ಅಂಬಾನಿ ಮಗನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ವಿಶ್ವದ ಕೋಟ್ಯಧಿಪತಿಗಳು!

First Published | Feb 22, 2024, 3:49 PM IST

Pre Wedding Gala Of Anant Ambani- Radhika Merchant ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವದ ಸಂಭ್ರಮಗಳು ಆರಂಭವಾಗಿದೆ. ಜಾಮ್‌ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ವಿಶ್ವದ ಕೋಟ್ಯಧಿಪತಿಗಳು ದಂಡು ಆಗಮಿಸುವ ನಿರೀಕ್ಷೆಯಿದೆ.

ಅನಂತ್‌ ಅಂಬಾನಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಚೇರ್ಮನ್‌ ಹಾಗೂ ಎಂಡಿ ಮುಖೇಶ್‌ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಕಿರಿಯ ಮಗ ಈ ವರ್ಷ ರಾಧಿಕಾ ಮರ್ಚೆಂಟ್‌ ಅವರನ್ನು ವಿವಾಹವಾಗಲಿದ್ದಾರೆ. ಅದ್ಧೂರಿ ಸಮಾರಂಭಕ್ಕೂ ಮುನ್ನ, ಮೂರು ದಿನಗಳ ಪೂರ್ವ ವಿವಾಹ ಕಾರ್ಯಕ್ರಮಗಳು ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿವೆ. ಮಾರ್ಚ್ 1 ರಿಂದ ಈ ಆಚರಣೆ ಆರಂಭವಾಗಲಿದೆ.

ಕುಟುಂಬಗಳು ಫೆಬ್ರವರಿ 16 ರಂದು ಜಾಮ್‌ನಗರದಲ್ಲಿ ಲಗಾನ್ ಲಖ್ವಾನು ಆಚರಣೆಯನ್ನು ಮಾಡಿದ್ದವು. ಹೊಸ ವರದಿಯ ಪ್ರಕಾರ, ಜಾಮ್‌ ನಗರದ ಕಾರ್ಯಕ್ರಮಕ್ಕೆ ವಿಶ್ವದ ಪ್ರಮುಖ ಕೋಟ್ಯಧಿಪತಿಗಳು ಆಗಮಿಸುವ ನಿರೀಕ್ಷೆ ಇದೆ.

Tap to resize

ಜಾಮ್‌ನಗರದಲ್ಲಿ ನಡೆಯಲಿರುವ ಸಮಾರಂಭಕ್ಕೆ ಆಗಮಿಲಿರುವ ವಿಶ್ವದ ಎಲೈಟ್‌ ಉದ್ಯಮಿಗಳ ಲಿಸ್ಟ್‌ ಇಲ್ಲಿದೆ. ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್‌ ಗೇಮ್ಸ್‌, ಮೆಟಾ ಸಿಇಒ ಮಾರ್ಕ್‌ ಜುಕರ್‌ಬರ್ಗ್‌, ಡಿಸ್ನಿ ಸಿಇಒ ಬಾಬ್‌ ಐಗೆರ್‌ ಆಗಮಿಸುವ ಸಾಧ್ಯತೆ ಇದೆ.

ಮೈಕ್ರೋಸಾಫ್ಟ್‌ನ ಮಾಜಿ ಸಿಇಒ ಹಾಗೂ ಸಂಸ್ಥಾಪಕ ಬಿಲ್‌ ಗೇಟ್ಸ್‌ ಬರುವ ಸಾಧ್ಯತೆ ಇದೆ. ಈ ಕುರಿತಾಗಿ ಬಿಲ್‌ ಗೇಟ್ಸ್‌ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, 'ಈ ತಿಂಗಳ ಕೊನೆಯಲ್ಲಿ ನಾನು ಭಾರತಕ್ಕೆ ಭೇಟಿ ನೀಡುತ್ತಿರುವ ಹಂತದಲ್ಲಿ ನನ್ನ ತಂದೆಯನ್ನು ನೆನಪಿಸಿಕೊಳ್ಳುತ್ತೇನೆ. 2008ರಲ್ಲಿ ಭಾರತಕ್ಕೆ ಮಾಡಿದ ಈ ಟ್ರಿಪ್‌ನಲ್ಲಿ ಸಾಕಷ್ಟು ಶ್ರೇಷ್ಠ ಸಮಯ ಕಳೆದಿದ್ದೆವು' ಎಂದು ಬರೆದುಕೊಂಡಿದ್ದಾರೆ.

ಇನ್ನು ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾದ ಸಿಇಒ ಆಗಿರುವ ಮಾರ್ಕ್‌ ಜುಕರ್‌ಬರ್ಗ್‌ ಅವರಿಗೂ ವಿವಾಹ ಸಮಾರಂಭಕ್ಕೆ ಬರುವಂತೆ ಅಂಬಾನಿ ಕುಟುಂಬದಿಂದ ಆಹ್ವಾನ ಹೋಗಿದೆ.
 

