ದರ್ಶನ್​ ಬಾಳಲ್ಲಿ ವಿಜಯಲಕ್ಷ್ಮಿ ಎಂಟ್ರಿ ಕೊಟ್ಟು ನಾಳೆಗೆ 23 ವರ್ಷ: ಡಿಜಿಪಿಗೆ ಪತ್ನಿ ಹೀಗೊಂದು ವಿಶೇಷ ಮನವಿ

Published : May 18, 2026, 07:55 PM IST

ರೇಣುಕಾಸ್ವಾಮಿ  ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿಲ್ಲ. ಈ ನಡುವೆ, ಮೇ 19 ರಂದು ತಮ್ಮ 23ನೇ ವಿವಾಹ ವಾರ್ಷಿಕೋತ್ಸವವನ್ನು ಪತಿಯೊಂದಿಗೆ ಆಚರಿಸಲು ಅವಕಾಶ ನೀಡುವಂತೆ ಪತ್ನಿ ವಿಜಯಲಕ್ಷ್ಮಿ ಅವರು ಕಾರಾಗೃಹ ಅಧಿಕಾರಿಗಳಿಗೆ ವಿಶೇಷ ಮನವಿ ಸಲ್ಲಿಸಿದ್ದಾರೆ.

PREV
16
ಸಿಗಲಿಲ್ಲ ಬೇಲು

ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ ಅವರಿಗೆ ಸುಪ್ರೀಂಕೋರ್ಟ್​ ಕೂಡ ಜಾಮೀನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಒಂದು ವರ್ಷ ಇನ್ನೂ ಜೈಲಿನಲ್ಲಿಯೇ ಇರಬೇಕಿದೆ. ಇದರ ನಡುವೆಯೇ ನಾಳೆ ಅರ್ಥಾತ್​ ಮೇ 19ರಂದು ದರ್ಶನ್​ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವ.

26
23 ವರ್ಷಗಳ ದಾಂಪತ್ಯ

2003 ರ ಮೇ 19ರಂದು ದಂಪತಿ ಸಪ್ತಪದಿ ತುಳಿದಿದ್ದರು. ನಾಳೆ ಒಟ್ಟಿಗೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ತವಕದಲ್ಲಿತ್ತು ಜೋಡಿ. ಆದರೆ ಆಗಿದ್ದೇ ಬೇರೆ. ದರ್ಶನ್​ ಅವರಿಗೆ ಜಾಮೀನು ಸಿಗದ ಕಾರಣ, ಅವರ ಆಸೆಗೆ ತಣ್ಣೀರು ಎರಚಿದಂತಾಗಿದೆ.

36
ಅವಕಾಶಕ್ಕೆ ಅರ್ಜಿ

ಇದಾಗಲೇ ತಮ್ಮ ಕುಟುಂಬವನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂದು ದರ್ಶನ್​ ಕೋರಿಕೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಕೂಡ ಕಾರಾಗೃಹದ ಡಿಜಿಪಿ ಅಲೋಕ್ ಕುಮಾರ್ ಅವರ ಬಳಿ ಹಾಗೂ ದರ್ಶನ್ ಪರಪ್ಪನ ಅಗ್ರಹಾರದ ಕಾರಾಗೃಹದ ಅಧಿಕಾರಿಗಳ ಬಳಿ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

46
ವಿಶೇಷ ಮನವಿ

ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ತಮಗೆ ಅನುಮತಿ ನೀಡುವಂತೆ ವಿಜಯಲಕ್ಷ್ಮಿ ಅವರು ಅಲೋಕ್​ ಕುಮಾರ್​ ಅವರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎನ್ನಲಾಗಿದೆ.

56
ದಂಪತಿ ಕೋರಿಕೆ

ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿರುವ ಡಿಜಿಪಿ ಅವರು, ವಿಜಯಲಕ್ಷ್ಮಿ ಅವರು ಮೇ 19ರಂದು ಆ್ಯನಿವರ್ಸರಿ ಆಚರಿಸಿಕೊಳ್ಳಲು ಅನುಮತಿ ಕೇಳಿದ್ದಾರೆ. ಜಾಮೀನು ಸಿಗದ ಕಾರಣ ದರ್ಶನ್​ ಅವರು ಕೂಡ ನೊಂದುಕೊಂಡಿದ್ದಾರೆ. ಆದ್ದರಿಂದ ವಿಜಯಲಕ್ಷ್ಮಿ ಅವರು ನನಗೆ ಅರ್ಜಿ ಸಲ್ಲಿಸಿದ್ದಾರೆ. ಇದಾಗಲೇ ಫ್ಯಾಮಿಲಿಯನ್ನು ಮೀಟ್​ ಆಗಲು ದರ್ಶನ್​ ಅವರೂ ಕೋರಿದ್ದಾರೆ. ಸದ್ಯ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದಿದ್ದಾರೆ.

66
ದರ್ಶನ್​ಗೆ ಚೈತನ್ಯ

ಆರಂಭದಲ್ಲಿ ಜೈಲು ಅಧಿಕಾರಿಗಳ ಮಾತಿಗೆ ಅಷ್ಟಾಗಿ ಮನ್ನಣೆ ನೀಡದೆ ನೇರವಾಗಿ ಕೋರ್ಟ್ ಮೂಲಕ ಸವಲತ್ತು ಪಡೆಯಲು ಮುಂದಾಗಿದ್ದ ದರ್ಶನ್, ಈಗ ಪರಿಸ್ಥಿತಿಯ ಅರಿವಾಗಿ ಅಧಿಕಾರಿಗಳ ಮುಂದೆ ಮಣಿದಿದ್ದಾರೆ. ಜಾಮೀನು ಇಲ್ಲದೇ ಏಕಾಂಗಿತನ ಅನುಭವಿಸುತ್ತಿರುವ ದರ್ಶನ್‌ಗೆ ಮಗ ಮತ್ತು ಪತ್ನಿಯ ಭೇಟಿ ಮಾನಸಿಕವಾಗಿ ಎಷ್ಟು ಚೈತನ್ಯ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories