ಪ್ರಬುದ್ಧ, ಸ್ವಲ್ಪ ಜಾಸ್ತಿ ವಯಸ್ಸಿನ ವ್ಯಕ್ತಿ ಸಿಕ್ಕಿದ್ರೆ ಲವ್ ಲೈಫ್ ಚೆನ್ನಾಗಿರುತ್ತೆ!

First Published | Aug 11, 2023, 5:43 PM IST

ರಿಲೇಶನ್ ಶಿಪ್ ನಲ್ಲಿ ಸಂತೋಷವಾಗಿ ಮತ್ತು ಟೆನ್ಶನ್ ಫ್ರೀ ಆಗಿರಲು ಬಯಸಿದ್ರೆ, ಅಥವಾ ಅನಗತ್ಯ ಜಗಳಗಳನ್ನು ಎದುರಿಸಲು ಬಯಸದಿದ್ದರೆ, ಇದಕ್ಕಾಗಿ ಮೆಚ್ಯೂರ್ ಆಗಿರೋ ಹುಡುಗನ ಜೊತೆ ಡೇಟಿಂಗ್ ಮಾಡಿ. ನಿಮ್ಮ ವಯಸ್ಸಿಗಿಂತ ತುಸು ಹೆಚ್ಚೆ ವಯಸ್ಸಿನ ಪುರುಷರೊಂದಿಗೆ ಡೇಟಿಂಗ್ ಮಾಡೋದ್ರಿಂದ ಅನೇಕ ಪ್ರಯೋಜನಗಳಿವೆ.  
 

ನೀವು ಯಾರೊಂದಿಗಾದರೂ ರಿಲೇಶನ್ ಶಿಪ್ ನಲ್ಲಿದ್ರೆ (relationship) ಮತ್ತು ಪ್ರತಿದಿನ ಜಗಳ, ಕಲಹ ನಡೆಯುತ್ತಿದ್ದರೆ, ಇಬ್ಬರ ಮಧ್ಯೆ ಅಂಡರ್ ಸ್ಟ್ಯಾಂಡಿಂಗ್ ಇಲ್ಲದೇ ಇದ್ರೆ, ಪದೇ ಪದೇ ಒಬ್ಬರ ಮೇಲೆ ಒಬ್ಬರು ಅನುಮಾನ ಪಡುತ್ತಿದ್ರೆ, ಅಂತಹ ಸಂಬಂಧ ಹೆಚ್ಚು ಕಾಲ ಉಳಿಯುವುದಿಲ್ಲ, ಅದು ಖಚಿತ. ಕೆಟ್ಟ ಸಂಬಂಧದಿಂದಾಗಿ ನಿಮ್ಮ ಪರ್ಸನಲ್ ಲೈಫ್ ಹೇಗೂ ಹಾಳಾಗುತ್ತೆ, ಜೊತೆಗೆ ಕರಿಯರ್ ಲೈಫ್  ಮೇಲೂ ಪರಿಣಾಮ ಬೀರುತ್ತವೆ, ಜೊತೆಗೆ ನೀವು ಮಾನಸಿಕ ಅಸ್ವಸ್ಥರಾಗಬಹುದು. 

ಸರಿಯಾದ ವ್ಯಕ್ತಿ ಜೊತೆ ರಿಲೇಶನ್ ಶಿಪ್ ನಲ್ಲಿ ಇಲ್ಲದೇ ಇದ್ರೆ, ಇಂತಹ ಸಮಸ್ಯೆಯನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗದಿರುವುದು ದೊಡ್ಡ ಸಮಸ್ಯೆಯಾಗುತ್ತದೆ. ಒಂದು ವೇಳೆ ನೀವು ಹೆಲ್ತಿ ರಿಲೇಶನ್ ಶಿಪ್ (healthy relationship) ನಲ್ಲಿದ್ರೆ, ನೀವು ಟೆನ್ಶನ್ ಫ್ರೀ ಆಗಿರಬಹುದು ಮತ್ತು ಉತ್ತಮ ಮತ್ತು ಆರೋಗ್ಯಕರ ಜೀವನವನ್ನು ನಡೆಸಬಹುದು. ಅದಕ್ಕಾಗಿಯೇ ನಾವು ಹೇಳೋದು ಮೆಚ್ಯೂರ್ ಆಗಿರೋ ಅಥವಾ ನಿಮಗಿಂತ ವಯಸ್ಸಲ್ಲಿ ಹಿರಿಯರರಾಗಿರೋ ವ್ಯಕ್ತಿ ಜೊತೆ ರಿಲೇಶನ್ ಶಿಪ್ ಲ್ಲಿ ಇರೋದು ಬೆಸ್ಟ್. 
 

