಬರಾದ ಪ್ರಸಿದ್ಧ ಅಮೇರಿಕನ್ ಗಾಯಕಿ ಕೇಟಿ ಪೆರ್ರಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಎರಡನೇ ಪೂರ್ವ ವಿವಾಹ ಸಮಾರಂಭದಲ್ಲಿ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.
48
ಅಂಬಾನಿ ಕುಟುಂಬವು ಆಯೋಜಿಸಿರುವ ವಿವಾಹಪೂರ್ವ ಬ್ಯಾಷ್‌ನಲ್ಲಿ ಪ್ರದರ್ಶನ ನೀಡಲು ಜಾಗತಿಕ ಪಾಪ್ ದಿವಾಗಳಾದ ಕೇಟಿ ಪೆರ್ರಿ ಮತ್ತು ಷಕೀರಾ ದಂಪತಿಯ ವಿವಾಹಪೂರ್ವ ಬ್ಯಾಷ್‌ನಲ್ಲಿ ಪ್ರದರ್ಶನ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಇದಕ್ಕಾಗಿ USD 50.9 ಮಿಲಿಯನ್ ಅಥವಾ 45 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
58
ಕ್ರೂಸ್‌ನಲ್ಲಿ ಐದು ಗಂಟೆಗಳ ಅವಧಿಯ ಪಾರ್ಟಿಯಲ್ಲಿ ಕೇಟಿ ಪೆರ್ರಿ ಪ್ರದರ್ಶನ ನೀಡಲಿದ್ದಾರೆ. ಉನ್ನತ ಹಂತದ ಮನರಂಜನೆಯ ಭಾಗವಾಗಿ ಬೃಹತ್ ಪಟಾಕಿ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ.
68
ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೊದಲ ವಿವಾಹಪೂರ್ವ ಸಮಾರಂಭದಲ್ಲಿ, ರಿಹಾನ್ನಾ, ದಿಲ್ಜಿತ್ ದೋಸಾಂಜ್, ಅರ್ಜಿತ್ ಸಿಂಗ್, ಶ್ರೇಯಾ ಘೋಷಾಲ್ ಮೊದಲಾದ ಗಾಯಕರು ಪ್ರದರ್ಶನ ನೀಡಿದರು. ತಮ್ಮ ಪ್ರದರ್ಶನಕ್ಕಾಗಿ ಕೋಟಿಗಟ್ಟಲೆ ಸಂಭಾವನೆಯನ್ನು ಸಹ ಪಡೆದರು.
78
ಫ್ರಾನ್ಸ್‌ನ ಹಡಗಿನಲ್ಲಿ ಜೂನ್ 1ರ ವರೆಗೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯುತ್ತಿದೆ. ಬಹುತೇಕ ಬಾಲಿವುಡ್ ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇದರ ಜೊತೆಗೆ ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು, ದಿಗ್ಗಜರು, ಉದ್ಯಮಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. 800 ಸೆಲೆಬ್ರೆಟಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.
88
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಜುಲೈ 12 ರಂದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.