ಗಂಡ ಹೆಂಡ್ತಿ ಸಂಬಂಧ ಗಟ್ಟಿಯಾಗಿರ್ಬೇಕು ಅಂದ್ರೆ … ಈ ಸುಳ್ಳು ಹೇಳೋದು ತಪ್ಪಲ್ಲ

First Published | Aug 15, 2023, 5:48 PM IST

ಅದು ಗಂಡ ಹೆಂಡತಿ ಸಂಬಂಧ ಆಗಿರಲಿ ಅಥವಾ ಪ್ರೇಮಿಗಳ ಸಂಬಂಧ ಆಗಿರಲಿ ಆ ಸಂಬಂಧದಲ್ಲಿ ಸಂಗಾತಿ ಬಳಿ ಸತ್ಯವನ್ನೇ ಹೇಳಬೇಕು ಅನ್ನೋದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸುಳ್ಳು ಹೇಳೋದು ಸಹ ಓಕೆಯಂತೆ. 
 

ಸಂಬಂಧಗಳಲ್ಲಿ (relationship) ಯಾವಾಗಲೂ ಸತ್ಯವನ್ನು ಮಾತನಾಡುವುದು ಮುಖ್ಯ. ಎಲ್ಲವೂ ಪಾರದರ್ಶಕವಾಗಿರಬೇರು.  ಇದರಿಂದ ನಿಮ್ಮ ಸಂಬಂಧ ಮತ್ತಷ್ಟು ಸ್ಟ್ರಾಂಗ್ ಆಗುತ್ತೆ. ಹೌದು, ಇದು ಸಂಪೂರ್ಣ ಸರಿ. ಆದರೆ, ನಿಮ್ಮ ಸಂಬಂಧವನ್ನು ಹಾಳುಮಾಡುವ ಕೆಲವು ಸತ್ಯಗಳಿವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಸಂಗಾತಿಗೆ ಆರೋಗ್ಯಕರ ಸುಳ್ಳು ಹೇಳಬಹುದು. ಇದರಿಂದ ಸಂಬಂಧ ಉತ್ತಮವಾಗಿರುತ್ತಂತೆ. 
 

ನೀವು ರಿಲೇಶನ್ ಶಿಪ್‌ನಲ್ಲಿದ್ರೆ ಸಂಗಾತಿ ಬಳಿ ಸುಳ್ಳು (lies with pertner) ಹೇಳೋದು ಅಂದ್ರೆ, ನಿಮ್ಮ ಸಂಗಾತಿಗೆ ಮೋಸ ಮಾಡೋದು ಅಂತಾನೆ ಅರ್ಥ. ಸುಳ್ಳು ಹೇಳೋದ್ರಿಂದ ಮುಂದೆ ಸಂಬಂಧದಲ್ಲಿ ಬಿರುಕು ಬಿಡಬಹುದು ಅಥವಾ ಆ ಸಂಬಂಧವೇ ದೂರವಾಗುವ ಸಾಧ್ಯತೆ ಇದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಸುಳ್ಳು ಹೇಳೋದು ತಪ್ಪಲ್ಲ. ಇದರಿಂದ ಸಂಬಂಧ ಸ್ಟ್ರಾಂಗ್ ಆಗುತ್ತಂತೆ. ಹಾಗಿದ್ರೆ ಯಾವ ರೀತಿಯ ಸುಳ್ಳು ಹೇಳೊದು ಸರಿ? 
 

Tap to resize

ನಿಮ್ಮ ಸಂಗಾತಿ ಕೆಟ್ಟದಾಗಿ ಭಾವಿಸಬಾರದು ಎಂದು ಯೋಚನೆ ಮಾಡಿ, ಅವರ ಬಳಿ ಸುಳ್ಳು ಹೇಳಿದ್ರೆ, ಆ ಸುಳ್ಳು ತಪ್ಪಲ್ಲ.. ಆದಾಗ್ಯೂ, ಈ ಸುಳ್ಳುಗಳನ್ನು ಯಾವಾಗ ಮತ್ತು ಹೇಗೆ ಹೇಳಬೇಕೆಂದು ನೀವು ತಿಳಿದಿರಬೇಕು. ಯಾವ ರೀತಿಯ ಸುಳ್ಳು ಹೇಳೋದ್ರಿಂದ ಸಂಗಾತಿ ಜೊತೆಗಿನ ಸಂಬಂಧ ಪೂರ್ತಿ ಸ್ಟ್ರಾಂಗ್ ಆಗುತ್ತಂತೆ. 
 

ಅನೇಕ ಬಾರಿ ಸಂಗಾತಿ ನಿಮಗೆ ವಿಶೇಷ ಭಾವನೆ ಮೂಡಿಸಲು ಅಥವಾ ಮುಖದಲ್ಲಿ ನಗುವ ತರಲು ತುಂಬಾ ಶ್ರಮಿಸುತ್ತಾರೆ. ಬಹುಶಃ ಆ ಸಮಯದಲ್ಲಿ ನಿಮ್ಮ ಮನಸ್ಥಿತಿ ಬದಲಾಗಿರಬಹುದು. ಅವರ ಪ್ರಯತ್ನಗಳ ಹೊರತಾಗಿಯೂ, ನಿಮ್ಮ ಮುಖದಲ್ಲಿ ನಗು ಬರೋದಿಲ್ಲ, ಇಂತಹ ಸಂದರ್ಭದಲ್ಲಿ ಸುಳ್ಳು ಹೇಳಿ ಸ್ವಲ್ಪ ಸಮಯದವರೆಗೆ ನಗಿ. ಇದು ನಿಮ್ಮವರ ಮುಖದಲ್ಲಿ ಸಹ ನಗು ಮೂಡುವಂತೆ  ಮಾಡುತ್ತೆ.. 
 

