ಮದ್ವೆ ದಿನವೇ ಭಾವಿ ಪತಿಯ ಫಸ್ಟ್​ ಮೀಟ್​ ಮಾಡ್ತಿರೋ 'Lakshmi Nivasa' ಸಿಂಚನಾ: ನಟಿ ರೂಪಿಕಾ ಇಂಟರೆಸ್ಟಿಂಗ್​ ಸ್ಟೋರಿ

Published : Jun 25, 2026, 11:44 AM IST

'ಲಕ್ಷ್ಮೀ ನಿವಾಸ' ಧಾರಾವಾಹಿ ಖ್ಯಾತಿಯ ನಟಿ ರೂಪಿಕಾ, ಕೆನಡಾ ನಿವಾಸಿ ಅಂಕಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದು ಅರೇಂಜ್ಡ್ ಮ್ಯಾರೇಜ್ ಆಗಿದ್ದು, ವಿಡಿಯೋ ಕಾಲ್‌ನಲ್ಲಿ ಮಾತ್ರ ಮಾತನಾಡಿಕೊಂಡಿರುವ ಇವರಿಬ್ಬರು ಮದುವೆ ಮಂಟಪದಲ್ಲಿಯೇ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.

PREV
16
ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ 'ಲಕ್ಷ್ಮೀ ನಿವಾಸ' ಸಿಂಚನಾ

ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಸಿಂಚನಾ ಪಾತ್ರ ಮಾಡುತ್ತಿರುವ ನಟಿ ರೂಪಿಕಾ ಅವರು ಮದುವೆಗೆ ಸಜ್ಜಾಗಿದ್ದಾರೆ. ಕಳೆದ 5 ವರ್ಷಗಳಿಂದ ಕೆನಡಾದಲ್ಲೇ ನೆಲೆಸಿರುವ ಅಂಕಿತ್​ ಎನ್ನುವವರ ಜೊತೆ ರೂಪಿಕಾ ಅವರದ್ದು ಅರೇಂಜ್ಡ್​​ ಮ್ಯಾರೇಜ್​ ಆಗಿದೆ. ಭಾವಿ ಪತಿ ಅಂಕಿತ್​ ಕೆನಡಾದಲ್ಲಿ ಇನ್ವೆಸ್ಟ್‌ ಕೋ ಅಂತ ಫೈನಾನ್ಸ್‌ ಕಂಪನಿಯಲ್ಲಿ, ಟ್ಯಾಕ್ಸ್‌ ಸ್ಪೆಷಲಿಸ್ಟ್‌ ಆಗಿ ವರ್ಕ್‌

26
ರೆಟ್ರೋ ಸ್ಟೈಲ್​ ಲವ್​ ಸ್ಟೋರಿ

ಆಗಸ್ಟ್‌ 31 ರಂದು ಬೆಂಗಳೂರಿನಲ್ಲೇ ರೂಪಿಕಾ - ಅಂಕಿತ್ ವಿವಾಹ ಮಹೋತ್ಸವ ನಡೆಯಲಿದೆ. ಕುತೂಹಲದ ವಿಷ್ಯ ಏನೆಂದರೆ, ಇಂದಿನ ಯುವತಿಯರು ಊಹಿಸಿಕೊಳ್ಳಲೂ ಆಗದ ರೀತಿಯಲ್ಲಿ ಅಜ್ಜ-ಅಜ್ಜಿಯ ಕಾಲದ ರೀತಿಯ ಸ್ಟೋರಿ ನಟಿ ರೂಪಿಕಾ ಅವರದ್ದು, ಒಂದು ರೀತಿಯಲ್ಲಿ ರೆಟ್ರೋ ಸ್ಟೈಲ್​ ಲವ್​ ಸ್ಟೋರಿ.

36
ಕುತೂಹಲದ ಸ್ಟೋರಿ

ರೂಪಿಕಾ ಮತ್ತು ಅಂಕಿತ್​ ಅವರ ಕುಟುಂಬಸ್ಥರು ದೂರದ ಸಂಬಂಧಿಕರೇ ಆಗಿದ್ದರೂ, ಇವರಿಬ್ಬರೂ ಪರಸ್ಪರ ಮುಖಾಮುಖಿ ಇನ್ನೂ ಆಗಿಲ್ಲವಂತೆ. ಹತ್ತಾರು ವರ್ಷಗಳ ಹಿಂದೆ ಒಂದೆರಡು ಫಂಕ್ಷನ್​ಗಳಲ್ಲಿ ಸಿಕ್ಕಿದ್ದರೂ, ಆಗ ಭವಿಷ್ಯದಲ್ಲಿ ದಂಪತಿಯಾಗುತ್ತಾರೆ ಎನ್ನುವ ಕಲ್ಪನೆಯೂ ಇಲ್ಲದ ಸಮಯವದು. ಅಷ್ಟೊಂದು ಪರಿಯಚ ಇಲ್ಲದ ಹಿನ್ನೆಲೆಯಲ್ಲಿ, ಒಂದೆರಡು ಮಾತು ಅಷ್ಟೇಬಿಟ್ಟರೆ, ನೇರವಾಗಿ ಮಾತನಾಡಿದ್ದೂ ಇಲ್ಲ ಎಂದು ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ರೂಪಿಕಾ ಹೇಳಿದ್ದಾರೆ.

