ಆಫೀಸ್‌ನಲ್ಲಿ ಸಹೋದ್ಯೋಗಿಗಳೊಂದಿಗೆ ಈ 6 ವಿಷಯ ಅಪ್ಪಿತಪ್ಪಿಯೂ ಶೇರ್ ಮಾಡ್ಬೇಡಿ

Published : May 12, 2026, 06:48 PM IST

Office relationship management: ಆಫೀಸ್‌ನಲ್ಲಿ ಸಹೋದ್ಯೋಗಿಗಳ ಜೊತೆ ಮಾತನಾಡುವಾಗ ನಾವು ತುಂಬಾ ಜಾಗರೂಕರಾಗಿರಬೇಕು. ಯಾಕಂದ್ರೆ, ನಮ್ಮ ಬಾಯಿಂದ ಬರುವ ಒಂದು ಸಣ್ಣ ಮಾತು ಕೂಡ ನಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರಬಹುದು. 

PREV
16
ಬೇರೆ ಕಂಪನಿಗೆ ಹೋಗುವ ಪ್ಲಾನ್
ನೀವು ಬೇರೆ ಕಂಪನಿಗೆ ಸಂದರ್ಶನಕ್ಕೆ ಹೋಗುವುದನ್ನು ಅಥವಾ ಈ ಕೆಲಸ ಬಿಡುವ ಬಗ್ಗೆ ಸಹೋದ್ಯೋಗಿಗಳಿಗೆ ಎಂದಿಗೂ ಹೇಳಬೇಡಿ. ನಿಮ್ಮ ಕೈಗೆ 'ಆಫರ್ ಲೆಟರ್' ಸಿಗುವವರೆಗೂ ಇದನ್ನು ರಹಸ್ಯವಾಗಿಡಿ. ಇಲ್ಲದಿದ್ದರೆ, ಈ ಮಾಹಿತಿ ನಿಮ್ಮ ಮ್ಯಾನೇಜರ್ ಕಿವಿಗೆ ಬಿದ್ದು, ನೀವು ಪ್ರಸ್ತುತ ಅವಕಾಶಗಳನ್ನೂ ಕಳೆದುಕೊಳ್ಳಬಹುದು.
26
ಮೇಲಧಿಕಾರಿಯ ಬಗ್ಗೆ ವೈಯಕ್ತಿಕ ಟೀಕೆ
'ಬಾಸ್ ತುಂಬಾ ಸ್ಟ್ರಿಕ್ಟ್', 'ಅವರಿಗೆ ಏನೂ ಗೊತ್ತಿಲ್ಲ' ಎಂಬಂತಹ ಮಾತುಗಳು ಬೇಗ ಹರಡುತ್ತವೆ. ನೀವು ಒಮ್ಮೆ ತಮಾಷೆಗೆ ಹೇಳಿದ್ದು ಕೂಡ, ನಿಮ್ಮ ಮೇಲಧಿಕಾರಿಯ ಕಿವಿಗೆ ತಲುಪುವಾಗ 'ದೊಡ್ಡ ಆರೋಪ'ವಾಗಿ ಬದಲಾಗಬಹುದು. ಇದು ನಿಮ್ಮ ಬಡ್ತಿಗೆ ಅಡ್ಡಿಯಾಗಬಹುದು.
36
ಸಂಬಳ ಮತ್ತು ಬೋನಸ್ ವಿವರಗಳು

ಒಂದೇ ಅರ್ಹತೆ ಇರುವ ಇಬ್ಬರ ನಡುವೆಯೂ ಸಂಬಳದಲ್ಲಿ ವ್ಯತ್ಯಾಸವಿರಬಹುದು. ನಿಮ್ಮ ಸಂಬಳ ಹೆಚ್ಚು ಎಂದು ತಿಳಿದರೆ ಇತರರಿಗೆ ಅಸೂಯೆ ಬರಬಹುದು, ಕಡಿಮೆ ಎಂದು ತಿಳಿದರೆ ನಿಮಗೆ ಗೌರವ ಕಡಿಮೆಯಾಗಬಹುದು. ಸಂಬಳದ ಮಾತುಕತೆ ಯಾವಾಗಲೂ ನಿಮ್ಮ ಮತ್ತು HR ನಡುವೆ ಮಾತ್ರ ಇರಬೇಕು.     

46
ನಿಮ್ಮ ವೈದ್ಯಕೀಯ ದಾಖಲೆಗಳು (Medical History)
ನಿಮಗಿರುವ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಅಥವಾ ಮಾನಸಿಕ ಒತ್ತಡದ ವಿಷಯಗಳನ್ನು ಆಫೀಸ್‌ನಲ್ಲಿ ಹಂಚಿಕೊಳ್ಳಬೇಡಿ. ಇದು 'ಇವರಿಂದ ಈ ಕೆಲಸವನ್ನು ಸಮರ್ಥವಾಗಿ ಮಾಡಲು ಸಾಧ್ಯವಿಲ್ಲ' ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಬಹುದು. ರಜೆ ತೆಗೆದುಕೊಳ್ಳಲು ಬೇಕಾದ ಕಾರಣವನ್ನು ಮಾತ್ರ ಹೇಳಿದರೆ ಸಾಕು.
56
ಕುಟುಂಬದ ಜಗಳಗಳು ಮತ್ತು ವೈಯಕ್ತಿಕ ದೂರುಗಳು
ನಿನ್ನೆ ಮನೆಯಲ್ಲಿ ಗಂಡ/ಹೆಂಡತಿ ಜೊತೆ ನಡೆದ ಜಗಳವನ್ನು ಆಫೀಸ್‌ನಲ್ಲಿ ಕುಳಿತು ಚರ್ಚಿಸಬೇಡಿ. ನಿಮ್ಮ ವೈಯಕ್ತಿಕ ದುಃಖಗಳು ನಿಮ್ಮನ್ನು 'ದುರ್ಬಲ ವ್ಯಕ್ತಿ' ಎಂದು ತೋರಿಸಬಹುದು. ಕಚೇರಿಯಲ್ಲಿ ಯಾವಾಗಲೂ ನಿಮ್ಮ 'ವೃತ್ತಿಪರ' ಮುಖವನ್ನು ಮಾತ್ರ ತೋರಿಸಿ.
66
ರಾಜಕೀಯ ಮತ್ತು ಧಾರ್ಮಿಕ
ರಾಜಕೀಯ ಮತ್ತು ಧರ್ಮ ಸೂಕ್ಷ್ಮ ವಿಷಯಗಳು. ಒಂದು ಸಣ್ಣ ಚರ್ಚೆ ಕೂಡ ದೊಡ್ಡ ಸಂಘರ್ಷದಲ್ಲಿ ಕೊನೆಗೊಳ್ಳಬಹುದು. ನಿಮ್ಮ ಸಹೋದ್ಯೋಗಿಯ ನಂಬಿಕೆಗಳಿಗೆ ನಿಮಗೆ ತಿಳಿಯದಂತೆ ನೋವುಂಟು ಮಾಡಿದರೆ, ಅದು ನಿಮ್ಮ ತಂಡದ ಕೆಲಸದ ಮೇಲೆ ಪರಿಣಾಮ ಬೀರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories