ಬಾಲಿವುಡ್‌ನ ಯಾವ ಜೋಡಿಗಳ ಮಧ್ಯೆಯೂ ಪ್ರೀತಿಯೇ ಇಲ್ಲ, ಎಲ್ಲಾ ವ್ಯವಹಾರ, ಬರೀ ಲೆಕ್ಕಾಚಾರ: ನೋರಾ

First Published | Apr 12, 2024, 4:33 PM IST

ಪ್ರಸ್ತುತ ಭಾರತದಲ್ಲಿ ನೆಲೆಸಿರುವ ಕೆನಡಾ ಮೂಲದ ನಟಿ ನೋರಾ ಫತೇಹಿ ತಮ್ಮ ಅದ್ಭುತವಾದ ಡಾನ್ಸ್ ಟ್ಯಾಲೆಂಟ್‌ಗೆ ಹೆಸರುವಾಸಿಯಾದವರು.ಸಂದರ್ಶನವೊಂದರಲ್ಲಿ ಅವರು ಬಾಲಿವುಡ್‌ನ ವಿವಾಹಿತ ಜೋಡಿಗಳ ಬಗ್ಗೆ ಮಾತನಾಡಿದ್ದು, ಅವರ ಬಿಚ್ಚು ಮಾತು ಅನೇಕರಿಗೆ ಶಾಕ್ ಮೂಡಿಸಿದೆ. 

ಪ್ರಸ್ತುತ ಭಾರತದಲ್ಲಿ ನೆಲೆಸಿರುವ ಕೆನಡಾ ಮೂಲದ ನಟಿ ನೋರಾ ಫತೇಹಿ ತಮ್ಮ ಅದ್ಭುತವಾದ ಡಾನ್ಸ್ ಟ್ಯಾಲೆಂಟ್‌ಗೆ ಹೆಸರುವಾಸಿಯಾದವರು. ರೋರ್‌ ಟೈಗರ್ಸ್ ಆಫ್ ಸುಂದರ್‌ಬನ್ ಸಿನಿಮಾದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ನೋರಾ ಮಡಂಗಾವ್ ಎಕ್ಸ್‌ಪ್ರೆಸ್‌ನಲ್ಲಿನ ನಟನೆಯ ಮೂಲಕ ಅನೇಕರನ್ನು ಇಂಪ್ರೆಸ್ ಮಾಡಿದವರು. ಇಂತಹ ನಟಿ ಈಗ ಸಂದರ್ಶನವೊಂದರಲ್ಲಿ ಬಾಲಿವುಡ್ ನಟನಟಿಯರು ಅವರ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಇವರ ಬಿಚ್ಚು ಮಾತು ಈಗ ಸಂಚಲನ ಸೃಷ್ಟಿಸಿದೆ. 

ರಣವೀರ್‌ ಅಲ್ಹಾಬಾದಿಯಾ ಅವರ ಪೋಡ್‌ಕಾಸ್ಟ್‌ನಲ್ಲಿ ಮಾತನಾಡಿದ ನಟಿ  ಕಾಮ್ ಡಾನ್ಸರ್‌ ಬಾಲಿವುಡ್‌ನಲ್ಲಿರುವ ಪ್ರಭಾವಶಾಲಿ ಪರಭಕ್ಷಕರು (clout predators) ಅಂದರೆ ತಮ್ಮ ಯಶಸ್ಸಿಗೆ ಖ್ಯಾತಿಗಾಗಿ ಬೇರೆಯವರ ಹಣ ಖ್ಯಾತಿಯನ್ನು ಬಳಸುವವರ ಬಗ್ಗೆ ಮಾತನಾಡಿದ್ದಾರೆ.

Tap to resize

ಬಾಲಿವುಡ್‌ನ ಅನೇಕ ಸೆಲೆಬ್ರಿಟಿ ಜೋಡಿಗಳ ಮಧ್ಯೆ ಪ್ರೀತಿಯೇ ಇಲ್ಲ, ಅವರು ಕೇವಲ ಪ್ರೀತಿ ಇದೆ ಎಂಬಂತೆ ಸಾರ್ವಜನಿಕವಾಗಿ ತೋರಿಸಿಕೊಳ್ಳುತ್ತಾರೆ ಅಷ್ಟೇ. ಬಾಲಿವುಡ್‌ನ ಬಹುತೇಕ ಜೋಡಿ ವ್ಯವಹಾರಕ್ಕಾಗಿ, ಪ್ರಸ್ತುತತೆಯನ್ನು ಕಾಯ್ದುಕೊಳ್ಳುವ ಸಲುವಾಗಿ ಜೊತೆಯಾಗಿ ಇರುತ್ತಾರೆ.

