ಈ ದೇಶದಲ್ಲಿ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ ಜೈಲು ಗ್ಯಾರಂಟಿ!

First Published | Mar 22, 2023, 2:46 PM IST

ಮಕ್ಕಳು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳು ಮಾತನಾಡಿದ್ರೂ, ಸಿಟ್ಟು ಮಾಡಿದ್ರೂ, ನಕ್ಕರೂ, ಅತ್ತರೂ, ಎನ್ ಮಾಡಿದ್ರೂ ಚಂದಾನೇ. ಹೀಗಾಗಿಯೇ ಎಲ್ಲರೂ ಮಕ್ಕಳ ಫೋಟೋ ಕ್ಲಿಕ್ಕಿಸೋಕೆ ಇಷ್ಟಪಡ್ತಾರೆ. ಮುದ್ದಮುಕ್ಕಳ ಫೋಟೋಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆದ್ರೆ ಈ ದೇಶದಲ್ಲಿ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ ಜೈಲು ಪಾಲಾಗೋದು ಗ್ಯಾರಂಟಿ.

ಮಕ್ಕಳ ಚಟುವಟಿಕೆಗಳು ಯಾವಾಗಲೂ ಆಸಕ್ತಿದಾಯಕವಾಗಿರುವ ಕಾರಣ ಇಂಥಾ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಆದ್ರೆ ಈ ದೇಶದಲ್ಲಿ ಮಾತ್ರ ಮಕ್ಕಳ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೆ ಶಿಕ್ಷೆ ತಪ್ಪಿದ್ದಲ್ಲ. ಪೋಷಕರು ತಮ್ಮ ಮಕ್ಕಳ ಫೋಟೋವನ್ನು ಫೇಸ್‌ಬುಕ್, ವಾಟ್ಸಾಪ್‌, ಇನ್‌ಸ್ಟಾಗ್ರಾಂ ಮೊದಲಾದ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡ್ಕೊಂಡ್ರೆ ಜೈಲು ಪಾಲಾಗಬೇಕಾಗುತ್ತದೆ.

ಫ್ರೆಂಚ್ ಶಾಸಕರು ತಮ್ಮ ಮಕ್ಕಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದನ್ನು ನಿಷೇಧಿಸುವ ಹೊಸ ಶಾಸನವನ್ನು ಅನುಮೋದಿಸಿದ್ದಾರೆ. ಈ ಮೂಲಕ ಆನ್‌ಲೈನ್‌ನಲ್ಲಿ ಮಕ್ಕಳ ಗೌಪ್ಯತೆ ಮತ್ತು ಯೋಗಕ್ಷೇಮವನ್ನು ರಕ್ಷಿಸಲು ಮಹತ್ವದ ಹೆಜ್ಜೆಯನ್ನು ತೆಗೆದುಕೊಳ್ಳಲಾಗಿದೆ. 

Tap to resize

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಪಕ್ಷದಿಂದ ಸಂಸದ ಬ್ರೂನೋ ಸ್ಟೂಡರ್ ಮಂಡಿಸಿದ ಪ್ರಸ್ತಾವಿತ ಕಾನೂನನ್ನು ಈ ತಿಂಗಳ ಆರಂಭದಲ್ಲಿ ರಾಷ್ಟ್ರೀಯ ಅಸೆಂಬ್ಲಿ ಸರ್ವಾನುಮತದಿಂದ ಅಂಗೀಕರಿಸಿತು.

ಪೋಷಕರು ತಮ್ಮ ಮಕ್ಕಳ ಫೋಟೋಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮೂಲಕ ಮಕ್ಕಳ ಗೌಪ್ಯತೆಗೆ ಅಡ್ಡಿಯನ್ನುಂಟು ಮಾಡುತ್ತಾರೆ. ಹೀಗಾಗಿ ಇದನ್ನು ತಡೆಯುವ ಗುರಿಯನ್ನು ಈ ಕಾನೂನು ಹೊಂದಿದೆ. ಆಘಾತಕಾರಿಯಾಗಿ, ಮಕ್ಕಳ ಅಶ್ಲೀಲ ವೇದಿಕೆಗಳಲ್ಲಿ ವ್ಯಾಪಾರ ಮಾಡುವ 50 ಪ್ರತಿಶತ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಿಂದ ಸಿಕ್ಕಿರುವಂತದ್ದು ಎಂದು ಮಸೂದೆ ಬಹಿರಂಗಪಡಿಸುತ್ತದೆ.

ಮಕ್ಕಳ ಹಕ್ಕುಗಳ ನಿಯೋಗದ ಸದಸ್ಯರಾಗಿ, ಸ್ಟೂಡರ್ ಅವರು ಮಕ್ಕಳ ಗೌಪ್ಯತೆಯನ್ನು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಗೌರವಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಬದ್ಧರಾಗಿದ್ದಾರೆ ಎಂದು ಹೇಳಿದರು.

13 ವರ್ಷದ ಮಗುವಿನ ಸರಾಸರಿ 1,300 ಚಿತ್ರಗಳು ಅಂತರ್ಜಾಲದಲ್ಲಿ ಪ್ರಸಾರವಾಗುತ್ತವೆ. ಇವು ಮಕ್ಕಳ ಅಶ್ಲೀಲತೆಗೆ ದುರುಪಯೋಗ ಪಡಿಸಿಕೊಳ್ಳಬಹುದಾದ ಫೋಟೋಗಳಾಗಿವೆ ಎಂದು ಸ್ಟ್ರೂಡರ್ ಹೇಳಿದ್ದಾರೆ

ಹೊಸ ಕಾನೂನನ್ನು ಅನೇಕ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಮತ್ತು ತಜ್ಞರು ಶ್ಲಾಘಿಸಿದ್ದಾರೆ. ಕೆಲವರು ಈ ನಿಯಮ ದೀರ್ಘಕಾಲ ಉಳಿಯಲು ಸಾಧ್ಯವಿಲ್ಲ ಎಂದು ಟೀಕಿಸಿದ್ದಾರೆ. ಮತ್ತೆ ಕೆಲವರು ಇದು ವಯಸ್ಕರಲ್ಲಿ ನಂಬಿಕೆಯ ಕೊರತೆಗೆ ಕಾರಣವಾಗಬಹುದು ಎಂದಿದ್ದಾರೆ.

Latest Videos

click me!