ಗಂಡ ಹೆಂಡ್ತಿ ಸಂಬಂಧ ಚೆನ್ನಾಗಿರಬೇಕಂದ್ರೆ ಈ 6 ವಿಷ್ಯ ನೆನಪಿಡಿ

First Published Apr 10, 2024, 4:47 PM IST

ಯಾವುದೇ ಒಂದು ಸಂಬಂಧ ಚೆನ್ನಾಗಿರಬೇಕು ಅಂದ್ರೆ ಅಲ್ಲಿ ಇಬ್ಬರ ನಡುವಿನ ಬಾಂಧವ್ಯ, ನಂಬಿಕೆ, ಭಾವನಾತ್ಮಕ ಸಂಬಂಧ ಚೆನ್ನಾಗಿರಬೇಕು. ಸಂಬಂಧ ಸದೃಢವಾಗಿರಲು ಬೇಕಾದ ಆರು ಪ್ರಮುಖ ವಿಷ್ಯಗಳ ಬಗ್ಗೆ ತಿಳಿಯೋಣ. 
 

ಪ್ರೀತಿ (love) ಮತ್ತು ಆಕರ್ಷಣೆಯ (Attraction) ಹೊರತಾಗಿ, ಸಂಬಂಧ (relationship) ದೀರ್ಘಕಾಲ ಉಳಿಯಬೇಕು ಅಂದ್ರೆ ಅದರ ಬುನಾದಿ ತುಂಬಾ ಸ್ಟ್ರಾಂಗ್ ಆಗಿರಲೇಬೇಕು. ಲೈಂಗಿಕ ಅನ್ಯೋನ್ಯತೆಯ (Sexual Compatibility) ಜೊತೆಗೆ, ಸಂಬಂಧವನ್ನು ಬಲಪಡಿಸಲು ಸಂಗಾತಿ ನಡುವೆ ಬಲವಾದ ಭಾವನಾತ್ಮಕ ಬಂಧಗಳು (Emotional Bonding) ಸಹ ಬೇಕಾಗುತ್ತವೆ. ಈ ಭಾವನಾತ್ಮಕ ಸಂಬಂಧವು (Emotional Relationship) ಪ್ರೀತಿ, ನಂಬಿಕೆ ಮತ್ತು ಕಾಳಜಿಯಂತಹ ಸಣ್ಣ ವಿಷಯಗಳೊಂದಿಗೆ ಬೆಳೆಯಲು ಪ್ರಾರಂಭಿಸುತ್ತದೆ. ಸಂಬಂಧ ಬಲಪಡಿಸಲು ಸಹಾಯ ಮಾಡುವ ಭಾವನಾತ್ಮಕ ಅಗತ್ಯಗಳು ಯಾವುವು ಅನ್ನೋದನ್ನು ತಿಳಿಯೋಣ. 
 

ಭಾವನಾತ್ಮಕ ಅಗತ್ಯಗಳು ಏಕೆ ಮುಖ್ಯ?
ಯಾವುದೇ ಸಂಬಂಧ ಆರೋಗ್ಯಕರ ಮತ್ತು ದೀರ್ಘಕಾಲ ಉಳಿಯಬೇಕು ಅನ್ನೋದಾದ್ರೆ ಅದರ ಜವಾಬ್ದಾರಿ ಇಬ್ಬರ ಹೆಗಲ ಮೇಲೆ ಸಮಾನಾಗಿರಬೇಕು. ಒಂದು ವೇಳೆ ಸಂಗಾತಿ ನಡುವೆ ಇಮೋಷನಲ್ ಗ್ಯಾಪ್ ಇದ್ರೆ, ಅದು ಸಂಬಂಧವನ್ನು ಛಿದ್ರಗೊಳಿಸುತ್ತದೆ. ಇದಕ್ಕಾಗಿ, ಪರಸ್ಪರ ಸಂವಾದ (Conversation), ತಿಳುವಳಿಕೆ (Awareness), ನಂಬಿಕೆ ಮತ್ತು ಪ್ರೀತಿ ಇರಲೇಬೇಕು. ಸಂಗಾತಿ ಜೊತೆ ಇದ್ದರೆ ಮಾತ್ರ ಸಾಲದು, ಅದರ ಹೊರತಾಗಿ, ಸಂಗಾತಿಯ ಗೌರವ ಮತ್ತು ಅಗತ್ಯಗಳನ್ನು ನೋಡಿಕೊಳ್ಳುವುದು ಸಹ ಮುಖ್ಯ. ಇದಲ್ಲದೆ, ಇಬ್ಬರ ನಡುವೆ ಟ್ರಾನ್ಸ್ಫರೆನ್ಸಿ ಇದ್ರೆ, ಸಂಬಂಧ ಮತ್ತಷ್ಟು ಸದೃಢವಾಗುತ್ತೆ.