ಇವರದೆಲ್ಲಾ ಲೆಕ್ಕಾಚಾರದ ಬದುಕಾಗಿದ್ದು, ಅವರು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಮಿಕ್ಸ್ ಮಾಡುತ್ತಾರೆ. ಇದೇ ಕಾರಣಕ್ಕೆ ಅವರು ಮಾನಸಿಕ ಒತ್ತಡದ ಜೊತೆ ಖಿನ್ನತೆಯಿಂದ ಬಳಲುತ್ತಾರೆ ಎಂದು ನೋರಾ ಹೇಳಿದ್ದು, ಇದು ಬಾಲಿವುಡ್‌ ಮಂದಿಯತ್ತ ಜನ ಸಂಶಯದಿಂದ ನೋಡುವಂತೆ ಮಾಡಿದೆ. 

ನೋರಾ ಹೇಳುವಂತೆ ಕ್ಲಾಟ್ ಪ್ರಿಡಿಯೇಟರ್‌ಗಳು, ಕೇವಲ ನಿಮ್ಮನ್ನು ನಿಮ್ಮ ಪ್ರಸಿದ್ಧಿಯನ್ನು ಬಳಸಿಕೊಳ್ಳುತ್ತಾರೆ. ಆದರೆ ನನ್ನ ಜೊತೆ ಅದು ಸಾಧ್ಯವಾಗುವುದಿಲ್ಲ, ಇದೇ ಕಾರಣಕ್ಕೆ ನಾನು ಹುಡುಗರ ಜೊತೆ ಅಥವಾ ಡೇಟಿಂಗ್ ಅಂತ ಸುತ್ತಾಡುವುದು ನಿಮಗೆ ಕಾಣಿಸುವುದಿಲ್ಲ, ಆದರೆ ಇಂತಹ ಘಟನೆಗಳು ನನ್ನ ಮುಂದೆಯೇ ನಡೆಯುತ್ತಿರುವುದನ್ನು ನಾನು ನೋಡಿದ್ದೇನೆ. 

ಸಿನಿಮಾ ಇಂಡಸ್ಟ್ರಿಯ ಜನ ಅಳೆದು ತೂಗಿ ಲೆಕ್ಕಾಚಾರ ಮಾಡಿ ಮದ್ವೆಯಾಗ್ತಾರೆ. ಇದೇ ಜನ ತಮ್ಮ ಹೆಂಡತಿಯನ್ನು ಅಥವಾ ಗಂಡನನ್ನು ಸಹ ಹಣಕ್ಕಾಗಿ ತಮ್ಮ ವ್ಯವಹಾರಕ್ಕೆ ತಮ್ಮ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳಲು ಪಬ್ಲಿಸಿಟಿಗಾಗಿ ಬಳಸಿಕೊಳ್ಳುತ್ತಾರೆ. ಅಂತಹವರು ಹೀಗೆ ಯೋಚನೆ ಮಾಡುತ್ತಾರೆ. 

'ನಾನು ಆ ವ್ಯಕ್ತಿಯನ್ನು ಮದ್ವೆಯಾಗಬೇಕು. ಇದರಿಂದ ಮುಂದಿನ ಮೂರು ವರ್ಷಗಳು ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಆಕ್ಟಿವ್ ಆಗಿರುತ್ತೇನೆ  ಏಕೆಂದರೆ ಆಕೆಯ ಕೆಲ ಸಿನಿಮಾಗಳು ಬಿಡುಗಡೆಯಾಗುವುದರಲ್ಲಿ ಇವೆ.'

ಹಾಗೆಯೇ ಅವುಗಳು ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆ ಕಮಾಲ್ ಮಾಡುತ್ತಿವೆ. ಸೋ ಆ ಯಶಸ್ಸಿನ ಅಲೆಯಲ್ಲಿ ನಾನು ತೇಲಾಡಬಹುದು ಹೀಗೆ ಯೋಚನೆ ಮಾಡುತ್ತಾರೆ ಇಂತಹ ವ್ಯಕ್ತಿಗಳದ್ದು ಬರೀ ಲೆಕ್ಕಾಚಾರವಾಗಿದ್ದು, ಅವರೇ ಇಂಡಸ್ಟ್ರಿಯ  ಪ್ರಭಾವಿ ಪರಭಕ್ಷಕಗಳು ಎಂದು ನೋರಾ ಹೇಳಿದ್ದಾರೆ. 

