ವಿವಿಧ ಧರ್ಮಗಳು ಮದುವೆಗೆ ಸಂಬಂಧಿಸಿದ ವಿಭಿನ್ನ ಸಂಪ್ರದಾಯಗಳನ್ನು ಹೊಂದಿವೆ. ಹಿಂದೂಗಳಲ್ಲಿ ಮದುವೆಯಲ್ಲಿ ಅನೇಕ ಪದ್ಧತಿಗಳು ಮತ್ತು ಆಚರಣೆಗಳಿವೆ. ಸಪ್ತಪದಿ ತುಳಿಯದೇ ಮದುವೆ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ಹಿಂದೂ ವಿವಾಹಗಳಲ್ಲಿ ಬೆಂಕಿಯನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಅದರ ಸುತ್ತಲೂ ಏಳು ಸುತ್ತು ಸುತ್ತುವ (satapadi)ಮೂಲಕ, ಗಂಡ ಮತ್ತು ಹೆಂಡತಿ ಪರಸ್ಪರ ಕೆಲವು ವಚನ ನೀಡುತ್ತಾರೆ. ಅವುಗಳ ಅರ್ಥವೇನೆಂದು ಇಲ್ಲಿ ತಿಳಿಯಿರಿ.
ಮೊದಲ ವಚನದಲ್ಲಿ, ವರ ವಧುವಿಗೆ ಹೇಳುತ್ತಾನೆ 'ನೀವು ಯಾವುದೇ ವ್ರತ- ಉಪವಾಸ ಅಥವಾ ಇತರ ಯಾವುದೇ ಧಾರ್ಮಿಕ ಕಾರ್ಯಗಳನ್ನು (religious) ಮಾಡಿದರೆ ಅಥವಾ ತೀರ್ಥಯಾತ್ರೆಗೆ ಹೋದರೆ, ನನ್ನನ್ನು ನಿಮ್ಮೊಂದಿಗೆ ಕರೆದೊಯ್ಯಿರಿ. ನೀವು ಈ ವಚನಕ್ಕೆ ಒಪ್ಪಿಕೊಂಡರೆ, ನಾನು ನಿಮ್ಮನ್ನು ವರಿಸಲು ಒಪ್ಪಿಕೊಳ್ಳುತ್ತೇನೆ. ಅದಕ್ಕೆ ವಧು ನಿಮ್ಮೆಲ್ಲಾ ಕಾರ್ಯದಲ್ಲಿ ನಾನು ಜೊತೆಯಾಗಿರುತ್ತೇನೆ ಎಂದು ವಚನ ನೀಡುತ್ತಾಳೆ.
2ನೇ ವಚನದಲ್ಲಿ, ವರ ಹೇಳುತ್ತಾನೆ ನೀವು ನನ್ನ ಹೆತ್ತವರನ್ನು ನಿಮ್ಮ ಹೆತ್ತವರಂತೆ ಗೌರವಿಸಬೇಕು (respect parents), ಪರಿವಾರಕ್ಕೆ ಮರ್ಯಾದೆಯನ್ನು ಉಳಿಸಬೇಕು. ಈ ವಚನವನ್ನು ನೀವು ಒಪ್ಪಿಕೊಂಡರೆ ನಾನು ನಿಮ್ಮ ಜೊತೆಯಾಗಿರುವೆ. ಕನ್ಯೆ ಅದಕ್ಕೆ ಒಪ್ಪಿ ನಿಮ್ಮ ಕುಟುಂಬವನ್ನು ನನ್ನವರಂತೆ ನೋಡಿಕೊಳ್ಳುತ್ತೇನೆ ಎಂದು ವಚನ ನೀಡುತ್ತಾಳೆ.
ಮೂರನೇ ಶ್ಲೋಕದಲ್ಲಿ, ಮದುಮಗ ಹೇಳುತ್ತಾರೆ, ಜೀವನದ ಎಲ್ಲಾ ಮೂರು ಹಂತಗಳಲ್ಲಿ (ಯೌವ್ವನ, ಪ್ರೌಢಾವಸ್ಥೆ ಮತ್ತು ವೃದ್ಧಾಪ್ಯ) ನೀವು ನನ್ನನ್ನು ನೋಡಿಕೊಳ್ಳಬೇಕು ಮತ್ತು ಪಾಲನೆ ಮಾಡಿದರೆ, ನಿಮ್ಮ ಜೊತೆಯಾಗಿ ನಾನು ಸದಾ ನಿಲ್ಲುವೆ. ಅದನ್ನು ವಧು ಒಪ್ಪಿಕೊಂಡು ಎಲ್ಲಾ ಹಂತದಲ್ಲೂ ನಾನು ನಿನ್ನ ಜೊತೆಯಾಗಿರುವೆ ಎನ್ನುತ್ತಾರೆ.
ನಾಲ್ಕನೇ ಶ್ಲೋಕದಲ್ಲಿ, ವರ ಹೇಳುತ್ತಾನೆ ಈಗ ನಾವು ಮದುವೆಯಾಗುತ್ತಿದ್ದೇವೆ, ಭವಿಷ್ಯದಲ್ಲಿ ನಮ್ಮ ಕುಟುಂಬದ ಎಲ್ಲಾ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿ ನಿಮ್ಮ ಹೆಗಲ ಮೇಲಿದೆ. ನೀವು ಅದನ್ನು ಒಪ್ಪಿಕೊಂಡರೆ, ನಾನು ನಿಮ್ಮ ಜೊತೆಯಾಗಿರಲು ಒಪ್ಪುತ್ತೇನೆ. ಕನ್ಯೆ ಅದಕ್ಕೆ ಒಪ್ಪಿ ನಿಮ್ಮೆಲ್ಲಾ ಜವಾಬ್ಧಾರಿಗಳನ್ನು (Responsibility) ತೆಗೆದುಕೊಳ್ಳಲು ಒಪ್ಪಿಗೆ ಇದೆ ಎಂದು ವಚನ ನೀಡುತ್ತಾಳೆ.
ಐದನೇ ಶ್ಲೋಕದಲ್ಲಿ, ಕನ್ಯೆ ಮದುಮಗನಿಗೆ ಮನೆಕೆಲಸಗಳು, ವ್ಯವಹಾರಗಳು ಇತ್ಯಾದಿಗಳು, ವಹಿವಾಟುಗಳು ಮತ್ತು ಇತರ ಯಾವುದೇ ಖರ್ಚುಗಳನ್ನು ಮಾಡುವಾಗ ನೀವು ನನ್ನ ಅಭಿಪ್ರಾಯವನ್ನು ತೆಗೆದುಕೊಂಡರೆ, ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ. ಆವಾಗ ವಧು ಹೇಳುತ್ತಾಳೆ, ನಿಮ್ಮ ಎಲ್ಲಾ ಕಷ್ಟ, ಸಂತೋಷಗಳಲ್ಲೂ ನಾನು ಎಂದಿಗೂ ನಿಮ್ಮ ಜೊತೆ ಇರುತ್ತೇನೆ
ಈ ವಚನದಲ್ಲಿ,ವರ ಹೇಳುತ್ತಾನೆ ನಾನು ಎಂದಾದರೂ ನನ್ನ ಸ್ನೇಹಿತರೊಂದಿಗೆ ಇದ್ದರೆ, ನೀವು ಎಂದಿಗೂ ಎಲ್ಲರ ಮುಂದೆ ನನ್ನನ್ನು ಅವಮಾನಿಸುವುದಿಲ್ಲ. ಯಾವುದೇ ದುಷ್ಕೃತ್ಯದಲ್ಲಿ ಪಾಲುದಾರರಾಗದಿದ್ದರೆ, ನಾನು ನಿಮ್ಮನ್ನು ಮಡದಿಯಾಗಿ ಒಪ್ಪುತ್ತೇನೆ ಎನ್ನುತ್ತಾನೆ, ಆವಾಗ ವಧು, ನಾನು ಎಂದಿಗೂ ಯಾರನ್ನೂ ಅವಮಾನಿಸುವುದಿಲ್ಲ, ಮನೆಯವರನ್ನು ಅತಿಥಿಗಳನ್ನು ಗೌರವಿಸುತ್ತೇನೆ ಎಂದು ವಚನ ನೀಡುತ್ತಾಳೆ.
ಏಳನೇ ವಚನದಲ್ಲಿ, ವರ ವಧಿಗೆ ನನ್ನನ್ನು ಬಿಟ್ಟು ಎಲ್ಲಾ ಪುರುಷರನ್ನು ತಂದೆ ಹಾಗೂ ಸಹೋದರರಂತೆ ಕಾಣಬೇಕು.ಮತ್ತು ಗಂಡ ಮತ್ತು ಹೆಂಡತಿಯ ಪರಸ್ಪರ ಪ್ರೀತಿಯ ನಡುವೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಕೇಳುತ್ತಾನೆ. ಆವಾಗ ವಧು ನಾನು ಕಾಯಾ, ವಾಚಾ, ಮನಸಾ ಎಲ್ಲಾ ಕೆಲಸಗಳಲ್ಲೂ ನಿಮ್ಮೊಂದಿಗೆ ಇರುತ್ತೇನೆ, ನಿಮ್ಮ ಆದೇಶ ಪಾಲಿಸುತ್ತೇನೆ ಎಂದು ಈ ಬೆಂಕಿಯ ಮುಂದೆ, ಸಮಸ್ತ ಬಂಧುಗಳ ಎದುರು ವಚನ ನೀಡುತ್ತೇನೆ ಎಂದು ಹೇಳುತ್ತಾಳೆ.