46
ಮಂಟಪದಲ್ಲಿ ಮುಖಾಮುಖಿ

ಹಾಗೆ ನೋಡೋದಾದ್ರೆ ಮದುವೆಯ ಸಮಯದಲ್ಲಿಯೇ ಈಗ ಭಾವಿ ಪತಿಯನ್ನು ನೇರವಾಗಿ ನೋಡಬೇಕಿದೆ ನಟಿ ರೂಪಿಕಾ. ಏಕೆಂದರೆ, ಕೆನಡಾದಲ್ಲಿರುವ ಅಂಕಿತ್​ ಅವರು ವಿಡಿಯೋ ಕಾಲ್​ ಮೂಲಕ ರೂಪಿಕಾ ಅವರ ಸಂಪರ್ಕದಲ್ಲಿ ಇದ್ದರೂ, ಮದುವೆಗೆ ವಾರ ಇರುವಾಗ ಅಂಕಿತ್​ ಊರಿಗೆ ಬರಲಿದ್ದಾರೆ. ಆ ಸಮಯದಲ್ಲಿ ಮದುವೆ ಶಾಸ್ತ್ರಗಳು ಜೋರಾಗಿರುತ್ತೆ. ಆದ್ದರಿಂದ ನವ ಜೋಡಿ ಮದುವೆಯ ಮಂಟಪದಲ್ಲಿಯೇ ಮುಖಾಮುಖಿ ಆಗಲಿದೆ!

56
ಸಂಪ್ರದಾಯಸ್ಥ ಫ್ಯಾಮಿಲಿ

ಇಲ್ಲಿಯವರೆಗೆ ವಿಡಿಯೋಕಾಲ್​ನಲ್ಲಿ ಮಾತನಾಡಿದಾಗ ಒಂದಿಷ್ಟು ವಿಷ್ಯ ಮ್ಯಾಚ್​ ಆಗಿದೆ. ಇಬ್ಬರಿಗೂ ಮೆಟಿರಿಯಲಿಸ್ಟಿಕ್‌ ಲೈಫ್‌ ಇಷ್ಟ ಇಲ್ಲ. ಇಬ್ಬರೂ ಎಮೋಷನಲಿ ಕನೆಕ್ಟೆಡ್ ಆಗಿದ್ದೇವೆ. ಅವರು ಕೆನಡಾದಲ್ಲಿ ದೇವರ ಪೂಜೆ ಮಾಡ್ತಾರೆ. ಆಚಾರ-ವಿಚಾರ, ಸಂಪ್ರದಾಯ ಎಲ್ಲವನ್ನೂ ನಾವು ಆಚರಿಸ್ತೇವೆ. ಮಾಡರ್ನ್​ ಫ್ಯಾಮಿಲಿ ಲೈಫ್‌ಸ್ಟೈಲ್‌ನ ಕೂಡ ಫಾಲೋ ಮಾಡ್ತೇವೆ. ಇದೆಲ್ಲವನ್ನೂ ನೋಡಿದಾಗ, ನನಗೆ ಸಿಕ್ಕಾಪಟ್ಟೆ ಖುಷಿ ಆಗಿದೆ. ನನ್ನ ಕನಸಿನ ಹುಡುಗ ಸಿಕ್ಕಿದ್ದಾನೆ ಎನ್ನಿಸಿದೆ ಎಂದು ಹೇಳಿದ್ದಾರೆ ರೂಪಿಕಾ.

66
ಭರತನಾಟ್ಯ ಕಲಾವಿದೆ

ನಟಿ ರೂಪಿಕಾ ಭರತನಾಟ್ಯ ಕಲಾವಿದೆ. ಇದಾಗಲೇ ಹಲವಾರು ಪ್ರಶಸ್ತಿಗಳು ಬಂದಿವೆ. ಅವರು ಸದ್ಯ ಬೆಂಗಳೂರಿನಲ್ಲಿ ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋವನ್ನೂ ನಡೆಸುತ್ತಿದ್ದಾರೆ. ಮದುವೆಯಾದಮೇಲೆ ಕೆನಡಾದಲ್ಲಿಯೂ ಇದನ್ನು ಮುಂದುವರೆಸುವ ಯೋಚನೆ ಇರುವುದಾಗಿ ನಟಿ ಹೇಳಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories