ಮೆಟ್ರೋ ಲಿಫ್ಟ್‌ನಲ್ಲೇ ಮೂತ್ರವಿಸರ್ಜನೆ ಮಾಡಿದ ವೃದ್ಧ, ವಿಡಿಯೋ ವೈರಲ್ ಆಗುತ್ತಿದ್ದಂತೆ ಛೀ ಛೀ ಎಂದ ಜನರು

Published : May 18, 2026, 11:02 AM IST

Metro lift incident Man urinated in front of woman ಮೆಟ್ರೋ ಲಿಫ್ಟ್‌ನಲ್ಲಿ ವೃದ್ಧನೊಬ್ಬ ಮೂತ್ರವಿಸರ್ಜನೆ ಮಾಡಿದ ವಿಡಿಯೋ ವೈರಲ್ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

PREV
14
ಮೆಟ್ರೋ ಲಿಫ್ಟ್‌ನಲ್ಲಿ ವೃದ್ಧನ ಅಸಭ್ಯ ವರ್ತನೆ

ದೆಹಲಿ ಮೆಟ್ರೋ ಲಿಫ್ಟ್‌ನಲ್ಲಿ ವೃದ್ಧನೊಬ್ಬ ಮೂತ್ರ ವಿಸರ್ಜನೆ ಮಾಡಿದ ಘಟನೆ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇಬ್ಬರು ಮಹಿಳೆಯರ ಎದುರಲ್ಲೇ ನಡೆದ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬಳಿಕ ಜನರು ಕೋಪ ವ್ಯಕ್ತಪಡಿಸುತ್ತಿದ್ದಾರೆ. “ಇದು ಆರೋಗ್ಯ ಸಮಸ್ಯೆಯಾ..? ಅಥವಾ ಸಾರ್ವಜನಿಕ ಶಿಸ್ತಿನ ಕೊರತೆಯಾ..?” ಎಂಬ ಪ್ರಶ್ನೆ ಈಗ ಎಲ್ಲೆಡೆ ಕೇಳಿಬರುತ್ತಿದೆ.

24
ವೃದ್ಧನ ವರ್ತನೆಗೆ ಆಕ್ಷೇಪ

ಕಾಲ್ಕಾಜಿ ಮೆಟ್ರೋ ಸ್ಟೇಷನ್‌ನ ಲಿಫ್ಟ್‌ನಲ್ಲಿ ನಡೆದ ಈ ಘಟನೆ ವೇಳೆ ಮಹಿಳೆಯರು ವೃದ್ಧನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರೂ, ಆತ ನಿರ್ಲಕ್ಷ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ವಿಡಿಯೋ ಹೊರಬಿದ್ದ ತಕ್ಷಣವೇ X, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಸಾವಿರಾರು ಕಾಮೆಂಟ್‌ಗಳು ಹರಿದುಬಂದಿವೆ. ಕೆಲವರು “ವೃದ್ಧನಿಗೆ ಮೂತ್ರ ನಿಯಂತ್ರಣ ಸಮಸ್ಯೆ ಇರಬಹುದು, ಇದನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು” ಎಂದರೆ, ಮತ್ತೊಂದು ವರ್ಗ “ಇದು ಅಸಭ್ಯ ವರ್ತನೆ, ಕಾನೂನು ಕ್ರಮ ಕಡ್ಡಾಯ” ಎಂದು ಆಗ್ರಹಿಸಿದೆ.

34
ಪೋಸ್ಟ್‌ ವೈರಲ್

ವೈರಲ್ ಆಗಿರುವ ಪೋಸ್ಟ್‌ಗಳಲ್ಲಿ ಕೆಲವರು “ಪ್ರೋಸ್ಟೇಟ್ ಸಮಸ್ಯೆ ಇರುವ ವೃದ್ಧರು ಡೈಪರ್ ಬಳಸುತ್ತಾರೆ, ಸಾರ್ವಜನಿಕ ಸ್ಥಳದಲ್ಲಿ ಹೀಗೆ ಮಾಡೋದಿಲ್ಲ” ಎಂದು ಕಿಡಿಕಾರಿದ್ದಾರೆ. ಇನ್ನೂ ಕೆಲವರು “ದೆಹಲಿ ಮೆಟ್ರೋದಲ್ಲಿ ಶೌಚಾಲಯ ಸೌಲಭ್ಯ ಸಾಕಷ್ಟಿದೆಯಾ?” ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. “ಕಾನೂನು ಎಲ್ಲರಿಗೂ ಒಂದೇ ಆಗಬೇಕು” ಎಂದು ಹಲವರು ಪೋಸ್ಟ್ ಮಾಡಿದ್ದಾರೆ.

ಈ ಪ್ರಕರಣದಲ್ಲಿ DMRC ಮತ್ತು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದು, ವೃದ್ಧನಿಗೆ ಆರೋಗ್ಯ ಸಂಬಂಧಿತ ತುರ್ತು ಪರಿಸ್ಥಿತಿ ಎದುರಾಗಿದ್ದಿರಬಹುದು ಎಂದು ಹೇಳಲಾಗಿದೆ. ಆದರೂ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರಿದ ಕಾರಣ ನಿಯಮ ಉಲ್ಲಂಘನೆ ಅಡಿ ದಂಡ ವಿಧಿಸಲಾಗಿದೆ.

44
ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಚರ್ಚೆ

ಘಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಚರ್ಚೆ ಶುರುವಾಗಿದೆ. ಒಂದು ಕಡೆ “ಮಾನವೀಯತೆ ಮುಖ್ಯ” ಎಂದು ಹೇಳುವವರು ಇದ್ದರೆ, ಮತ್ತೊಂದು ಕಡೆ “ಸಾರ್ವಜನಿಕ ಶಿಸ್ತಿಗೆ ಧಕ್ಕೆ ತಂದವರ ವಿರುದ್ಧ ಕಠಿಣ ಕ್ರಮ ಬೇಕು” ಎನ್ನುವವರು ಹೆಚ್ಚಾಗಿದ್ದಾರೆ.

ದೆಹಲಿ ಮೆಟ್ರೋದಲ್ಲಿ ನಡೆದ ಈ ಘಟನೆ ಈಗ ಕೇವಲ ಒಂದು ವೈರಲ್ ವಿಡಿಯೋ ಆಗಿ ಉಳಿದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರ ವರ್ತನೆ, ಮಹಿಳೆಯರ ಸುರಕ್ಷತೆ, ಹಿರಿಯರ ಆರೋಗ್ಯ ಸಮಸ್ಯೆಗಳು ಮತ್ತು ನಗರ ವ್ಯವಸ್ಥೆಯ ಬಗ್ಗೆ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories