Puttakkana Makkalu ನಟಿ ಸಂಜನಾ ಬುರ್ಲಿ ಮದುವೆ ಸಂಭ್ರಮ: ರಿಸೆಪ್ಷನ್​ ಫೋಟೋಸ್​ ಇಲ್ಲಿವೆ

Published : Mar 25, 2026, 12:54 PM IST

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಖ್ಯಾತಿಯ ನಟಿ ಸಂಜನಾ ಬುರ್ಲಿ ಅವರು ವೈದ್ಯರಾದ ಸಮರ್ಥ ಚೆನ್ನಗಿರಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮದುವೆಗಾಗಿ ಧಾರಾವಾಹಿಗಳಿಂದ ಹೊರಬಂದಿದ್ದ ನಟಿಯ, ವಿವಾಹ ಆರತಕ್ಷತೆ ಕಾರ್ಯಕ್ರಮದ ಫೋಟೋಗಳು ಇದೀಗ ವೈರಲ್ ಆಗಿವೆ.

PREV
16
ಪುಟ್ಟಕ್ಕನ ಮಕ್ಕಳು ಸ್ನೇಹಾ ಮದುವೆ ಸಂಭ್ರಮ

ನಟಿ ಸಂಜನಾ ಬುರ್ಲಿ ಅರ್ಥಾತ್​ ಪುಟ್ಟಕ್ಕನ ಮಕ್ಕಳು ಖ್ಯಾತಿಯ ಡಿಸಿ ಮೇಡಂ ಸ್ನೇಹಾ, ಹಾಗೂ ಗಂಧದ ಗುಡಿ (Gandhada Gudi) ಸೀರಿಯಲ್​ ಚಂದನಾ ಆಗಿ ಮಿಂಚಿದ್ದ ನಟಿಗೆ ಇದೀಗ ಮದುವೆಯ ಸಂಭ್ರಮ. ಮದುವೆಗಾಗಿ ಸೀರಿಯಲ್​ನಿಂದ ಹೊರಕ್ಕೆ ಬಂದಿರೋ ನಟಿಯ ಮನೆಯಲ್ಲಿ ರಿಸೆಪ್ಷನ್​ ಗ್ರ್ಯಾಂಡ್​ ಆಗಿ ನಡೆಯುತ್ತಿದ್ದು, ಅದರ ಫೋಟೋಗಳೂ ವೈರಲ್​ ಆಗಿವೆ.

26
ಚೆನ್ನಗಿರಿಯ ವರ

ಸಮರ್ಥ ಚೆನ್ನಗಿರಿ ಎಂಬುವವರ ಜೊತೆ ಸಂಜನಾ ಬುರ್ಲಿ ಮದುವೆ ಆಗುತ್ತಿದ್ದಾರೆ. ಮದುವೆಗೂ ಮುನ್ನ ವಿವಾಹ ಆರತಕ್ಷತೆ ಕಾರ್ಯಕ್ರಮ ನೆರವೇರಿದ್ದು, ಅವುಗಳ ಫೋಟೋಗಳನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ. ಪುಟ್ಟಕ್ಕನ ಮಕ್ಕಳು ಸೀರಿಯಲ್​ ತಂಡ ಸೇರಿದಂತೆ ಹಲವರು ಬಂದು ನಟಿಗೆ ಆಶೀರ್ವದಿಸುತ್ತಿದ್ದಾರೆ.

36
ವೈದ್ಯರನ್ನು ವರಿಸಿದ ಸಂಜನಾ

ಸಂಜನಾ ಅವರ ಭಾವಿ ಪತಿ ಸಮರ್ಥ ಚನ್ನಗಿರಿ ಮೂಲತಃ ದಾವಣಗೆರೆಯವರಾಗಿದ್ದು, ವೃತ್ತಿಯಲ್ಲಿ ವೈದ್ಯರು. ಸಮರ್ಥ ಅವರು ಎಂಬಿಬಿಎಸ್ ಪೂರೈಸಿದ್ದು, ಇಂಟರ್ನಲ್ ಮೆಡಿಸಿನ್‌ನಲ್ಲಿ ಎಂಡಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಸಮರ್ಥ ಚನ್ನಗಿರಿ ಅವರು ಸದ್ಯ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

46
ನಟಿಯ ಕುರಿತು

ಇನ್ನು ಸಂಜನಾ ಕುರಿತು ಹೇಳುವುದಾದರೆ, ಇವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಬೆಂಗಳೂರಿನ ಡಾ. ಅಂಬೇಡ್ಕರ್​ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿಯಲ್ಲಿ ವಿಧ್ಯಾಭ್ಯಾಸ ಮುಗಿಸಿರುವ ಇವರು `ವಿಕೇಂಡ್' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

56
ಸೀರಿಯಲ್​ನಿಂದ ಹೊರಕ್ಕೆ

ಮುಂದಿನ ವಿದ್ಯಾಭ್ಯಾಸಕ್ಕೆ, ಉನ್ನತ ಶಿಕ್ಷಣ ಪಡೆಯುವ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ದೂರ ಆಗ್ತಿರೋದಾಗಿ ನಟಿ ಹೇಳಿದ್ದರು. ಅವರು ಹೊರಕ್ಕೆ ಬರುವುದು ತಿಳಿದ ಕಾರಣ ಸ್ನೇಹಾ ಪಾತ್ರವನ್ನೇ ಸಾಯಿಸಲಾಗಿತ್ತು. ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿತ್ತು.

66
ಗಂಧದ ಗುಡಿಯಿಂದಲೂ ಔಟ್​

ಸೀರಿಯಲ್ ನಿಂದ ಹೊರ ಬಂದ ಮೇಲೆ ನಟಿ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ರು. ಕೆಲವು ದಿನಗಳ ಹಿಂದೆ ದುಬೈನಲ್ಲಿ ಎಂಜಾಯ್ ಮಾಡ್ತಿದ್ರು, ಕೊನೆಗೆ ಹಿಮಾಲಯ ಪರ್ವತ ಟ್ರೆಕ್ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಗಂಧದ ಗುಡಿ ಸೀರಿಯಲ್​ನಲ್ಲಿ ಕಾಣಿಸಿಕೊಂಡರು. ಆದರೆ ಕೆಲವೇ ಎಪಿಸೋಡ್​ಗಳ ಬಳಿಕ ಈ ಸೀರಿಯಲ್​ನಿಂದಲೂ ಹೊರಕ್ಕೆ ಬಂದು ಮದುವೆಯ ಬಗ್ಗೆ ಘೋಷಣೆ ಮಾಡಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories