ಜೋಡಿಗಳನ್ನು ದೇವರೇ ಸೃಷ್ಟಿ ಮಾಡಿರುತ್ತಾರೆ ಎಂದು ನಂಬಲಾಗಿದೆ. ಆದರೆ ಅದರಲ್ಲಿ ಮದುವೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಏಕೆಂದರೆ ವಿವಾಹವು (marriage) ಸಮಾಜದ ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಇಬ್ಬರು ವ್ಯಕ್ತಿಗಳು ಸಾಮಾಜಿಕ ಪದ್ಧತಿಗಳು ಮತ್ತು ಕಾನೂನು ನಿಯಮಗಳ ಅನುಸರಿಸುತ್ತಾ ಒಟ್ಟಿಗೆ ಜೀವನವನ್ನು ಕಳೆಯುವ ಹಕ್ಕುಗಳನ್ನು ಒಪ್ಪುತ್ತಾರೆ. ಆದರೆ ಈಗ ಈ ವ್ಯವಸ್ಥೆಯಲ್ಲಿ ಜನರ ನಂಬಿಕೆ ಕಡಿಮೆಯಾಗುತ್ತಿದೆ. ವಿಶೇಷವಾಗಿ ಮಹಿಳೆಯರು ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಜಪಾನ್ ಮಹಿಳೆಯರು ಈ ವಿಷಯದಲ್ಲಿ ಮುಂದಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಜಪಾನ್ ಸರ್ಕಾರದ (Japan Government) ಲಿಂಗ ವರದಿ 2022 ರ ಪ್ರಕಾರ, 30 ರ ಹರೆಯದ 25.4% ಮಹಿಳೆಯರು ಮತ್ತು 20 ರ ಹರೆಯದ 14% ಮಹಿಳೆಯರು ಮದುವೆಯಾಗಲು ಬಯಸುವುದಿಲ್ಲ. ಈ ವರದಿಯಲ್ಲಿ, ಮಹಿಳೆಯರು ಮದುವೆಯಾಗದಿರುವ ಹಿಂದಿನ ಕಾರಣವನ್ನು ಸಹ ತಿಳಿಸಲಾಗಿದೆ. ಅದನ್ನು ತಿಳಿಯಲು ಬಯಸಿದ್ರೆ ಮುಂದೆ ಓದಿ…
working woman
ಮದುವೆಯ ನಂತರ ಸ್ವಾತಂತ್ರ್ಯ ಕಳೆದುಕೊಳ್ಳುವ ಭಯ
ಮದುವೆ ಜೀವನದಲ್ಲಿ ಹೊಸ ಅಧ್ಯಾಯದ ಆರಂಭವನ್ನು ಸೂಚಿಸುತ್ತದೆ. ಇದರಲ್ಲಿ, ನಿಮ್ಮ ಸ್ವಾತಂತ್ರ್ಯವು ಸಂಗಾತಿಯ ಕೈಯಲ್ಲಿರುತ್ತೆ. ಇದು ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರ ಜೀವನದಲ್ಲಿ ಸಂಭವಿಸುತ್ತೆ. ಇದರಿಂದ ಅವರ ಮೇಲೆ ಆರ್ಥಿಕ ಮತ್ತು ಸಾಮಾಜಿಕ ಒತ್ತಡ (social stress) ಉಂಟಾಗುತ್ತೆ. ಆದರೆ ಸ್ವಾವಲಂಬಿ ಮಹಿಳೆಯರು ಸ್ವಾಂತಂತ್ರ್ಯ ಕಳೆದುಕೊಳ್ಳೋದನ್ನು ಇಷ್ಟಪಡೋದಿಲ್ಲ. ಹಾಗಾಗಿ ಅವರು ಮದುವೆಯಾಗೋದಿಲ್ಲ.
