ಅಪ್ಪನ ವಯಸ್ಸಿನ ಗಂಡ; ಹಣದಾಸೆಗೆ ಮುದುಕರನ್ನು ಮದ್ವೆಯಾದ ಬಾಲಿವುಡ್ ನಟಿಯರಿವರು

First Published | Aug 17, 2023, 12:52 PM IST

ಬಾಲಿವುಡ್ ನಟಿಯರು ವಯಸ್ಸಾದವರ ಜೊತೆ ಸಂಬಂಧ ಇಟ್ಟುಕೊಳ್ಳೋದು ಹೊಸತೇನಲ್ಲ. ಈ ಹಿಂದೆಯೂ, ಈಗಲೂ ಇಂಥಾ ಹಲವು ಸಂಬಂಧಗಳು ಸುದ್ದಿಯಾಗಿದ್ದವು. ಹಲವರು ಈ ರೀತಿ ವಯಸ್ಸನ್ನೂ ಗಮನಿಸದೆ ಶ್ರೀಮಂತ ನಟ, ನಿರ್ಮಾಪಕ, ಉದ್ಯಮಿಯನ್ನು ಮದುವೆಯಾಗಿದ್ದಾರೆ. ಅಂಥಾ ಕೆಲವು ಗೋಲ್ಡ್‌ ಡಿಗ್ಗರ್ ನಟಿಯರ ಮಾಹಿತಿ ಇಲ್ಲಿದೆ. 

ಬಾಲಿವುಡ್ ನಟಿಯರ ಹೈಫೈ ಲೈಫ್‌ಸ್ಟೈಲ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಡಿಸೈನರ್ ಡ್ರೆಸ್, ಜ್ಯುವೆಲ್ಸ್‌, ಲಕ್ಸುರಿಯಸ್ ಮೇಕಪ್ ಇಲ್ದೆ ಮನೆಯಿಂದ ಹೊರಗಡೆ ಕಾಲಿಡೋದೆ ಇಲ್ಲ. ಹೀಗೆಲ್ಲಾ ಖರ್ಚು ಮಾಡೋಕೆ ಕೋಟಿಗಟ್ಟಲೆ ದುಡ್ಡಂತೂ ಖಂಡಿತಾ ಬೇಕು. ಹೀಗಾಗಿಯೇ ಬಾಲಿವುಡ್ ನಟ-ನಟಿಯರು ಸಾಮಾನ್ಯವಾಗಿ ಉದ್ಯಮಿಗಳು ಅಥವಾ ರಿಯಲ್ ಎಸ್ಟೇಟ್‌ನಲ್ಲಿರುವ ದೊಡ್ಡ ಕುಳಗಳನ್ನೇ ಮದ್ವೆಯಾಗ್ತಾರೆ. 

ತಿಂಗಳುಗಳ ಹಿಂದೆ ಉದ್ಯಮಿ ಲಲಿತ್ ಮೋದಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಸುಶ್ಮಿತಾ ವಿಚ್ಛೇದಿತ ಲಲಿತ್‌ಗಿಂತ ವಯಸ್ಸಿನಲ್ಲಿ ಸುಮಾರು 12 ವರ್ಷ ಚಿಕ್ಕವರು. ಹೀಗಾಗಿಯೇ ಸೋಶಿಯಲ್ ಮೀಡಿಯಾ ಬಳಕೆದಾರರು ಸುಶ್ಮಿತಾರನ್ನು ಗೋಲ್ಡ್‌ ಡಿಗ್ಗರ್‌ ಎಂದು ಟ್ರೋಲ್‌ ಮಾಡಿದ್ದರು.

