ದಯವಿಟ್ಟು ಕಾಪಾಡಿ: ಮದ್ವೆಯಾದ ವಾರದಲ್ಲೇ ಲೈವ್​ಗೆ ಬಂದು ಕುಂಭಮೇಳ ಮೊನಾಲಿಸಾ ಕಣ್ಣೀರು- ಆಗಿದ್ದೇನು?

Published : Mar 21, 2026, 12:13 PM IST

ಕುಂಭಮೇಳದಲ್ಲಿ 'ರುದ್ರಾಕ್ಷಿ ಲೇಡಿ' ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು 'ಲವ್ ಜಿಹಾದ್' ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ.

PREV
16
ರುದ್ರಾಕ್ಷಿ ಲೇಡಿ ಹಲ್​ಚಲ್​

ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಕಣ್ಣುಗಳಿಂದಲೇ ವೈರಲ್​ ಆಗಿ ಇಡೀ ದೇಶದಲ್ಲಿ ಹಲ್​ಚಲ್​ ಸೃಷ್ಟಿಸಿದ್ದ ಮೊನಾಲಿಸಾ (Kumbhamala Monalisa) ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿರೋ ಮೋನಿ ಬಗ್ಗೆ ಇದಾಗಲೇ ವಾದ-ಪ್ರತಿವಾದ-ವಿವಾದ ಎಲ್ಲವೂ ಶುರುವಾಗಿಬಿಟ್ಟಿದೆ.

26
ಮದ್ವೆಗೆ ಒತ್ತಾಯಿಸಿದ್ದೇ ಇವಳು

ಫರ್ಮಾನ್​ ಖಾನ್​ ಎನ್ನುವ ನಟನನ್ನು ಪ್ರೀತಿಸಿ ಮದುವೆಯಾಗಿರುವ ಮೊನಾಲಿಸಾದ್ದು ಲವ್​ ಜಿಹಾದ್ ಎಂದು ಬಹುದೊಡ್ಡ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದಾಗಲೇ ಈ ದಂಪತಿ ಈ ಬಗ್ಗೆ ಸ್ಪಷ್ಟಪಡಿಸಿದ್ದೂ ಆಗಿದೆ. ಮೊನಾಲಿಸಾ ತಾನೇ ಖುದ್ದಾಗಿ ಲವ್​ ಮಾಡಿ, ಮದುವೆಗೆ ಒತ್ತಾಯಿಸಿದ್ದು, ಇದರಲ್ಲಿ ತಮ್ಮ ಪತಿಯ ತಪ್ಪಿಲ್ಲ ಎಂದಿದ್ದಾರೆ.

46
ಪ್ಲೀಸ್​ ಕಾಪಾಡಿ ಎಂದ ಜೋಡಿ

ಇದೀಗ ಮದುವೆಯಾದ ವಾರದಲ್ಲಿಯೇ ಜೋಡಿ ಲೈವ್​ಗೆ ಬಂದಿದೆ. ಮೊನಾಲಿಸಾ ಜೀವ ರಕ್ಷಣೆ ಕೋರಿದ್ದಾರೆ. ನಮ್ಮನ್ನು ಕಾಪಾಡಿ. ಸಾರ್ವಜನಿಕರಿಂದ ನಮಗೆ ಜೀವ ಭಯ ಉಂಟಾಗಿದೆ. ಸೋಷಿಯಲ್​ ಮೀಡಿಯಾಗಳಲ್ಲಿ, ಮೊಬೈಲ್​ ಮೂಲಕ ನಮ್ಮನ್ನು ಸಾ*ಯಿಸುವುದಾಗಿ, ಕ*ತ್ತರಿಸುವುದಾಗಿ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಬಗ್ಗೆ ಪೊಲೀಸರು, ಮಾಧ್ಯದವರ ಗಮನಕ್ಕೆ ತಂದಿದ್ದೇವೆ. ದಯವಿಟ್ಟು ನಮ್ಮನ್ನು ಕಾಪಾಡಿ ಎಂದು ಕೋರಿಕೊಂಡಿದ್ದಾರೆ ಮೊನಾಲಿಸಾ.

56
ಅಪ್ಪ ಹೇಳ್ತಿರೋದೇ ಬೇರೆ

ಆದರೆ, ಇವೆಲ್ಲವುಗಳ ನಡುವೆಯೇ, ಮೊನಾಲಿಸಾ ಅಪ್ಪ ಜೈ ಸಿಂಗ್​ ಭೋಸ್ಲೆ ಹೇಳ್ತಿರೋದೇ ಬೇರೆ. ನನ್ನ ಮಗಳಿಗೆ ಬ್ರೈನ್​ವಾಷ್​ ಮಾಡಲಾಗಿದೆ. ಏನೇನೋ ಮಾತನಾಡುತ್ತಾಳೆ. ಕೆಲವು ತಿಂಗಳ ಹಿಂದೆ ಸರಿಯಾಗಿಯೇ ಇದ್ದಳು. ಈಗ ಏಕಾಏಕಿ ಈ ನಿರ್ಧಾರ ತೆಗೆದುಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ಅನುಮಾನ ಮೂಡಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

66
ಮಗಳ ಬ್ರೇನ್​ವಾಷ್​

ನನ್ನ ಮಗಳು ನನ್ನನ್ನೇ ಧಿಕ್ಕರಿಸಿದಳು. ನಮ್ಮ ವಿರುದ್ಧವೇ ಪೊಲೀಸ್​ ರಕ್ಷಣೆ ಕೋರಿದಳು. ಅವಳು ನಮಗೆ ವಾಪಸ್​ ಬೇಕು. ಅವಳ ದಿಕ್ಕನ್ನು ತಪ್ಪಿಸಲಾಗಿದೆ. ಅವಳಿಗೆ ಏನೋ ಆಗುತ್ತಿದೆ. ಏನೂ ಸರಿಯಿಲ್ಲ ಎಂದು ಎನ್ನಿಸುತ್ತಿದೆ ಎಂದಿದ್ದಾರೆ ಅಪ್ಪ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories