ಯುವಕರಲ್ಲಿ ಹೆಚ್ಚುತ್ತಿದೆ ಬೆಂಚಿಂಗ್ ಟ್ರೆಂಡ್, ರಿಲೇಶನ್‌ಶಿಪ್ ಅಂದ್ರೆ ಇಷ್ಟೇನಾ?

First Published Jun 17, 2024, 4:15 PM IST

ನೀವು ಡೇಟಿಂಗ್ ಮಾಡುತ್ತಿರುವ ವ್ಯಕ್ತಿಯು ನಿಮಗೆ ಸಂಪೂರ್ಣವಾಗಿ ಬದ್ಧನಾಗಿದ್ದಾನೆಯೇ? ಒಂದೆಡೆ, ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ರಿಲೇಶನ್ ಶಿಪ್‌ಗೆ ಮುನ್ನ ಡೇಟಿಂಗ್ ಮಾಡೋದು ಕಾಮನ್, ಮತ್ತೊಂದೆಡೆ, ಹೊಸ ರೀತಿಯ ಸಂಬಂಧಗಳು ಸಹ ಕಂಡುಬರುತ್ತಿವೆ. ಇದನ್ನು ಬೆಂಚಿಂಗ್ ಅಂತಾರೆ. ಏನಿದು ಬೆಂಚಿಂಗ್ ಅನ್ನೋದನ್ನ ತಿಳಿಯೋಣ. 
 

ಇತ್ತೀಚಿನ ದಿನಗಳಲ್ಲಿ, ಇಂದಿನ ಯುವಕರು ಸೃಷ್ಟಿಸಿರೋ ರಿಲೇಶನ್ ಶಿಪ್‌ನಲ್ಲಿ (Relationship) ಏನೇನೋ ಹೆಸರುಗಳಿರೋದನ್ನ ಕಾಣಬಹುದು. ಉದಾಹರಣೆಗೆ ಸಿಚುವೇಶನ್ ಶಿಪ್ (Situation Ship), ಬ್ರೆಡ್ ಕ್ರಂಬಿಂಗ್ (Bread Curmbing), ಫ್ರೆಂಡ್ಸ್ ವಿತ್ ಬೆನಿಫಿಟ್ಸ್ (Friends with Benefits) ಇತ್ಯಾದಿ. ಅಂತಹ ಪದಗಳಲ್ಲಿ ಒಂದು ಬೆಂಚಿಂಗ್. ಆದರೆ ಅದರ ಅರ್ಥವೇನು? ನೀವು ಯಾರ ಜೊತೆಗಾದರೂ ಬೆಂಚಿಂಗ್ ಮಾಡ್ತಿದ್ದೀರಾ? ಇತ್ತೀಚಿನ ದಿನಗಳಲ್ಲಿ ಹುಡುಗರು ಮತ್ತು ಹುಡುಗಿಯರು ಬೆಂಚಿಂಗ್ ಬಗ್ಗೆ ತುಂಬಾನೇ ಕ್ರೇಜ್ ಹೊಂದಿದ್ದಾರೆ, ತಮ್ಮ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಈ ಬೆಂಚಿಂಗ್ ಬಗ್ಗೆ ತಿಳಿಯೋಣ. 
 

ಇಂದು ನಾವು ಈ ಲೇಖನದಲ್ಲಿ ಸಂಬಂಧದ ಈ ಹೊಸ ಪರಿಕಲ್ಪನೆಯ ಬಗ್ಗೆ ನಿಮಗೆ ಹೇಳಲಿದ್ದೇವೆ ಮತ್ತು ಹುಡುಗರು ಮತ್ತು ಹುಡುಗಿಯರಲ್ಲಿ ಅದರ ಕ್ರೇಜ್ ಏಕೆ ಹೆಚ್ಚುತ್ತಿದೆ ಅನ್ನೋದನ್ನು ನಿಮಗೆ ಹೇಳಲಿದ್ದೇವೆ. ಇದಲ್ಲದೆ, ನಿಮ್ಮ ಸಂಬಂಧವನ್ನು ಹೇಗೆ ಸರಿಯಾದ ದಾರಿಗೆ ತರಬಹುದು ಅನ್ನೋದನ್ನು ಸಿಂಪಲ್ ಆಗಿ ಹೇಳ್ತೀವಿ ಕೇಳಿ. 
 

