ಪುರುಷರಿಗೆ ಈ ಬಗ್ಗೆ ಬಹಳ ತಪ್ಪು ತಿಳಿವಳಿಕೆಗಳಿವೆ.. ನಿಮ್ಮ ಪತ್ನಿಯನ್ನು ಮೂಡ್‌ಗೆ ಎಳೆಯಲು ನಿಮ್ಮ 6 ಪ್ಯಾಕ್, ಲುಕ್ಸ್, ಅಥವಾ ಲೈಂಗಿಕ ಕೌಶಲಗಳು ಕೆಲಸ ಮಾಡುವುದಿಲ್ಲ.. ಬದಲಿಗೆ ಈ ವಿಷಯಗಳತ್ತ ಗಮನ ಹರಿಸಿ.
ನೀವು ಸಂಗಾತಿಯನ್ನು ಬಹಳ ಪ್ರೀತಿಸುವಾಗ ಅವಳನ್ನು ಮೆಚ್ಚಿಸಲು ಎಲ್ಲವನ್ನೂ ಮಾಡಲು ಬಯಸುತ್ತೀರಿ. ಇದರಿಂದ ನೀವಿಬ್ಬರೂ ಒಟ್ಟಿಗೇ ಸಂತೋಷವಾಗಿರಬಹುದು.
211
ಪುರುಷರಿಗೆ ಮಹಿಳೆಯನ್ನು ಆಕರ್ಷಿಸುವುದು, ಲೈಂಗಿಕವಾಗಿ ಮೆಚ್ಚಿಸುವುದು ಹೆಚ್ಚು ಆತ್ಮವಿಶ್ವಾಸ, ಸಂತೋಷ ಕೊಡುವ ವಿಷಯವಾಗಿದೆ. ಆದರೆ, ಪ್ರಣಯ ಮತ್ತು ಲೈಂಗಿಕ ಆಕರ್ಷಣೆ ಪ್ರತಿ ಹೆಣ್ಣಿಗೂ ವಿಭಿನ್ನವಾಗಿರುತ್ತದೆ.
311
live in relationship
ಒಬ್ಬ ಮಹಿಳೆಗೆ ಮಾದಕವಾದದ್ದು ಇನ್ನೊಬ್ಬ ಮಹಿಳೆಗೆ ಆಗದಿರಬಹುದು. ಆದಾಗ್ಯೂ, ಸ್ತ್ರೀ ಸಂಗಾತಿಯನ್ನು ಆಕರ್ಷಿಸಲು ಮತ್ತು ಸಂತೋಷಪಡಿಸಲು ಇನ್ನೂ ಕೆಲವು ಸಾಮಾನ್ಯ ನಿಯಮಗಳಿವೆ.
411
ಆಕೆಗೆ ವಿಶೇಷ ಭಾವನೆ ಮೂಡಿಸಲು ಅವರೊಂದಿಗಿನ ಸಂಬಂಧದಲ್ಲಿ ನೀವು ಮಾಡಬಹುದಾದ ಕೆಲವು ಅತ್ಯುತ್ತಮ ಸೆಕ್ಸಿಯೆಸ್ಟ್ ವಿಷಯಗಳು ಇಲ್ಲಿವೆ.
511
'ಮಹಿಳೆಯನ್ನು ಮೂಡ್‌ಗೆ ತರುವ ಗಂಡನ ನಡೆಗಳೇನು?'
ಇತ್ತೀಚೆಗೆ ಆನ್‌ಲೈನ್ ಪೇಜೊಂದು ಈ ಪ್ರಶ್ನೆ ಕೇಳಿತ್ತು. ಇದಕ್ಕೆ ನೂರಾರು ಮಹಿಳೆಯರು ತರಹೇವಾರಿಯಾಗಿ ಉತ್ತರಿಸಿದ್ದರು. ಆದರೆ ಯಾರೊಬ್ಬರೂ 6 ಪ್ಯಾಕ್ ಅಥವಾ ಆತನ ಲುಕ್ಸ್ ಬಗ್ಗೆ ಒಂದು ಮಾತೂ ಹೇಳಿರಲಿಲ್ಲ. ಹಾಗಿದ್ದರೆ, ಪತ್ನಿಯನ್ನು ರೊಮ್ಯಾಂಟಿಕ್ ಮೂಡಿಗೆ ತರಲು ಗಂಡನೇನು ಮಾಡಬೇಕು?
611
ಒಬ್ಬ ಮಹಿಳೆಗೆ ತನ್ನ ಗಂಡ ಕೆಲಸಗಳಲ್ಲಿ ಸಹಾಯ ಮಾಡುತ್ತಾ, ಪತ್ನಿಯ ಹೊರೆ ಕಡಿಮೆ ಮಾಡುವ ಮನಸ್ಥಿತಿ ಹೊಂದಿದ್ದರೆ ಸಾಕು- ಆತ ಬಹಳ ಸೆಕ್ಸೀ ಎನಿಸುತ್ತಾನೆ.