Tap to resize

ಆದರೆ ಬಾಲಿವುಡ್ ನಟಿಯರು ವಯಸ್ಸಾದವರ ಜೊತೆ ಸಂಬಂಧ ಇಟ್ಟುಕೊಳ್ಳೋದು ಹೊಸತೇನಲ್ಲ. ಈ ಹಿಂದೆಯೂ, ಈಗಲೂ ಇಂಥಾ ಹಲವು ಸಂಬಂಧಗಳು ಸುದ್ದಿಯಾಗಿದ್ದವು. ಹಲವರು ಈ ರೀತಿ ವಯಸ್ಸನ್ನೂ ಗಮನಿಸದೆ ಶ್ರೀಮಂತ ನಟ, ನಿರ್ಮಾಪಕ, ಉದ್ಯಮಿಯನ್ನು ಮದುವೆಯಾಗಿದ್ದಾರೆ. ಅಂಥಾ ಕೆಲವು ನಟಿಯರ ಮಾಹಿತಿ ಇಲ್ಲಿದೆ. 

ರೇಖಾ-ಮುಕೇಶ್‌
ಬಾಲಿವುಡ್‌ನ ಎವರ್‌ಗ್ರೀನ್‌ ನಟಿ  ರೇಖಾ. ರೇಖಾ ಅವರ ಹೆಸರು ಅನೇಕ ನಟರೊಂದಿಗೆ ಕೇಳಿಬಂದಿವೆ. ಅವರ ಹಲವು ಸಂಬಂಧಗಳು ಜೊತೆಗೆ ಬ್ರೇಕಪ್‌ ಸಹ ಸಾಕಷ್ಟು ಸುದ್ದಿ ಮಾಡಿವೆ. ರೇಖಾ 1990ರಲ್ಲಿ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ವಿವಾಹವಾದರು, ಆದರೆ ಮದುವೆಯಾದ 7 ತಿಂಗಳ ನಂತರ ಮುಕೇಶ್ ಆತ್ಮಹತ್ಯೆ ಮಾಡಿಕೊಂಡರು. ಆದರೆ ಮುಕೇಶ್ ಅಪಾರ ಸಂಪತ್ತು ಬಿಟ್ಟು ಹೋಗಿದ್ದರು. ಹೀಗಾಗಿ ರೇಖಾ ಇವರನ್ನು ಹಣಕ್ಕಾಗಿಯೇ ಮದುವೆಯಾಗಿದ್ದರು ಎಂಬ ಮಾತು ಹಬ್ಬಿತ್ತು.

ಶ್ರೀದೇವಿ-ಬೋನಿ ಕಪೂರ್‌
ಸೂಪರ್‌ಸ್ಟಾರ್‌  ಶ್ರೀದೇವಿಗೆ ಕೂಡ ಗೋಲ್ಡ್ ಡಿಗ್ಗರ್ ಎಂಬ ಬಿರುದು  ಸಿಕ್ಕಿತ್ತು. ಶ್ರೀದೇವಿ ವಯಸ್ಸಾದ ಬೋನಿ ಕಪೂರ್ ಅವರನ್ನು ಎರಡನೇ ಮದುವೆಯಾಗಿದ್ದರು. ಬಾಲಿವುಡ್‌ನ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರಾಗಿದ್ದ ಶ್ರೀದೇವಿ, ಯಾವ ರೀತಿಯೂ ಜೋಡಿಯಾಗದ ಬೋನಿ ಕಪೂರ್‌ನ್ನು ವಿವಾಹವಾದರು. ಬೋನಿ ವಯಸ್ಸಿನಲ್ಲಿ ಶ್ರೀದೇವಿಗಿಂತ ಸುಮಾರು 8 ವರ್ಷ ದೊಡ್ಡವರಾಗಿದ್ದರು. 

