ಮದ್ವೆಗೂ ಮೊದಲು ಜೊತೆಯಾಗಿ ಜೀವಿಸಿ: ಯುವ ಸಮೂಹಕ್ಕೆ ನಟಿ ಜೀನತ್ ಸಲಹೆ

Published : Apr 10, 2024, 12:42 PM IST

ಬಾಲಿವುಡ್ ಹಿರಿಯ ನಟಿ ಜೀನತ್ ಅಮಾನ್  ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟಿವ್ ಆಗಿದ್ದು, ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಾ ಸದಾ ಒಂದಿಲ್ಲೊಂದು ಸಲಹೆಗಳನ್ನು ಯುವ ಸಮೂಹಕ್ಕೆ ನೀಡುತ್ತಲೇ ಇರುತ್ತಾರೆ.  

PREV
111
ಮದ್ವೆಗೂ ಮೊದಲು ಜೊತೆಯಾಗಿ ಜೀವಿಸಿ: ಯುವ ಸಮೂಹಕ್ಕೆ ನಟಿ ಜೀನತ್ ಸಲಹೆ

ಬಾಲಿವುಡ್ ಹಿರಿಯ ನಟಿ ಜೀನತ್ ಅಮಾನ್  ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟಿವ್ ಆಗಿದ್ದು, ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಾ ಸದಾ ಒಂದಿಲ್ಲೊಂದು ಸಲಹೆಗಳನ್ನು ಯುವ ಸಮೂಹಕ್ಕೆ ನೀಡುತ್ತಲೇ ಇರುತ್ತಾರೆ. 

211

ಇನ್ಸ್ಟಾದಲ್ಲಿ ನಿರಂತರವಾಗಿ ಫೋಟೋಗಳನ್ನು ಪೋಸ್ಟ್ ಮಾಡುವ ಅವರು ಅದರ ಜೊತೆಗೆ ಸಿನಿಮಾ ಜಗತ್ತಿನ ಆದರೆ ಕ್ಯಾಮರಾ ಮುಂದೆ ಕಂಡಿರದ ಕೆಲ ವಿಚಾರಗಳನ್ನು ಪಟ್ಟ ಕಷ್ಟಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.  

311

 ಬಾಲಿವುಡ್‌ನ ಎವರ್‌ಗ್ರೀನ್ ದಿವಾ ಆಗಿರುವ ಈ ನಟಿ ಈಗ ಯುವ ಸಮೂಹಕ್ಕೆ ಸಂಬಂಧದ ಬಗ್ಗೆ ಸಲಹೆ ನೀಡಿದ್ದಾರೆ. ಮದುವೆಯಾಗುವುದಕ್ಕೂ ಮೊದಲು ಜೊತೆಯಾಗಿ ಜೀವಿಸಿ ಎಂದು ಯುವ ಸಮೂಹಕ್ಕೆ ಅವರು ಸಲಹೆ ಕೊಟ್ಟಿದ್ದು, ಈ ಸಲಹೆಯ ಜೊತೆಗೆ ಅವರು ಹಸಿರು ಬಣ್ಣದ ಹೂವಿನ ಶರ್ಟ್ ಧರಿಸಿ ಬಿಳಿ ಲಂಗ ಹಾಕಿ ಗಾರ್ಡನ್‌ನಲ್ಲಿ ತಮ್ಮ ಶ್ವಾನದ ಜೊತೆ ಕುಳಿತಿರುವ ಫೋಟೋ ಹಾಕಿದ್ದಾರೆ. 

411

 ನನ್ನ ಈ ಹಿಂದಿನ ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಒಬ್ಬರು ಸಂಬಂಧದ ಬಗ್ಗೆ ನನ್ನಲ್ಲಿ ಸಲಹೆ ಕೇಳಿದ್ದರು. ನಾನು ಈ ಹಿಂದೆ ಎಲ್ಲೂ ಹಂಚಿಕೊಳ್ಳದ ಅಭಿಪ್ರಾಯವನ್ನು ನಾನಿಲ್ಲಿ ಹೇಳುತ್ತಿದ್ದೇನೆ. 

511

ನೀವು ಸಂಬಂಧದಲ್ಲಿ ಇರುವವರಾದರೆ ನೀವು ಮದುವೆಯಾಗುವ ಮೊದಲು ಒಟ್ಟಿಗೆ ವಾಸಿಸಬೇಕೆಂದು ನಾನು ಬಲವಾಗಿ ಶಿಫಾರಸು ಮಾಡುತ್ತೇನೆ ಎಂದು ಅವರು ಬರೆದಿದ್ದಾರೆ. ಇದೇ ಸಲಹೆಯನ್ನು ನಾನು ಯಾವಾಗಲೂ ನನ್ನ ಪುತ್ರರಿಗೆ ನೀಡಿದ್ದೇನೆ, ಅವರಿಬ್ಬರೂ ಲಿವ್ ಇನ್ ಸಂಬಂಧವನ್ನು ಹೊಂದಿದ್ದಾರೆ.

