ನಿಮ್ಮ ಪ್ರೇಮ ಸಂಬಂಧ ದೀರ್ಘವಾಗಿರಲು ಪ್ರೇಮಿಗಳ ದಿನದಂದು ಡ್ರೈ ಡೇಟಿಂಗ್ ಮಾಡಿ!

Published : Feb 14, 2024, 12:07 PM IST

ಇತ್ತೀಚಿನ ದಿನಗಳಲ್ಲಿ ಆಲ್ಕೋಹಾಲ್ ಇಲ್ಲದೇ ಜನರು ಏನು ಮಾಡೊದೆ ಇಲ್ಲ. ಹೆಚ್ಚಾಗಿ ಜನರು ತಮ್ಮ ವಿಶೇಷ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಆಲ್ಕೋಹಾಲ್ ಕುಡಿಯುತ್ತಾರೆ. ಅದರಲ್ಲೂ ವ್ಯಾಲೆಂಟೈನ್ ಡೇಯಂದು ಇದನ್ನ ಹೆಚ್ಚಾಗಿಯೇ ಮಾಡ್ತಾರೆ. ಆದರೆ ಡ್ರೈ ಡೇಟ್ ನಿಂದ ನೀವು ಹೆಚ್ಚಿನ ಪ್ರಯೋಜನ ಪಡೆಯುತ್ತೀರಿ.   

PREV
111
ನಿಮ್ಮ ಪ್ರೇಮ ಸಂಬಂಧ ದೀರ್ಘವಾಗಿರಲು ಪ್ರೇಮಿಗಳ ದಿನದಂದು ಡ್ರೈ ಡೇಟಿಂಗ್ ಮಾಡಿ!

ಈ ಪ್ರೇಮಿಗಳ ದಿನದಂದು (valentines Day) ನೀವು ಹೊಸದನ್ನು ಪ್ರಯತ್ನಿಸಲು ಯೋಚಿಸುತ್ತಿದ್ದರೆ, ಡ್ರೈ ಡೇಟಿಂಗ್ ಬಗ್ಗೆ ಯಾಕೆ ಯೋಚನೆ ಮಾಡಬಾರದು? ಆಲ್ಕೋಹಾಲ್ ಮುಕ್ತ ಡೇಟ್ ಉತ್ತಮ ಮತ್ತು ಬಲವಾದ ಬಂಧವನ್ನು ನಿರ್ಮಿಸಲು ನಿಮಗೆ ಸಹಾಯ ಮಾಡುತ್ತದೆ. ಈ ರೀತಿಯ ಡೇಟಿಂಗ್ ನಿಮ್ಮ ಸಂಗಾತಿ ಜೊತೆ ಮಧುರ ಸಮಯವನ್ನು ಕಳೆಯಬಹುದು. ಅಲ್ಲದೆ, ಆಲ್ಕೋಹಾಲ್ ಸೇವನೆಯಿಂದ ಉಂಟಾಗುವ ತಪ್ಪುಗಳನ್ನು ನಿವಾರಿಸಬಹುದು. 

211

ಡ್ರೈ ಡೇಟಿಂಗ್ ಎಂದರೇನು?: ಡ್ರೈ ಡೇಟಿಂಗ್ (Dry dating)ಎಂದರೆ ಆಲ್ಕೋಹಾಲ್ ಕುಡಿಯದೆ ಡೇಟಿಂಗ್ ಗೆ ಹೋಗುವುದು.  "ಡ್ರೈ ಡೇಟಿಂಗ್ನಲ್ಲಿ, ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಶಾಂತವಾಗಿರುವಾಗ ತನ್ನ ಸಂಗಾತಿಯನ್ನು ಅರ್ಥಮಾಡಿಕೊಳ್ಳಬಹುದು.  ಡ್ರೈ ಡೇಟಿಂಗ್ ನಲ್ಲಿ ನೀವು ಭಾವನಾತ್ಮಕವಾಗಿ ಕನೆಕ್ಟ್ ಆಗೋದು ಸುಲಭ. ಇದರಿಂದ ನಿಮ್ಮ ಫಿಸಿಕಲ್ ಕೆಮೆಸ್ಟ್ರಿ ಹೇಗಿದೆ? ನೀವು ಯಾವ ರೀತಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೀರಿ ಅನ್ನೋದನ್ನು ತಿಳಿಯಬಹುದು. 

