ಬೆಸ್ಟ್ ಫ್ರೆಂಡನ್ನ ಮದ್ವೆ ಆದ್ರೆ ಜೀವನ ಪೂರ್ತಿ ಖುಷಿಯೋ ಖುಷಿ

First Published Nov 16, 2022, 1:58 PM IST

ಜೀವನದಲ್ಲಿ ಮದುವೆಯಾಗಲು ನಿರ್ಧರಿಸೋದು ಖಂಡಿತವಾಗಿಯೂ ದೊಡ್ಡ ನಿರ್ಧಾರ, ಯಾಕಂದ್ರೆ ನಿಮ್ಮ ಇಡೀ ಜೀವನವು ನಿಮ್ಮ ನಿರ್ಧಾರವನ್ನು ಅವಲಂಬಿಸಿರುತ್ತೆ. ಸಾಮಾನ್ಯವಾಗಿ, ಜನರು ವಿಪರೀತ ಅವಸರದಲ್ಲಿ, ಯಾರದ್ದೋ ಒತ್ತಾಯದ ಮೇರೆಗೆ ಮದುವೆಯಾಗ್ತಾರೆ, ನಂತರ ತಮ್ಮ ಜೀವನದುದ್ದಕ್ಕೂ ಪಶ್ಚಾತ್ತಾಪ ಪಡುತ್ತಾರೆ. ನಿಮ್ಮ ಹತ್ತಿರದ ಯಾರಿಗಾದರೂ ಇದೇ ರೀತಿಯ ಏನಾದರೂ ಸಂಭವಿಸಿರಬಹುದು. ಆದರೆ, ಇಡೀ ಜೀವನವನ್ನು ತುಂಬಾ ಸಂತೋಷವಾಗಿರಿಸಲು ಬಯಸಿದರೆ, ನೀವು ನಿಮ್ಮ ಆಪ್ತ ಸ್ನೇಹಿತನನ್ನು ಮದುವೆಯಾಗಬೇಕು.

ಮದುವೆ(Marriage) ಅನ್ನೋದು ಜೀವನ ಪರ್ಯಂತದ ಬಂಧವಾಗಿದೆ. ಮದುವೆಯಾದರೆ ಇಬ್ಬರೂ ಕಷ್ಟ ಸುಖದಲ್ಲಿ ಜೊತೆಯಾಗಿ ಸಂತೋಷವಾಗಿರಬೇಕೆ ಹೊರತು ಜಗಳ ಮಾಡ್ಕೊಂಡು ಅಲ್ಲ. ಅದಕ್ಕಾಗಿಯೇ ಸಂಗಾತಿಯ ಆಯ್ಕೆ ಮಾಡುವಾಗ ಹೆಚ್ಚು ಕಾಳಜಿ ವಹಿಸಲು ತಿಳಿಸಲಾಗುತ್ತೆ. ಹೀಗಿರೋವಾಗ ನಿಮ್ಮನ್ನು ಪೂರ್ತಿಯಾಗಿ ಅರಿತುಕೊಂಡಿರುವ ಬೆಸ್ಟ್ ಫ್ರೆಂಡ್ ನ್ನು ಮದ್ವೆ ಆದ್ರೆ ಹೇಗೆ? ಬೆಸ್ಟ್ ಫ್ರೆಂಡನ್ನು ಮದುವೆಯಾಗೋದು ಎಂದರೆ ಜೀವನವನ್ನು ಹೆಚ್ಚು ಸುರಕ್ಷಿತ ಮತ್ತು ಸಂತೋಷದಾಯಕವಾಗಿಸೋದು ಎಂದರ್ಥ. ನಿಮಗೆ ಗೊತ್ತಿಲ್ಲದಿರಬಹುದು, ಆದರೆ ಉತ್ತಮ ಸ್ನೇಹಿತನನ್ನು ಮದುವೆಯಾಗೋದರಿಂದ ಅನೇಕ ಪ್ರಯೋಜನಗಳಿವೆ. ಇಲ್ಲಿ ಅಂತಹ ಕೆಲವು ಪ್ರಯೋಜನಗಳ ಬಗ್ಗೆ  ತಿಳಿಯೋಣ, ಅವುಗಳನ್ನು ತಿಳಿದ ನಂತರ ನೀವು ಖಂಡಿತವಾಗಿಯೂ ನಿಮ್ಮ ಆಪ್ತ ಸ್ನೇಹಿತರನ್ನು ನಿಮ್ಮ ಜೀವನ ಸಂಗಾತಿಯನ್ನಾಗಿ ಮಾಡಲು ಬಯಸುತ್ತೀರಿ. 

ಎಲ್ಲವನ್ನೂ ಹೇಳಬಹುದು
ಅಪರಿಚಿತ ವ್ಯಕ್ತಿಯನ್ನು ಮದುವೆಯಾದಾಗ, ಮನಸ್ಸು ಅವರೊಂದಿಗೆ ಮಾತನಾಡಲು ಹಿಂಜರಿಯುತ್ತೆ. ಮದುವೆಯಾದ ಬಹಳ ಸಮಯದ ನಂತರವೂ, ಜನರು ತಮ್ಮ ಸಂಗಾತಿಯೊಂದಿಗೆ ತಮ್ಮ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯವಾಗೋದಿಲ್ಲ. ಆದರೆ ಬೆಸ್ಟ್ ಫ್ರೆಂಡನ್ನು(Best Friend) ಮದುವೆಯಾದರೆ, ಆಗ ಮನಸ್ಸಿನಲ್ಲಿರುವ ಎಲ್ಲವನ್ನೂ ಸುಲಭವಾಗಿ ಹೇಳಲು ಸಾಧ್ಯವಾಗುತ್ತೆ , ಇದರಿಂದಾಗಿ ಅವರ ನಡುವಿನ ಸಂಬಂಧವು ಸಮಯ ಕಳೆದಂತೆ ಇನ್ನಷ್ಟು ಬಲಗೊಳ್ಳುತ್ತೆ.

ಇಷ್ಟ ಮತ್ತು ಕಷ್ಟಗಳು 
ಅಪರಿಚಿತ ವ್ಯಕ್ತಿಯೊಂದಿಗೆ ಮದುವೆಯ ನಂತರ, ಇಬ್ಬರು ವ್ಯಕ್ತಿಗಳು ಪರಸ್ಪರ ತಿಳಿದುಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತೆ. ಒಟ್ಟಿಗೆ ಅನೇಕ ವರ್ಷಗಳು ಕಳೆದರೂ, ದಂಪತಿಗಳು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳೋದಿಲ್ಲ. ಆದರೆ ಇಬ್ಬರು ಉತ್ತಮ ಸ್ನೇಹಿತರು(Friends) ಈಗಾಗಲೇ ಒಬ್ಬರನ್ನೊಬ್ಬರು ತಿಳಿದಿರುತ್ತಾರೆ, ಮದುವೆಗೆ ಮುಂಚೆಯೇ ಅವರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಇದಲ್ಲದೆ, ಅವರು ಪರಸ್ಪರರ ಇಷ್ಟ ಮತ್ತು ಕಷ್ಟಗಳ ಬಗ್ಗೆ ತಿಳಿದಿರುತ್ತಾರೆ.ಹಾಗಾಗಿ ಒಟ್ಟಿಗೆ ಬದುಕೋದು ಸುಲಭ.  

ಅಹಂ ನಿಂದ(Ego) ಸಂಬಂಧವು ಹದಗೆಡೋದಿಲ್ಲ
ತುಂಬಾ ಸಲ ವೈವಾಹಿಕ ಸಂಬಂಧಗಳಲ್ಲಿ ಇಬ್ಬರು ವ್ಯಕ್ತಿಗಳ ಅಹಂ ಪರಸ್ಪರ ಡಿಕ್ಕಿ ಹೊಡೆದಾಗ, ಸಂಬಂಧವು ಛಿದ್ರಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳೋದಿಲ್ಲ. ಆದರೆ, ನೀವು ನಿಮ್ಮ ಬೆಸ್ಟ್ ಫ್ರೆಂಡನ್ನು ಮದುವೆಯಾದರೆ, ನಿಮ್ಮಿಬ್ಬರ ನಡುವೆ ಅಹಂ ಗೆ ಯಾವುದೇ ಅವಕಾಶವಿರೋದಿಲ್ಲ. ಇದು  ಸಂಬಂಧವನ್ನು ಹೆಚ್ಚು ಆರೋಗ್ಯಕರವಾಗಿಸುತ್ತೆ.
 