711
ಮತ್ತೊಬ್ಬ ನೆಟ್ಟಿಗರ ಪ್ರಕಾರ, ಆಕೆಗೆ ಪತಿಯಾದವನು ಕೆಲಸದಲ್ಲಿರುವಾಗ ಮಧ್ಯದಲ್ಲಿ ಬಂದು 'ಐ ಲವ್ಯೂ, ನೀನು ತುಂಬಾ ಚೆಂದ ಕಾಣ್ತಿದ್ದಿ, ನೀನು ನನಗೆ ಸಿಕ್ಕಿದ್ದು ಅದೃಷ್ಟ' ಮುಂತಾದ ನಿಜವಾದ ಮೆಚ್ಚುಗೆಗಳನ್ನು ಆಗಾಗ ವ್ಯಕ್ತಪಡಿಸಿದರೆ ಆಕೆ ಆತನಿಗೆ ಕಳೆದೇ ಹೋಗುತ್ತಾಳೆ.
811
ಇನ್ನೊಬ್ಬ ಮಹಿಳೆ ಕೊಟ್ಟ ಉತ್ತರ ಹೀಗಿದೆ- ಪತಿ ಪ್ರತಿ ದಿನ ಆಕೆಯೊಂದಿಗೆ ಮನಸ್ಸು ಬಿಚ್ಚಿ ಮಾತಾಡುತ್ತಿದ್ದರೆ, ಕೇವಲ ಹಾಸಿಗೆಗೆ ಹೋಗುವಾಗಲ್ಲ, ಎಲ್ಲ ಸಮಯವೂ ನೀನು ಅಗತ್ಯ, ನೀನು ಇಷ್ಟ ಎಂಬ ಮನೋಭಾವ ತೋರಿಸುತ್ತಿರಬೇಕು.
911
ಯುವತಿಯೊಬ್ಬಳು ಹೇಳುವಂತೆ, ಆತ ತಮ್ಮ ಸಂಬಂಧದ ಬಗ್ಗೆ ಆಗಾಗ ತನ್ನ ಸಂತೋಷ ವ್ಯಕ್ತಪಡಿಸಬೇಕು. ತನ್ನ ತಂದೆ ತಾಯಿ ಕುಟುಂಬವನ್ನು ಚೆನ್ನಾಗಿ ನಡೆಸಿಕೊಳ್ಳಬೇಕು, ಅವರ ಬಗ್ಗೆ ಒಳ್ಳೆಯ ಮಾತಾಡಬೇಕು- ಅಷ್ಟಾದರೆ ಎಷ್ಟು ಬಾರಿ ಬೇಕಾದರೂ ಆತನ ತೋಳಲ್ಲಿ ಕಳೆದು ಹೋಗುವ ಬಯಕೆಯಾಗುತ್ತದೆ.
1011
ಮತ್ತೊಂದು ಕಾಮೆಂಟ್ ಹೀಗಿದೆ- ಮಕ್ಕಳನ್ನು ನೋಡಿಕೊಳ್ಳುವಲ್ಲಿ ಸಹಾಯ ಮಾಡುವುದು. ಆಗಾಗ ಬಂದು ಹಿಂದಿನಿಂದ ತಬ್ಬುವುದು, ಹಣೆ ಮೇಲೆ ಹೂ ಮುತ್ತು ಕೊಡುವುದು- ಇವೆಲ್ಲವೂ ನಿಯಮಿತವಾಗಿದ್ದರೆ ಆತ ಬೇರೆ ತಂತ್ರಗಳ ಮೊರೆ ಹೋಗುವುದೇ ಬೇಡ..
1111
ಈಗ ಗೊತ್ತಾಯ್ತಲ್ಲ, ಮಹಿಳೆಯರನ್ನು ಟರ್ನ್ ಆನ್ ಮಾಡುವುದು ಏನಂತ? ಅವರು ದೈಹಿಕ ಮಿಲನಕ್ಕೆ ಪೂರ್ವದಲ್ಲಿ ಮಾನಸಿಕ ಮಿಲನ ಬಯಸುತ್ತಾರೆ. ಆಕೆಯ ಭಾವನಾತ್ಮಕ ಅಗತ್ಯಗಳು ಪೂರೈಕೆಯಾದರೆ ಖಂಡಿತಾ ಆಕೆ ನಿಮ್ಮತ್ತ ಸೆಳೆಯಲ್ಪಡುತ್ತಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.