ಬೆಂಚಿಂಗ್ ಎಂದರೇನು?
ಬೆಂಚಿಂಗ್ (benching) ಈ ಪದದಿಂದ ನಿಮಗೇನು ಅರ್ಥವಾಗುತ್ತೆ? ಯಾರನ್ನಾದರೂ ಬೆಂಚಿನ ಮೇಲೆ ಕುಳಿತುಕೊಳ್ಳುವಂತೆ ಮಾಡೋದನ್ನು ಬೆಂಚಿಂಗ್ ಅಂತಾರೆ. ಆದರೆ ಸಂಬಂಧದಲ್ಲಿ ಬೆಂಚಿಂಗ್ ವಿಷಯಕ್ಕೆ ಬಂದಾಗ, ಅದರ ಅರ್ಥ ತುಂಬಾ ದೊಡ್ಡದಿದೆ. ಹಾಗಿದ್ರೆ ಬೆಂಚಿಂಗ್ ಅಂದ್ರೇನು ನೋಡಿ. 

ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಬಗ್ಗೆ ಇಂಟ್ರೆಸ್ಟ್ ಇದೆ ಆದರೆ ಆ ವ್ಯಕ್ತಿ ಜೊತೆ ಸೀರಿಯಸ್ ರಿಲೇಶನ್ ಶಿಪ್ ನಲ್ಲಿರೋದು ಇಷ್ಟವಿರೋದಿಲ್ಲ ಇದಕ್ಕೆ ಬೆಂಚಿಂಗ್ ಅಂತಾರೆ.  ಈ ರೀತಿಯ ರಿಲೇಶನ್‌ಶಿಪ್‌ನಲ್ಲಿ ಇರೋವವರು ತಮ್ಮ ಅಗತ್ಯಗಳನ್ನು ಪೂರೈಸಲು ತಮ್ಮ ಸಂಗಾತಿಯನ್ನು ಬಳಸ್ತಾರೆ ಅಷ್ಟೇ. ಅಂದ್ರೆ ವ್ಯಕ್ತಿಯು ಇಮೋಶನಲ್ ಆಗಿ ಕುಗ್ಗಿ ಹೋಗಿದ್ರೆ, ಏಕಾಂಗಿಯಾಗಿದ್ದಾಗ, ಇನ್ನೊಬ್ಬ ವ್ಯಕ್ತಿಯ ಕಂಪನಿ ಬಯಸೋದೆ ಬೆಂಚಿಂಗ್. 
 

ಬೆಂಚಿಂಗ್ ಕ್ರೇಜ್ ಏಕೆ ಹೆಚ್ಚುತ್ತಿದೆ?
ಡೇಟಿಂಗ್ ಅಪ್ಲಿಕೇಶನ್‌ಗಳು (Dating Applications) ಮತ್ತು ಸಾಮಾಜಿಕ ಮಾಧ್ಯಮ (Social Media)- ಈ ಪ್ಲಾಟ್ ಫಾರ್ಮ್‌ಗಳು ಜನರಿಗೆ ಸಂಗಾತಿಯನ್ನು ಹುಡುಕೋದನ್ನು ಸುಲಭಗೊಳಿಸಿವೆ. ಇದು ಕೆಲವು ಜನರಿಗೆ 'ಆಯ್ಕೆಗಳನ್ನು ಮುಕ್ತವಾಗಿಡಲು' ಮತ್ತು ಒಂದೇ ಸಮಯದಲ್ಲಿ ಅನೇಕ ಜನರೊಂದಿಗೆ ಡೇಟಿಂಗ್ (dating) ಮಾಡಲು ಸಹ ಅವಕಾಶ ನೀಡಿದೆ, ಇದು ಬೆಂಚಿಂಗ್ ಅಪಾಯ ಹೆಚ್ಚಿಸುತ್ತದೆ.

 ಕೆಲವು ಜನರು ಸೀರಿಯಸ್ ರಿಲೇಶನ್ ಶಿಪ್ ನಲ್ಲಿರೋದಕ್ಕೆ ಹೆದರುತ್ತಾರೆ ಏಕೆಂದರೆ ಅವರು ತಮ್ಮ ಹೃದಯಕ್ಕೆ ನೋವಾಗುತ್ತದೆ (heart pain) ಎಂದು ಹೆದರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಬೆಂಚಿಂಗ್ ಆಯ್ಕೆ ಮಾಡಿ, ಅದರಿಂದ ತಮಗೆ ಬೇಕಾದಂತೆ ಸಂಬಂಧವನ್ನು ರೂಪಿಸಿಕೊಳ್ಳುತ್ತಾರೆ.

ಅಡ್ಡ ಪರಿಣಾಮ
ಯಾರೊಂದಿಗಾದರೂ ಬೆಂಚಿಂಗ್‌ನಂತಹ ರಿಲೇಶನ್‌ಶಿಪ್ ಹೊಂದಿರುವುದು ಇತರ ವ್ಯಕ್ತಿಯ ಭಾವನೆಗಳನ್ನು ನೋಯಿಸಬಹುದು. ವಿಶೇಷವಾಗಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರು, ತಮ್ಮ ಪಾರ್ಟ್ನರ್ ಮೇಲೆ ಫೀಲಿಂಗ್ ಬೆಳೆಸಿಕೊಂಡರೆ, ಅದರಿಂದ ನೋವು ಹೆಚ್ಚುತ್ತೆ. 

ಬೆಂಚಿಂಗ್‌ನಿಂದಾಗಿ ಇನ್ನೊಬ್ಬ ವ್ಯಕ್ತಿಯ ಸಮಯ ಹಾಳಾಗುತ್ತೆ. ಅಂದ್ರೆ ನಿಮ್ಮ ಫೀಲಿಂಗ್ ಬಗ್ಗೆ ಯಾವುದೇ ಸೀರಿಯಸ್‌ನೆಸ್ ಇಲ್ಲದೇ ಇರುವ ವ್ಯಕ್ತಿ ಜೊತೆ ಸಂಬಂಧ ಹೊಂದುವುದರಿಂದ ಸಮಯ ವ್ಯರ್ಥ ಅಷ್ಟೇ. ಅದರ ಬದಲಾಗಿ, ನಿಮ್ಮನ್ನು ಇಷ್ಟಪಡುವ ವ್ಯಕ್ತಿ ಜೊತೆ ಸಮಯ ಕಳೆಯಿರಿ. 
 

ಬಚಾವಾಗೋದು ಹೇಗೆ? 
ಮೊದಲನೆಯದಾಗಿ, ನೀವು ಡೇಟಿಂಗ್ (Dating) ಮಾಡುತ್ತಿರುವ ಅಥವಾ ಸಂಬಂಧದಲ್ಲಿರುವವರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದು ಮತ್ತು ಅವರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ಅವರಿಂದ ತಿಳಿದುಕೊಳ್ಳುವುದು ಮುಖ್ಯ.

ನೀವು ಗಂಭೀರ ರಿಲೇಶನ್ ಶಿಪ್ (serious relationship) ಬಯಸಿದ್ರೆ, ಅದರ ಬಗ್ಗೆ ಇತರ ವ್ಯಕ್ತಿಯೊಂದಿಗೆ ಮಾತನಾಡಿ. ಅವರು ನಿಮ್ಮ ಬಗ್ಗೆ ಸೀರಿಯಸ್ ಆಗಿರದೇ ಇದ್ರೆ, ಅವರಿಂದ ದೂರವಿರಿ. ಇತರ ವ್ಯಕ್ತಿಯು ನಿಮ್ಮ ಭಾವನೆಗಳನ್ನು ಗೌರವಿಸದಿದ್ದರೆ ಅಥವಾ ನಿಮ್ಮ ಅಗತ್ಯಗಳನ್ನು ಪೂರೈಸಲು ಸಿದ್ಧರಿಲ್ಲದಿದ್ದರೆ, ಅಂತಹ ಸಂಬಂಧದಿಂದ ಹೊರಬಂದು, ಒಳ್ಳೆಯ ಕೆಲಸಕ್ಕೆ, ಒಳ್ಳೆಯ ಸಂಬಂಧಕ್ಕೆ ಸಮಯ ಮೀಸಲಿಡಿ. 
 

Latest Videos

click me!