ಕೇರಳದ ಶ್ರೀಕುಟ್ಟಿ ಎಂಬ ಆನೆ ತನ್ನ ಮೊದಲನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದೆ.
ಚಂದದ ಹೂ ಮುಡಿಗಿಟ್ಟು, ಝರಿಯಂಚಿನ ಶಾಲು ಮೈಮೇಲೆ ತೊಟ್ಟು, ದೊಡ್ಡದಾದ ಕೇಕ್ ಕಟ್ ಮಾಡಿದೆ.
ಈ ಬರ್ತ್‌ಡೇ ಪಾರ್ಟಿಗೆ 15 ಆನೆಗಳು ಮತ್ತು ಜನರೂ ಬಂದಿದ್ದರು. ಹುಟ್ಟಿದ ಎರಡೇ ದಿನದಲ್ಲಿ ಗಾಯಗಳಾಗಿದ್ದ ಶ್ರೀಕುಟ್ಟಿಯನ್ನು ಕಾಡಿನಿಂದ ರಕ್ಷಿಸಲಾಗಿತ್ತು.
ಆದರೆ ಆನೆ ಮರಿ ಬದುಕೋ ಸಾಧ್ಯತೆ ಬಹಳ ಕಮ್ಮಿ ಇತ್ತು. ಅರಣ್ಯ ಇಲಾಖೆಯ ಮುಖ್ಯ ಪಶು ವೈದ್ಯ ಡಾ. ಈಶ್ವರನ್ ಆನೆಗೆ ಚಿಕಿತ್ಸೆ ನೀಡಿದ್ದರು.
ಎಲನೀರು, ಬಾಳೆಹಣ್ಣು ತಿನ್ನುತ್ತಾ ಆನೆ ನಿಧಾನಕ್ಕೆ ಚೇತರಿಸಿಕೊಂಡಿತ್ತು. ಶ್ರೀಕುಟ್ಟಿಗಾಗಿ ವಿಶೇಷವಾಗಿ ರಾಗಿ, ಅಕ್ಕಿಯಿಂದ ಕೇಕ್ ತಯಾರಿಸಲಾಗಿತ್ತು.
Suvarna News