311

ಡ್ರೈ ಡೇಟಿಂಗ್ ನ ಪ್ರಯೋಜನಗಳು ಯಾವುವು?: ಡೇಟಿಂಗ್ ನಲ್ಲಿ ಮದ್ಯಪಾನ ಮಾಡದಿರುವುದು ಖಂಡಿತವಾಗಿಯೂ ಬೋರಿಂಗ್ ವಿಷಯ ಅಲ್ಲ. ವಾಸ್ತವವಾಗಿ, ಡ್ರೈ ಡೇಟಿಂಗ್ ಸಂಬಂಧದಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು, ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವಾಗುತ್ತದೆ.

411

ಇಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತೆ: ಮದ್ಯಪಾನ ಮಾಡದೆ ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸುವುದು ಮತ್ತು ಪರಸ್ಪರ ಇಂಟಿಮೆಸಿ (intimacy)ಬೆಳೆಸುವುದು ಇಬ್ಬರ ನಡುವೆ ಉತ್ತಮ ಬಾಂಧವ್ಯ ರೂಪಿಸಲು ಸಾಧ್ಯವಾಗುತ್ತದೆ. ಡ್ರಿಂಕ್ಸ್ ಮಾಡದೇ ಇದ್ದರೆ, ಒಬ್ಬರಿಗೊಬ್ಬರು ನಿಜವನ್ನೆ ಮಾತನಾಡುತ್ತಾರೆ. ಇದರಿಂದ ಸಂಬಂಧ ಗಟ್ಟಿಯಾಗುತ್ತೆ. 

511

ಆರೋಗ್ಯಕರ ಸಂಬಂಧ ಹೊಂದಲು ಸಹಾಯ ಮಾಡುತ್ತೆ: ಆಲ್ಕೋಹಾಲ್ ಸೇವಿಸದೇ ಇದ್ದಾಗ, ನೀವು ನೀವಾಗಿರುತ್ತೀರಿ. ಇದರಿಂದ ನಿಮ್ಮ ಮನಸಿನ ಭಾವನೆಯನ್ನು ಸಂಗಾತಿಗೆ ಸುಲಭವಾಗಿ ತಿಳಿಸಲು ಸಾಧ್ಯವಾಗುತ್ತೆ. ಕುಡಿದಾಗ ಏನೋ ಹೇಳಿ, ಮತ್ತೆ ಪಶ್ಚಾತ್ತಾಪ ಪಡುವಂತಾಗುತ್ತದೆ, ಅಂತಹ ಪರಿಸ್ಥಿತಿ ಇಲ್ಲಿ ಇರೋದಿಲ್ಲ. ಆರೋಗ್ಯಕರ ಸಂಬಂಧಕ್ಕೆ (healthy relationship) ನಾಂದಿ ಹಾಡುತ್ತೆ.

611

ಹಣವನ್ನು ಉಳಿಸುತ್ತದೆ: ಡೇಟಿಂಗ್ ಸಮಯದಲ್ಲಿ ಡ್ರಿಂಕ್ಸ್ ಮಾಡಿದ್ರೆ, ಅದರಿಂದ ಖರ್ಚು ಕೂಡ ಹೆಚ್ಚುತ್ತೆ. ಹಾಗಾಗಿ ಡ್ರಿಂಕ್ಸ್ ಮಾಡೋದೇ ಬೇಡ. ಡ್ರೈ ಡೇಟ್ ನ್ನು ಎಂಜಾಯ್ ಮಾಡೋದು ಸುಲಭ, ಹೆಚ್ಚು ಖರ್ಚು (save money) ಕೂಡ ಇರೋದಿಲ್ಲ.  ಯಾವುದೋ ಸಣ್ಣ ರೆಸ್ಟೋರೆಂಟ್, ಕೆಫೆಗೆ ಹೋಗಿ ನಿಮ್ಮಿಷ್ಟದ ಆಹಾರ ಎಂಜಾಯ್ ಮಾಡಬಹುದು. 

711

ನಡವಳಿಕೆ ಸರಿಯಾಗಿಯೇ ಇರುತ್ತದೆ: ಅತಿಯಾದ ಮದ್ಯಪಾನವು (alcohol) ಅಶ್ಲೀಲತೆ, ಕೆಟ್ಟ ಭಾಷೆ, ಆಕ್ರಮಣಶೀಲತೆಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಡ್ರೈ ಡೇಟಿಂಗ್ಗೆ ಹೋಗುವುದು ಉತ್ತಮ ಆಯ್ಕೆ. ಇದು ಇಬ್ಬರು ವ್ಯಕ್ತಿಗಳ ನಡುವೆ ಮುಜುಗರ ಉಂಟು ಮಾಡುವ ಯಾವುದೇ ಘಟನೆಯನ್ನೂ ಸ್ವಾಗತಿಸೋದಿಲ್ಲ.

811

ಸುರಕ್ಷತೆ ಮತ್ತು ಆರಾಮ ಮುಖ್ಯ: ಆಲ್ಕೋಹಾಲ್ ನಿಂದ ಆರೋಗ್ಯಕ್ಕೆ ಹಾನಿಯ ಜೊತೆಗೆ ಅಭದ್ರತೆಯೂ ಹೆಚ್ಚಾಗಿ ಕಾಡುತ್ತದೆ. ಮದ್ಯಪಾನ ಮಾಡದಿರುವುದು ಲೈಂಗಿಕ ದೌರ್ಜನ್ಯ, ಹಿಂಸೆ, ಅಪಘಾತಗಳು ಅಥವಾ ನಿಂದನೆಗೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. 
 

911

ಡ್ರೈ ಡೇಟಿಂಗ್ ಬೆಸ್ಟ್ ಮೆಡಿಸಿನ್: ಡೇಟಿಂಗ್ ನ ಆರಂಭದಲ್ಲಿ ಒತ್ತಡ ಅಥವಾ ಒಂಟಿತನವನ್ನು ನಿರ್ವಹಿಸಲು ಆಲ್ಕೋಹಾಲ್ ಕಡೆಗೆ ಒಲವು ತೋರುವುದು ಅನಾರೋಗ್ಯಕರ. ಆಲ್ಕೋಹಾಲ್ ಕುಡಿಯದೆ ಡೇಟಿಂಗ್ ಗೆ ಹೋಗುವುದು ನಿಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಹಾಯ ಮಾಡುತ್ತೆ.

1011

ದೈಹಿಕ ಆರೋಗ್ಯವನ್ನು ಕಾಪಾಡುತ್ತೆ: ನಿಯಮಿತ ಆಲ್ಕೋಹಾಲ್ ಸೇವನೆಯು ಯಕೃತ್ತಿನ ಕಾರ್ಯ, ಹೃದಯದ ಆರೋಗ್ಯ (healthy heart), ನಿದ್ರೆಯ ಗುಣಮಟ್ಟ, ಭಾವನಾತ್ಮಕ ನಿಯಂತ್ರಣ ಮತ್ತು ಇತರ ಅಪಾಯಗಳ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಆರಂಭದಲ್ಲೇ ಆಲ್ಕೋಹಾಲ್ ಸೇವನೆ ಕಂಟ್ರೋಲ್ ಮಾಡೋದು ಉತ್ತಮ.

1111

ನಿದ್ರೆ ಸುಧಾರಿಸುತ್ತೆ: ಆಲ್ಕೋಹಾಲ್ ಸೇವನೆಯು ನಿಮಗೆ ತಕ್ಷಣ ನಿದ್ರೆ ಬರುವಂತೆ ಮಾಡಬಹುದು, ಆದರೆ ಇದು ನಿದ್ರೆಯ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಡ್ರೈ ಡೇಟಿಂಗ್ ನಿಂದ ಮೆದುಳು ಮತ್ತು ದೇಹ ಎರಡಕ್ಕೂ ಪ್ರಯೋಜನ ನೀಡುತ್ತದೆ. ನೀವು ಡೇಟಿಂಗ್ (dating) ನಲ್ಲಿ ಶಕ್ತಿಯುತವಾಗಿರಲು ಬಯಸಿದರೆ, ಸಾಕಷ್ಟು ನಿದ್ರೆ ಮಾಡೋದು ಬಹಳ ಮುಖ್ಯ.

Read more Photos on
click me!

Recommended Stories