ನಂಬಿಕೆ ಮುಖ್ಯ
ಸಂಬಂಧದಲ್ಲಿ ನಂಬಿಕೆಯೇ (faith) ಇಲ್ಲದಿದ್ದರೆ ಮಾನಸಿಕ ಒತ್ತಡವನ್ನು (Mental Stress) ಉಂಟುಮಾಡಲು ಪ್ರಾರಂಭಿಸುತ್ತದೆ. ವ್ಯಕ್ತಿಯು ಮನಸ್ಸಿನಲ್ಲಿ ಅಸಮಾಧಾನಗೊಳ್ಳುತ್ತಾನೆ ಮತ್ತು ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ತಜ್ಞರ ಪ್ರಕಾರ, ಸಂಬಂಧದಲ್ಲಿ ನಂಬಿಕೆಯೇ ಇಲ್ಲದಿದ್ದರೆ, ಪ್ರತಿ ಸಣ್ಣ ವಿಷಯವನ್ನು ಅನುಮಾನಿಸುವುದು ಶುರುವಾಗುತ್ತೆ, ಇದರಿಂದ ಸಂಬಂಧದಲ್ಲಿ ಬಿರುಕು ಬಿಡೋದಕ್ಕೆ ಆರಂಭಿಸುತ್ತೆ. ಹಾಗಾಗಿ ನಂಬಿಕೆ ಅನ್ನೋದು ತುಂಬಾನೆ ಮುಖ್ಯ. 

ಸೋಲಿನಲ್ಲಿ, ಗೆಲುವಿನಲ್ಲಿ ಜೊತೆಯಾಗಿ 
ಪ್ರತಿಯೊಬ್ಬ ವ್ಯಕ್ತಿಯ ಇಷ್ಟಗಳು ಮತ್ತು ಇಷ್ಟಪಡದಿರುವಿಕೆಗಳು ವಿಭಿನ್ನವಾಗಿರುತ್ತವೆ ಮತ್ತು ಬಿಹೇವಿಯರ್‌ನಲ್ಲಿ ಕೂಡ ವ್ಯತ್ಯಾಸವಿರುತ್ತದೆ. ಆದರೆ ಇದರ ಹೊರತಾಗಿಯೂ, ನಿಮ್ಮ ಸಂಗಾತಿಯೊಂದಿಗೆ ಕನೆಕ್ಟ್ ಆಗೋದು ಮುಖ್ಯ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ, ಅವರ ಸೋಲಿನಲ್ಲಿ ಅವರೊಂದಿಗೆ ನಿಲ್ಲಿರಿ ಮತ್ತು ಸಾಧನೆಗಳನ್ನು ಒಟ್ಟಿಗೆ ಸೆಲೆಬ್ರೇಟ್ ಮಾಡಿ. ಇದು ಇಬ್ಬರ ನಡುವಿನ ಭಾವನಾತ್ಮಕ ಸಂಬಂಧ ಗಟ್ಟಿಯಾಗಲು ಸಹಾಯ ಮಾಡುತ್ತೆ. 

ಆಕ್ಸೆಪ್ಟ್ ಮಾಡೋದು ಮುಖ್ಯ
ಒಬ್ಬ ವ್ಯಕ್ತಿಯನ್ನು ಸ್ವೀಕರಿಸುವುದರ (Acceptancy) ಹೊರತಾಗಿ, ಅವರ ಕನಸುಗಳು, ಭಾವನೆಗಳು ಮತ್ತು ನಡವಳಿಕೆಯನ್ನು ಸಹ ಸ್ವೀಕರಿಸೋದು ಮುಖ್ಯ. ಇದಲ್ಲದೆ, ಸಂಗಾತಿಯನ್ನು ನಿಮ್ಮ ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದವರಿಗೆ ಪರಿಚಯಿಸಿ, ಇದರಿಂದ ಅವರು ಸಹ ಸಂಗಾತಿಯನ್ನು ಸ್ವೀಕರಿಸಬಹುದು. ನಿಮ್ಮ ಜೀವನದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಸಂಗಾತಿಯ ಅನುಮತಿ ಕೇಳಿ, ಇಬ್ಬರು ಒಪ್ಪಿದ ಮೇಲೆ ಒಂದು ನಿರ್ಧಾರಕ್ಕೆ ಬನ್ನಿ, ಸಂಗಾತಿಗೂ ಆದ್ಯತೆ ನೀಡಿ. 

ಭದ್ರತೆ (Security)
ಸಂಬಂಧವು ಆರೋಗ್ಯಕರ ಮತ್ತು ಸಂತೋಷವಾಗಿರಲು ಬಯಸಿದ್ರೆ, ಸುರಕ್ಷಿತ ಭಾವನೆಯನ್ನು(Safe Feel) ಅನುಭವಿಸುವುದು ಅವಶ್ಯಕ. ಸಂಗಾತಿಯಿಂದ ಮಾನಸಿಕ ಮತ್ತು ಭಾವನಾತ್ಮಕ ಬೆಂಬಲವನ್ನು (Emotional Support) ಪಡೆದರೆ ಸಂಬಂಧದಲ್ಲಿ ಭದ್ರತೆಯನ್ನು ಅನುಭವಿಸುತ್ತಾರೆ. ಸುರಕ್ಷಿತ ಭಾವನೆಯನ್ನು ಅನುಭವಿಸುವ ಮೂಲಕ, ಒಬ್ಬ ವ್ಯಕ್ತಿಯು ತನ್ನ ಭಾವನೆಗಳನ್ನು ಸಂಗಾತಿ ಜೊತೆ ಸುಲಭವಾಗಿ ಹಂಚಿಕೊಳ್ಳಬಹುದು.
 

ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು
ನಿಮ್ಮ ನಡವಳಿಕೆ ಮತ್ತು ಮಾತು, ನಿಮ್ಮ ಸಂಬಂಧದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಳ್ಳುವುದು ಬಹಳ ಮುಖ್ಯ. ಸಣ್ಣ ತಪ್ಪುಗಳನ್ನು ಕ್ಷಮಿಸುವುದು ಮತ್ತು ಸ್ಪೇಸ್ ನೀಡುವುದು ಸಂಬಂಧವನ್ನು ಬಲಪಡಿಸುತ್ತದೆ. ಇದಲ್ಲದೆ, ಭಾವನಾತ್ಮಕ ಸಂಬಂಧ ಸುಮಧುರವಾಗಿರಲು ಸಹಾಯ ಮಾಡುತ್ತೆ.

ಗೌರವದ ಭಾವನೆ
ಅಪರಿಚಿತ ಜನರ ಮುಂದೆ ಸಂಗಾತಿಯನ್ನು ಕೀಳಾಗಿ ಕಾಣುವುದು ಮತ್ತು ಸಂಗಾತಿಯೊಂದಿಗೆ ಕೆಟ್ಟದಾಗಿ ವರ್ತಿಸುವುದು ಸಂಬಂಧದಲ್ಲಿ ರೆಡ್ ಫ್ಲ್ಯಾಗ್  (red flag) ಅನ್ನೋದನ್ನು ತೋರಿಸುತ್ತದೆ. ಸಂಬಂಧದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವಾಗ ಸಂಗಾತಿಯ ಆಸೆಗಳು ಮತ್ತು ಪ್ರತಿಭೆಗಳನ್ನು ಗೌರವಿಸುವುದು ಅತ್ಯಗತ್ಯ. ಇದು ಇಬ್ಬರನ್ನು ಭಾವನಾತ್ಮಕವಾಗಿ ಕನೆಕ್ಟ್ ಮಾಡುತ್ತದೆ, ಇದು ಸಂಬಂಧದಲ್ಲಿನ ಸಂದಿಗ್ಧತೆಯನ್ನು ಸಹ ದೂರ ಮಾಡುತ್ತೆ.
 

click me!