ಜನನ ನಿಯಂತ್ರಣ ಮಾತ್ರೆ ಸೇವಿಸೋದ್ರಿಂದ ಕಾಮಾಸಕ್ತಿಯೇ ಕಡಿಮೆಯಾಗುತ್ತಾ?

First Published | Jan 19, 2024, 4:40 PM IST

ಗರ್ಭಧಾರಣೆಯನ್ನು ತಡೆಗಟ್ಟಲು ಅನೇಕ ಜನರು ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುತ್ತಾರೆ.  ಆದರೆ ಅತಿಯಾಗಿ ಈ ಜನನ ನಿಯಂತ್ರಣ ಮಾತ್ರೆ (Birth Control Tablets) ಸೇವಿಸೋದರಿಂದ ಲೈಂಗಿಕ ಆರೋಗ್ಯದ (Sexual Health) ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?
 

ಇಷ್ಟು ಬೇಗ ಮಕ್ಕಳು ಬೇಡ ಎಂದು ಬಯಸೋ ಹೆಚ್ಚಿನ ಮಹಿಳೆಯರು, ಅಥವಾ ಮಕ್ಕಳಾಗೋದನ್ನು ತಡೆಗಟ್ಟಲು ಹೆಚ್ಚಾಗಿ ಜನನ ನಿಯಂತ್ರಣ ಮಾತ್ರೆಗಳನ್ನು ಬಳಸುತ್ತಾರೆ. ಗರ್ಭಧಾರಣೆಯನ್ನು ತಡೆಗಟ್ಟುವಲ್ಲಿ ಜನನ ನಿಯಂತ್ರಣ ಮಾತ್ರೆಗಳು (birth control pills) ಪರಿಣಾಮಕಾರಿಯಾಗಿರೋದೇನೋ ನಿಜ, ಆದರೆ ಇವು ಮಹಿಳೆ ಮೇಲೆ ಕೆಲವು ರೀತಿಯಲ್ಲಿ ಪರಿಣಾಮ ಬೀರಬಹುದು ಅನ್ನೋದು ಗೊತ್ತಿದ್ಯಾ? ಗರ್ಭ ನಿರೋಧಕ ಮಾತ್ರೆಗಳ ಸೇವನೆಯಿಂದ ಮೂಡ್ ಸ್ವಿಂಗ್ (Mood Swing), ಆತಂಕ ಅಥವಾ ಖಿನ್ನತೆಯಂತಹ (Depression) ಸಮಸ್ಯೆಗಳು ಕಾಡಬಹುದು. ಅವು ಅವರ ಸೆಕ್ಸ್ ಡ್ರೈವ್ ಮೇಲೂ ಪರಿಣಾಮ ಬೀರಬಹುದು.

ಜನನ ನಿಯಂತ್ರಣ ಮಾತ್ರೆಗಳನ್ನು (Contraceptive Pills) ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜನನ ನಿಯಂತ್ರಣ ಮಾತ್ರೆಗಳನ್ನು ಬಳಸಿದ ನಂತರ ಮಹಿಳೆಯರಲ್ಲಿ ಕಾಮಾಸಕ್ತಿ (sex drive) ಅಥವಾ ಲೈಂಗಿಕ ಕಾರ್ಯದಲ್ಲಿ ಬದಲಾವಣೆಗಳಿದ್ದರೆ ತಕ್ಷಣ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಸೂಕ್ತ. 

Tap to resize

ಕೆಲವು ಮಹಿಳೆಯರಿಗೆ,  ಗರ್ಭನಿರೋಧಕಗಳು ಕಾಮಾಸಕ್ತಿ ಮೇಲೆ ಸಕಾರಾತ್ಮಕ ಪರಿಣಾಮ(positive effect) ಬೀರುವ ಚಾನ್ಸಸ್ ಕೂಡ ಇದೆ. ಅಲ್ಲದೇ ಇತರರಿಗೆ ಇದು ನಕಾರಾತ್ಮಕ ಪರಿಣಾಮ (Negative Impact) ಬೀರಬಹುದು.  ಈಗ ಜನನ ನಿಯಂತ್ರಣ ಮಾತ್ರೆಗಳು ನಿಮ್ಮ ಲೈಂಗಿಕ ಡ್ರೈವ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡುಹಿಡಿಯೋಣ. 

ಹೆಚ್ಚಿದ ಕಾಮಾಸಕ್ತಿ (high libido)
ಕೆಲವು ಮಹಿಳೆಯರಿಗೆ, ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕಾಮಾಸಕ್ತಿ ಹೆಚ್ಚಾಗುತ್ತದೆ. ಹಾರ್ಮೋನುಗಳ ಮಟ್ಟವನ್ನು ಸ್ಥಿರಗೊಳಿಸುವುದು, ಋತುಚಕ್ರದ ಲಕ್ಷಣಗಳು ಕಡಿಮೆಯಾಗುವುದು ಅಥವಾ ಸುಧಾರಿತ ಮನಸ್ಥಿತಿ ಇವೆಲ್ಲವೂ ಇದಕ್ಕೆ ಕಾರಣವಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. 