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಹಾಗೂ ಅಮೆರಿಕ ಅಧ್ಯಕ್ಷರ ಮಾಜಿ ಸಲಹೆಗಾರ್ತಿಯಾಗಿರುವ ಇವಾಂಕಾ ಟ್ರಂಪ್‌ಗೆ ಕೂಡ ಕಾರ್ಯಕ್ರಮದ ಆಹ್ವಾನ ನೀಡಲಾಗಿದೆ.

ಕತಾರ್‌ ಪ್ರಧಾನಿ ಆಗಿರುವ ಮೊಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಬಿನ್ ಜಸ್ಸಿಮ್ ಅಲ್ ಥಾನಿ (Mohammed bin Abdulrahman bin Jassim Al Thani) ಅವರಿಗೂ ಕಾರ್ಯಕ್ರಮ ಆಹ್ವಾನವನ್ನು ಅಂಬಾನಿ ಕುಟುಂಬ ನೀಡಿದೆ
 

ಅಡೋಬ್‌ (Adobe) ಕಂಪನಿ ಚೇರ್ಮನ್‌, ಅಧ್ಯಕ್ಷ ಮತ್ತು ಸಿಇಒ ಆಗಿರುವ ಭಾರತೀಯ ಮೂಲದ ಶಾಂತನು ನಾರಾಯಣ್ (Shantanu Narayen) ಅವರು ಮುಕೇಶ್ ಅಂಬಾನಿ ಅವರ ಪುತ್ರನ ವಿವಾಹಪೂರ್ವ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
 

ಸ್ವೀಡನ್‌ನ ಮಾಜಿ ಪ್ರಧಾನಿ ಕಾರ್ಲ್ ಬಿಲ್ಡ್ಟ್ (Carl Bildt) ಅವರಿಗೂ ಜಾಮ್‌ ನಗರದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಕೆನಡಾದ ಮಾಜಿ ಪ್ರಧಾನ ಮಂತ್ರಿ ಸ್ಟೀಫನ್ ಹಾರ್ಪರ್ (Stephen Harper) ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಮತ್ತೊಬ್ಬ ವ್ಯಕ್ತಿ.
 

ಭೂತಾನ್‌ ದೇಶದ  ರಾಜ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್ (King Jigme Khesar Namgyel Wangchuck) ಮತ್ತು ಅವರ ರಾಣಿ ಜೆಟ್ಸನ್ ಪೆಮಾ (Queen Jetsun Pema) ಅವರು ಜಾಮ್‌ನಗರದಲ್ಲಿ ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಇರಲಿದ್ದಾರೆ.

 ದಿ ವಾಲ್ಟ್ ಡಿಸ್ನಿ ಕಂಪನಿಯ ಸಿಇಒ ಬಾಬ್ ಇಗರ್ (Bob Iger) ಕೂಡ ಗುಜರಾತ್‌ನ ಜಾಮ್‌ನಗರದಲ್ಲಿ ವಿವಾಹ ಪೂರ್ವ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇದಕ್ಕೂ ಮೊದಲು 2011 ರಲ್ಲಿ, ರೋನಿ ಸ್ಕ್ರೂವಾಲಾ ಅವರೊಂದಿಗೆ ವ್ಯಾಪಾರ ಒಪ್ಪಂದಕ್ಕಾಗಿ ಇಗರ್ ಭಾರತಕ್ಕೆ ಭೇಟಿ ನೀಡಿದ್ದರು.

ಇವರಲ್ಲದೆ, ಬ್ಲ್ಯಾಕ್‌ರಾಕ್ ಸಿಇಒ ಲ್ಯಾರಿ ಫಿಂಕ್ (Larry Fink), ಬ್ಲಾಕ್‌ಸ್ಟೋನ್ ಅಧ್ಯಕ್ಷ ಸ್ಟೀಫನ್ ಶ್ವಾರ್ಜ್‌ಮನ್ (Stephen Schwarzman), ಮೋರ್ಗಾನ್ ಸ್ಟಾನ್ಲಿ ಸಿಇಒ ಟೆಡ್ ಪಿಕ್ (Ted Pick), ಬ್ಯಾಂಕ್ ಆಫ್ ಅಮೇರಿಕಾ ಅಧ್ಯಕ್ಷ ಬ್ರಿಯಾನ್ ಥಾಮಸ್ ಮೊಯ್ನಿಹಾನ್ (Brian Thomas Moynihan), ಅಡ್ನಾಕ್ ಸಿಇಒ ಸುಲ್ತಾನ್ ಅಹ್ಮದ್ ಅಲ್ ಜಾಬರ್ (Sultan Ahmed Al Jaber), ಇಎಲ್ ರಾಥ್‌ಸ್ಚೈಲ್ಡ್ ಅಧ್ಯಕ್ಷ ಲಿನ್ ಫಾರೆಸ್ಟರ್ ಡಿ ರಾತ್‌ಸ್ಚೈಲ್ಡ್ (Lynn Forester de Rothschild), ಟೆಕ್ ಹೂಡಿಕೆದಾರ ಯೂರಿ ಮಿಲ್ನರ್ (Yuri Milner) ಕೂಡ ಹಾಜರಿರುವ ಸಾಧ್ಯತೆ ಇದೆ.

Latest Videos

click me!