ಜೂಹಿ ಚಾವ್ಲಾ-ಜೇ ಮೆಹ್ತಾ
ಜೂಹಿ ಚಾವ್ಲಾ 1995 ರಲ್ಲಿ ಉದ್ಯಮಿ ಜೇ ಮೆಹ್ತಾ ಅವರನ್ನು ವಿವಾಹವಾದಾಗ, ಜನರು ಅವಳನ್ನು ಗೋಲ್ಡ್‌ ಡಿಗ್ಗರ್‌ ಎಂದು ಕರೆಯಲು ಪ್ರಾರಂಭಿಸಿದರು. ಜೂಹಿ ತುಂಬಾ ಸುಂದರವಾಗಿದ್ದರು ಮತ್ತು ಮಿಸ್ ಇಂಡಿಯಾ ಆಗಿದ್ದಾರೆ. ಆದರೆ ಜಯ್ ಮೆಹ್ತಾ ವಯಸ್ಸಿನಲ್ಲಿ ಜೂಹಿಗಿಂತ ಜೈ ಸುಮಾರು 7 ವರ್ಷ ದೊಡ್ಡವರು. ಜೂಹಿ ಜೈ ಅವರ ಎರಡನೇ ಹೆಂಡತಿ.ಜೈ ಅವರ ಮೊದಲ ಪತ್ನಿ ಸುಜಾತಾ ಬಿರ್ಲಾ, ಅವರು 1990 ರಲ್ಲಿ  ಅಪಘಾತದಲ್ಲಿ ನಿಧನರಾದರು.

ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ
2009ರಲ್ಲಿ ಶಿಲ್ಪಾ ಶೆಟ್ಟಿ ಸಣ್ಣ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮದುವೆಯಾದರು. ಇದು ರಾಜ್‌ ಕುಂದ್ರಾಗೆ ಎರಡನೇ ಮದುವೆ. ವಯಸ್ಸಿನಲ್ಲಿ ಶಿಲ್ಪಾ, ರಾಜ್‌ಗಿಂತ ದೊಡ್ಡವರು. ಹೀಗಾಗಿ ಜನರು ಶಿಲ್ಪಾ ಶೆಟ್ಟಿಯನ್ನು ಗೋಲ್ಡ್‌ ಡಿಗ್ಗರ್‌ ಎಂದು ಕರೆದರು

ಪ್ರಿಯಾಂಕ ಚೋಪ್ರಾ-ನಿಕ್ ಜೋನಾಸ್‌
ವಯಸ್ಸಿನಲ್ಲಿ ತಮಗಿಂತ ಹತ್ತು ವರ್ಷ ಚಿಕ್ಕವರಾದ ನಿಕ್ ಜೋನಾಸ್‌ರನ್ನು ಮದುವೆಯಾಗಿದ್ದಕ್ಕೆ ಜನರು ಪ್ರಿಯಾಂಕ ಚೋಪ್ರಾರನ್ನು ಗೋಲ್ಡ್ ಡಿಗ್ಗರ್ ಎಂದು ಕರೆದರು. ಹಣದಾಸೆಗೆ ಪ್ರಿಯಾಂಕ ಚೋಪ್ರಾ, ಗಾಯಕ ನಿಕ್ ಜೋನಾಸ್‌ರನ್ನು ಮದುವೆಯಾಗಿದ್ದಾರೆ ಎಂದು ಜನರು ಮಾತನಾಡಿಕೊಂಡರು. 

ಮಲೈಕಾ ಅರೋರಾ-ಅರ್ಬಜ್‌ ಖಾನ್‌
ಫಿಟ್‌ನೆಟ್‌ನಿಂದಲೇ ಫೇಮಸ್ ಆಗಿರುವ ಮಲೈಕಾ ಆರೋರಾಗೆ ಅರ್ಜುನ್ ಕಪೂರ್‌ ಜೊತೆ ಇರೋ ಸಂಬಂಧ ಗೌಪ್ಯವಾಗಿ ಉಳಿದಿಲ್ಲ. ಆದರೆ ಈ ಹಿಂದೆ ಸಲ್ಮಾನ್ ಸಹೋದರ ಅರ್ಬಜ್‌ ಖಾನ್‌ರನ್ನು ಮಲೈಕಾ ಮದುವೆಯಾಗಿದ್ದರು. ಕೇವಲ ಹಣಕ್ಕೋಸ್ಕರ ಮಲೈಕಾ ಈ ಮದುವೆಯಾಗಿದ್ದಾರೆ ಅಂತ ಹೇಳಲಾಗ್ತಿತ್ತು. ನಂತರದ ವರ್ಷಗಳಲ್ಲಿ ಇವರಿಬ್ಬರೂ ಬೇರ್ಪಟ್ಟರು. 

Latest Videos

click me!