Published : Mar 10, 2024, 11:25 AM ISTUpdated : Mar 10, 2024, 02:35 PM IST
ಮಲೈಕಾ ಆರೋರಾ ಪತಿ ಅರ್ಬಾಜ್ ಖಾನ್‌ನಿಂದ ವಿಚ್ಛೇದನ ಪಡೆದು 7 ವರ್ಷಗಳೇ ಕಳೆದಿವೆ. ವಿಚ್ಚೇದನದ ನಂತರ ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಬೇರೆ ಮದ್ವೆಯೂ ಆಗಿದ್ದಾರೆ. ಆದರೂ ಮಲೈಕಾರನ್ನು ಕೆಲವರು ಈಗಲೂ ವಿಚ್ಛೇದನದ ಕಾರಣಕ್ಕೆ ಟೀಕೆ ಮಾಡುತ್ತಲೇ ಇದ್ದಾರೆ. ಇದಕ್ಕೆ ಈಗ ನಟಿ ಪ್ರತಿಕ್ರಿಯಿಸಿದ್ದಾರೆ.
ಮಲೈಕಾ ಆರೋರಾ ಪತಿ ಅರ್ಬಾಜ್ ಖಾನ್‌ನಿಂದ ವಿಚ್ಛೇದನ ಪಡೆದು 7 ವರ್ಷಗಳೇ ಕಳೆದಿವೆ. ವಿಚ್ಚೇದನದ ನಂತರ ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಬೇರೆ ಮದ್ವೆಯೂ ಆಗಿದ್ದಾರೆ. ಆದರೂ ಈ ವಿಚಾರ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ.
213
ಮಲೈಕಾರನ್ನು ಕೆಲವರು ಈಗಲೂ ವಿಚ್ಛೇದನದ ಕಾರಣಕ್ಕೆ ಟೀಕೆ ಮಾಡುತ್ತಲೇ ಇದ್ದಾರೆ. ಮಲೈಕಾ ಭಾರಿ ಮೊತ್ತದ ವಿಚ್ಚೇದನ ಪರಿಹಾರ ಪಡೆದಿದ್ದಾರೆ. ಇದೇ ಕಾರಣಕ್ಕೆ ಅವರು ಜಾಲಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬೆಲ್ಲಾ ಟೀಕೆಗಳು ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಮಲೈಕಾ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
313
ಮಲೈಕಾ ಆರೋರಾ ಬಾಲಿವುಡ್‌ನ ಸಖತ್ ಫಿಟ್ ಎನಿಸಿರುವ ನಟಿಯರಲ್ಲಿ ಒಬ್ಬರು ಸದಾ ಜಿಮ್‌ಗೆ ಹೋಗುವಾಗಲೇ ಪಪಾರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗುವ ಮಲೈಕಾ ವೃತ್ತಿ ಬದುಕಿಗಿಂತ ವೈಯಕ್ತಿಕ ಜೀವನದ ಕಾರಣಕ್ಕೆ ಹೆಚ್ಚು ಸುದ್ದಿಯಾದವರು. ಮಲೈಕಾ ಮನೋರಂಜನಾ ರಂಗಕ್ಕೆ ಬಂದು ಸುಮಾರು ಮೂರು ದಶಕಗಳೇ ಕಳೆದಿದೆ.
413
ಸತತವಾಗಿ ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮಲೈಕಾ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ತಮ್ಮ 20 ಹರೆಯದಲ್ಲಿ ಅರ್ಬಾಜ್ ಖಾನ್ ಜೊತೆ ಪ್ರೀತಿಯಲ್ಲಿ ಬಿದ್ದ ಮಲೈಕಾ ಸ್ವಲ್ಪ ದಿನಗಳಲ್ಲಿ ಮದುವೆಯೂ ಆದರು. ಆದರೆ ಈ ಜೋಡಿ ಮದುವೆಯಾಗಿ ಸುಮಾರು 19 ವರ್ಷಗಳ ದಾಂಪತ್ಯದ ನಂತರ ಪರಸ್ಪರ ದೂರಾದರು.
