May monthly love horoscope ಮೇ 2026 ರಲ್ಲಿ ಕರ್ಕಾಟಕ ಸೇರಿ ಎರಡು ರಾಶಿಗೆ ಸರಸ-ಸಲ್ಲಾಪ ಪ್ರಣಯಕ್ಕೆ ಶುಭ ಮುಂದಿನ ತಿಂಗಳು, ಆದರೆ ಮೀನ ಜೊತೆ ನಾಲ್ಕು ರಾಶಿಗೆ ವಿರಸ, ವಿರಹ ವೇದನೆಯಂತೆ
ಕರ್ಕಾಟಕ ರಾಶಿಯವರು ಮೇ 2026 ರಲ್ಲಿ ಆಫೀಸ್‌ನಲ್ಲಿ ಪ್ರೀತಿಯಲ್ಲಿ ಬೀಳಬಹುದು. ಈ ತಿಂಗಳು ನೀವು ಇಷ್ಟಪಡುವ ವ್ಯಕ್ತಿಯೊಂದಿಗೆ ಸಂಬಂಧ ಬೆಳಸಬಹುದು ಮತ್ತು ಅವರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವುದರಿಂದ ಪ್ರೀತಿ ಇನ್ನಷ್ಟು ಆಳವಾಗಿ ಅರಳಬಹುದು. ಪ್ರಣಯ ಜೀವನ ಉತ್ತುಂಗದಲ್ಲಿರುತ್ತದೆ. ಆದರೆ ವಿವಾಹಿತ ವ್ಯಕ್ತಿಗಳು ತಮ್ಮ ಲೈಫ್ ಪಾರ್ಟನರ್ ಮತ್ತು ಅತ್ತೆ-ಮಾವಂದಿರೊಂದಿಗೆ ಜಗಳ ಮಾಡಬಹುದು.
28
ತುಲಾ:
ಮೇ ತಿಂಗಳಲ್ಲಿ ತುಲಾ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಪ್ರಣಯದಲ್ಲಿ ತೆಲಾಡುತ್ತಾರಂತೆ. ಅವಿವಾಹಿತರಿಗೆ ಲವರ್ ಸಿಗಬಹುದು. ಈ ಸಮಯದಲ್ಲಿ ವಿವಾಹಿತ ವ್ಯಕ್ತಿಗಳು ವಾದ ವಿವಾದಗಳ ನಡುವೆ ದಿನ ಕಳೆಯುತ್ತಾರೆ.
38
ವೃಶ್ಚಿಕ
ಮೇ ತಿಂಗಳಲ್ಲಿ ವೃಶ್ಚಿಕ ರಾಶಿಯವರು ತಮ್ಮ ಪ್ರೀತಿಯನ್ನು ಕುಟುಂಬಕ್ಕೆ ಹೇಳಬಹುದು ಮತ್ತು ಪ್ರೇಮ ವಿವಾಹದ ಬಗ್ಗೆ ಮಾತುಕತೆ ಮುಂದುವರಿಯಬಹುದು. ವೈವಾಹಿಕ ಜೀವನವು ಸಂತೋಷ ಮತ್ತು ಪ್ರಣಯಮಯವಾಗಿರುತ್ತದೆ, ಆದರೆ ಸಂಬಂಧಗಳಲ್ಲಿ ಪ್ರಾಮಾಣಿಕತೆ ಅತ್ಯಗತ್ಯ. ಒಂಟಿಯಾದವರು ಹೊಸ ಜನರನ್ನು ಭೇಟಿಯಾಗಬಹುದು, ಆದರೆ ಪ್ರೇಮ ಬೆಳೆಯುವವರೆಗೆ ಅವರು ಕಾಯಬೇಕಾಗಬಹುದು.
48
ಧನು ರಾಶಿ
ಮೇ 2026 ಧನು ರಾಶಿಯವರಿಗೆ ಪ್ರಣಯದ ತಿಂಗಳು. ದಂಪತಿಗಳು ಪ್ರಣಯದ ಕ್ಷಣಗಳಲ್ಲಿ ಆನಂದವನ್ನು ಕಾಣುತ್ತಾರೆ. ನಿಮ್ಮ ಸಂಗಾತಿಯ ಬಗ್ಗೆ ಯಾವುದೇ ತಪ್ಪು ಕಲ್ಪನೆ ಇದ್ದರೆ ನೇರವಾಗಿ ಮಾತನಾಡಿ, ನಿಮ್ಮ ಮನಸ್ಸಿನ ಮಾತು ಕೇಳಿ ಬೇರೆಯವರ ಮಾತನ್ನು ಅಲ್ಲ. ವಿವಾಹಿತ ವ್ಯಕ್ತಿಗಳು ತಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಆನಂದಿಸುತ್ತಾರೆ.
58
ಮೀನ
ಒಂಟಿಯಾಗಿರುವವರು ಮೇ 2026 ರಲ್ಲಿ ಪ್ರೀತಿಯಿಂದ ದೂರವಿರುವುದು ಉತ್ತಮ, ಏಕೆಂದರೆ ಈ ಅವಧಿ ಅವರಿಗೆ ಅನುಕೂಲಕರವಾಗಿಲ್ಲ. ವಿವಾಹಿತರು ಉತ್ತಮ ಪ್ರೇಮ ಜೀವನವನ್ನು ಹೊಂದಿರುತ್ತಾರೆ. ನೀವು ನಿಮ್ಮ ಸಂಗಾತಿಯೊಂದಿಗೆ ಪ್ರವಾಸವನ್ನು ಯೋಜಿಸಬಹುದು. ಪ್ರೀತಿಯಲ್ಲಿ ಬಿದ್ದವರು ಮದುವೆಯ ಬಗ್ಗೆಯೂ ಚರ್ಚಿಸಬಹುದು.
68
ಸಿಂಹ
ಮೇ ತಿಂಗಳು ಸಿಂಹ ರಾಶಿಯವರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಅದು ವೈವಾಹಿಕ ಸಂಬಂಧವಾಗಿರಲಿ ಅಥವಾ ಪ್ರಣಯ ಸಂಬಂಧವಾಗಿರಲಿ. ನಿಮ್ಮ ಸಂಗಾತಿಯೊಂದಿಗೆ ವಾದಗಳಾಗುವ ಸಾಧ್ಯತೆ ಹೆಚ್ಚು. ಹಾಗೇ ಮಾನಸಿಕ ಒತ್ತಡವನ್ನು ಅನುಭವಿಸಬಹುದು. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ.
78
ಮಕರ ರಾಶಿ
ಮೇ ತಿಂಗಳಲ್ಲಿ ಮಕರ ರಾಶಿಯ ದಂಪತಿಗಳು ಜಾಗರೂಕರಾಗಿರಬೇಕು, ಏಕೆಂದರೆ ತಪ್ಪು ತಿಳುವಳಿಕೆಗಳು ಅವರ ಸಂಬಂಧಗಳನ್ನು ಬಿಗಡಾಯಿಸಬಹುದು. ಇದು ವಾದಗಳಿಗೂ ಕಾರಣವಾಗಬಹುದು. ಆದಾಗ್ಯೂ, ತಿಂಗಳ ಅಂತ್ಯದ ವೇಳೆಗೆ ಪರಿಹಾರವಾಗುವ ಭರವಸೆ ಇದೆ.
88
ಕುಂಭ
ಮೇ 2026 ರಲ್ಲಿ ಕುಂಭ ರಾಶಿಯವರು ತಮ್ಮ ಸಂಗಾತಿಯೊಂದಿಗೆ ಕ್ಷುಲ್ಲಕ ವಿಷಯಗಳಿಗೆ ವಾದಿಸಬಹುದು. ಇದು ಅವರ ವೈವಾಹಿಕ ಜೀವನದಲ್ಲಿ ತೊಂದರೆ ಉಂಟುಮಾಡಬಹುದು ಮತ್ತು ಕುಟುಂಬದ ಸಂತೋಷ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರಬಹುದು. ಪ್ರಣಯ ಏರು-ಪೇರು ಇರಬಹುದು ಜಾಗರೂಕರಾಗಿರಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.