ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಮೆರಿಕದಲ್ಲಿ ವಾಸವಿದ್ದರೂ, ತಮ್ಮ ಮಗಳು ಮಾಲ್ತಿ ಮೇರಿಗೆ ಭಾರತೀಯ ಸಂಸ್ಕೃತಿಯನ್ನು ಕಲಿಸುತ್ತಿದ್ದಾರೆ. ಮಾಲ್ತಿ ಹಿಂದೂ ಶ್ಲೋಕ ಹೇಳುವ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಪ್ರಿಯಾಂಕಾ ಅವರ ಈ ನಡೆಯನ್ನು ಶ್ಲಾಘಿಸುತ್ತಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅಮೆರಿಕದ ಸೊಸೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ (Nick Jonas) ಅವರು ತಮ್ಮ ಪುತ್ರಿ ಮಾಲ್ತಿ ಮೇರಿಯ ಜೊತೆ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಅಮೆರಿಕದ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು 2018ರಲ್ಲಿ ಮದುವೆಯಾದ ಬಳಿಕ ನಟಿ, ಬಾಲಿವುಡ್ ಜಗತ್ತಿನಿಂದ ದೂರವೇ ಉಳಿದಿದ್ದಾರೆ.
26
ಹಾಲಿವುಡ್ ನಟಿ
ಹಾಲಿವುಡ್ ವೆಬ್ ಸಿರೀಸ್ ಮಾಡುತ್ತಾ, ಅಲ್ಲಿ ಹಲವಾರು ಟಿವಿ ಶೋ, ಸಂದರ್ಶನಗಳು ಹಾಗೂ ಸುತ್ತಾಟಗಳಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 2022ರಲ್ಲಿ ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರಿಯಾಂಕಾ ಚೋಪ್ರಾ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.
36
ಮಗಳಿಗೆ ಭಾರತದ ಸಂಸ್ಕೃತಿ
ಮಾಲ್ತಿಗೆ ಈಗ ನಾಲ್ಕು ವರ್ಷ ವಯಸ್ಸು. ಈ ವೇಳೆ ಆಕೆಯ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಅಮ್ಮನ ತೊಡೆಯಮೇಲೆ ಮಲಗಿರುವ ಮಾಲ್ತಿ, ಅಮ್ಮನ ಜೊತೆ "ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ | ಶರಣ್ಯೇ ತ್ರ್ಯಯಂಬಕೇ ಗೌರೀ ನಾರಾಯಣೀ ನಮೋಸ್ತುತೇ ಎಂದು ಹೇಳಿದ್ದಾಳೆ. ವಿದೇಶದಲ್ಲಿ ಇದ್ದರೂ ಭಾರತದ ಸಂಸ್ಕೃತಿಯನ್ನು ಪುತ್ರಿಗೆ ಕಲಿಸ್ತಿರೋ ನಟಿಯ ಬಗ್ಗೆ ಸಾಕಷ್ಟು ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಭಾರತದಲ್ಲಿ ಇದ್ದವರೇ ಇಲ್ಲಿಯ ಸಂಸ್ಕೃತಿ ಮರೆಯುವಾಗ, ಅಮೆರಿಕದಲ್ಲಿದ್ದು, ಹಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ, ಹಿಂದೂ ಸಂಸ್ಕೃತಿಯನ್ನು ಪುತ್ರಿಗೆ ಕಲಿಸುತ್ತಿರುವುದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
56
ಜೋಡಿಯ ಕುರಿತು
ಇನ್ನು, ಈ ಜೋಡಿಯ ಕುರಿತು ಹೇಳುವುದಾದರೆ, ಇವರದ್ದು ಪ್ರೇಮ ವಿವಾಹ. ಪ್ರಿಯಾಂಕಾ ಹಿಂದೂ ಹುಡುಗಿಯಾಗಿದ್ದರೆ ನಿಕ್ ಜೊನಸ್ ಕ್ರಿಶ್ಚಿಯನ್ ಹುಡುಗ. ಈ ಜೋಡಿ ತಮ್ಮ ಧರ್ಮಗಳ ಅನುಸಾರವೇ ಮದುವೆಯಾಗಲು ತೀರ್ಮಾನಿಸಿದ್ದರಂತೆ. ಪ್ರಿಯಾಂಕಾ ಮತ್ತು ನಿಕ್ ಮದುವೆ ಮಾತುಕತೆಯಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳಲ್ಲಿ ಮದುವೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರಂತೆ. ಅದರಂತೆ ಹಿಂದೂ ಸಂಪ್ರದಾಯದಂತೆ ಜಾತಕ, ಮುಹೂರ್ತ ಎಲ್ಲವನ್ನೂ ನೋಡಿ ಅದಕ್ಕೂ ಮೊದಲು ಹಿಂದಿನ ದಿನ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
66
10 ವರ್ಷಗಳ ಅಂತರ
ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಅವರಿಗೆ ಹತ್ತು ವರ್ಷಗಳ ಅಂತರ. ಅಂದರೆ ನಿಕ್ ಅವರಿಗಿಂತಲೂ ಪ್ರಿಯಾಂಕಾ ಹತ್ತು ವರ್ಷ ದೊಡ್ಡವರು. 2000ನೇ ಸಾಲಿನಲ್ಲಿ ಪ್ರಿಯಾಂಕಾ ಅವರು ಮಿಸ್ ವರ್ಲ್ಡ್ ಗೆದ್ದಾಗ ನಿಕ್ ಅವರು ಆಗಿನ್ನೂ ಏಳು ವರ್ಷದವರಾಗಿದ್ದರು. ಇದೇ ಕಾರಣಕ್ಕೆ ಈ ಜೋಡಿ ಸದಾ ಟ್ರೋಲ್ ಆಗುತ್ತಲೇ ಇರುತ್ತದೆ. ಈಗಲೂ ಅದನ್ನೇ ಹೇಳುವ ಮೂಲಕ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.