513
ಸಿನಿಮಾ ವೆಬ್‌ಸೈಟೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನನಗೆ ಅರ್ಬಾಜ್ ಖಾನ್ ಅವರನ್ನು ಮದುವೆಯಾಗುವಂತೆ ಯಾರು ಒತ್ತಾಯ ಮಾಡಿಲ್ಲ, ಅದು ತನ್ನದೇ ನಿರ್ಧಾರವಾಗಿತ್ತು ಎಂಬುದನ್ನು ಬಹಿರಂಗಪಡಿಸಿದ್ದರು.
613
ಏಕೆ ತಾನು ಅಷ್ಟು ಬೇಗ ಮದುವೆಯಾದೆ ಎಂಬ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ಮದುವೆಯಾಗುವುದು ಆ ಸಮಯದಲ್ಲಿ ನನಗಿದ್ದ ಉತ್ತಮ ಆಯ್ಕೆಯಾಗಿತ್ತು ಎಂದು ಅವರು ಹೇಳಿದ್ದಾರೆ.
713
ಅಲ್ಲದೇ ಪತಿ ಅರ್ಬಾಜ್ ಖಾನ್‌ನಿಂದ ದೂರಾದ ಬಗ್ಗೆಯೂ ಮಲೈಕಾ ಮಾತನಾಡಿದ್ದು, ಹಲವು ವರ್ಷಗಳ ದಾಂಪತ್ಯದ ನಂತರ ತನಗೆ ವಿವಾಹವಲ್ಲದೇ ಬದುಕಿನಲ್ಲಿ ಬೇರೇನೋ ಸಾಧಿಸುವುದಿದೆ, ತನ್ನ ಮಗನಿಗೂ ಬದುಕಿನಲ್ಲಿ ವಿಶೇಷ ಜಾಗ ಬೇಕು. ಮಗ ಅರ್ಹಾನ್‌ನ ಬೆಳವಣಿಗೆ ಆತನನ್ನು ಖುಷಿ ಪಡಿಸುವ ಬಗ್ಗೆ ನಾನು ಯೋಚಿಸುತ್ತಿದ್ದೆ ಎಂದು ಮಲೈಕಾ ಹೇಳಿದ್ದಾರೆ.
813
ನಾನು ವಿಚ್ಛೇದನ ಪಡೆಯಲು ನಿರ್ಧರಿಸಿದ ಸಮಯ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವಾರು ಮಹಿಳೆಯರು ವಿಚ್ಛೇದನ ಪಡೆದು ಮುಂದುವರಿಯುತ್ತಿದ್ದ ಕಾಲ ಅದೆಂದು ನಾನು ಭಾವಿಸುವುದಿಲ್ಲ. ನಾನು ನನಗಾಗಿ ವಿಚ್ಛೇದನ ಪಡೆದೆ ಎಂದಿದ್ದಾರೆ.
913
ನನ್ನ ಆಯ್ಕೆಗೆ, ನಾನು ನನ್ನ ಮಗುವನ್ನು ಸಂತೋಷಪಡಿಸಲು ಮತ್ತು ನನ್ನ ಮಗು ಉತ್ತಮವಾದ ವಾತಾವರಣದಲ್ಲಿ ಬೆಳೆಯುವಂತೆ ಮಾಡಬೇಕಾದರೆ ನಾನು ಒಳಗೊಳಗೆ ಸರಿಯಾಗಿ ಇರಬೇಕು ಎಂದು ನಾನು ಭಾವಿಸಿದೆ. ಹಾಗಾಗಿ, ನಾನು ಮಾಡಿದ್ದು ಅದನ್ನೇ. ಪ್ರತಿಯೊಬ್ಬರೂ ವಿಚ್ಛೇದನವನ್ನು ಕೀಳಾಗಿ ನೋಡುತ್ತಾರೆ ಆದರೆ ನನಗೆ ವಿಚ್ಛೇದನದಿಂದ ಖುಷಿ ಸಿಕ್ಕಿದೆ ಎಂದು ಮಲೈಕಾ ಹೇಳಿದ್ದಾರೆ.
