Parenting Tips: ಪೋಷಕರು ಇಂಥಾ ತಪ್ಪು ಮಾಡಿದ್ರೆ ಮಕ್ಕಳು ಯಾವತ್ತೂ ಕ್ಷಮಿಸೋಲ್ಲ

Published : Feb 22, 2023, 11:36 AM ISTUpdated : Feb 22, 2023, 12:47 PM IST

ಪೇರೆಂಟಿಂಗ್‌ ಅನ್ನೋದು ಅಷ್ಟು ಸುಲಭವಾದ ಕೆಲಸವಲ್ಲ. ಮಕ್ಕಳಿಗೆ ಬುದ್ಧಿ ಹೇಳುವಾಗ, ಬೈಯುವಾಗ ಪ್ರತಿ ಬಾರಿಯೂ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಾಗಿದ್ರೆ ಪೋಷಕರು ಹಾಗೂ ಮಕ್ಕಳ ಪ್ರಕಾರ ವರ್ಸ್ಟ್ ಪೇರೆಂಟಿಂಗ್ ಸ್ಟೈಲ್ ಯಾವುದು, ಇಲ್ಲಿದೆ ಮಾಹಿತಿ.

PREV
17
Parenting Tips:  ಪೋಷಕರು ಇಂಥಾ ತಪ್ಪು ಮಾಡಿದ್ರೆ ಮಕ್ಕಳು ಯಾವತ್ತೂ ಕ್ಷಮಿಸೋಲ್ಲ

ಮಕ್ಕಳ ಲಾಲನೆ-ಪೋಷಣೆ ಅಷ್ಟು ಸುಲಭದ ಕೆಲಸವಲ್ಲ. ಮಕ್ಕಳ ತಪ್ಪು ಕೆಲಸಗಳನ್ನು ತಿದ್ದಿ, ಸರಿಯಾದ ದಾರಿಯಲ್ಲಿ ನಡೆಸಬೇಕು. ಯಾವುದೇ ವಿಷಯಕ್ಕೆ ಹಠ ಮಾಡಿದಾಗ ಅದನ್ನು ನಾಜೂಕಿನಿಂದ ನಿಭಾಯಿಸಬೇಕು. ಆದರೆ ಸಾಮಾನ್ಯವಾಗಿ ಎಲ್ಲಾ ಪೋಷಕರು ಮಕ್ಕಳನ್ನು ಬೆಳೆಸುವಾಗ ಒಂದಲ್ಲಾ ಒಂದು ರೀತಿಯಲ್ಲಿ ತಪ್ಪು ಮಾಡುತ್ತಾರೆ. ಮೂರನೇ ಎರಡರಷ್ಟು ಮಕ್ಕಳು 16 ವರ್ಷ ವಯಸ್ಸಿನೊಳಗೆ ಕನಿಷ್ಠ 1 ಆಘಾತಕಾರಿ ಘಟನೆಯನ್ನು ವರದಿ ಮಾಡಿದ್ದಾರೆ ಎಂದು ಅಧ್ಯಯನಗಳು ಕಂಡುಕೊಂಡಿವೆ. 

27

ಎಂದಿಗೂ ತಪ್ಪುಗಳನ್ನು ಮಾಡದ ಪರಿಪೂರ್ಣ ಪೋಷಕರಾಗುವುದು ಅಸಾಧ್ಯ. ಆದರೂ, ಜಾಗರೂಕ ಮತ್ತು ಸಂವೇದನಾಶೀಲ ಪೋಷಕರಾಗಿರುವುದು ಕಠಿಣ ತಪ್ಪುಗಳನ್ನು ತಡೆಯಲು ಮತ್ತು ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತದೆ. ಇಲ್ಲದಿದ್ದರೆ, ಇದು ನಿಮ್ಮ ಮಕ್ಕಳು ಅಸುರಕ್ಷಿತ ವಯಸ್ಕರಾಗಿ ಬೆಳೆಯಲು ಕಾರಣವಾಗಬಹುದು. ಇತ್ತೀಚಿಗೆ ರೆಡ್‌ ಇಟ್‌ನಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಯಿತು. ಪೋಷಕರು ಹಾಗೂ ಮಕ್ಕಳ ಪಾಲಿಗೆ ವರ್ಸ್ಟ್‌ ಪೇರೆಂಟಿಂಗ್ ಸ್ಟೈಲ್‌ ಎಂದು ಅನಿಸಿದ ಕ್ಷಣಗಳನ್ನು ನೆನಪಿಸಿಕೊಳ್ಳಲಾಯಿತು. ಆ ಬಗ್ಗೆ ಇಲ್ಲಿದೆ ಮಾಹಿತಿ.

37

ಮಕ್ಕಳನ್ನು ಕೆಟ್ಟ ಭಾಷೆಯಲ್ಲಿ ನಿಂದಿಸುವುದು
ಪೋಷಕರಾಗಿ, ನೀವು ಯಾವ ಭಾಷೆಯನ್ನು ಬಳಸುತ್ತೀರಿ ಎಂಬುದರ ಕುರಿತು ನೀವು ಹೆಚ್ಚು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಮಕ್ಕಳು ನಿಮ್ಮಿಂದ ಸೂಕ್ತವಲ್ಲದ ಭಾಷೆಯನ್ನು ಕಲಿತುಕೊಳ್ಳುತ್ತಾರೆ. ಕೆಟ್ಟ ಪದಗಳನ್ನು ಬಳಸಿ ಮಕ್ಕಳನ್ನು ನಿಂದಿಸಿದಾಗ ಇದು ಮಕ್ಕಳ ಮನಸ್ಸಿನಲ್ಲಿ ಹಾಗೆಯೇ ಅಚ್ಚೊತ್ತಿಬಿಡುತ್ತದೆ. ಇಂಥಾ ಬೈಗುಳವನ್ನು ಮಕ್ಕಳು ಯಾವಾಗಲೂ ನೆನಪಿಸಿಕೊಂಡು ಪೋಷಕರ ಬಗ್ಗೆ ಬೇಸರ ಪಟ್ಟುಕೊಳ್ಳುತ್ತಾರೆ.

47

ತಕ್ಷಣ ವೈದ್ಯಕೀಯ ಆರೈಕೆ ನೀಡದಿರುವುದು
ಬೈಕ್‌ನಿಂದ ಬಿದ್ದಾಗ ಹೆತ್ತವರು ತನ್ನ ನೋವನ್ನು ಹೇಗೆ ಲಘುವಾಗಿ ತೆಗೆದುಕೊಂಡರು ಎಂಬುದನ್ನು ವ್ಯಕ್ತಿಯೊಬ್ಬರು ನೆನಪಿಸಿಕೊಂಡರು. '14 ವರ್ಷವಿದ್ದಾಗ ಬೈಕ್‌ನ್ನು ಮನೆಯ ಮುಂಭಾಗದ ಅಂಗಳದಲ್ಲಿ ಓಡಿಸುತ್ತಿದ್ದೆ. ಆದರೆ ಬೈಕ್‌ನಿಂದ ಜಾರಿ ಬಿದ್ದೆ. ಹಾಗಾಗಿ ನಾನು ಒಳಗೆ ಹೋಗಿ ನೋವಿನಿಂದ ಮಂಚದ ಮೇಲೆ ಮಲಗಿದೆ. ಆಸ್ಪತ್ರೆಗೆ ನನ್ನನ್ನು ಕರೆದುಕೊಂಡು ಹೋಗುವಂತೆ ಪೋಷಕರಲ್ಲಿ ವಿನಂತಿಸಿದೆ. ಆದರೆ ಅವರು ಹೀಗೆಲ್ಲಾ ಸಾಮಾನ್ಯವಾಗಿ ಆಗುತ್ತದೆ. ಆಸ್ಪತ್ರೆಗೆ ಹೋಗುವ ಅಗತ್ಯವಿಲ್ಲ ಎಂದರು.