611

ಇಬ್ಬರು ಜನರು ತಮ್ಮ ತಮ್ಮ ಕುಟುಂಬಗಳು ಮತ್ತು ಸಮಾಜವನ್ನು ಒಟ್ಟಿಗೆ ಸೇರಿಸುವಲ್ಲಿ ತೊಡಗಿಸಿಕೊಳ್ಳುವ ಮೊದಲು ಜೊತೆಯಾಗಿ ಇದ್ದರೆ ಅದರು ವಾಸ್ತವವನ್ನು ನಿಮಗೆ ತೋರಿಸುತ್ತದೆ ಎಂದು ನನಗೆ ಅನಿಸುತ್ತದೆ.  ಈ ಮೂಲಕ ಮದುವೆಗೂ ಮೊದಲು ಸಂಬಂಧವನ್ನು ಅಂತಿಮ ಪರೀಕ್ಷೆಗೆ ಒಳಪಡಿಸಬಹುದು ಎಂದು ಅವರು ಹೇಳಿದ್ದಾರೆ. 

711

ದಿನದ ಕೆಲವು ಗಂಟೆಗಳ ಕಾಲ ನೀವು ನಿಮ್ಮ  ಅತ್ಯುತ್ತಮ ಆವೃತ್ತಿಯಾಗಿರುವುದು ಸುಲಭ. ಆದರೆ ನೀವು ನಿಮ್ಮ ಬಾತ್ರೂಮ್ ಅನ್ನು ಹಂಚಿಕೊಳ್ಳಬಹುದೇ? ನಿಮ್ಮಿಬ್ಬರ ಕೆಟ್ಟ ಮೂಡ್‌ನ ಬಿರುಗಾಳಿಯನ್ನು ಸಹಿಸಿಕೊಳ್ಳಬಹುದೇ?

811

ಪ್ರತಿ ರಾತ್ರಿ ಊಟಕ್ಕೆದ ಆಯ್ಕೆಯ ಬಗ್ಗೆ ನಿಮ್ಮ ಸಹಮತವಿರುವುದೇ? ಇದೆಲ್ಲ ಭಿನ್ನತೆಯ ನಡುವೆಯೂ ಮಲಗುವ ಕೋಣೆಯ ಬಿಸಿ ಆರದಂತೆ ಜೀವಂತವಾಗಿರಿಸಲು ಸಾಧ್ಯವೇ? 

911

ಇಬ್ಬರೂ ಜೊತೆಯಲ್ಲಿ ಜೀವಿಸಲು ಆರಂಭಿಸಿದಾಗ ಅಥವಾ ಸಮೀಪದಲ್ಲಿ ಇದ್ದಾಗಲೇ ಸಾವಿರಾರು ಸಣ್ಣ ಸಣ್ಣ ಅಸಮಾಧಾನಗಳು, ಘರ್ಷಣೆಗಳು,  ಸಂಭವಿಸುವುದು ಹಾಗೂ ವಾಸ್ತವದ ಅರಿವಾಗುವುದು ಹಾಗೂ ತಾವಿಬ್ಬರು ಪರಸ್ಪರ ಹೊಂದಿಕೊಳ್ಳಬಹುದೇ ಎಂಬುದು ತಿಳಿಯುವುದು ಎಂದು ಜೀನತ್ ಅವರು ಬರೆದುಕೊಂಡಿದ್ದಾರೆ. 

1011

ಭಾರತೀಯ ಸಮಾಜವೂ ಕೆಲ ವಿಚಾರಗಳಲ್ಲಿ ನರಕದಲ್ಲಿ ಜೊತೆಯಾಗಿ ಬದುಕುವ (living in sin) ಬಗ್ಗೆ ಉತ್ಸುಕವಾಗಿದೆ ಎಂಬುದು ನನಗೆ ತಿಳಿದಿದೆ. ಇದರ ಜೊತೆ ಜೊತೆಗೆ ಸಮಾಜವೂ ಅನೇಕ ವಿಚಾರಗಳ ಬಗ್ಗೆ ಅಸಮಾಧಾನಗೊಂಡಿದೆ. ಜನ ಏನ್ ಹೇಳ್ತಾರೆ? ಎಂದು ಅವರು ಬರಹಕ್ಕೆ ವಿರಾಮ ನೀಡಿದ್ದಾರೆ. 

1111

ಇನ್ನು ಜೀನತ್ ಅಮಾನ್ ಅವರ ಕೆಲಸದ ಬಗ್ಗೆ ಹೇಳುವುದಾದರೆ ಅವರು ಕೊನೆಯದಾಗಿ ಅರ್ಜುನ್ ಕಪೂರ್ ಹಾಗೂ ಕೃತಿ ಸನನ್ ನಟನೆಯ ಪಾನಿಪತದ ಸಿನಿಮಾದಲ್ಲಿ ಕೊನೆಯದಾಗಿ ನಟಿಸಿದ್ದರು.  ಇದರ ಜೊತೆಗೆ  2019ರಲ್ಲಿ ತೆರೆ ಕಂಡ ಸಾಕಿನಾ ಬೇಗಂನಲ್ಲಿಯೂ ನಟಿಸಿದ್ದಾರೆ. 

click me!

Recommended Stories