ಡಾಕ್ಟರ್​ ಪತಿಯನ್ನು ತಾಳಕ್ಕೆ ತಕ್ಕಂತೆ ಕುಣಿಸಿದ ಗಂಧದ ಗುಡಿ ನಟಿ ಸಂಜನಾ ಬುರ್ಲಿ: ಕ್ಯೂಟ್​ ವಿಡಿಯೋ ವೈರಲ್​

Published : May 22, 2026, 11:40 AM IST

ಪುಟ್ಟಕ್ಕನ ಮಕ್ಕಳು ಖ್ಯಾತಿಯ ನಟಿ ಸಂಜನಾ ಬುರ್ಲಿ, ವೈದ್ಯರಾದ ಸಮರ್ಥ ಚೆನ್ನಗಿರಿ ಅವರನ್ನು ವಿವಾಹವಾಗಿದ್ದಾರೆ. ಮದುವೆಗಾಗಿ ಧಾರಾವಾಹಿಯಿಂದ ಹೊರಬಂದಿದ್ದ ಅವರು, ಇದೀಗ ಆಫ್ರಿಕಾದ ತಾಂಜೇನಿಯಾ ಬಳಿಯ ವಿಶೇಷವಾದ ಮ್ನೆಂಬಾ ದ್ವೀಪದಲ್ಲಿ ಹನಿಮೂನ್ ಆಚರಿಸಿಕೊಂಡಿದ್ದಾರೆ.

PREV
15
ಸಂಜನಾ ಬುರ್ಲಿ ಮದುವೆ

ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿ ಇದೀಗ ದಾಂಪತ್ಯ ಜೀವನ ಎಂಜಾಯ್‌ ಮಾಡುತ್ತಿದ್ದಾರೆ. ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗಿದ್ದಾರೆ. ಮದುವೆಗಾಗಿ ಸೀರಿಯಲ್​ನಿಂದ ಹೊರಕ್ಕೆ ಬಂದಿರೋ ನಟಿ ಇದೀಗ ಹನಿಮೂನ್‌ಗೆ ಹೋಗಿ ಅದರ ವಿಡಿಯೋ ಅನ್ನೂ ಶೇರ್​ ಮಾಡಿದ್ದರು ನಟಿ.

25
ನೀರ ಬಿಟ್ಟು ನೆಲದ ಮೇಲೆ

ಇದೀಗ ಮದುವೆಯ ವಿಡಿಯೋ ಒಂದನ್ನು ನಟಿ ಶೇರ್​ ಮಾಡಿದ್ದಾರೆ. ಡಾಕ್ಟರ್​ ಡಾನ್ಸ್​ ಮಾಡಿದಾಗ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಸಂಜನಾ ಅವರು ರೀಲ್ಸ್​ ಮಾಡುವಲ್ಲಿ ಫೇಮಸ್​. ಇದೀಗ ಪತಿಯನ್ನೂ ಅವರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ. ಮದುವೆಯ ಸಂದರ್ಭದಲ್ಲಿ ನಡೆದ ಈ ವಿಡಿಯೋ ಅನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ನೀರ ಬಿಟ್ಟು ನೆಲದ ಮೇಲೆ… ಹಾಡಿಗೆ ಸ್ಟೆಪ್​ ಹಾಕಿದೆ ಜೋಡಿ. ನಾಚುತ್ತಲೇ ಸಂಜನಾ ಪತಿ ಡಾನ್ಸ್​ ಮಾಡಿದ್ದು, ಅದರ ವಿಡಿಯೋ ವೈರಲ್​ ಆಗಿದೆ. ಇದಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

35
ಗುಟ್ಟಾಗಿ ಇಟ್ಟಿದ್ದ ಜಾಗ

ಇನ್ನು ಇವರ ಹನಿಮೂನ್​ ಗುಟ್ಟು ಹೇಳುವುದಾದರೆ, ಏಷ್ಯಾನೆಟ್‌ ಸುವರ್ಣ ಜೊತೆಗಿನ ಸಂದರ್ಶನದ ವೇಳೆ ಹನಿಮೂನ್‌ ಸ್ಥಳದ ಬಗ್ಗೆ ಪತಿ ಕೇಳಲು ಹೋದಾಗ, ಅಡ್ಡ ತಡೆದಿದ್ದ ಸಂಜನಾ, ಈಗಲೇ ರಿವೀಲ್‌ ಮಾಡಬೇಡಿ ಎಂದಿದ್ದರು. ಅಲ್ಲಿಗೆ ತಾವು ಎಲ್ಲಿಗೆ ಹೋಗುತ್ತೇವೆ ಎಂದು ಅವರು ಗುಟ್ಟಾಗಿ ಇಟ್ಟಿದ್ದರು. ಇದರಿಂದ ಅದೊಂದು ವಿಶೇಷ ಸ್ಥಳ ಎಂದು ಅವರ ಅಭಿಮಾನಿಗಳು ಅಂದುಕೊಂಡಿದ್ದು, ಅದು ನಿಜವಾಗಿತ್ತು.

45
ಹವಳದ ದ್ವೀಪ

ಅಷ್ಟಕ್ಕೂ ಈ ಜೋಡಿ ಹನಿಮೂನ್‌ಗೆ ಹೋಗಿರುವುದು ಆಫ್ರಿಕಾದ ತಾಂಜೇನಿಯಾ ಬಳಿ ಇರುವ ಮ್ನೆಂಬಾ ದ್ವೀಪಕ್ಕೆ. (Tanzania Mnemba) ಅದರ ಫೋಟೋಗಳನ್ನು ನಟಿ ಶೇರ್‌ ಮಾಡಿಕೊಂಡಿದ್ದಾರೆ. ಸ್ಫಟಿಕದಂತೆ ಹೊಳೆಯುವ ಬಿಳಿ ಮರಳು ಮತ್ತು ತಿಳಿ ನೀರು ಬಣ್ಣದ ಸಮುದ್ರದ ನೀರಿಗೆ ಹೆಸರುವಾಸಿಯಾಗಿದೆ ಈ ದ್ವೀಪ. ಈ ದ್ವೀಪದ ವಿಶೇಷತೆ ಏನೆಂದ್ರೆ, ಇಲ್ಲಿ ಇದು ಸಂರಕ್ಷಿತ ಪ್ರದೇಶವಾಗಿದ್ದು, ಹವಳದ ಬಂಡೆಗಳಿವೆ. ಸ್ಕೂಬಾ ಡೈವಿಂಗ್‌ಗೆ ವಿಶ್ವದ ಅತ್ಯುತ್ತಮ ತಾಣಗಳಲ್ಲಿ ಒಂದು ಎಂದು ಇದನ್ನು ಬಣ್ಣಿಸಲಾಗಿದೆ. ಇಲ್ಲಿಯ ವಾಸ ಸಕತ್‌ ದುಬಾರಿ ಎನ್ನಲಾಗಿದೆ.

55
ಯಾರು ಸಂಜನಾ ಪತಿ?

ಇನ್ನು ಸಂಜನಾ ಅವರ ಪತಿ ಕುರಿತು ಹೇಳುವುದಾದರೆ, ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories