ಚೀನಾದಲ್ಲಿ ಒಂದೇ ದಿನದ ವ್ಯಾಲಿಡಿಟಿ ಇರೋ ಮದುವೆ : ಕಾರಣ ಕೇಳಿದ್ರೆ ಅಚ್ಚರಿ ಗ್ಯಾರಂಟಿ

First Published | Nov 27, 2023, 5:12 PM IST

ಮದುವೆಯ ಬಂಧವನ್ನು ಈ ಜಗತ್ತಿನಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಎಲ್ಲೆಡೆ ಮದುವೆಗಳು ತಮ್ಮದೇ ಆದ ವಿಶೇಷ ಆಚರಣೆ ಪದ್ಧತಿಗಳನ್ನು ಹೊಂದಿವೆ. ಆದರೆ ಅಂತಹ ಪರಿಸ್ಥಿತಿಯಲ್ಲಿ, ಮದುವೆಯು ಕೇವಲ ಒಂದು ಗಂಟೆ ಮಾತ್ರ ಉಳಿಯುವ ಸ್ಥಳವಿದೆ ಅನ್ನೋದು ನಿಮಗೆ ಗೊತ್ತಾ? 
 

ಪ್ರತಿಯೊಂದು ದೇಶ, ನಗರ ಮತ್ತು ಪಟ್ಟಣಗಳಲ್ಲಿ, ಮದುವೆಯ ಆಚರಣೆ (wedding tradition) ಮತ್ತು ಅದರ ಪದ್ಧತಿಗಳು ಸಂಪೂರ್ಣವಾಗಿ ಭಿನ್ನವಾಗಿರೋದನ್ನು ನೀವು ನೋಡಿರಬಹುದು. ಭಾರತದಲ್ಲಂತೂ ಮದುವೆಯನ್ನು ಹಬ್ಬದಂತೆ ಆಚರಿಸಲಾಗುತ್ತೆ. ವಿದೇಶದಲ್ಲಿ ಮದುವೆಗಳು ಯಾವುದೇ ಪಂಡಿತರು ಮತ್ತು ಮಂತ್ರಗಳನ್ನು ಪಠಿಸದೆ ನಡೆಯುತ್ತವೆ. ಆದರೆ, ಮದುವೆಗೆ ಸಂಬಂಧಿಸಿದ ಆಚರಣೆಗಳು ವಿಭಿನ್ನವಾಗಿದ್ದರೂ, ಈ ಎಲ್ಲಾ ಆಚರಣೆಗಳನ್ನು ವಧು ಮತ್ತು ವರನ ಸಂತೋಷದ ಜೀವನಕ್ಕಾಗಿ ಮಾಡಲಾಗುತ್ತದೆ.
 

ಮದುವೆಯ ನಂತರ, ವ್ಯಕ್ತಿಯ ಜೀವನವು ಸಂತೋಷವಾಗಿರುತ್ತೆ ಮತ್ತು ಅವರು ಸಾಮಾಜಿಕವಾಗಿ ಒಟ್ಟಿಗೆ ವಾಸಿಸಲು ಮದುವೆ ಅಧಿಕಾರ ನೀಡುತ್ತೆ ಎಂದು ನಂಬಲಾಗುತ್ತದೆ. ಆದರೆ ಈ ಪ್ರಪಂಚದ ಕೆಲವು ಪ್ರದೇಶಗಳಲ್ಲಿ ಮದುವೆಯ ಬಗ್ಗೆ ಕೆಲವೊಂದು ನಿಯಮಗಳಿಗೆ ಅದನ್ನು ಕೇಳಿದ್ರೇನೆ ನಿಮಗೆ ಶಾಕ್ ಆಗಬಹುದು. 
 

Latest Videos


ಚೀನಾದಲ್ಲಿ ವಿಚಿತ್ರ ಸಂಪ್ರದಾಯ
ಚೀನಾದಲ್ಲಿ ವಿಚಿತ್ರವಾದ ಮದುವೆ (weird wedding tradition) ಸಂಪ್ರದಾಯವಿದೆ. ಅಲ್ಲಿ ಕೆಲವು ಪ್ರದೇಶಗಳಲ್ಲಿ ಮದುವೆ 24 ಗಂಟೆಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಚೀನಾದಲ್ಲಿ ಬಡತನದಿಂದಾಗಿ, ಮದುವೆಯ ಸಮಯದಲ್ಲಿ ತಮ್ಮ ಸೊಸೆಗೆ ಉಡುಗೊರೆ ಮತ್ತು ಹಣವನ್ನು ನೀಡಲು ಸಾಧ್ಯವಾಗದ ಜನರು ಮದುವೆಯಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅಲ್ಲಿನ ಹುಡುಗರು ವಿಶಿಷ್ಟವಾದ ವಿವಾಹ ಆಗುತ್ತಾರೆ. ಇದರಿಂದ ಅವರಿಗೂ ತಾವು ವಿವಾಹಿತರು ಎನ್ನುವ ಲೇಬಲ್ ಸಿಗುತ್ತೆ.

ಈ ಮದುವೆ ಎಲ್ಲಿ ನಡೆಯುತ್ತೆ?
ನಾವು ಮಾತನಾಡುತ್ತಿರುವ ವಿಶಿಷ್ಟ ವಿವಾಹ ಚೀನಾದ ಹುಬೈ ಪ್ರಾಂತ್ಯದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತದೆ. ಇಲ್ಲಿ ಹುಡುಗರು ಮತ್ತು ಹುಡುಗಿಯರು ಕೇವಲ 24 ಗಂಟೆಗಳಿಗೆ ಮಾತ್ರ ಮದುವೆಯಾಗುತ್ತಾರೆ ಅಥವಾ ಗಂಡ ಹೆಂಡತಿಯಾಗಿ ಇರುತ್ತಾರೆ. ಈ ಮದುವೆಗಳ ಬಗ್ಗೆ ಅತ್ಯಂತ ವಿಶೇಷವೆಂದರೆ ಈ ಮದುವೆ ದೊಡ್ಡದಾಗಿ ನಡೆಯೋದಿಲ್ಲ, ಅಥವಾ ಯಾವುದೇ ಅತಿಥಿಗೆ ಆಹಾರ ಮತ್ತು ಪಾನೀಯದ ವ್ಯವಸ್ಥೆ ಕೂಡ ಇರೋದಿಲ್ಲ. ಅಂತಹ ಮದುವೆಗಳು ಬಹಳ ಗೌಪ್ಯವಾಗಿ ನಡೆಯುತ್ತವೆ. ಕಳೆದ 6 ವರ್ಷಗಳಲ್ಲಿ ಈ ಪ್ರವೃತ್ತಿ ವೇಗವಾಗಿ ಹೆಚ್ಚುತ್ತಿದೆ. 

ಕೇವಲ ಒಂದು ದಿನದ ಮದುವೆ ಏಕೆ?
ಹುಡುಗನ ಕುಟುಂಬ ಮತ್ತು ಹುಡುಗ ಚೀನಾದಲ್ಲಿ ಮದುವೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಹೆಚ್ಚಿನ ಹುಡುಗರು ಮದುವೆಯಿಲ್ಲದೆ ಬದುಕುತ್ತಿದ್ದಾರೆ. ಆದರೆ ಸಮಸ್ಯೆಯೆಂದರೆ, ಚೀನಾದಲ್ಲಿ, ಅವಿವಾಹಿತರಾಗಿ (unmarried) ಸಾಯುವ ಹುಡುಗರನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ.

ಅವಿವಾಹಿತರು ಎಂಬ ತಮ್ಮ ಗುರುತನ್ನು ಅಳಿಸಿ ಹಾಕಲು ಹುಡುಗರು ಒಂದು ದಿನದ ಮದುವೆ (one day wedding) ಮಾಡಿಕೊಳ್ಳುತ್ತಾರೆ. ಚೀನಾದ ಕೆಲವು ಪ್ರದೇಶಗಳಲ್ಲಿ, ಒಬ್ಬ ಹುಡುಗನು ಮದುವೆಯಿಲ್ಲದೆ ಸತ್ತರೆ, ಅವನ ಅಂತ್ಯ ಸಂಸ್ಕಾರದ ಸಮಯದಲ್ಲಿಯೂ ಮದುವೆ ಮಾಡಿಸುವ ಸಂಪ್ರದಾಯವಿದೆ. 
 

ಮದುವೆ ನಂತರ ಹುಡುಗಿಯರಿಗೆ ಏನಾಗುತ್ತದೆ?
ಮದುವೆಯ ನಂತರ ಒಂದು ದಿನ ವಧುಗಳಾಗುವ (one day bride)  ಹುಡುಗಿಯರಿಗೆ ಜೀವನ ಏನಾಗುತ್ತೆ ಎಂಬುದು ದೊಡ್ಡ ಪ್ರಶ್ನೆ. ವಾಸ್ತವವಾಗಿ, ಒಂದು ದಿನದ ವಧುಗಳಾಗುವ ಹುಡುಗಿಯರಿಗೆ ಸಾಕಷ್ಟು ಹಣವನ್ನು ನೀಡಲಾಗುತ್ತದೆ. ಚೀನಾದಲ್ಲಿ, ಒಂದು ದಿನದ ವಿವಾಹ ವ್ಯವಹಾರವು ಬಹಳ ವ್ಯಾಪಕವಾಗಿದೆ.
 

click me!