ಕಾಮಾಸಕ್ತಿ ಕಡಿಮೆಯಾಗುವುದು (Low Libido)
ಕೆಲವು ಮಹಿಳೆಯರಿಗೆ, ಈ ಜನನ ನಿಯಂತ್ರಣ ಮಾತ್ರೆಗಳು ಕಾಮಾಸಕ್ತಿಯನ್ನು ಕಡಿಮೆ ಮಾಡಬಹುದು. ಇದು ಗರ್ಭನಿರೋಧಕದಿಂದ ಪ್ರಚೋದಿಸಲ್ಪಟ್ಟ ಹಾರ್ಮೋನುಗಳ ಬದಲಾವಣೆಗಳೊಂದಿಗೆ ಸಂಬಂಧಿಸಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ. ಈ ಟೆಸ್ಟೋಸ್ಟೆರಾನ್ ಲೈಂಗಿಕ ಬಯಕೆಗೆ ಸಂಬಂಧಿಸಿದ ಹಾರ್ಮೋನ್ ಆಗಿದೆ.

ಕಾಮಾಸಕ್ತಿ ಕಡಿಮೆಯಾಗಲು ಇತರೆ ಕಾರಣ
ಕಾಮಾಸಕ್ತಿಯು ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಇದು ಬಹಳ ಅಪರೂಪದ ಸಂದರ್ಭಗಳಲ್ಲಿ ಗರ್ಭನಿರೋಧಕಗಳ ಸೇವನೆಯಿಂದ ಸಹ ಉಂಟಾಗುತ್ತದೆ. ಈಗ ಕಡಿಮೆ ಕಾಮಾಸಕ್ತಿಗೆ ಕಾರಣವಾಗುವ ಇತರ ಅಂಶಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ. 

ಹೆಚ್ಚಿದ ಒತ್ತಡ ಮತ್ತು ಆಯಾಸವು ಲೈಂಗಿಕ ಬಯಕೆಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಸಂಬಂಧದ ಹದಗೆಟ್ಟಿರೋದು, ಮಾತುಕತೆ ಇಲ್ಲದೇ ಇರೋದು, ಅಥವಾ ಸಂಘರ್ಷಗಳು ಲೈಂಗಿಕ ಬಯಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

ಖಿನ್ನತೆ (Depression), ಆತಂಕ ಅಥವಾ ಇತರ ಮಾನಸಿಕ ಆರೋಗ್ಯ ಸಮಸ್ಯೆಗಳು ಸಹ ಕಾಮಾಸಕ್ತಿ ಕಡಿಮೆಯಾಗಲು ಕಾರಣವಾಗಬಹುದು. 

ಜನನ ನಿಯಂತ್ರಣದ ಹೊರತಾಗಿ, ಗರ್ಭಧಾರಣೆ, ಸ್ತನ್ಯಪಾನ (breast feeding) ಅಥವಾ ಋತುಬಂಧದಂತಹ ಅಂಶಗಳು ಹಾರ್ಮೋನುಗಳಲ್ಲಿ ಏರಿಳಿತಗಳಿಗೆ ಕಾರಣವಾಗಬಹುದು ಮತ್ತು ಕಾಮಾಸಕ್ತಿಯನ್ನು ಕಡಿಮೆ ಮಾಡಬಹುದು. 

ಕಳಪೆ ಆಹಾರ (Low Quality Food),  ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ (Unhealthy LIfestyle) ಅಭ್ಯಾಸಗಳು ಒಟ್ಟಾರೆ ಯೋಗಕ್ಷೇಮದಲ್ಲಿ ಇಳಿಕೆಗೆ ಕಾರಣವಾಗಬಹುದು. ಇದು ಲೈಂಗಿಕ ಬಯಕೆಗಳ ಮೇಲೆ ಪರಿಣಾಮ ಬೀರುತ್ತದೆ.
 

ಹಾರ್ಮೋನುಗಳ ಅಸಮತೋಲನ (Hormonal imbalance), ಥೈರಾಯ್ಡ್ (Thyroid) ಅಸ್ವಸ್ಥತೆಗಳು ಅಥವಾ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಂತಹ ರೋಗಗಳು ಕಾಮಾಸಕ್ತಿಯ ಮೇಲೆ ಪರಿಣಾಮ ಬೀರಬಹುದು.

ಕಾಮಾಸಕ್ತಿ ಸಾಮಾನ್ಯವಾಗಿ ವಯಸ್ಸಾದಂತೆ ಕಡಿಮೆಯಾಗುತ್ತದೆ. ಹಾರ್ಮೋನುಗಳ ಬದಲಾವಣೆಗಳು ಮತ್ತು ಜೀವನದ ಪರಿವರ್ತನೆಗಳಂತಹ ಅಂಶಗಳು ಲೈಂಗಿಕ ಬಯಕೆಗಳ ಮೇಲೆ ಪರಿಣಾಮ ಬೀರಬಹುದು.

Latest Videos

click me!