ಲೈಂಗಿಕ ಬಯಕೆ ಹೆಚ್ಚಿಸೋಕೆ ಕೆಂಪಾಗಿರೋ ಈ ಒಂದು ಹಣ್ಣನ್ನು ತಿಂದ್ರೆ ಸಾಕು

First Published | Feb 22, 2024, 5:01 PM IST

ದಾಂಪತ್ಯ ಜೀವನ ಚೆನ್ನಾಗಿರಲು ಲೈಂಗಿಕ ಜೀವನ ಸಹ ಉತ್ತಮವಾಗಿರುವುದು ಮುಖ್ಯ. ಆದರೆ, ಇತ್ತೀಚಿಗೆ ದಂಪತಿಗಳಲ್ಲಿ ಲೈಂಗಿಕ ಬಯಕೆ ಕಡಿಮೆಯಾಗುತ್ತಿದೆ. ಆದರೆ ಈ ಸಮಸ್ಯೆಯನ್ನು ಕೇವಲ ಒಂದು ಹಣ್ಣಿನಿಂದ ಸುಲಭವಾಗಿ ಸರಿಪಡಿಸಬಹುದು ಅನ್ನೋದು ನಿಮ್ಗೆ ಗೊತ್ತಿದ್ಯಾ? 

ಬಿಝಿ ಲೈಫ್, ಕೆಲಸದ ಒತ್ತಡದಿಂದ ಜನರಿಗೆ ದಾಂಪತ್ಯ ಜೀವನದಲ್ಲಿ ಹೆಚ್ಚು ಸಮಯ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಎಷ್ಟೋ ಜನರ ವೈವಾಹಿಕ ಜೀವನ ಹಾಳಾಗುತ್ತಿದೆ. ದಾಂಪತ್ಯ ಜೀವನ ಚೆನ್ನಾಗಿರಲು ಲೈಂಗಿಕ ಜೀವನ ಸಹ ಉತ್ತಮವಾಗಿರುವುದು ಮುಖ್ಯ. 

ಗಂಡ-ಹೆಂಡತಿ ಪರಸ್ಪರ ಇಬ್ಬರ ಬಗ್ಗೆ ಸರಿಯಾಗಿ ಗಮನಹರಿಸದಿದ್ದಾಗ ಲೈಂಗಿಕ ಜೀವನದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮುಖ್ಯವಾಗಿ, ದಂಪತಿಗಳಲ್ಲಿ ಲೈಂಗಿಕ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಆದರೆ ಈ ಸಮಸ್ಯೆಯನ್ನು ಕೇವಲ ಒಂದು ಹಣ್ಣಿನಿಂದ ಸುಲಭವಾಗಿ ಸರಿಪಡಿಸಬಹುದು ಅನ್ನೋದು ನಿಮ್ಗೊತ್ತಾ? 

Tap to resize

ಅದುವೇ ಸ್ಟ್ರಾಬೆರಿ. ಲೈಂಗಿಕ ಜೀವನದಲ್ಲಿ ಸ್ಟ್ರಾಬೆರಿ ಬಹಳ ಮುಖ್ಯ. ಈ ಒಂದು ಹಣ್ಣಿನಿಂದ ಲೈಂಗಿಕ ಜೀವನ ಅದ್ಭುತವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಮುಖ್ಯವಾಗಿ, ಕಾಮೋತ್ತೇಜಕ ಹಣ್ಣುಗಳ ಪಟ್ಟಿಯಲ್ಲಿ ಸ್ಟ್ರಾಬೆರಿ ಅಗ್ರಸ್ಥಾನದಲ್ಲಿದೆ.

ಪುರುಷರು ಮತ್ತು ಮಹಿಳೆಯರ ಲೈಂಗಿಕ ಆರೋಗ್ಯವನ್ನು ರಕ್ಷಿಸುವಲ್ಲಿ ಸ್ಟ್ರಾಬೆರಿ ಪಾತ್ರವು ಬಹಳ ಮುಖ್ಯವಾಗಿದೆ. ಅಲ್ಲದೆ, ಸ್ಟ್ರಾಬೆರಿಗಳು ಲೈಂಗಿಕ ಸಮಯದಲ್ಲಿ ಆನಂದವನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ. 

ಸ್ಟ್ರಾಬೆರಿಯಲ್ಲಿ ವಿಟಮಿನ್ ಸಿ ಅಧಿಕವಾಗಿರುವುದರಿಂದ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸಿ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಆಗಾಗ ಸ್ಟ್ರಾಬೆರಿಗಳನ್ನು ತಿನ್ನೋದ್ರಿಂದ ಲೈಂಗಿಕ ಜೀವನ ಸೂಪರ್ಬ್‌ ಆಗಿರುತ್ತದೆ.

ಸ್ಟ್ರಾಬೆರಿಯಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ನಿಯಂತ್ರಿಸುತ್ತದೆ. ಇದು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದೆ.
 

ಇದರಲ್ಲಿರುವ ಸತು ಮತ್ತು ಖನಿಜಗಳು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಳ್ಳೆಯದು. ಮಾತ್ರವಲ್ಲ, ಇದು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಸೆಕ್ಸ್‌ಗೂ ಮುನ್ನ ಈ ಹಣ್ಣನ್ನು ಸೇವಿಸಿ ಎನ್ನುತ್ತಾರೆ ತಜ್ಞರು.

Image: Getty

ಅಂತೆಯೇ, ಸ್ಟ್ರಾಬೆರಿಗಳು ಬೀಟಾ-ಕ್ಯಾರೋಟಿನ್, ಆಂಥೋಸಯಾನಿನ್, ವಿಟಮಿನ್ ಸಿ ಮತ್ತು ಫೋಲಿಕ್ ಆಮ್ಲದಂತಹ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.

ಇವು ಮಾನವನ ದೇಹಕ್ಕೆ, ಸರಿಯಾದ ರಕ್ತ ಸಂಚಾರಕ್ಕೆ ತುಂಬಾ ಉಪಯುಕ್ತವಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಸ್ನಾಯುಗಳ ಬಿಗಿತದ ಜೊತೆಗೆ ಫಲವತ್ತತೆಗೆ ಸ್ಟ್ರಾಬೆರಿ ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.

Latest Videos

click me!