Tap to resize

ಮೆಚ್ಯೂರ್ ಅಥವಾ ಹಿರಿಯ ಪುರುಷರೊಂದಿಗೆ ಡೇಟಿಂಗ್ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿದುಕೊಂಡ್ರೆ, ನೀವು ಖಂಡಿತವಾಗಿಯೂ ಅಂತಹ ವ್ಯಕ್ತಿಯನ್ನೇ ನಿಮ್ಮ ಜೀವನ ಸಂಗಾತಿಯನ್ನಾಗಿ (life partner) ಆಯ್ಕೆ ಮಾಡ್ಕೋತೀರಿ. 
 

ಮಾತುಕತೆ ಚೆನ್ನಾಗಿರುತ್ತೆ
ಸಂಗಾತಿ ಪ್ರಬುದ್ಧರಾಗಿದ್ದರೆ, (mature partner) ಅವರು ಸಣ್ಣ ವಿಷಯಗಳಿಗೆ ಜಗಳವಾಡುವ ಬದಲು ನಿಮ್ಮೊಂದಿಗೆ ಆರೋಗ್ಯಕರ ಸಂವಹನ ಮಾಡೋಕ್ಕೆ ಇಷ್ಟಪಡ್ತಾರೆ. ಯಾವುದೇ ಸಣ್ಣ ಪುಟ್ಟ ವಿಷಯದ ಬಗ್ಗೆ ನಿಮ್ಮ ನಡುವೆ ಯಾವುದೇ ಚರ್ಚೆ ಇರೋದಿಲ್ಲ. ಅವರು ತಮ್ಮ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ ಮತ್ತು ನಿಮ್ಮ ಮಾತುಗಳನ್ನು ಆರಾಮವಾಗಿ ಕೇಳುತ್ತಾರೆ. 

ಇನ್ ಸೆಕ್ಯೂರ್ ಫೀಲ್ ಆಗೋ ಚಾನ್ಸ್ ಇಲ್ವೇ ಇಲ್ಲ
ವಯಸ್ಸಾದ ಪುರುಷರಲ್ಲಿ ಅಭದ್ರತಾ ಭಾವನೆಯೂ ಕಡಿಮೆ. ವಾಸ್ತವವಾಗಿ, ಅವರು ಜೀವನದಲ್ಲಿ ಅನೇಕ ಅನುಭವಗಳನ್ನು ಹೊಂದಿರುತ್ತಾರೆ, ಈ ಕಾರಣದಿಂದಾಗಿ ಅವರು ಸಣ್ಣ ಪುಟ್ಟ ವಿಷಯಗಳಿಗೆ ಇನ್ ಸೆಕ್ಯೂರ್ ಫೀಲ್ (insecure feel) ಆಗೋದೆ ಇಲ್ಲ. 
 

ಅವರು ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಾರೆ
ಮೆಚ್ಯೂರ್ ಪುರುಷರ ಮತ್ತೊಂದು ಒಳ್ಳೆಯ ಗುಣ ಏನಂದ್ರೆ ಅವರು ತಪ್ಪು ಮಾಡಿದ್ದರೆ, ನಿಮ್ಮನ್ನು ದೂಷಿಸುವ ಬದಲು ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ವಿಷಯವನ್ನು ಪರಿಹರಿಸುವಲ್ಲಿ ನಂಬಿಕೆ ಇಟ್ಟಿದ್ದಾರೆ. ಇದು ಮಾತ್ರವಲ್ಲ, ಜಗಳವಾದಾಗ ಅವರು ನಿಮಗೆ ಮನವರಿಕೆ ಮಾಡಲು ಬರುತ್ತಾರೆ.

ಬದ್ಧತೆಯಲ್ಲಿ ನಂಬಿಕೆ ಇಡ್ತಾರೆ
ಪ್ರಬುದ್ಧ ಪುರುಷರು ತಮ್ಮ ಸಂಗಾತಿಯನ್ನು ಸಂತೋಷವಾಗಿಡಲು ನಂಬುತ್ತಾರೆ, ಈ ಕಾರಣದಿಂದಾಗಿ ಅವರು ಬದ್ಧತೆ ಬಗ್ಗೆ ಹೆದರೋದಿಲ್ಲ. ವಿಶೇಷ ಸಂದರ್ಭಗಳಲ್ಲಿ, ಅವರು ನಿಮ್ಮ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಹಿಂದೆ ಬೀಳುವುದಿಲ್ಲ. 

Latest Videos

click me!