ದಿನದ 24 ಗಂಟೆಗಳ ಕಾಲ ನಾವು ನಮ್ಮ ಸಂಗಾತಿ ಜೊತೆ ಇರೋದಕ್ಕೆ ಆಗಲ್ಲ, ಆವಾಗ ಅವರನ್ನು ನಾವು  ಮಿಸ್ ಮಾಡ್ತೇವೆ. ಕೆಲವೊಮ್ಮೆ, ನಾವು ನಮ್ಮ ಕೆಲಸದಲ್ಲಿ ಅಥವಾ ನಮ್ಮ ಸ್ನೇಹಿತರೊಂದಿಗೆ ತುಂಬಾ ಬ್ಯುಸಿಯಾಗಿ ಬಿಡುತ್ತೇವೆ ಮತ್ತು ಈ ಮಧ್ಯೆ ನಮ್ಮ ಸಂಗಾತಿಯನ್ನು ಮಿಸ್ ಮಾಡಿಕೊಳ್ಳಲೂ ಸಮಯ ಇರೋದಿಲ್ಲ. ಆದರೂ ನೆನಪಾದಗ ಅವರಿಗೆ ಕಾಲ್ ಅಥವಾ ಮೆಸೇಜ್ ಮಾಡಿ ಮಿಸ್ ಯೂ (missing partner) ಅಂತ ಕಳುಹಿಸಿ. 
 

ಅನೇಕ ಬಾರಿ, ನಮ್ಮ ಸಂಗಾತಿ ನಮಗಾಗಿ ಉಡುಗೊರೆ ಖರೀದಿಸುತ್ತಾರೆ. ನಮಗಾಗಿ ವಿಶೇಷವಾದದ್ದನ್ನು ಪ್ಲ್ಯಾನ್ ಮಾಡ್ತಾರೆ. ಆದರೆ ಕೆಲವೊಮ್ಮೆ ಅವರ ಉಡುಗೊರೆಗಳು ನಮಗೆ ಇಷ್ಟವಾಗದಿರಬಹುದು. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಸತ್ಯ ಹೇಳುವ ಬದಲು, ನೀವು ಅವರ ಆಯ್ಕೆಯನ್ನು ಸಂತೋಷದಿಂದ ಪ್ರಶಂಸಿಸಬಹುದು. ಇದರಿಂದ ಸಂಬಂಧ ಸ್ಟ್ರಾಂಗ್ ಆಗುತ್ತೆ. 
 

ಸಂಗಾತಿ ಜೊತೆಗೆ ಕೆಲವೊಮ್ಮೆ ನಮ್ಮ ಹಿಂದಿನ ಪ್ರೇಮ, ಪ್ರೇಮಿ ಮತ್ತು ಕ್ರಶ್ ಬಗ್ಗೆ ಸತ್ಯ ಹೊರಹಾಕುತ್ತೇವೆ. ಇದೆಲ್ಲವನ್ನೂ ನೀವು ಅವರಿಗೆ ಹೇಳುವ ಅಗತ್ಯವಿಲ್ಲ, ಇದು ಭವಿಷ್ಯದಲ್ಲಿ ಇಬ್ಬರ ನಡುವಿನ ಜಗಳವನ್ನು ಉಂಟು ಮಾಡುವ ವಿಷ್ಯ. ಹಾಗಾಗಿ ಸಂಗಾತಿ ಜೊತೆ ಮಾಜಿ ಪ್ರೇಮಿ (ex lover) ಬಗ್ಗೆ ಹೇಳೋದು ಬೇಡ. 
 

ನಿಮ್ಮ ಸಂಗಾತಿಯು ನಿಮಗಾಗಿ ತಿನ್ನಲು ಕಷ್ಟಪಟ್ಟು ಏನನ್ನಾದರೂ ತಿಂಡಿ ಸಿದ್ಧಪಡಿಸಿದರೆ, ಅವರಿಗೆ ಉತ್ತಮ ಭಾವನೆ ಮೂಡಿಸಿ ಮತ್ತು ಅವರ ಆಹಾರವನ್ನು ಹೊಗಳಿ. ನೀವು ಆಹಾರವನ್ನು ಹೆಚ್ಚು ಇಷ್ಟಪಡದಿದ್ದರೂ ಅಥವಾ ಅದರಲ್ಲಿ ಏನಾದರೂ ಕೊರತೆಯಿದ್ದರೂ, ಅವರಿಗೆ ಅದನ್ನ ಹೇಳಬೇಡಿ. ಬದಲಾಗಿ ಅವರನ್ನ ಅಪ್ರಿಶಿಯೇಟ್ ಮಾಡಿ. ಇದರಿಂದ ಸಂಗಾತಿಗೆ ಖುಷಿಯಾಗುತ್ತೆ. 

Latest Videos

click me!