ಡಿವೋರ್ಸ್ ಗೆ(Divorse) ಅವಕಾಶವಿರೋದಿಲ್ಲ
ಡಿವೋರ್ಸ್ ಇಂದಿನ ಕಾಲದಲ್ಲಿ ಸಾಕಷ್ಟು ಸಾಮಾನ್ಯವಾಗುತ್ತಿದೆ. ಇದು ಲವ್ ಮ್ಯಾರೇಜ್ ಆಗಿರಲಿ ಅಥವಾ ಅರೇಂಜ್ಡ್ ಮ್ಯಾರೇಜ್ ಆಗಿರಲಿ, ಜನರು ಹೆಚ್ಚಾಗಿ ಮದುವೆಯಾದ ಸ್ವಲ್ಪ ಸಮಯದ ನಂತರ ಬೇರ್ಪಡುತ್ತಿದ್ದಾರೆ. ಆದರೆ ನೀವು ನಿಮ್ಮ ಬೆಸ್ಟ್ ಫ್ರೆಂಡನ್ನು ಮದುವೆಯಾದರೆ, ನಿಮ್ಮ ನಡುವಿನ ವಿಚ್ಛೇದನದ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಸಂಗಾತಿ ನಡುವಿನ ಅಂಡರ್ಸ್ಟ್ಯಾಂಡಿಂಗ್ ಸಾಕಷ್ಟು ಉತ್ತಮವಾಗಿರುತ್ತೆ ಮತ್ತು ಯಾವುದೇ ಸಮಸ್ಯೆಗಳನ್ನು ಬಹಳ ಸುಲಭವಾಗಿ ಪರಿಹರಿಸಲು ಸಾಧ್ಯವಾಗುತ್ತೆ.

ನೀವಂದುಕೊಂಡಂತೆ ಬದುಕಲು ಒಂದು ಅವಕಾಶ ಪಡೆಯುತ್ತೀರಿ
ಮದುವೆಯ ನಂತರ, ಜನರು ಆಗಾಗ್ಗೆ  ತಮ್ಮ ಆಸೆಗಳನ್ನು ಮನಸ್ಸಿನಲ್ಲಿಯೇ ಕೊಲ್ಲುತ್ತಾರೆ. ಅನೇಕ ಬಾರಿ ಸ್ವತಃ ತಮ್ಮ ಸಂಗಾತಿಗೆ ತಮ್ಮ ಆಸೆಗಳ ಬಗ್ಗೆ ಹೇಳೋದಿಲ್ಲ, ಇನ್ನೂ ಕೆಲವೊಮ್ಮೆ ಸಂಗಾತಿ ನಿಮ್ಮ ಆಸೆಗೆ ಇಲ್ಲ ಎಂದು ಹೇಳುತ್ತಾರೆ. ಆದರೆ ಒಬ್ಬ ಉತ್ತಮ ಸ್ನೇಹಿತ ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ, ಈ ಕಾರಣದಿಂದಾಗಿ ನೀವು ಸಂಬಂಧದಲ್ಲಿದ್ದಾಗ(Relationship) ಸಹ  ನಿಮ್ಮ ಲೈಫ್ ನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗುತ್ತೆ.

ಉತ್ತಮ ಕೇರ್(Care) ಪಡೆಯುವಿರಿ
ಬೆಸ್ಟ್ ಫ್ರೆಂಡನ್ನು ಮದುವೆಯಾಗೋದು ಎಂದರೆ  ಜೀವನಪರ್ಯಂತ ನಿಮ್ಮನ್ನು ಉತ್ತಮವಾಗಿ ನೋಡಿಕೊಳ್ಳುವ ಸಂಗಾತಿಯನ್ನು ಕಂಡುಕೊಂಡಿದ್ದೀರಿ ಎಂದರ್ಥ. ಹಾಗಾಗಿ, ನೀವು ಅವರಿಗೆ ಇತರ ಯಾವುದೇ ವ್ಯಕ್ತಿಗಿಂತ ಹೆಚ್ಚು ಪ್ರೀತಿ ಮತ್ತು ಕಾಳಜಿಯನ್ನು ನೀಡಲು ಸಾಧ್ಯವಾಗುತ್ತೆ. ಇದರಿಂದಾಗಿ ಅಂತಹ ದಂಪತಿಗಳು ತಮ್ಮ ಜೀವನವನ್ನು ಉತ್ತಮವಾಗಿ ಕಳೆಯಲು ಸಾಧ್ಯವಾಗುತ್ತೆ . ಅವರು ತಮ್ಮ ಆಸಕ್ತಿಯನ್ನು ಒಟ್ಟಿಗೆ ಹಂಚಿಕೊಳ್ಳುತ್ತಾರೆ. ಹಾಗಾಗಿ ತಮ್ಮ ಜೀವನವನ್ನು ಸಂತೋಷವಾಗಿ ಬದುಕಲು ನಿಮ್ಮ ಬೆಸ್ಟ್ ಫ್ರೆಂಡನ್ನು ಮದುವೆಯಾಗೋದು ಬೆಸ್ಟ್ ಚಾಯ್ಸ್.

click me!