ಪ್ರಸಿದ್ಧಿ ಹಾಗೂ ಅಧಿಕಾರದ ಬಗ್ಗೆ ಸೆಲೆಬ್ರಿಟಿಗಳ ಚಟದ ಬಗ್ಗೆ ಮಾತನಾಡಿದ ನೋರಾ, ಇವೆಲ್ಲವೂ ಕೇವಲ ಹಣ ಹಾಗೂ ಪ್ರಖ್ಯಾತಿಯ ಅಗತ್ಯತೆಯ ಕಾರಣದಿಂದ ಬರುತ್ತದೆ.  ಇಂತಹ ಹುಡುಗರು ಹಾಗೂ ಹುಡುಗಿಯರು ತಮ್ಮ ಸಂಪೂರ್ಣ ಜೀವನವನ್ನು ಹಣ, ಅಧಿಕಾರ ಹಾಗೂ ಪ್ರಸಿದ್ಧಿಗಾಗಿ ಹಾಳು ಮಾಡಿಕೊಳ್ಳುತ್ತಾರೆ. 

Nora Fatehi

ನಾವು ಸ್ವಲ್ಪವೂ ಪ್ರೀತಿಸದ ವ್ಯಕ್ತಿಯನ್ನು ಮದ್ವೆಯಾಗುವುದು ಹಾಗೂ ಅವರ ಜೊತೆ ಕೆಲ ವರ್ಷಗಳ ಕಾಲ ಜೀವಿಸುವುದಕ್ಕಿಂತ ಕೆಟ್ಟ ಸ್ಥಿತಿ ಬೇರೆ ಯಾವುದು ಇಲ್ಲ, ಸಿನಿಮಾ ಇಂಡಸ್ಟ್ರಿಯಲ್ಲಿರುವ ಬಹುತೇಕ ಜನ ಈ ಅವಿವೇಕದ ಕೆಲಸವನ್ನು ಮಾಡುತ್ತಿರುತ್ತಾರೆ. ಅದು ಕೇವಲ ತಾವು ಬಯಸಿದ ಸರ್ಕಲ್‌ಗಳಲ್ಲಿ ಇರಬೇಕು ಎಂಬ ಕಾರಣಕ್ಕೆ ಎಂದು ನೋರಾ ಹೇಳಿದ್ದಾರೆ.

ಸದಾ ಪ್ರಸಿದ್ಧಿಯಲ್ಲಿ ಇರಲು ಬಯಸುತ್ತಾರೆ. ಅವರ ಕೆರಿಯರ್ ಏನಾಗಬಹುದು ಎಂಬುದು ಅವರಿಗೆ ಗೊತ್ತಿರುವುದಿಲ್ಲ, ಹೀಗಾಗಿ ಅವರು ಪ್ಲಾನ್ ಎ, ಪ್ಲಾನ್ ಬಿ, ಪ್ಲಾನ್ ಸಿ ಅಂತ ಕೆಲವು ಬ್ಯಾಕಪ್‌ ಪ್ಲಾನ್‌ಗಳನ್ನು ಮಾಡಿಕೊಂಡಿರುತ್ತಾರೆ. ಆದರೆ ನಿಮ್ಮ ವೈಯಕ್ತಿಕ ಜೀವನ, ಮಾನಸಿಕ ಆರೋಗ್ಯ, ಖುಷಿಯನ್ನು ತ್ಯಾಗ ಮಾಡುವುದು ಏಕೆ ಎಂಬುದು ನನಗೆ ಅರ್ಥ ಆಗುತ್ತಿಲ್ಲ,

ಏಕೆಂದರೆ ಕೆಲಸ ಎಂಬುದು ಕೆಲಸ ಮಾತ್ರ ಆದರೆ ಮನೆಯ ಜೀವನ, ವೈಯಕ್ತಿಕ ಬದುಕು ಅದೊಂತರ ಬೇರೆ.  ನೀವು ಇವೆರಡನ್ನು ಮಿಶ್ರ ಮಾಡಲಾಗದು ಏಕೆಂದರೆ ಇವರೆಡನ್ನು ಮಿಕ್ಸ್ ಮಾಡಿದರೆ ನೀವು ಯಾವತ್ತೂ ಖುಷಿಯಾಗಿರಲು ಸಾಧ್ಯವಿಲ್ಲ, ನಂತರ ನಿಮಗೆ ಏಕೆ ಖಿನ್ನತೆ ಕಾಡುತ್ತಿದೆ, ಸಾಯಬೇಕು ಎಂದು ಏಕೆ ಅನಿಸುತ್ತಿದೆ ಎಂಬುದರ ಬಗ್ಗೆ ನೀವೇ ಅಚ್ಚರಿಗೊಳ್ಳುವಿರಿ ಎಂದು ನೋರಾ ಹೇಳಿದ್ದಾರೆ. 

Latest Videos

click me!