1013
ವಿಚ್ಚೇದನದ ನಂತರ ತಮ್ಮ ಬಟ್ಟೆಯ ಬಗ್ಗೆ ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿದ್ದ ಜನರ ಬಗ್ಗೆಯೂ ಮಲೈಕಾ ಕಾಮೆಂಟ್ ಮಾಡಿದ್ದು, ನಾನು ಧರಿಸಿದ್ದ ಅದ್ದೂರಿ ಬಟ್ಟೆ ಬಗ್ಗೆ ಕೆಲವರು ಕಾಮೆಂಟ್ ಮಾಡಿದ್ದರು.
1113
ನಾನು ಅರ್ಬಾಜ್ ಖಾನ್‌ನಿಂದ ಭಾರಿ ವಿಚ್ಚೇದನ ಪರಿಹಾರ ಪಡೆದಿದ್ದರಿಂದ ನನಗೆ ಈ ರೀತಿ ಬಟ್ಟೆ ಧರಿಸಲು ಸಾಧ್ಯವಾಗುತ್ತಿದೆ ಎಂದೆಲ್ಲಾ ಕಾಮೆಂಟ್ ಮಾಡಿದ್ದರು. ಜನರ ಕಾಮೆಂಟ್ ನನನ್ನು ಆಘಾತಕ್ಕೀಡು ಮಾಡಿತ್ತು ಎಂದು ಮಲೈಕಾ ಹೇಳಿದ್ದಾರೆ.
1213
ಈ ಹಿಂದೆಯೂ ಸಂದರ್ಶನವೊಂದರಲ್ಲಿ ಮಾತನಾಡಿದ ಮಲೈಕಾ ಹೇಗೆ ವಿಚ್ಚೇದಿತ, ಆದರೆ ಇಂಡಿಪೆಂಡೆಟ್ ಆಗಿರುವ ಮಹಿಳೆಯರನ್ನು ಸಮಾಜವೂ ಅವಮಾನಿಸುತ್ತಲೇ ಇರುತ್ತದೆ ಎಂಬ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಆಕೆ ಹಾಕುವ ಬಟ್ಟೆಯಿಂದ ಹಿಡಿದು ಮತ್ತೆ ಬದುಕು ಕಟ್ಟಿಕೊಳ್ಳುವುದನ್ನು ಸಮಾಜ ಒಪ್ಪದೇ ಕೆಟ್ಟದಾಗಿ ನೋಡುತ್ತದೆ ಎಂದು ಹೇಳಿದ್ದರು.
1313
ಮಲೈಕಾ ಹಾಗೂ ಅರ್ಬಾಜ್ ಖಾನ್ ದಾಂಪತ್ಯದಲ್ಲಿ ಮಗ ಅರ್ಹಾನ್ ಖಾನ್ ಜನಿಸಿದ್ದು, ಇಬ್ಬರೂ ಈತನಿಗೆ ಕೋ ಪೇರೆಂಟಿಗ್ ಆಗಿದ್ದಾರೆ. ಗಂಡನಿಂದ ದೂರಾದ ನಂತರ ಮಲೈಕಾ ಬಾಲಿವುಡ್ ನಟ ಅರ್ಜುನ್ ಕಪೂರ್ ಜೊತೆ ಸಂಬಂಧದಲ್ಲಿದ್ದರೆ, ಇತ್ತ ಅರ್ಬಾಜ್ ಖಾನ್ ಕಳೆದ ವರ್ಷವಷ್ಟೇ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ಮದ್ವೆಯಾಗಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.