57

ಸುಮಾರು ಒಂದೂವರೆ ಗಂಟೆಗಳ ನಂತರ ಮತ್ತು ಅನೇಕ ಕಣ್ಣೀರಿನ ನಂತರ ಅವರು ಅಂತಿಮವಾಗಿ ನನ್ನನ್ನು ಕರೆದುಕೊಂಡು ಹೋಗಲು ಒಪ್ಪಿಕೊಂಡರು. ಆದರೆ ಆಗಲೇ ತಡವಾಗಿತ್ತು. ಹತ್ತು ನಿಮಿಷಗಳ ನಂತರ ಅದೇ ದಿನ ನಾನು ವೃಷಣವನ್ನು ಕಳೆದುಕೊಂಡೆ. ಅದಕ್ಕಾಗಿ ಅವರನ್ನು ಎಂದಿಗೂ ಕ್ಷಮಿಸಲಿಲ್ಲ' ಎಂದು ಬಾಲ್ಯದಲ್ಲಿ ತಮಗಾಗಿರುವ ಘಟನೆಯನ್ನು ವಿವರಿಸಿದ್ದಾರೆ.

67

ಮಕ್ಕಳನ್ನು ಇನ್ನೊಬ್ಬರೊಂದಿಗೆ ಹೋಲಿಸುವುದು
ಪ್ರತಿಯೊಬ್ಬ ಮಕ್ಕಳೂ ವಿಶಿಷ್ಟವಾಗಿರುತ್ತಾರೆ. ಹೀಗಾಗಿ ಮಕ್ಕಳನ್ನು ಎಂದಿಗೂ ಇತರ ಮಕ್ಕಳೊಂದಿಗೆ ಹೋಲಿಸುವ ತಪ್ಪನ್ನು ಮಾಡಲೇಬಾರದು. ಇದು ಮಕ್ಕಳ ಮನಸ್ಥಿತಿಯನ್ನು ಕುಗ್ಗಿಸುತ್ತದೆ. ಮಾತ್ರವಲ್ಲ ಮಕ್ಕಳಿಗೆ ತಮ್ಮ ಮೇಲಿರುವ ಆತ್ಮವಿಶ್ವಾಸವನ್ನು ಕಡಿಮೆ ಮಾಡುತ್ತದೆ. ತಮ್ಮಿಂದ ಏನೂ ಸಾಧ್ಯವಿಲ್ಲ. ಇತರರಿಗೆ ಹೋಲಿಸಿದರೆ ನನ್ನಲ್ಲಿ ಯಾವುದೇ ಪ್ರತಿಭೆಯಿಲ್ಲ ಎಂದೇ ಮಕ್ಕಳು ಅಂದುಕೊಳ್ಳುತ್ತಾರೆ. ಇದು ಅವರ ವ್ಯಕ್ತಿತ್ವದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

77

ಮಕ್ಕಳಿಗೆ ಕೇಳಿದ್ದನ್ನೆಲ್ಲಾ ಕೊಡಿಸಬೇಡಿ
ಬಹುತೇಕರು ಮಕ್ಕಳನ್ನು ಬೆಳೆಸುವಾಗ ಮಾಡುವ ತಪ್ಪು ಇದು. ಮಕ್ಕಳು ಕೇಳಿದ್ದನ್ನೆಲ್ಲಾ ಸುಲಭವಾಗಿ ಕೊಡಿಸಿಬಿಡುತ್ತಾರೆ. ಈ ಔದಾರ್ಯವು ಹೇಗೆ ತಪ್ಪಾಗಿ ಪರಿಣಮಿಸಬಹುದು ಎಂದು ಒಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಕೇಳಿದ್ದೆಲ್ಲಾ ಸುಲಭವಾಗಿ ದೊರಕುವ ಹಣ ಹಣದ ಬೆಲೆ ಗೊತ್ತಾಗುವುದಿಲ್ಲ. ಹೀಗಾಗಿ ಅವರು ದುಂದುವೆಚ್ಚದ ಸ್ವಭಾವವನ್ನು ರೂಢಿಸಿಕೊಳ್ಳುತ್ತಾರೆ. ಯಾವುದರ ಮೌಲ್ಯವನ್ನೂ ಅವರು ಅರಿತಿರುವುದಿಲ್ಲ ಎಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.

Read more Photos on
click me!

Recommended Stories