'ಕರ್ಣ' ಧಾರಾವಾಹಿ ನಟಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಮತ್ತು ಬಿಗ್ ಬಾಸ್ ಕಾಸ್ಟಿಂಗ್ ಡೈರೆಕ್ಟರ್ ಹೇಮಂತ್ ಕುಮಾರ್ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಮದುವೆಯ ಸಂಪೂರ್ಣ ಉಸ್ತುವಾರಿಯನ್ನು ಭವ್ಯಾ ಗೌಡ ವಹಿಸಿಕೊಂಡಿದ್ದು, ಅಕ್ಕನನ್ನು ಬೀಳ್ಕೊಡುವಾಗ ಭಾವುಕರಾಗಿದ್ದಾರೆ.
ಕರ್ಣ ಸೀರಿಯಲ್ (Karna Serial) ನಿಧಿ ಉರ್ಫ್ ನಟ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ ಅವರ ಮದುವೆ ಮತ್ತು ರಿಸೆಪ್ಷನ್ ಇಂದು ನೆರವೇರುತ್ತಿದ್ದು, ಕಿರುತೆರೆ ತಾರೆಯರು ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಬಂದು ಶುಭ ಹಾರೈಸುತ್ತಿದ್ದಾರೆ.
26
ದಿವ್ಯಾ ಗೌಡ ಕಣ್ಣೀರು
ಕಳೆದ ಕೆಲವು ದಿನಗಳಿಂದ ಮದುವೆಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ಅವುಗಳ ವಿಡಿಯೋಗಳು ವೈರಲ್ ಆಗಿದ್ದವು. ಹಳದಿ ಶಾಸ್ತ್ರದ ಬೆನ್ನಲ್ಲೇ, ದಿವ್ಯಾ ಗೌಡ ಅವರ ಮೆಹಂದಿ ಶಾಸ್ತ್ರವೂ ವೈಭವದಿಂದ ಜರುಗಿದೆ. ಮದುವೆ ಪೂರ್ವ ಶಾಸ್ತ್ರಗಳು ಗ್ರ್ಯಾಂಡ್ ಆಗಿ ನೆರವೇರಿದ್ದವು. ಇಂದು ಮದುವೆ ನಡೆಯುತ್ತಿದೆ. ಮದುವೆಯ ಸಂದರ್ಭದಲ್ಲಿ ಪ್ರೀತಿಯನ್ನು ಅಕ್ಕನನ್ನು ಬೀಳ್ಕೊಡಬೇಕಾಗಿ ಬಂದಿರುವ ಕಾರಣದಿಂದ ಮಂಟಪದಲ್ಲಿ ನಟಿ ದಿವ್ಯಾ ಗೌಡ ಭಾವುಕರಾಗಿ ಕಣ್ಣೀರು ಹಾಕಿದರು.
36
ಪತಿ ಯಾರು?
ದಿವ್ಯಾ ಗೌಡ ಅವರು ಹೂವಿನ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ನಟಿ ಭವ್ಯಾ ಗೌಡ ಕೂಡ ಇದಕ್ಕೆ ಕೈಜೋಡಿಸುತ್ತಿದ್ದಾರೆ. ಇನ್ನು, ʻಬಿಗ್ ಬಾಸ್ʼ ಕಾಸ್ಟಿಂಗ್ ಡೈರೆಕ್ಟರ್ ಆಗಿರುವ ವರ ಹೇಮಂತ್ ಕುಮಾರ್ ಅವರ ಜೊತೆ ದಿವ್ಯಾ ಗೌಡ ಮದುವೆ ನಡೆಯುತ್ತಿದೆ.
ಅಕ್ಕನ ಮದುವೆಯಲ್ಲಿ ತಂಗಿ ಭವ್ಯಾ ಗೌಡ ಭರ್ಜರಿ ಓಡಾಟ ನಡೆಸಿದ್ದಾರೆ. ಮಾತ್ರವಲ್ಲದೇ ಮೈಕ್ ಹಿಡಿದು ಅನೌನ್ಸ್ ಮಾಡುವ ಮೂಲಕ ಸಂಪೂರ್ಣ ಮದುವೆಯ ನೇತೃತ್ವವನ್ನು ನಟಿಯೇ ವಹಿಸಿಕೊಂಡಿದ್ದಾರೆ.
56
ನಮ್ರತಾ ಗೌಡ ಆಗಮನ
ಈ ಸಮಾರಂಭಕ್ಕೆ ಕರ್ಣ ಸೀರಿಯಲ್ ನಮ್ರತಾ ಗೌಡ ಸೇರಿದಂತೆ ಸೀರಿಯಲ್ ತಂಡದ ಕಲಾವಿದರು, ನಟಿ ಅಮೂಲ್ಯ ಸೇರಿದಂತೆ ವಿವಿಧ ಸೆಲೆಬ್ರಿಟಿಗಳು ಆಗಮಿಸಿ ಶುಭ ಕೋರುತ್ತಿದ್ದಾರೆ.
66
ಬಿಗ್ಬಾಸ್ನಲ್ಲಿ ಮಿಂಚಿದ್ದ ನಟಿ
ಇನ್ನು ಭವ್ಯಾ ಗೌಡ ಅವರು ಬಿಗ್ಬಾಸ್ನಲ್ಲಿಯೂ ಈ ಹಿಂದೆ ಮಿಂಚಿದ್ದದರು. ದಿವ್ಯಾ ಗೌಡ ಅವರು, ಬಿಗ್ಬಾಸ್ಗೆ ಹೋಗಿದ್ದ ಸಂದರ್ಭದಲ್ಲಿ, ಫ್ಯಾಮಿಲಿ ರೌಂಡ್ನಲ್ಲಿ ಭವ್ಯಾ ಎಂಟ್ರಿ ಕೊಟ್ಟಾಗ, ಆಗ ಹನುಮಂತು ಜೊತೆ ದಿವ್ಯಾ ಗೌಡ ಮಾತುಕತೆ ವೈರಲ್ ಆಗಿತ್ತು. ಭವ್ಯಾಗಿಂತ ದಿವ್ಯಾನೇ ಸೂಪರ್ ಎಂದು ಹಲವರು ತಮಾಷೆ ಮಾಡಿದ್ದುಂಟು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.