ವೃತ್ತಿಜೀವನದಲ್ಲಿ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ (no compromise in career)
ಮದುವೆಯ ನಂತರ, ಮಹಿಳೆ ತನ್ನ ಸ್ವಂತ ಗುರುತನ್ನು ಸಂಪೂರ್ಣವಾಗಿ ಕಳೆದುಕೊಳ್ಳುತ್ತಾಳೆ. ಅವಳ ಗಂಡನ ಹೆಸರು ಮತ್ತು ಕೆಲಸವು ಅವಳ ಗುರುತಾಗುತ್ತದೆ. ಆದರೆ ಇಂದಿನ ಮಹಿಳೆಯರು ಬಹಳ ಮಹತ್ವಾಕಾಂಕ್ಷೆಯುಳ್ಳವರು, ಮತ್ತು ಅವರು ಯಾವುದೇ ವೆಚ್ಚದಲ್ಲಿ ತಮ್ಮ ಗುರುತನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಅದಕ್ಕಾಗಿಯೇ ಅವಳು ತನ್ನ ವೃತ್ತಿಜೀವನವನ್ನು ಮದುವೆಗಿಂತ ಹೆಚ್ಚಾಗಿ ಪರಿಗಣಿಸುತ್ತಾಳೆ.
ಗೃಹಿಣಿಯರ ಜವಾಬ್ದಾರಿಗಳನ್ನು ಇಷ್ಟಪಡುವುದಿಲ್ಲ
ಮದುವೆಯಾದ ನಂತರ, ಮನೆ ಮತ್ತು ಉದ್ಯೋಗ ಎರಡನ್ನೂ ನಿಭಾಯಿಸುವುದು ತುಂಬಾ ಕಷ್ಟಕರವಾಗುತ್ತದೆ. ಈ ಕಾರಣದಿಂದಾಗಿ ಮಹಿಳೆಯರು ತಮ್ಮ ಕನಸುಗಳನ್ನು ತ್ಯಜಿಸಬೇಕು ಮತ್ತು ಮಕ್ಕಳನ್ನು ಬೆಳೆಸುವುದು ಮತ್ತು ಮನೆಯಲ್ಲಿ ವಯಸ್ಸಾದವರ ಸೇವೆ ಸಲ್ಲಿಸಬೇಕು. ಇಂದಿನ ಮಹಿಳೆಯರು ಅದನ್ನು ಮಾಡಲು ಇಷ್ಟಪಡುವುದಿಲ್ಲ.
ಹೆಚ್ಚಾಗಿ ಮಹಿಳೆಯರು ತಮ್ಮ ಕನಸುಗಳನ್ನು (dream of women) ನನಸಾಗಿಸುವತ್ತ, ಗುರಿಗಳನ್ನು ತಲುಪುವತ್ತ ಹೆಚ್ಚು ಏಕಾಗ್ರತರಾಗಿರುತ್ತಾರೆ. ಅದಕ್ಕಾಗಿಯೇ ಅವರು ತಮ್ಮ ಗುರಿ ತಲುಪಲು ಅಡ್ಡವಾಗುವ ಮದುವೆ, ಪ್ರೇಮ ಮೊದಲಾದ ಸಂಬಂಧಗಳಿಂದ ದೂರ ಉಳಿಯುತ್ತಾರೆ, ತನ್ನ ಕಾಲ ಮೇಲೆ ತಾನು ನಿಲ್ಲುತ್ತಾ, ಏಕಾಂಗಿಯಾಗಿ ಜೀವನ ಸಾಗಿಸಲು ಬಯಸುತ್ತಾರೆ.
ಈ ದೇಶಗಳ ಹುಡುಗಿಯರು ಸಹ ಮದುವೆ ಬೇಡ ಅನ್ನುತ್ತಿದ್ದಾರೆ
ಜಪಾನಿನ ಮಹಿಳೆಯರ (japan women) ಜೊತೆಗೆ, ಸುಮಾರು ಅರ್ಧದಷ್ಟು ಕೆನಡಿಯನ್ನರು ಮದುವೆ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಇದರೊಂದಿಗೆ, ಚಿಲಿಯ ಮಹಿಳೆಯರು ಮದುವೆಯನ್ನು ಹೆಚ್ಚು ಇಷ್ಟಪಡುವುದಿಲ್ಲ ಅಥವಾ ತಡವಾಗಿ ಮದುವೆಯಾಗುತ್ತಾರೆ. ಭಾರತದಲ್ಲೂ ಮಹಿಳೆಯರು ಕ್ರಮೇಣ ಮದುವೆಯ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ.