'ವಿ ಲವ್ಯೂ' ರಿಷಿ ಸುನಾಕ್‌ಗೆ ಮಕ್ಕಳಿಂದ ತಂದೆಯ ದಿನದ ಶುಭಾಶಯ; ಇಲ್ಲಿವೆ ಕ್ಯೂಟ್ ಫೋಟೋಸ್

First Published | Jun 16, 2024, 3:21 PM IST

ಇಂದು ಅಪ್ಪಂದಿರ ದಿನ. ಸಹಜವಾಗೇ ಎಲ್ಲರೂ ಅವರ ತಂದೆಗೆ ವಿಶ್ ಮಾಡುತ್ತಿದ್ದಾರೆ. ಅಕ್ಷತಾ ಮೂರ್ತಿ ಹಾಗೂ ಯುಕೆ ಪ್ರಧಾನಿ ರಿಷಿ ಸುನಾಕ್ ಮಕ್ಕಳು ಕೂಡಾ ತಂದೆಗೆ ಸುಂದರವಾಗಿ ಶುಭಾಶಯ ಕೋರಿದ್ದಾರೆ.

ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿಯ ಪುತ್ರಿ ಅಕ್ಷತಾ ಮೂರ್ತಿಯ ಮಕ್ಕಳಾದ ಅನೌಷ್ಕಾ ಮತ್ತು ಕೃಷ್ಣಾ ತಂದೆ, ಯುಕೆ ಪ್ರಧಾನಿ ರಿಷಿ ಸುನಾಕ್‌ಗೆ ಅಪ್ಪಂದಿರ ದಿನಕ್ಕೆಶುಭಾಶಯ ಕೋರಿದ್ದಾರೆ. 

ಈ ಸಂದರ್ಭದಲ್ಲಿ ಮಕ್ಕಳು ಅಪ್ಪನೊಂದಿಗಿರುವ ಫೋಟೋ ಹಂಚಿಕೊಂಡಿರುವ ಅಕ್ಷತಾ, 'ಹ್ಯಾಪಿ ಫಾದರ್ಸ್ ಡೇ ಟು ದ ಬೆಸ್ಟ್ ಡ್ಯಾಡ್ ಎವರ್, ವಿ ಲವ್ಯೂ' ಎಂದಿದ್ದಾರೆ. 

Tap to resize

ಅಕ್ಷತಾ ಮತ್ತು ರಿಷಿಯ ಫೋಟೋಗಳು ಆಗಾಗ ಕಾಣಿಸುತ್ತಲೇ ಇರುತ್ತವೆ. ಆದರೆ, ಅವರ ಮಕ್ಕಳು ಕಾಣಿಸಿಕೊಳ್ಳುವುದು ಅಪರೂಪ. ಇಲ್ಲಿದೆ ನೋಡಿ ಮೂರ್ತಿ ದಂಪತಿ ಮೊಮ್ಮಕ್ಕಳ ಕುರಿತ ಕೊಂಚ ವಿವರ. 

2009 ರಲ್ಲಿ ವಿವಾಹವಾದ ನಂತರ, ರಿಷಿ ಸುನಕ್ ಮತ್ತು ಪತ್ನಿ ಅಕ್ಷತಾ ಮೂರ್ತಿ ಇಬ್ಬರು ಹೆಣ್ಣು ಮಕ್ಕಳನ್ನು ಸ್ವಾಗತಿಸಿದ್ದಾರೆ.

2011ರಲ್ಲಿ ಕೃಷ್ಣಾ ಜನಿಸಿದರೆ, ಅನೌಷ್ಕಾ 2013ರಲ್ಲಿ ಹುಟ್ಟಿದ್ದು, ಇಬ್ಬರೂ ಈಗ ಕ್ರಮವಾಗಿ 13, 11 ವರ್ಷದ ಬಾಲಕಿಯರಾಗಿದ್ದಾರೆ. 

ಸಾಮಾನ್ಯವಾಗಿ ಕೃಷ್ಣ ಮತ್ತು ಅನೌಷ್ಕಾ ಅವರನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಡಲಾಗುತ್ತದೆ, ಆದರೆ ಅವರು ಕೆಲವೊಮ್ಮೆ ತಮ್ಮ ಹೆತ್ತವರೊಂದಿಗೆ ಕಾಣಿಸಿಕೊಳ್ಳುತ್ತಾರೆ.

ತಂದೆ ತಾಯಿ ಇಬ್ಬರೂ ತಮ್ಮ ಮಕ್ಕಳ ಬಗ್ಗೆ ಸಾಮಾನ್ಯವಾಗಿ ತುಟಿ ಬಿಚ್ಚುವುದಿಲ್ಲವಾದರೂ, ಅಪರೂಪಕ್ಕೆ ರಿಷಿ ಹೆಣ್ಣುಮಕ್ಕಳ ಬಗ್ಗೆ ಹೇಳಿದ ಮಾತುಗಳಿಲ್ಲಿವೆ. 

ನನಗೆ ನನ್ನ ಮಕ್ಕಳನ್ನು ಒಬ್ಬೊಬ್ಬರನ್ನೇ ಎಲ್ಲಿಯಾದರೂ ಕಳಿಸಲು ತುಂಬಾ ಭಯ. ಹಾಗಾಗೇ, ಡೌನಿಂಗ್ ಸ್ಟ್ರೀಟ್‌ನಿಂದ ಅವರನ್ನು ನಾನು ದೂರವಿಟ್ಟಿದ್ದೆ ಎಂದೊಮ್ಮೆ ರಿಷಿ ಹೇಳಿದ್ದರು. 

ಇನ್ನೊಮ್ಮೆ ರಿಷಿ, ತಮ್ಮನ್ನು ಮನೆಯಲ್ಲಿ ಸದಾ ಬ್ಯುಸಿಯಾಗಿಡುವುದು ಹಾಗೂ ಮನರಂಜನೆ ನೀಡುವುದೆಂದರೆ ತಮ್ಮ ಮಕ್ಕಳು ಎಂದು ಹೇಳಿದ್ದರು. 

ಕುಟುಂಬದೊಂದಿಗೆ ಸಮಯ ಕಳೆಯುವುದೆಂದರೆ ತುಂಬಾ ಇಷ್ಟ ಎಂಬುದನ್ನು ಹಲವು ಬಾರಿ ಹೇಳಿರುವ ರಿಷಿ, ಪತ್ನಿ ಮಕ್ಕಳು ಹೇಳಿದಂತೆ ಉತ್ತಮ ತಂದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ..

Latest Videos

click me!